Advertisment

ವೈಟ್​ವಾಷ್​ ಭೀತಿ.. ಕೆಟ್ಟ ಮೇಲೆ ಬುದ್ಧಿ ಕಲಿತ ಟೀಮ್​ ಇಂಡಿಯಾ..!​

ಕೆಟ್ಟ ಮೇಲೆ ಬುದ್ಧಿ ಕಲಿತ್ರು ಅಂತಾರಲ್ವಾ? ಸದ್ಯ ಟೀಮ್​ ಇಂಡಿಯಾ ಪರಿಸ್ಥಿತಿ ಅದೇ ಥರ ಇದೆ. ಈಡನ್​ ಗಾರ್ಡನ್ಸ್​​ನಲ್ಲಿ ಕಣಕ್ಕಿಳಿದ ಟೀಮ್​ ಇಂಡಿಯಾ ಮುಗ್ಗರಿಸಿ ಬಿದ್ದಿದೆ. ಸೋಲಿನಿಂದ ಮ್ಯಾನೇಜ್​ಮೆಂಟ್​ ಬುದ್ಧಿ ಕಲಿತಂತಿದೆ. ಗುವಾಹಟಿ ಟೆಸ್ಟ್​ಗೂ ಮುನ್ನ ಗಂಭೀರ್​ ಅಂಡ್ ಟೀಮ್​ ಹೊಸ ಬದಲಾವಣೆಗೆ ಮುಂದಾಗಿದೆ.

author-image
Ganesh Kerekuli
Team India (3)
Advertisment

ಒಂದು ಸೋಲು.. ಹೀನಾಯ ಸೋಲು.. ಕ್ರಿಕೆಟ್​ ಲೋಕವೇ ಟೀಮ್​ ಇಂಡಿಯಾ ಟೆಸ್ಟ್​ ತಂಡದ ಸಾಮರ್ಥ್ಯವನ್ನ ಪ್ರಶ್ನಿಸುವಂತೆ ಮಾಡಿದೆ. ನ್ಯೂಜಿಲೆಂಡ್​ ಎದುರಿನ ವೈಟ್​​ವಾಷ್​ ಮುಖಭಂಗದ ಕಹಿ ಮಾಸುವ ಮುನ್ನವೇ ತವರಿನಲ್ಲಿ ಮತ್ತೊಂದು ಮಹಾಸೋಲನ್ನ ಟೀಮ್​ ಇಂಡಿಯಾ ಕಂಡಿದೆ. ಈಡನ್​​ ಗಾರ್ಡನ್​​ ಅಂಗಳದಲ್ಲಿ ಸೌತ್​ ಆಫ್ರಿಕಾ ಎದುರು ಸೋತ ಟೀಮ್​ ಇಂಡಿಯಾವನ್ನೀಗ ಹೊಸ ಭೀತಿ ಆವರಿಸಿದೆ.  

Advertisment

ಕೊಲ್ಕತ್ತಾ ಟೆಸ್ಟ್​ ಸೋಲು.. ಭಾರತಕ್ಕೆ ವೈಟ್​ವಾಷ್​ ಭೀತಿ.!

ಸರಣಿಯ ಮೊದಲ ಪಂದ್ಯವನ್ನ ಕೈ ಚೆಲ್ಲಿರುವ ಟೀಮ್​ ಇಂಡಿಯಾ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಹಾಲಿ ಟೆಸ್ಟ್​ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ತಕ್ಕಂತೆ ಆಡಿರೋ ಸೌತ್ ಆಫ್ರಿಕಾ ಸರಣಿ ಗೆಲುವಿನ ಕನವರಿಕೆಯಲ್ಲಿದೆ. ಇತ್ತ ವೈಟ್​ವಾಷ್​ ಮುಖಭಂಗದ ಭೀತಿ ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನ ಆವರಿಸಿದೆ. ವೈಟ್​​ವಾಷ್​ ಮುಖಭಂಗದಿಂದ​ ಪಾರಾಗೋಕೆ ಗಂಭೀರ್​​ ಅಂಡ್ ಟೀಮ್ ನಾನಾ ತಂತ್ರಗಳನ್ನ ಹೆಣೀತಿದ್ದಾರೆ. 

