/newsfirstlive-kannada/media/media_files/2025/11/24/team-india-4-2025-11-24-08-20-00.jpg)
247 ರನ್​ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಸಾಲಿಡ್ ಸ್ಟಾರ್ಟ್ ಸಿಕ್ತು. ಸೆನುರಾನ್ ಮುತ್ತುಸಾಮಿ ಮತ್ತು ಕೈಲ್ ವೆರ್ರೆನ್ನೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದ್ರು. 7ನೇ ವಿಕೆಟ್​ಗೆ ಮುತ್ತುಸಾಮಿ ಮತ್ತು ವೆರ್ರೆನ್ನೆ 237 ಬಾಲ್​ಗಳನ್ನ ಫೇಸ್​​ ಮಾಡಿ, 88 ರನ್​ಗಳ ಕಾಣಿಕೆ ನೀಡಿದ್ರು. ಅತ್ಯುತ್ತಮವಾಗಿ ಆಡುತ್ತಿದ್ದ ವೆರ್ರೆನ್ನೆ ಇದ್ದಕ್ಕಿದಂತೆ ತಾಳ್ಮೆ ಕಳೆದುಕೊಂಡರು. ಎಡಗೈ ಸ್ಪಿನ್ನರ್ ಜಡೇಜಾ ಬೌಲಿಂಗ್​ನಲ್ಲಿ ಸ್ಟೆಪ್​​ಔಟ್ ಆದ ವೆರ್ರೆನ್ನೆ, 45 ರನ್​ಗಳಿಸಿ ಸ್ಟಂಪ್ ಔಟ್ ಆದ್ರು.
ಇದನ್ನೂ ಓದಿ: ಅಂಧ ಮಹಿಳೆಯರ ಚೊಚ್ಚಲ ಟಿ-20 ವಿಶ್ವಕಪ್: ನೇಪಾಳ ಸೋಲಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ ತಂಡ
/filters:format(webp)/newsfirstlive-kannada/media/media_files/2025/11/24/team-india-4-2025-11-24-08-20-00.jpg)
ಯಾನ್ಸನ್ ಸೂಪರ್ ಜೊತೆಯಾಟ
8ನೇ ವಿಕೆಟ್​ಗೆ ಮುತ್ತುಸಾಮಿ ಮತ್ತು ಮಾರ್ಕೊ ಯಾನ್ಸನ್, ಬಿರುಸಿನ ಬ್ಯಾಟಿಂಗ್ ನಡೆಸಿದ್ರು. ಈ ನಡುವೆ ಮುತ್ತುಸಾಮಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿಕೊಂಡ್ರು. ಮತ್ತೊಂದೆಡೆ ಮುತ್ತುಸಾಮಿಗೆ ಒಳ್ಳೆ ಸಾಥ್ ನೀಡಿದ್ದ ಯಾನ್ಸನ್, ಬಾಲ್ ಟು ಬಾಲ್ ರನ್ ಸ್ಕೋರ್ ಮಾಡಿ ಅರ್ಧಶತಕ ಸಿಡಿಸಿದ್ರು. 299 ನಿಮಿಷ ಕ್ರೀಸ್​ನಲ್ಲಿದ್ದ ಸೆನುರಾನ್ ಮುತ್ತುಸಾಮಿ 206 ಎಸೆತಗಳಲ್ಲಿ 109 ರನ್​ಗಳಿಸಿದ್ರು. 10 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ ಸಿಡಿಸಿದ್ದ ಮುತ್ತುಸಾಮಿ, ಫೈನ್​ಲೆಗ್​ನಲ್ಲಿ ಜೈಸ್ವಾಲ್​ಗೆ ಕ್ಯಾಚ್ ನೀಡಿದ್ರು.
ಟೇಲ್​​ ಎಂಡರ್ ಸೈಮನ್ ಹಾರ್ಮರ್ 5 ರನ್​ಗಳಿಸಿ, ಬೂಮ್ರಾ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್​ ಆದ್ರು. ಜೊತೆಗಾರನಿಲ್ಲದಿದ್ರೂ ತಲೆಕೆಡಿಸಿಕೊಳ್ಳದ ಯಾನ್ಸನ್, ತನ್ನ ನ್ಯಾಚ್ಯುರಲ್ ಗೇಮ್ ಆಡಲಾರಂಭಿಸಿದ್ರು. ವೇಗವಾಗೇ ರನ್​ಗಳಿಸುತ್ತಿದ್ದ ಯಾನ್ಸನ್ ಶತಕದ ಕನಸು ಕಾಣ್ತಿದ್ರು. ಆದ್ರೆ ಯಾನ್ಸನ್ ಶತಕಕ್ಕೆ ಕುಲ್ದೀಪ್ ಯಾದವ್ ಬ್ರೇಕ್ ಹಾಕಿದ್ರು.
ಇದನ್ನೂ ಓದಿ: ಸ್ಮೃತಿ ಮಂದಾನ ತಂದೆಗೆ ಹಠಾತ್ ಅನಾರೋಗ್ಯ, ಮದುವೆ ಮುಂದೂಡಿಕೆ
/filters:format(webp)/newsfirstlive-kannada/media/media_files/2025/11/16/team-india-3-2025-11-16-14-52-35.jpg)
ಅಂತಿಮವಾಗಿ ಯಾನ್ಸನ್, 6 ಬೌಂಡರಿ, 7 ಸಿಕ್ಸರ್​ಗಳ ನೆರವಿನಿಂದ 93 ರನ್​ಗಳಿಸಿದ್ರು. ಯಾನ್ಸನ್ ಔಟಾಗ್ತಿದಂತೆ, ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್​ಗೂ ಬ್ರೇಕ್ ಬಿದ್ದಿತ್ತು. 489 ರನ್​ಗಳ ಬೃಹತ್ ಮೊತ್ತ ಕಲೆಹಾಕಿದ ಆಫ್ರಿಕಾ, ದಿನದಾಟದಲ್ಲಿ ಮೇಲುಗೈ ಸಾಧಿಸಿತು.
ದಕ್ಷಿಣ ಆಫ್ರಿಕಾ ಸವಾಲಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ, 9 ರನ್​ಗಳಿಸುವಷ್ಟರಲ್ಲೇ ಡೇ ಎಂಡ್ ಅಂತ ಅಂಪೈರ್ ತೀರ್ಮಾನ ಮಾಡಿದ್ರು. ಮಂದ ಬೆಳಕಿನಿಂದ ಪಂದ್ಯ, ನಿರೀಕ್ಷಿತ ಸಮಯಕ್ಕೂ ಮುನ್ನ ಕ್ಲೋಸ್ ಆಯ್ತು. ಸದ್ಯ 480 ರನ್​ಗಳ ಅಂತರದಲ್ಲಿ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ, ಮೂರನೇ ದಿನವಾದ ಇಂದು, ವೇಗವಾಗಿ ರನ್​ಗಳಿಸುವ ಲೆಕ್ಕಾಚಾರ ಹಾಕಿಕೊಂಡಿದೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ಮತ್ತೊಂದು ಶಾಕಿಂಗ್ ನ್ಯೂಸ್​.. UGC ಟೆಸ್ಟ್​ಗೆ ಒಳಗಾದ ಅಯ್ಯರ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us