/newsfirstlive-kannada/media/media_files/2025/11/23/jadeja-and-sundhar-2025-11-23-08-29-54.jpg)
ಇಂಡೋ-ಆಫ್ರಿಕಾ ನಡುವಿನ 2ನೇ ಟೆಸ್ಟ್​ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಿದೆ ಬಿದ್ದು ಹೋರಾಟ ನಡೆಸ್ತಿವೆ. ನಿನ್ನೆಯ ದಿನದಾಟದ ಮೊದಲ 2 ಸೆಷನ್​ಗಳಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ನಡೀತು. ಕೊನೆಯ ಸೆಷನ್​ನಲ್ಲಿ ಆಫ್ರಿಕನ್ನರಿಗೆ ಶಾಕ್​ ಕೊಟ್ಟ ಇಂಡಿಯನ್​ ಬೌಲರ್ಸ್​ ದರ್ಬಾರ್​ ನಡೆಸಿದ್ರು. ಇಂಡೋ-ಆಫ್ರಿಕಾ 2ನೇ ಟೆಸ್ಟ್​ನ ಮೊದಲ ದಿನದಾಟದ ಹೈಲೆಟ್ಸ್ ಇಲ್ಲಿದೆ.
ಗುವಾಹಟಿ ಟೆಸ್ಟ್​ನಲ್ಲೂ ಅದೃಷ್ಟ ಟೀಮ್​ ಇಂಡಿಯಾದ ಕೈ ಹಿಡಿಯಲಿಲ್ಲ. ಹೊಸ ನಾಯಕ ರಿಷಭ್​ ಪಂತ್​ ಕೂಡ ಟಾಸ್​ ಸೋಲುಂಡರು. ಸೌತ್​ ಆಫ್ರಿಕಾ ಮೊದಲು ಬ್ಯಾಟಿಂಗ್​ ಆಯ್ದುಕೊಳ್ತು. ಟಾಸ್​ ಸೋತರೂ ಆರಂಭದಲ್ಲೇ ಮೇಲುಗೈ ಸಾಧಿಸೋ ಅವಕಾಶ ಟೀಮ್​ ಇಂಡಿಯಾಗೆ ಇತ್ತು. ಕೆ.ಎಲ್​ ರಾಹುಲ್​ ಯಡವಟ್ಟು ಮಾಡಿದ್ರು. ಸುಲಭದ ಕ್ಯಾಚ್​ ಡ್ರಾಪ್​ ಮಾಡಿ ಮರ್ಕರಮ್​ಗೆ ಜೀವದಾನ ನೀಡಿದ್ರು.
ಇದನ್ನೂ ಓದಿ: ನಾಳೆ ಸ್ಮೃತಿ ಮಂದಾನ ಮದುವೆ.. ಭಾವಿ ಪತಿ ಸರ್ಪ್ರೈಸ್​​ಗೆ ಭಾವುಕರಾದ RCB ಸುಂದರಿ..!
ಕ್ಯಾಚ್​ ಡ್ರಾಪ್​ನ ಲಾಭ ಪಡೆದ ಎಡೆನ್​ ಮರ್ಕರಮ್​ ಸಾಲಿಡ್​ ಆಟವಾಡಿದ್ರು. ಮತ್ತೊರ್ವ ಓಪನರ್​ ರಿಯಾನ್​ ರಿಕಲ್ಟನ್​ ಕೂಡ ದಿಟ್ಟ ಇನ್ನಿಂಗ್ಸ್​ ಕಟ್ಟಿದ್ರು. ಮೊದಲ ವಿಕೆಟ್​ಗೆ 82 ರನ್​ಗಳ ಜೊತೆಯಾಟವಾಡಿದ್ರು. ಮೊದಲ ಸೆಷನ್​ನ ಕೊನೆಯ ಎಸೆತದಲ್ಲಿ ಕೊನೆಗೂ ಟೀಮ್​ ಇಂಡಿಯಾಗೆ ಸಕ್ಸಸ್​ ಸಿಗ್ತು. ವೇಗಿ ಜಸ್​​ಪ್ರಿತ್​ ಬೂಮ್ರಾ ಬಿರುಗಾಳಿಗೆ ಮರ್ಕರಮ್​ ಸ್ಟನ್ ಆದ್ರು. 5 ಬೌಂಡರಿ ಬಾರಿಸಿದ್ದ ಮರ್ಕರಮ್​ 38 ರನ್​ಗಳಿಸಿ ಔಟಾದ್ರು.
