Advertisment

ರಣಜಿಯಲ್ಲಿ ಕರ್ನಾಟಕದ ತ್ರಿವಳಿ ಪ್ರತಿಭೆಗಳ ದರ್ಬಾರ್.. ಕಣ್ತೆರೆದು ಬಿಸಿಸಿಐ ನೋಡಬೇಕಿದೆ..!

ರಣಜಿ ಟ್ರೋಫಿಯಲ್ಲಿ ಕರ್ನಾಟಕ ಕ್ರಿಕೆಟಿಗರ ದರ್ಬಾರ್ ಜೋರಾಗಿದೆ. ಬ್ಯಾಟಿಂಗ್, ಬೌಲಿಂಗ್​ನಲ್ಲಿ ಮಿಂಚ್ತಿರುವ ಕನ್ನಡಿಗರು, ದಾಖಲೆಗಳ ಮೇಲೆ ದಾಖಲೆಗಳನ್ನ ಬರೆಯುತ್ತಿದೆ. ಕರ್ನಾಟಕ ಕ್ರಿಕೆಟಿಗರ ಈ ಅದ್ಭುತ ಪ್ರದರ್ಶನ, ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

author-image
Ganesh Kerekuli
R smaran
Advertisment
  • ರಣಜಿ ಟ್ರೋಫಿಯಲ್ಲಿ ಕನ್ನಡಿಗರ ದರ್ಬಾರ್ ಜೋರು
  • ಒಂದಲ್ಲ.. ಎರಡು ಡಬಲ್ ಸೆಂಚುರಿ ಸ್ಟಾರ್ ಸ್ಮರಣ್
  • ಕ್ರಿಕೆಟ್ ಕರಿಯರ್​ನ ಪೀಕ್​ನಲ್ಲಿ ಕರುಣ್ ನಾಯರ್

ಕರ್ನಾಟಕ ಕ್ರಿಕೆಟ್​​ನಲ್ಲಿ ಟ್ಯಾಲೆಂಟ್​ಗೇನು ಕಮ್ಮಿ ಇಲ್ಲ. ಇಲ್ಲಿ ಪ್ರತಿಭಾವಂತರ ದಂಡೇ ಇದೆ. ಅವಕಾಶಕ್ಕಾಗಿ ತಂಡದಲ್ಲಿ ಸಿಕ್ಕಾಪಟ್ಟೆ ಪೈಪೋಟಿ ನಡೆಯುತ್ತಿದೆ. ಸಿಕ್ಕ ಅವಕಾಶಗಳನ್ನ ಆಟಗಾರರು, ಎರಡೂ ಕೈಗಳಿಂದ ಬಾಚಿಕೊಳ್ತಿದ್ದಾರೆ. ಪ್ರಸಕ್ತ ರಣಜಿ ಟ್ರೋಫಿ ಟೂರ್ನಿಯಲ್ಲಿ ಕನ್ನಡಿಗರ ದರ್ಬಾರೇ ಉತ್ತಮ ಉದಾಹರಣೆ. ಹಿರಿಯ, ಕಿರಿಯ ಆಟಗಾರರು, ಕರ್ನಾಟಕ ತಂಡದ ಪರ ದರ್ಬಾರ್ ನಡೆಸ್ತಿದ್ದಾರೆ.   

Advertisment

2 ಬಾರಿ ಡಬಲ್ ಸೆಂಚುರಿ ಸ್ಟಾರ್ ಸ್ಮರಣ್

22 ವರ್ಷದ ಎಡಗೈ ಬ್ಯಾಟ್ಸ್​ಮನ್ ಆರ್.ಸ್ಮರಣ್, ರಣಜಿಯಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಆಡಿರೋ 5 ಪಂದ್ಯಗಳಲ್ಲಿ 595 ರನ್​​​​​​​​​​ಗಳಿಸಿರುವ ಸ್ಮರಣ್, ಕೇರಳ ಮತ್ತು ಚಂಢೀಗಢ ತಂಡಗಳ ವಿರುದ್ಧ 2 ಡಬಲ್ ಸೆಂಚುರಿ ಬಾರಿಸಿದ್ದಾರೆ. 119ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್​ಗಳಿಸಿರುವ ಯಂಗ್ ಸ್ಮರಣ್, 2 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. 

ಇದನ್ನೂ ಓದಿ: ಗಂಭೀರ್, ಅಗರ್ಕರ್ ಇನ್ನೆಷ್ಟು ದಿನ ‘ನಿಮ್ಮ ಆಟ’..? ರಾಜಕೀಯದಿಂದ ನರಳಿದ ತಂಡ..!

ಇವತ್ತು ಕನ್ನಡಿಗನಿಗೆ ಕೊಕ್ ಪಕ್ಕಾ.. ಪ್ಲೇಯಿಂಗ್​-XI ಆಯ್ಕೆಯೇ ಬಹುದೊಡ್ಡ ತಲೆನೋವು..!

ಪೀಕ್​ನಲ್ಲಿ ಕರುಣ್ ನಾಯರ್

ಹಿರಿಯ ಮತ್ತು ಅನುಭವಿ ಬ್ಯಾಟ್ಸ್​ಮನ್ ಕರುಣ್ ನಾಯರ್, ತಮ್ಮ ಕ್ರಿಕೆಟ್ ಕರಿಯರ್​ನ ಪೀಕ್ ಫಾರ್ಮ್​ನಲ್ಲಿದ್ದಾರೆ. ರಣಜಿ ಟೂರ್ನಿಯಲ್ಲಿ ಕರುಣ್ ನಾಯರ್, ತಮ್ಮದೇ ಸ್ಟೈಲ್​ನಲ್ಲಿ ದರ್ಬಾರ್ ನಡೆಸ್ತಿದ್ದಾರೆ. ಆಡಿರೋ 5 ಪಂದ್ಯಗಳಲ್ಲಿ 600ಕ್ಕಿಂತ ಹೆಚ್ಚು ರನ್​ಗಳಿಸಿದ್ದಾರೆ. ಒಂದು ದ್ವಿಶತಕ, ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನ ದಾಖಲಿಸಿರುವ ಕರುಣ್, ಕರ್ನಾಟಕ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ.

