/newsfirstlive-kannada/media/media_files/2025/11/23/test-cricket-2025-11-23-13-01-26.jpg)
ಌಷಸ್ ಟೆಸ್ಟ್ ಸರಣಿ ಅಂದ್ರೆ ಬಲು ರೋಚಕ. ಬದ್ಧವೈರಿಗಳಂತೆ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿ ಹೋರಾಟ ನಡೆಸಲಿವೆ. ಌಶಸ್ ಟೆಸ್ಟ್ ಸರಣಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳಿಗೆ, ಪ್ರತಿಷ್ಟೆಯ ಸರಣಿ. ವಿಶ್ವದಲ್ಲೇ ನಂಬರ್.1 ಟೆಸ್ಟ್ ಸರಣಿ ಎನಿಸಿಕೊಂಡಿರೋ ಌಶಸ್, ವಿಶ್ವದೆಲ್ಲೆಡೆ ಇರುವ ಕ್ರಿಕೆಟ್ ಅಭಿಮಾನಿಗಳಿಗೆ ಫುಲ್ ಎಂಟರ್​ಟೈನ್ಮೆಂಟ್ ನಿಡುತ್ತದೆ. ಪರ್ತ್​​ನಲ್ಲಿ ನಡೆದ ಮೊದಲ ಌಶಸ್ ಪಂದ್ಯವೂ, ಅಷ್ಟೇ ರೋಚಕ ಮತ್ತು ಎಕ್ಸೈಸ್ಟ್ ಆಗಿತ್ತು.
ಒಂದೂವರೆ ದಿನ 140.3 ಓವರ್, 32 ವಿಕೆಟ್ಸ್!
ಪರ್ತ್​ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಭರ್ಜರಿ ತಯಾರಿ ನಡೆಸಿಕೊಂಡಿತ್ತು. ಆಪ್ಟಸ್ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಌಶಸ್ ಪಂದ್ಯ, ಒಂದೂವರೆ ದಿನದಲ್ಲೇ ಮುಗಿದಿದೆ. ಕೇವಲ 140.3 ಓವರ್​​ಗಳ ಪಂದ್ಯದಲ್ಲಿ 32 ಬ್ಯಾಟ್ಸ್​ಮನ್​​ಗಳು ಔಟಾಗಿದ್ದಾರೆ.
ಆಸ್ಟ್ರೇಲಿಯಾದ ಸ್ಪೀಡ್​ಸ್ಟರ್​​ ಮಿಚ್ಚೆಲ್ ಸಾರ್ಕ್, ಌಶಸ್ ಟೆಸ್ಟ್ ಪಂದ್ಯದ ಮೊದಲ ದಿನವೇ ಸೌಂಡ್ ಮಾಡಿದ್ರು. ಸ್ಟಾರ್ಕ್ ದಾಳಿಗೆ ಧೂಳಿಪಟವಾದ ಇಂಗ್ಲೆಂಡ್, ಮೊದಲ ದಿನವೇ ಆಲೌಟಾಯ್ತು. ಮೊದಲ ದಿನ 7 ವಿಕೆಟ್ ಪಡೆದಿದ್ದ ಸ್ಟಾರ್ಕ್, ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ನ 3 ವಿಕೆಟ್ ಪಡೆದಿದ್ರು.
ಇದನ್ನೂ ಓದಿ:KL ರಾಹುಲ್ ದೊಡ್ಡ ಯಡವಟ್ಟು.. ಬೆಲೆ ತೆತ್ತ ಟೀಂ ಇಂಡಿಯಾ..!
ಪಂದ್ಯವೊಂದರಲ್ಲಿ ಒಟ್ಟು 10 ವಿಕೆಟ್ ಪಡೆದ ಸ್ಟಾರ್ಕ್, ಆಸಿಸ್​​ನ ಸೂಪರ್​ ಹೀರೋ ಆದ್ರು. ಕದನದೋಳ್ ಟ್ರಾವಿಡ್ ಹೆಡ್​ರನ್ನ ಕೆಣಕಿದವರು ಉಳಿದಿಲ್ಲ. ಈ ಮಾತು ಅಕ್ಷರಕ್ಷಃ ಸತ್ಯ. ಹೌದು. ಎರಡನೇ ಇನ್ನಿಂಗ್ಸ್​ನಲ್ಲಿ ಟ್ರಾವಿಡ್ ಹೆಡ್​, ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು. ಕೇವಲ 69 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದು. 2006ರಲ್ಲಿ ಌಡಂ ಗಿಲ್​​ಕ್ರಿಸ್ಟ್ 57 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಇದೀಗ ಹೆಡ್, ಸೆಕೆಂಡ್ ಫಾಸ್ಟೆಸ್ಟ್ ಌಶಸ್ ಸೆಂಚುರಿ ಸಿಡಿಸಿದ್ದಾರೆ.