ಇದನ್ನೂ ಓದಿ:4 ಆಯಾಮಾದಲ್ಲಿ ವಿಚಾರಣೆ.. 7 ಕೋಟಿ ರಾಬರಿ ಕೇಸ್ ತನಿಖೆ ಎಲ್ಲಿವರೆಗೆ ಬಂತು..?

Team India (3)

ಮೊದಲ ಟೆಸ್ಟ್​ ಪಂದ್ಯದಲ್ಲಿ ನಮಗೆ ಟರ್ನಿಂಗ್​ ಟ್ರ್ಯಾಕೇ ಬೇಕು ಎಂದು ಪಟ್ಟು ಹಿಡಿದ ಮ್ಯಾನೇಜ್​ಮೆಂಟ್​ ಸ್ಪಿನ್​ ಫ್ರೆಂಡ್ಲಿ ಟ್ರ್ಯಾಕ್​ ರೆಡಿ ಮಾಡಿಸಿಕೊಂಡಿತ್ತು. ತಾವೇ ತೋಡಿದ ಹಳ್ಳಕ್ಕೆ ತಾವೇ ಬಿದ್ರು ಅನ್ನೋ ಮಾತಿದ್ಯಲ್ಲ.. ಹಂಗೇ ಅಯ್ತು. ಸ್ಪಿನ್​ ಬಲೆಯಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳೇ ಬಿದ್ರು. ಅಂತಿಮವಾಗಿ ಟೀಮ್​ ಇಂಡಿಯಾ ಹೀನಾಯ ಸೋಲುಂಡಿತು. ಆ ಸೋಲಿನಿಂದ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಇದೀಗ ಪಾಠ ಕಲಿತಂತಿದೆ.

Advertisment

ಕೊಲ್ಕತ್ತಾ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ನಾಲ್ವರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿದ್ರೆ ಸೌತ್​ ಆಫ್ರಿಕಾ ಇಬ್ಬರು ಸ್ಪಿನ್ನರ್ಸ್​ಗೆ ಮಣೆ ಹಾಕಿತ್ತು. ಆದ್ರೆ, ಹೆಚ್ಚು ಸಕ್ಸಸ್​ ಸಿಕ್ಕಿದ್ದು ಸೌತ್​ ಆಫ್ರಿಕಾಗೆ. 12 ವಿಕೆಟ್​ಗಳನ್ನ ಸೌತ್​ ಆಫ್ರಿಕಾ ಸ್ಪಿನ್ನರ್ಸ್​ ಬೇಟೆಯಾಡಿದ್ರು.  ಸೋಲಿಗೆ ನೇರ ಹೊಣೆ ಟೀಮ್​ ಇಂಡಿಯಾದ ಬ್ಯಾಟಿಂಗ್ ವಿಭಾಗ. ಸ್ಪಿನ್​ ಟ್ರ್ಯಾಕ್​​ನಲ್ಲಿ ಬ್ಯಾಟಿಂಗ್​ ನಡೆಸೋಕೆ ಇಂಡಿಯನ್​ ಬ್ಯಾಟರ್ಸ್​ ಪರದಾಡಿದ್ರು. ಹೀಗಾಗಿ ಇದೀಗ ಪಿಚ್​​ನಲ್ಲೇ ಬದಲಾವಣೆ ಮಾಡೋಕೆ ಟೀಮ್​ ಮ್ಯಾನೇಜ್​ಮೆಂಟ್​ ಮುಂದಾಗಿದೆ.   

ಇದನ್ನೂ ಓದಿ: ರಣಜಿಯಲ್ಲಿ ಕರ್ನಾಟಕದ ತ್ರಿವಳಿ ಪ್ರತಿಭೆಗಳ ದರ್ಬಾರ್.. ಕಣ್ತೆರೆದು ಬಿಸಿಸಿಐ ನೋಡಬೇಕಿದೆ..!