2ನೇ ಸೆಷನ್​ ಆರಂಭದಲ್ಲೇ ಕುಲ್​ದೀಪ್​ ಕೈಚಳಕ
2ನೇ ಸೆಷನ್​ನ ಆರಂಭದಲ್ಲೇ ಸ್ಪಿನ್ನರ್ ಕುಲ್​ದೀಪ್​ ಯಾದವ್​ ಕೈಚಳಕ ತೋರಿದ್ರು. ಕಾನ್ಫಿಡೆಂಟ್​ ಆಟವಾಡಿ 35 ರನ್​ಗಳಿಸಿದ್ದ ರಿಕಲ್ಟನ್​, ಕುಲ್​​ದೀಪ್​ ಬೌಲಿಂಗ್​ನಲ್ಲಿ ಪಂತ್​ ಹಿಡಿದ ಶಾರ್ಪ್​ ಕ್ಯಾಚ್​ಗೆ ಬಲಿಯಾದ್ರು. 3ನೇ ವಿಕೆಟ್​ಗೆ ಜೊತೆಯಾದ ನಾಯಕ ಟೆಂಬಾ ಬವುಮಾ, ಟ್ರಿಸ್ಟನ್​ ಸ್ಟಬ್ಸ್​ ಅದ್ಭುತ ಜೊತೆಯಾಟವಾಡಿದ್ರು. ಟೀಮ್​ ಇಂಡಿಯಾ ಬೌಲರ್​​ಗಳನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ 84 ರನ್​ಗಳ ಜೊತೆಯಾಟವಾಡಿದ್ರು.
ದಿನದಾಟದ ಕೊನೆಯ ಸೆಷನ್​ನಲ್ಲಿ ಟೀಮ್​ ಇಂಡಿಯಾ ಬೌಲರ್​ಗಳು ಕಮಾಲ್ ಮಾಡಿದ್ರು. ಸೆಷನ್​ನ ಆರಂಭದಲ್ಲೇ ರವೀಂದ್ರ ಜಡೇಜಾ ಟೆಂಬಾ ಬವುಮಾ ವಿಕೆಟ್​ ಉರುಳಿಸಿದ್ರು. 41 ರನ್​ಗಳಿಸಿ ಬವುಮಾ ಔಟ್ ಆದ್ರು. ಟ್ರಿಸ್ಟನ್​ ಸ್ಟಬ್ಸ್​ ಕೂಡ ಬವುಮಾ ಬೆನ್ನಿಗೆ ಪೆವಿಲಿಯನ್​ ಸೇರಿದ್ರು. ಕುಲ್​​ದೀಪ್ ಸ್ಪಿನ್ ಬಲೆಗೆ ಬಿದ್ದ ಸ್ಟಬ್ಸ್​ 41 ರನ್​ಗಳಿಸಿ ನಿರ್ಗಮಿಸಿದ್ರು. ಬಳಿಕ ಕಣಕ್ಕಿಳಿದ ವಿಯಾನ್​ ಮಲ್ಡರ್​​ಗೂ ಪೆವಿಲಿಯನ್​ ದಾರಿ ತೋರಿಸುವಲ್ಲಿ ಕುಲ್​​ದೀಪ್​ ಯಾದವ್​ ಸಕ್ಸಸ್​ ಆದ್ರು.
59 ಎಸೆತ ಎದುರಿಸಿ ಕ್ರಿಸ್​ ಕಚ್ಚಿ ನಿಲ್ಲೋ ಪ್ರಯತ್ನದಲ್ಲಿದ್ದ ಟೋನಿ ಡಿ ಝೋರ್ಝಿ ಮೊಹಮ್ಮದ್​ ಸಿರಾಜ್​ಗೆ ಶರಣಾದ್ರು. 28 ರನ್​ಗಳಿಗೆ ಝೋರ್ಝಿ ಆಟ ಅಂತ್ಯವಾಯ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸೆನುರಾನ್​ ಮುತುಸಾಮಿ ಎಚ್ಚರಿಕೆಯ ಆಟದ ಮೊರೆ ಹೋದ್ರು. 45 ಎಸೆತ ಎದುರಿಸಿ 4 ಬೌಂಡರಿ ಬಾರಿಸಿದ ಮುತುಸಾಮಿ 25 ರನ್​ಗಳಿಸಿದ್ರು. ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ ಸೌತ್​ ಆಫ್ರಿಕಾ 247 ರನ್​ಗಳಿಸಿತು.
ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ನಲ್ಲಿ ನಾಯಕತ್ವಕ್ಕಾಗಿ ಕಿತ್ತಾಟ..! ರವೀಂದ್ರ ಜಡೇಜಾಗೆ ಪಟ್ಟ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us