Advertisment

ಅನುಭವಿ KL ರಾಹುಲ್​​ಗೆ ಮಹತ್ವದ ಜವಾಬ್ದಾರಿ.. ODI ಸಿರೀಸ್​ಗೆ ಬಲಿಷ್ಠ ತಂಡ ಪ್ರಕಟ..!

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ, ಟೀಮ್ ಇಂಡಿಯಾ ಪ್ರಕಟಗೊಂಡಿದೆ. ಶುಭ್ಮನ್ ಗಿಲ್ ಅಲಬ್ಯತೆಯಲ್ಲಿ ಅನುಭವಿ ಆಟಗಾರನಿಗೆ ಸಾರಥ್ಯ ನೀಡಲಾಗಿದೆ. ಇನ್ನುಳಿದಂತೆ ಸೂಪರ್​ಸ್ಟಾರ್ ಆಟಗಾರರು ಏಕದಿನ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ರೆ, ಕೆಲವರು ಆಯ್ಕೆಗಾರರ ಗಮನ ಸೆಳೆದು ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

author-image
Ganesh Kerekuli
KL_RAHUL_ROHIT_KOHLI
Advertisment
  • ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ
  • ರೋಹಿತ್- ಕೊಹ್ಲಿಗೆ ಮಣೆ, ಜೈಸ್ವಾಲ್​ಗೆ ಚಾನ್ಸ್​..!
  • ಋತುರಾಜ್-ತಿಲಕ್ ವರ್ಮಾಗೆ ಡೋರ್ ಓಪನ್..!

ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ 15 ಸದಸ್ಯರ ಬಲಿಷ್ಟ ಟೀಮ್ ಇಂಡಿಯಾ ಪ್ರಕಟಿಸಲಾಗಿದೆ. ಮುಂಬೈನಲ್ಲಿ ಸಭೆ ಸೇರಿದ್ದ ಅಜಿತ್ ಅಗರ್​ಕರ್ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ಲೆಕ್ಕಾಚಾರ ಹಾಕಿ ತಂಡವನ್ನೇ ಪ್ರಕಟಿಸಿದೆ. ಆ ಮೂಲಕ ಕಳೆದ ಕೆಲ ದಿನಗಳಿಂದ ತಂಡದ ಆಯ್ಕೆಯ ಕುರಿತು ಇದ್ದ ಗೊಂದಲ ಗಾಳಿ ಸುದ್ದಿಗಳಿಗೆಲ್ಲಾ ಫುಲ್​ಸ್ಟಾಪ್ ಇಡಲಾಗಿದೆ.

Advertisment

ರೋಹಿತ್- ಕೊಹ್ಲಿಗೆ ಮಣೆ

ಹಿರಿಯ ಮತ್ತು ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ, ಆಯ್ಕೆಗಾರರು ಮಣೆಹಾಕಿದ್ದಾರೆ. ಆಸ್ಟ್ರೇಲಿಯಾ ಏಕದಿನ ಸರಣಿಯ ನಂತರ ಇಬ್ಬರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರೋ-ಕೊ ಆಯ್ಕೆಯ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಮತ್ತೊಂದೆಡೆ ಗಿಲ್ ಅಲಭ್ಯತೆಯಲ್ಲಿ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್​​​ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ರೋಹಿತ್ ಜೊತೆ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸೋದು ಕನ್ಫರ್ಮ್​.

ಇದನ್ನೂ ಓದಿ: ಸಂಕಷ್ಟದಲ್ಲಿ ಪಂತ್​ ಪಡೆ.. ವಿಕೆಟ್ ತೆಗೆಯಲು ಆಗದೇ ಒದ್ದಾಡಿದ ಬೌಲರ್ಸ್​..!

KL Rahul (7)

16 ತಿಂಗಳ ಬಳಿಕ ಋತುರಾಜ್ ಗಾಯಕ್ವಾಡ್, ತಂಡಕ್ಕೆ ಕಮ್​ಬ್ಯಾಕ್ ಮಾಡ್ತಿದ್ದಾರೆ. ಸೌತ್ ಆಫ್ರಿಕಾ 'ಎ' ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಋತುರಾಜ್​, ಆಯ್ಕೆಗಾರರ ಗಮನ ಸೆಳೆದಿದ್ದಾರೆ. 2 ವರ್ಷಗಳ ಬಳಿಕ ಎಡಗೈ ಬ್ಯಾಟರ್ ತಿಲಕ್ ವರ್ಮಾ ಏಕದಿನ ತಂಡಕ್ಕೆ ಮರಳಿದ್ದಾರೆ. ಏಷ್ಯಾಕಪ್​ನಲ್ಲಿ ಗಮನ ಸೆಳೆದ ತಿಲಕ್ ವರ್ಮಾ ಮೇಲೆ ವಿಶ್ವಾಸ ಇಡಲಾಗಿದೆ.   