Team India

ಗುವಾಹಟಿ ಟೆಸ್ಟ್​ ಪಂದ್ಯಕ್ಕೂ ಮುನ್ನ ಪಿಚ್​ ಕ್ಯುರೇಟರ್​ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ನಿಂದ ಸಂದೇಶ ರವಾನೆಯಾಗಿದೆ. ಇಷ್ಟು ದಿನ ಸ್ಪಿನ್​ ಟ್ರ್ಯಾಕ್​ಗೆ ಜೋತು ಬಿದ್ದಿದ್ದ ಗಂಭೀರ್ ಅಂಡ್ ಟೀಮ್​ ಕೊನೆಗೂ ಬದಲಾವಣೆ ಮಾಡಿಕೊಂಡಿದೆ. ಕ್ಲಾಸಿಕ್​ ಇಂಡಿಯನ್​ ಪಿಚ್​​ ಬೇಕೆಂದು ಮ್ಯಾನೇಜ್​ಮೆಂಟ್​ ಬೇಡಿಕೆ ಇಟ್ಟಿದೆ. ಪೇಸರ್ಸ್​ ಹಾಗೂ ಸ್ಪಿನ್ನರ್ಸ್​ಗೆ ಹೆಚ್ಚು ನೆರವಾಗುವಂತಹ ಪಿಚ್ ಸಿದ್ಧಪಡಿಸಿ ಎಂದು ಮ್ಯಾನೇಜ್​ಮೆಂಟ್​ ಮನವಿ ಮಾಡಿದೆ. 

Advertisment

ರೆಡ್​ ಸಾಯ್ಲ್​ ಪಿಚ್​ನಲ್ಲಿ 2ನೇ ಟೆಸ್ಟ್​ ಪಂದ್ಯ 

ಕೊಲ್ಕತ್ತಾದ ಈಡನ್​​ ಗಾರ್ಡನ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯ ಬ್ಲ್ಯಾಕ್​​ ಸಾಯ್ಲ್​ ಪಿಚ್​ನಲ್ಲಿ ನಡೆದಿತ್ತು. ಇದೀಗ 2ನೇ ಟೆಸ್ಟ್​ ಪಂದ್ಯವನ್ನ ರೆಡ್​ ಸಾಯ್ಲ್​ ಪಿಚ್​ನಲ್ಲಿ ನಡೆಸಲು ತೀರ್ಮಾನಿಸಿದೆ. ಸ್ಪಿನ್​ ಜೊತೆಗೆ ಪೇಸರ್ಸ್​ಗೂ ಈ ಪಿಚ್​ ನೆರವಾಗಲಿದೆ. ಆರಂಭಿಕ ದಿನಗಳಲ್ಲಿ ಬ್ಯಾಟಿಂಗ್​ ಫ್ರೆಂಡ್ಲಿ ಆಗಿರೋ ಪಿಚ್​, ಪಂದ್ಯ ಸಾಗಿದಂತೆ ಸ್ಪಿನ್ನರ್ಸ್​ಗೆ ನೆರವಾಗಲಿದೆ. ಬಿಸಿಸಿಐನ ಹೆಡ್​ ಕ್ಯುರೇಟರ್​ ಆಶಿಶ್​ ಬೋಮಿಕ್​ ಪಿಚ್​ನ ಮೇಲ್ವಿಚಾರಣೆ ಮಾಡ್ತಿದ್ದಾರೆ. 

ವೈಟ್​ವಾಷ್​​ ಮುಖಭಂಗದಿಂದ ಪಾರಾಗೋ ಸಂಕಷ್ಟಕ್ಕೆ ಸಿಲುಕಿರೋ ಟೀಮ್​ ಇಂಡಿಯಾ ನಾನಾ ತಂತ್ರಗಳನ್ನ ಹೆಣೆತಿದೆ. ಪಿಚ್​ನಲ್ಲಿ ಬದಲಾವಣೆ ಬಯಸಿರೋದು ಅದ್ರ ಒಂದು ಭಾಗ. ಟರ್ನಿಂಗ್​ ಟ್ರ್ಯಾಕ್​ನಲ್ಲಿ ಮಕಾಡೆ ಮಲಗಿದ ಆಟಗಾರರು, ಪೇಸ್​ & ಬೌನ್ಸಿ ಟ್ರ್ಯಾಕ್​ನಲ್ಲಿ ಸಿಡಿದೇಳ್ತಾರಾ.? ಕಾದು ನೋಡೋಣ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Team India Ind vs SA India vs South Africa
Advertisment
Advertisment
Advertisment