Advertisment

ರಾಜಸ್ಥಾನ್ ರಾಯಲ್ಸ್​ನಲ್ಲಿ ನಾಯಕತ್ವಕ್ಕಾಗಿ ಕಿತ್ತಾಟ..! ರವೀಂದ್ರ ಜಡೇಜಾಗೆ ಪಟ್ಟ..?

IPL ಸೀಸನ್-19 ಪ್ಲೇಯರ್ಸ್ ರಿಟೆನ್ಶನ್ & ಟ್ರೇಡಿಂಗ್​​ ಮುಗಿದಿದೆ. ಈಗ ಫ್ರಾಂಚೈಸಿಗಳ ಕಣ್ಣು ಮಿನಿ ಆಕ್ಷನ್ ಮೇಲೆ ನೆಟ್ಟಿದೆ. ಈಗಾಗಲೇ ತಂಡಗಳ ಮಾಲೀಕರು ಬ್ಯಾಕ್​​ಹ್ಯಾಂಡ್​ನಲ್ಲಿ ಆಟಗಾರರ ಖರೀದಿ ಬಗ್ಗೆ ವರ್ಕ್​ ಮಾಡ್ತಿದ್ದಾರೆ. ಇದರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮಹತ್ವದ ಬೆಳವಣಿಗೆಯೊಂದು ಆಗಿದೆ.

author-image
Ganesh Kerekuli
Ravindra Jadeja and Sam
Advertisment
  • ನಾಯಕನಾಗಲು ಜಡ್ಡು 4 ಕೋಟಿ ಕಡಿಮೆ ಮೊತ್ತ ಪಡೆದ್ರಾ..?
  • ಜೈಸ್ವಾಲ್, ಜುರೆಲ್​​​​​​ಗೂ ರಾಜಸ್ಥಾನ್ ನಾಯಕನಾಗುವ ಆಸೆ
  • ರಿಯಾನ್ ಪರಾಗ್ ಕಥೆ ಏನು? ಪರಾಗ್ ವಿರುದ್ಧ ಆಟಗಾರರು?

ಹಲ್ಲಾ ಬೋಲ್... ಹಲ್ಲಾ ಬೋಲ್... ರಾಜಸ್ಥಾನ್ ರಾಯಲ್ಸ್ ಹಲ್ಲಾ ಬೋಲ್.. ಅಂತ ಐಪಿಎಲ್​​ನಲ್ಲಿ ಎದುರಾಳಿಗಳ ವಿರುದ್ಧ ತೊಡೆತಟ್ಟುತ್ತಿದ್ದ ಪಿಂಕ್​​​​​​ ಆರ್ಮಿಯಲ್ಲಿ ಇದೀಗ ಗಲಾಟೆ, ಗೊಂದಲ, ಅಪಸ್ವರ ಶುರುವಾಗಿದೆ. ಮಿನಿ ಹರಾಜು ಹತ್ತಿರವಾಗ್ತಿದೆ. ಐಪಿಎಲ್ ಸೀಸನ್​​​-19ಕ್ಕೂ ಮುನ್ನ ಬಲಿಷ್ಠ ತಂಡ ಕಟ್ಟಬೇಕಿದ್ದ ರಾಜಸ್ಥಾನ್ ರಾಯಲ್ಸ್, ಆಟಗಾರರನ್ನ ಸಮಾಧಾನ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದೆ.

Advertisment

ನಾಯಕತ್ವಕ್ಕಾಗಿ ಕಿತ್ತಾಟ?

ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್​ಕಿಂಗ್ಸ್ ತಂಡಕ್ಕೆ ಟ್ರೇಡ್ ಆದ್ಮೇಲೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಯಾರು ಅನ್ನೋ ಪ್ರಶ್ನೆ ಶುರುವಾಗಿದೆ. ಮೂಲಗಳ ಪ್ರಕಾರ ಅನುಭವಿ ಆಲ್​ರೌಂಡರ್ ಜಡೇಜಾ ಆರ್​ಆರ್​ ತಂಡದ ಸಾರಥ್ಯವಹಿಸಿಕೊಳ್ತಾರೆ ಎಂದು ಹೇಳಲಾಗ್ತಿದೆ. ಜಡೇಜಾಗೆ ನಾಯಕ ಪಟ್ಟ ಕೊಟ್ರೆ ವರ್ಷಗಳಿಂದ ತಂಡದಲ್ಲಿದ್ದ ಆಟಗಾರರು ಸುಮ್ಮನೆ ಇರ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ. ​ಆರ್​ಆರ್​ ನಾಯಕ ಪಟ್ಟಕ್ಕಾಗಿ ಕಿತ್ತಾಟ ಶುರುವಾಗಿದೆ.