Advertisment

ಶ್ರೇಯಸ್ ಗೋಪಾಲ್ ಮಿಂಚು

ಅನುಭವಿ ಆಲ್​ರೌಂಡರ್ ಶ್ರೇಯಸ್ ಗೋಪಾಲ್, ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಕರ್ನಾಟಕ ತಂಡದ ಮ್ಯಾಚ್ ವಿನ್ನರ್ ಎನಿಸಿಕೊಂಡಿರೋ ಶ್ರೇಯಸ್, ರಣಜಿಯಲ್ಲಿ ಆಡಿರೋ 5 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದಾರೆ. 1 ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ಮತ್ತು 1 ಬಾರಿ 5 ವಿಕೆಟ್ ಆಲ್ ಪಡೆದಿರುವ ಶ್ರೇಯಸ್, ಬ್ಯಾಟಿಂಗ್​ನಲ್ಲೂ ಸಖತ್ ಪರ್ಫಾಮೆನ್ಸ್ ನೀಡಿದ್ದಾರೆ. 290 ರನ್​ಗಳಿಸಿರುವ ಶ್ರೇಯಸ್, 5 ಭರ್ಜರಿ ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಶ್ರೇಯಸ್ ಬ್ಯಾಟಿಂಗ್ ಸರಾಸರಿ 58.

ಇದನ್ನೂ ಓದಿ:ಏಕದಿನ ಸರಣಿಗೆ ಕೈಕೊಟ್ಟ ನಾಯಕ, ಉಪನಾಯಕ.. ತಂಡದಲ್ಲಿ ಯಾರಿಗೆಲ್ಲ ಚಾನ್ಸ್..?

ಈ ತ್ರಿವಳಿ ಆಟಗಾರರು ಪ್ರತಿಷ್ಠಿತ ಟೂರ್ನಿಯಲ್ಲಿ ಮಿಂಚ್ತಿದ್ದಾರೆ. ಇವರಿಗೆ ಮುಂದೆ ಅದೃಷ್ಟ ಖುಲಾಯಿಸುತ್ತೋ ಇಲ್ವೋ ಗೊತ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಬಿಟ್ರೆ ಟೀಮ್ ಇಂಡಿಯಾ ಮುಂದೆ ಟೆಸ್ಟ್ ಸರಣಿ ಆಡೋದು ಆರೇಳು ತಿಂಗಳಲ್ಲಿ. ಅಷ್ಟರೊಳಗೆ ಈ ತ್ರಿಮೂರ್ತಿಗಳ ಪರ್ಫಾಮೆನ್ಸ್​ ಎಲ್ಲರೂ ಮರೆತು ಹೋಗಿರ್ತಾರೆ. ಇವರಿಗೆ ಮುಂದೆ ಟೀಮ್ ಇಂಡಿಯಾ ಡೋರ್ ಓಪನ್ ಕಷ್ಟಸಾಧ್ಯ.

Advertisment

ಪ್ರತಿಯೊಬ್ಬ ಆಟಗಾರನ ಯಶಸ್ಸಿನ ಫಲ ಸಿಗಲೇಬೇಕು. ರಣಜಿಯಲ್ಲಿ ಮಿಂಚ್ತಿರುವ ಕರ್ನಾಟಕದ ಆರ್.ಸ್ಮರಣ್, ಕರುಣ್ ನಾಯರ್ ಮತ್ತು ಶ್ರೇಯಸ್ ಗೋಪಾಲ್​​​​​​​​ ಸಾಧನೆಯನ್ನ ಬಿಸಿಸಿಐ ಪರಿಗಣಿಸಲೇಬೇಕು. ಆಯ್ಕೆಗಾರರು, ಇವರ ಆಟವನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಾರಾ ಅನ್ನೋದೇ ದೊಡ್ಡ ಪ್ರಶ್ನೆ. ಟೆಸ್ಟ್ ಸರಣಿ ಸದ್ಯಕ್ಕಿಲ್ಲದ ಕಾರಣ ಇವರ ಪರ್ಫಾಮೆನ್ಸ್ ನೀರಿನಲ್ಲಿ ಹೋಮ ಮಾಡಿದಂತೆ.  ಬಿಸಿಸಿಐ, ಆಯ್ಕೆ ಸಮಿತಿಗೆ ಕನ್ನಡಿಗರ ಪ್ರದರ್ಶನಕ್ಕೆ ಬೆಲೆ ಕೊಡುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಕರ್ನಾಟಕ ತಂಡಕ್ಕೆ ಖಂಡಿತ ರಣಜಿ ಟ್ರೋಫಿ ಗೆಲ್ಲೋದ್ರಲ್ಲಿ ಇವರ ಸೇವೆ ನೆರವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಏಕದಿನ ಸರಣಿಗೆ ಕೈಕೊಟ್ಟ ನಾಯಕ, ಉಪನಾಯಕ.. ತಂಡದಲ್ಲಿ ಯಾರಿಗೆಲ್ಲ ಚಾನ್ಸ್..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
ranji trophy 2025 shreyas gopal Smaran Ravichandran
Advertisment
Advertisment
Advertisment