Advertisment

ಅಂಧ ಮಹಿಳೆಯರ ಚೊಚ್ಚಲ ಟಿ-20 ವಿಶ್ವಕಪ್: ನೇಪಾಳ ಸೋಲಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ ತಂಡ

ಕೊಲಂಬೊದಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡವು ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ. ಇದೇ ಮೊದಲ ಬಾರಿ ಟಿ-20 ವಿಶ್ವಕಪ್ ನಡೆಯಿತು. ಮೊದಲ ಪಂದ್ಯಾವಳಿಯಲ್ಲೇ ಟೀಂ ಇಂಡಿಯಾ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

author-image
Ganesh Kerekuli
T 20 world cup
Advertisment

ಭಾರತದ ಅಂಧರ ಮಹಿಳಾ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ. ಕೊಲಂಬೊದ ಪಿ.ಸಾರಾ ಓವಲ್‌ನಲ್ಲಿ (P Sara Oval) ನಡೆದ ಫೈನಲ್‌ನಲ್ಲಿ ನೇಪಾಳ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿದೆ. 

Advertisment

ಈ ಟೂರ್ನಮೆಂಟ್ ಇದೇ ಮೊದಲ ಬಾರಿಗೆ ನಡೆಯಿತು. ಮೊದಲ ಬ್ಯಾಟ್ ಮಾಡಿದ ನೇಪಾಳ ತಂಡ ಐದು ವಿಕೆಟ್ ಕಳೆದುಕೊಂಡು 114 ರನ್​ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಟೀಂ ಇಂಡಿಯಾ 12 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 117 ರನ್‌ ಗಳಿಸಿ ಗೆಲುವು ಸಾಧಿಸಿತು. 

ಫೈನಲ್​​ನಲ್ಲಿ ಪ್ರಾಬಲ್ಯ

ಫೈನಲ್​​ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಮೆರೆಯಿತು. ಬ್ಯಾಟಿಂಗ್ ವೇಳೆ ನೇಪಾಳ ತಂಡವು ತನ್ನ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಮಾತ್ರ ಗಳಿಸಿತು. ಭಾರತದ ಪರ ಫುಲಾ ಸರೀನ್ ಅಜೇಯ 44 ರನ್ ಗಳಿಸಿದರು. ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ನೇಪಾಳ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ತಲುಪಿತ್ತು.

ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆಯೇ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ವಿಶ್ವಕಪ್​​ ಗೆದ್ದ  ತಂಡಕ್ಕೆ ಶುಭಾಶಯ ಕೋರುತ್ತಿದ್ದಾರೆ. 

Advertisment

ಇದನ್ನೂ ಓದಿ:140.3 ಓವರ್, 32 ವಿಕೆಟ್ಸ್.. ಒಂದೂವರೆ ದಿನಕ್ಕೆ ಟೆಸ್ಟ್ ಮ್ಯಾಚ್ ಫಿನಿಶ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

blind T20 World Cup
Advertisment
Advertisment
Advertisment