ರವೀಂದ್ರ ಜಡೇಜಾಗೆ ಪಟ್ಟ..? 

ಐಪಿಎಲ್ ಟ್ರೇಡ್​​​​​​​​​​​​​ ಡೀಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​, ರವೀಂದ್ರ ಜಡೇಜಾರನ್ನ ತಂಡಕ್ಕೆ ಕರೆತಂದಿದೆ. ಜಡೇಜಾ ಆಗಮನ ಆರ್​ಆರ್​ ತಂಡಕ್ಕೆ, ಖುಷಿಗಿಂತ ಹೆಚ್ಚು ಟೆನ್ಶನ್ ನೀಡಿದೆ. ಜಡೇಜಾಗೆ ನಾಯಕತ್ವದ ಭರವಸೆ ನೀಡಿದ ಮೇಲೆಯೇ ಸಿಎಸ್​​ಕೆ ಮತ್ತು ಆರ್​ಆರ್​ ನಡುವೆ, ಮೆಗಾ ಡೀಲ್ ಫಿಕ್ಸ್ ಆಗಿದ್ದು ಅಂತ ಹೇಳಲಾಗ್ತಿದೆ. ಜಡೇಜಾ ಎಂಟ್ರಿ ರಾಯಲ್ಸ್ ಆಟಗಾರರಲ್ಲಿ ಮನಸ್ಥಾಪಕ್ಕೆ ಕಾರಣವಾಗಿದೆ. ಒಂದು ವೇಳೆ ಜಡ್ಡುಗೆ ನಾಯಕತ್ವ ನೀಡಿದ್ರೆ ಉಳಿದವರು ಅಸಮಾಧಾನಗೊಳ್ಳುತ್ತಾರೆ.

ಇದನ್ನೂ ಓದಿ:ವೈಟ್​ವಾಷ್​ ಭೀತಿ.. ಕೆಟ್ಟ ಮೇಲೆ ಬುದ್ಧಿ ಕಲಿತ ಟೀಮ್​ ಇಂಡಿಯಾ..!​

Ravindra Jadeja

ರಾಯಲ್ಸ್ ಸಾರಥಿಯನ್ನ ಫ್ರಾಂಚೈಸಿ, ಯೋಚಿಸಿ ಲೆಕ್ಕಾಚಾರ ಹಾಕಿ ಆಯ್ಕೆ ಮಾಡಬೇಕಿದೆ. ಈಗಾಗಲೇ ಜಡೇಜಾಗೆ ಪಟ್ಟ ನೀಡುವ ಭರವಸೆಯೊಂದಿಗೆ ತಂಡಕ್ಕೆ ಕರೆತಂದಿದೆ. ಅದ್ರಲ್ಲೂ ಜಡ್ಡು ಸಿಎಸ್​ಕೆ ತಂಡದಲ್ಲಿ 18 ಕೋಟಿ ಪಡೆಯುತ್ತಿದ್ರು. ಆದ್ರೆ ರಾಯಲ್ಸ್ ತಂಡಕ್ಕೆ, 4 ಕೋಟಿ ಕಡಿಮೆ ಮೊತ್ತಕ್ಕೆ ಬಂದಿದ್ದಾರೆ. ನಾಯಕತ್ವದ ಆಸೆಗೆ ಜಡೇಜಾ 4 ಕೋಟಿಯನ್ನ ಲೆಕ್ಕಿಸಿಲ್ಲ. ಹಾಗಾಗಿ ರಾಯಲ್ಸ್ ಫ್ರಾಂಚೈಸಿ, ಜಡ್ಡುಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ.  

