/newsfirstlive-kannada/media/media_files/2025/10/19/smriti_mandhana_1-2025-10-19-11-26-30.jpg)
ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಅವರ ವಿವಾಹ ಕಾರ್ಯಕ್ರಮ ಮುಂದೂಡಲಾಗಿದೆ. ಅವರ ತಂದೆಗೆ ಹಠಾತ್ ಅನಾರೋಗ್ಯ ಸಂಭವಿಸಿದ ಕಾರಣ, ಇಂದು ನಡೆಯಬೇಕಿದ್ದ ಸ್ಮೃತಿ ಮಂದಾನ ಮತ್ತು ಪಲಾಶ್ ಮುಚ್ಚಲ್ ವಿವಾಹ ನಡೆಯುತ್ತಿಲ್ಲ. ಮಂದಾನರ ತಂದೆಯ ಹೆಸರು ಶ್ರೀನಿವಾಸ್.
ಮಂದಾನ ತಂದೆಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದೆ. ಪ್ರಸ್ತುತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂದಾನ ಅವರ ಮದುವೆ ಮುಂದೂಡಿರುವ ಬಗ್ಗೆ ಅವರ ಕುಟುಂಬ ಮೂಲಗಳು ದೃಢಪಡಿಸಿವೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಂದು ಬೆಳಗ್ಗೆ ಮಂದಾನ ತಂದೆ ತಿಂಡಿ ತಿನ್ನುತ್ತಿದ್ದರು. ಈ ವೇಳೆ ಹಠಾತ್ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ವೈದ್ಯರ ನಿಗಾದಲ್ಲಿ ನೋಡಿಕೊಳ್ಳಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಲಘು ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾರೂ ಖಚಿತಪಡಿಸಿಲ್ಲ.
ಮದುವೆ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ವಿವಾಹ ಪೂರ್ವದ ಆಚರಣೆಗಳು ಜೋರಾಗಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮೇಹಂದಿ ಸಮಾರಂಭ ಶನಿವಾರ ನಡೆದಿದೆ. ಇವತ್ತು ವಿವಾಹ ಕಾರ್ಯಕ್ರಮ ನಡೆಯಬೇಕಿತ್ತು.
ವಿವಾಹ ಸಮಾರಂಭವು ಮಹಾರಾಷ್ಟ್ರದ ಸಾಂಗ್ಲಿಯದಲ್ಲಿ ಆಯೋಜನೆಗೊಂಡಿತ್ತು. ಸಂತೋಷದ ಆಚರಣೆಗಳ ನಡುವೆ, ದುಃಖವು ಇದ್ದಕ್ಕಿದ್ದಂತೆ ಮನೆ ಬಾಗಿಲಿಗೆ ಅಪ್ಪಳಿಸಿದೆ. ಮಾಧ್ಯಮ ವರದಿಯ ಪ್ರಕಾರ, ಮಂದಾನ ತಂದೆ ಚೇತರಿಸಿಕೊಳ್ಳುವವರೆಗೆ ಮದುವೆ ಮುಂದೂಡಲಾಗಿದೆ ಎಂದು ಹೇಳಿವೆ.
ಇದನ್ನೂ ಓದಿ: ಅಂಧ ಮಹಿಳೆಯರ ಚೊಚ್ಚಲ ಟಿ-20 ವಿಶ್ವಕಪ್: ನೇಪಾಳ ಸೋಲಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ ತಂಡ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us