Advertisment

ಕೆ.ಎಲ್.ರಾಹುಲ್​​ಗೆ ಏಕದಿನ ತಂಡದ ಸಾರಥ್ಯ..!

ಗಿಲ್ ಅಲಭ್ಯತೆಯಲ್ಲಿ ಯಾರಿಗೆ ಏಕದಿನ ತಂಡದ ಸಾರಥ್ಯ ನೀಡಬೇಕು ಅಂತ ಭಾರೀ ಚರ್ಚೆ ನಡೀತು. ಸಭೆಯಲ್ಲಿ ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್ ಬಗ್ಗೆ ಮಾತುಕತೆ ನಡೆಸಲಾಯ್ತು. ಅಂತಿಮವಾಗಿ ಅನುಭವಿ ಕೆ.ಎಲ್.ರಾಹುಲ್​ಗೆ ನಾಯಕ ಪಟ್ಟ ನೀಡಲಾಯ್ತು. ಗಿಲ್ ಅಲಭ್ಯತೆಯಲ್ಲಿ ರಾಹುಲ್ ಟೀಮ್ ಇಂಡಿಯಾವನ್ನ ಮುನ್ನಡೆಸಲಿದ್ದಾರೆ. 

ರಾಂಚಿ, ರಾಯ್​ಪುರ್ ಮತ್ತು ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಏಕದಿನ ಪಂದ್ಯಗಳಿಗೆ, ಮೂವರು ಸ್ಪಿನ್ನರ್​ಗಳನ್ನ ಆಯ್ಕೆ ಮಾಡಲಾಗಿದೆ. ರವೀಂದ್ರ ಜಡೇಜಾ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ರೆ, ವಾಷಿಗ್ಟನ್ ಸುಂದರ್ ಮತ್ತು ಕುಲ್​ದೀಪ್ ಯಾದವ್, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗೌತಮ್ ಗಂಭೀರ್​ರ ನೆಚ್ಚಿನ ಆಟಗಾರ ವೇಗಿ ಹರ್ಷಿತ್ ರಾಣಾ, ಆಸ್ಟ್ರೇಲಿಯಾ ಏಕದಿನ ಸರಣಿಯ ನಂತರ ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೌತ್ ಆಫ್ರಿಕಾ 'ಎ' ವಿರುದ್ಧದ ಏಕದಿನ ಸರಣಿಯಲ್ಲಿ 7 ವಿಕೆಟ್ ಪಡೆದಿದ್ದ ರಾಣಾಗೆ ಮತ್ತೆ ಅವಕಾಶ ಸಿಕ್ಕಿದೆ. ಕರ್ನಾಟಕದ ಪ್ರಸಿದ್ಧ್ ಕೃಷ್ಣ ಸಹ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ಬಿಗ್​ಬಾಸ್​ನಿಂದ ರಿಷಾ ಗೌಡ ಔಟ್! ಕಿರುಚಾಟವೇ ಮುಳ್ಳಾಯ್ತು..! 

ಹಾರ್ದಿಕ್ ಪಾಂಡ್ಯ ಅನ್​ಫಿಟ್ ಆದ ಕಾರಣ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಂಡದಲ್ಲಿ ಕಾಣಿಸಿಕೊಂಡಿರೋ ಏಕೈಕ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್. ಧೃವ್ ಜುರೆಲ್ 15 ಸದಸ್ಯರ ತಂಡದಲ್ಲಿ ಕಾಣಿಸಿಕೊಂಡಿದ್ರೂ, ಆಡೋದು ಅನುಮಾನ. ಮತ್ತೊಂದೆಡೆ ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್​​ಗೆ ವಿಶ್ರಾಂತಿ ನೀಡಿರುವ ಆಯ್ಕೆ ಸಮಿತಿ ಎಡಗೈ ಸ್ಪಿನ್ನರ್ ಕಮ್ ಆಲ್​ರೌಂಡರ್ ಅಕ್ಷರ್​​ ಪಟೇಲ್​​ಗೆ ಕೊಕ್ ನೀಡಲಾಗಿದೆ.

15 ಸದಸ್ಯರ ತಂಡವನ್ನೇನೋ ಆಯ್ಕೆ ಸಮಿತಿ ಪ್ರಕಟಿಸಿ ಕೈತೊಳೆದುಕೊಂಡಿದೆ. ಪ್ಲೇಯಿಂಗ್ ಇಲೆವೆನ್ ಆಯ್ಕೆ ಗೊಂದಲವನ್ನ ಬರೆಹರಿಸೋದೇ, ಟೀಮ್ ಮ್ಯಾನೇಜ್ಮೆಂಟ್​​ ಮುಂದಿರೋ ಬಿಗ್ ಟಾಸ್ಕ್.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
KL Rahul Team India India vs South Africa ODI series
Advertisment
Advertisment
Advertisment