Advertisment

ರಾಜಸ್ಥಾನ್ ನಾಯಕನಾಗುವ ಆಸೆ

ಆರ್​ಆರ್​ ಕ್ಯಾಂಪ್​​ನಲ್ಲಿ ಗೊಂದಲಕ್ಕೆ ಕಾರಣವಾಗಿರೋದೇ ಜೈಸ್ವಾಲ್ ಮತ್ತು ಜುರೆಲ್ ಹೇಳಿಕೆಗಳು. ಇಬ್ಬರೂ ಆಟಗಾರರು ತಮಗೆ ರಾಯಲ್ಸ್​ ತಂಡದ ನಾಯಕತ್ವ ನೀಡಲು, ಫ್ರಾಂಚೈಸಿ ಮಾಲೀಕರಲ್ಲಿ ಬಹಿರಂಗವಾಗೇ ಮನವಿ ಮಾಡಿಕೊಂಡಿದ್ದಾರೆ. ಇದು ಆರ್​ಆರ್​ ಮಾಲೀಕರನ್ನ, ಹಾಟ್ ಸೀಟ್ ಮೇಲೆ ಕೂರಿಸಿದಂತಿದೆ. ಹಲವು ವರ್ಷಗಳಿಂದ ಜೈಸ್ವಾಲ್ ಮತ್ತು ಜುರೆಲ್ ಆರ್​ಆರ್​ ತಂಡದಲ್ಲಿರೋದ್ರಿಂದ ಸಹಜವಾಗೇ ಕ್ಯಾಪ್ಟನ್​ಶಿಪ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಇದನ್ನೂ ಓದಿ: ರಣಜಿಯಲ್ಲಿ ಕರ್ನಾಟಕದ ತ್ರಿವಳಿ ಪ್ರತಿಭೆಗಳ ದರ್ಬಾರ್.. ಕಣ್ತೆರೆದು ಬಿಸಿಸಿಐ ನೋಡಬೇಕಿದೆ..!

Ravindra Jadeja (1)

ರಿಯಾನ್ ಪರಾಗ್ ಕಥೆ ಏನು..?

ಕಳೆದ ಐಪಿಎಲ್​ನಲ್ಲಿ ಸಂಜು ಸ್ಯಾಮ್ಸನ್ ಅಲಭ್ಯತೆಯಲ್ಲಿ ಪರಾಗ್​ ತಂಡವನ್ನ ಮುನ್ನಡೆಸಿದ್ರು. ಆದ್ರೆ ಪರಾಗ್ ನಾಯಕನಾಗಿ ಸಕ್ಸಸ್​​ ಕಾಣಲಿಲ್ಲ. ಬ್ಯಾಟ್ಸ್​ಮನ್ ಆಗಿಯೂ ಫೇಲ್ ಆದ್ರು. ಪರಾಗ್ ನಾಯಕನಾದ ಮೇಲೆ ತಂಡದಲ್ಲಿ ಒಳಜಗಳ ಶುರುವಾಯ್ತು. ಆಟಗಾರರು ಪರೋಕ್ಷವಾಗಿ ಪರಾಗ್ ವಿರುದ್ಧ ಅಸಮಧಾನ ಹೊರಹಾಕಿದ್ರು. ಈ ಬಾರಿ ರಿಯಾನ್ ಪರಾಗ್​ ಆರ್​ಆರ್​ ನಾಯಕತ್ವದ ರೇಸ್​ನಿಂದ ಹೊರ ಉಳಿಯಲಿದ್ದಾರೆ. 

Advertisment

ಮಾಲೀಕರು ಹೇಳೋದೇನು..?

ರಾಯಲ್ಸ್​ ತಂಡದಲ್ಲಿ ನಾಯಕತ್ವಕ್ಕೆ ಕಿತ್ತಾಟ ನಡೆಯುತ್ತಿರುವಾಗಲೇ ಮಾಲೀಕರು ಎಚ್ಚೆತ್ತುಕೊಂಡಿದ್ದಾರೆ. ಎರೆಡೆರಡು ಬಾರಿ ಲೀಡರ್​ಶಿಪ್ ಗ್ರೂಪ್ ಮೀಟಿಂಗ್ ನಡೆಸಿದ್ದಾರೆ. ತಂಡದಲ್ಲಿ ಆರೇಳು ಆಟಗಾರರಿಗೆ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ. ಕೆಲವೇ ದಿನಗಳಲ್ಲಿ ನಾಯಕನ ಆಯ್ಕೆ ಮುಗಿಸಲು ಮುಂದಾಗಿದ್ದಾರೆ.

ತಂಡದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ಮಾಜಿ ಕೋಚ್ ರಾಹುಲ್ ದ್ರಾವಿಡ್, ಸಿಇಓ ಜೇಕ್ ಲಷ್ ಮೆಕ್ರಮ್, ಸ್ಪಿನ್ ಬೌಲಿಂಗ್ ಕೋಚ್ ಸಾಯ್​ರಾಜ್ ಬಹುತುಲೆ ಮತ್ತು ಫೀಲ್ಡಿಂಗ್ ಕೋಚ್ ದಿಶಾಂಕ್ ಯಾಗ್ನಿಕ್​ಗೆ ಗೇಟ್​ಪಾಸ್ ನೀಡಿರುವ ಫ್ರಾಂಚೈಸಿ ಆಟಗಾರರ ನಡುವಿನ ಗೊಂದಲಗಳಿಗೆ ಬ್ರೇಕ್ ಹಾಕಲು ಹೊರಟಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Ravindra Jadeja rajasthan royals
Advertisment
Advertisment
Advertisment