ಮೊದಲ ಇನ್ನಿಂಗ್ಸ್​ನಲ್ಲಿ 40 ರನ್ ಲೀಡ್ ಪಡೆದಿದ್ದ ಇಂಗ್ಲೆಂಡ್, ಎರಡನೇ ಇನ್ನಿಂಗ್ಸ್​ನಲ್ಲಿ 164 ರನ್​ಗಳಿಗೆ ಆಲೌಟ್​ ಆಯ್ತು. ಆಸ್ಟ್ರೇಲಿಯಾ ಗೆಲುವಿಗೆ 205 ರನ್ ಟಾರ್ಗೆಟ್ ನೀಡಿದ್ದ ಇಂಗ್ಲೆಂಡ್, ಅಡ್ರೆಸ್​​ ಇಲ್ಲದಂತೆ ಮಾಯವಾಯ್ತು. 205 ರನ್​ಗಳ ಗುರಿಯನ್ನ ಆಸಿಸ್ ಕೇವಲ 28.2 ಓವರ್​ಗಳಲ್ಲಿ 7.23 ರನ್​​ರೇಟ್​ನಲ್ಲಿ ಚೇಸ್ ಮಾಡಿತ್ತು. ಈ ಪಂದ್ಯ ಟೆಸ್ಟ್ ಪಂದ್ಯದಂತೆ ಇರಲಿಲ್ಲ. ಅಭಿಮಾನಿಗಳು ಟಿ-ಟ್ವೆಂಟಿ ಪಂದ್ಯವನ್ನ ನೋಡಿದಂತಾಯ್ತು.
ಇದನ್ನೂ ಓದಿ: 6 ವರ್ಷಗಳ ಪ್ರೀತಿ ಇಂದು ದಾಪಂತ್ಯದ ಬೆಸುಗೆ.. ಹೇಗಿದೆ ಸ್ಮೃತಿ ಮದುವೆ ಸಂಭ್ರಮ..?
ಒಂದೆಡೆ ಆಸ್ಟ್ರೇಲಿಯನ್ನರು ಗೆಲುವಿನಲ್ಲಿ ದಾಖಲೆಗಳ ಮೇಲೆ ದಾಖಲೆಗಳು ಬರೆದ್ರೆ, ಇಂಗ್ಲೆಂಡ್​​ನ ಸ್ಟಾರ್​ ಬ್ಯಾಟರ್ ಜೋ ರೂಟ್, ಸೋಲಿನಲ್ಲೂ ದಾಖಲೆ ಮಾಡಿದ್ರು. ಇದುವರೆಗೂ ರೂಟ್, ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಶತಕ ಸಿಡಿಸಿಲ್ಲ. ಆಸಿಸ್ ನೆಲದಲ್ಲಿ ಆಡಿರೋ 29 ಇನ್ನಿಂಗ್ಸ್​ಗಳಲ್ಲಿ ರೂಟ್, ಮೂರಂಕಿ ದಾಟಲೇ ಇಲ್ಲ. ರೂಟ್ ಶತಕದ ರೂಟ್, ಇನ್ನು ಕನೆಕ್ಟ್ ಆಗ್ಲಿಲ್ಲ.
ವೀಕೆಂಡ್​ನಲ್ಲಿ ಆಸಿಸ್ ಕ್ರಿಕೆಟ್ ಅಭಿಮಾನಿಗಳಿಗೆ, ಫುಲ್ ಮೀಲ್ಸ್​ ಸಿಕ್ಕಿದಂತಾಯ್ತು. ಪರ್ತ್ ಟೆಸ್ಟ್ ಕಣ್ಣಾರೆ ನೋಡಿ ಎಂಜಾಯ್ ಮಾಡಿದ್ದ ಅಭಿಮಾನಿಗಳು ಇದೀಗ ಮುಂದಿನ ಟೆಸ್ಟ್ ಪಂದ್ಯವನ್ನ ಎದುರು ನೋಡ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us