/newsfirstlive-kannada/media/media_files/2025/11/20/iyer-and-gill-2025-11-20-08-46-01.jpg)
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ, ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಪ್ರಕಟಗೊಳ್ಳಲಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ತಂಡದಲ್ಲಿ ಕೆಲ ಮಹತ್ವದ ಬದಲಾವಣೆ ಮಾಡೋ ಸಾಧ್ಯತೆ ಹೆಚ್ಚಿದೆ. ಅದ್ರಲ್ಲೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​​ ತಂಡದ ಸಾರಥಿ ಬಗ್ಗೆ​ ಹೆಚ್ಚು ತಲೆಕೆಡಿಸಿಕೊಂಡಿದೆ.
ಗುವಾಹಟಿ ಟೆಸ್ಟ್ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾ ಕ್ಯಾಂಪ್​​ನಲ್ಲಿ ಟೆನ್ಶನ್ ಶುರುವಾಗಿದೆ. ಏಕದಿನ ಸರಣಿಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ತಂಡದ ಆಯ್ಕೆ ಕೋಚ್ ಗೌತಮ್ ಗಂಭೀರ್​​​​​​ ತಲೆಬಿಸಿ ಹೆಚ್ಚಿಸಿದೆ. ಅದ್ರಲ್ಲೂ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿರುವ ಟೀಮ್ ಇಂಡಿಯಾ, ಆಟಗಾರರ ಆಯ್ಕೆಯಲ್ಲಿ ಟಫ್ ಡಿಸಿಷನ್ ಕೈಗೊಳ್ಳಲು ಮುಂದಾಗಿದೆ.
ಗಿಲ್, ಅಯ್ಯರ್ ಸ್ಥಾನಕ್ಕೆ ಯಾರು?
ಕೊಲ್ಕತ್ತಾ ಟೆಸ್ಟ್ ಪಂದ್ಯದ ವೇಳೆ ನಾಯಕ ಶುಭ್ಮನ್ ಗಿಲ್, ಕುತ್ತಿಗೆ ಬಳಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಪರಿಣಾಮ ಗಿಲ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಗಿಲ್ 2ನೇ ಟೆಸ್ಟ್ ಪಂದ್ಯ ಆಡೋದು ಅನುಮಾನ. ಏಕದಿನ ಸರಣಿಗೂ ಡೌಟ್​ಫುಲ್ ಎನ್ನಲಾಗ್ತಿದೆ.​​
ಇದನ್ನೂ ಓದಿ:ಈ ಐದು ಆಟಗಾರರಿಗೆ ಭಾರೀ ಡಿಮ್ಯಾಂಡ್​.. RCB ಟಾರ್ಗೆಟ್​ ಯಾರು?
ಮತ್ತೊಂದೆಡೆ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾ ಏಕದಿನ ಸರಣಿ ವೇಳೆ ಪಕ್ಕೆಲಬಿಗೆ ಗಂಭೀರ ಗಾಯಗೊಂಡಿದ್ದರು. ಶ್ರೇಯಸ್ ಚಿಕಿತ್ಸೆ ಪಡೆಯುತ್ತಿದ್ದು, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಶ್ರೇಯಸ್, ಸೌತ್ ಆಫ್ರಿಕಾ ಓಡಿಐ ಸೀರಿಸ್​​ನಿಂದ ರೂಲ್ಡ್ ಔಟ್ ಆಗಿದ್ದಾರೆ.
ಕೊಹ್ಲಿ- ರೋಹಿತ್ ಮೇಲೆ ಹದ್ದಿನ ಕಣ್ಣು?
ಹಿರಿಯ ಹಾಗೂ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಏಕದಿನ ಸರಣಿಯ ನಂತರ ಕಾಂಪಿಟೇಟಿವ್ ಕ್ರಿಕೆಟ್ ಆಡ್ಲಿಲ್ಲ. ರೋ-ಕೊ ಇಬ್ಬರಿಗೂ ಪ್ರತಿ ಸರಣಿ ಅಗ್ನಿಪರೀಕ್ಷೆ ಇದ್ದಂತೆ. ಬಿಸಿಸಿಐ, ಸೆಲೆಕ್ಟರ್ಸ್, ಟೀಮ್ ಮ್ಯಾನೇಜ್ಮೆಂಟ್ ಎಲ್ಲರೂ, ರೋಹಿತ್-ಕೊಹ್ಲಿ ಪರ್ಫಾಮೆನ್ಸ್ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಹಾಗಾಗಿ ಸೌತ್ ಆಫ್ರಿಕಾ ಸೀರಿಸ್​​ನಲ್ಲಿ ಇಬ್ಬರು ಒಳ್ಳೆ ಪರ್ಫಾಮೆನ್ಸ್ ಕೊಡಲೇಬೇಕು.
ಪಂತ್​ ಇನ್, ಧೃವ್ ಜುರೆಲ್ ಔಟ್..?
ಆಸ್ಟ್ರೇಲಿಯಾ ಏಕದಿನ ಸರಣಿಗೆ ರಿಷಭ್ ಪಂತ್ ಅಲಭ್ಯರಾಗಿದ್ರು. ಹಾಗಾಗಿ ಧೃವ್ ಜುರೆಲ್, ಕೆ.ಎಲ್.ರಾಹುಲ್​​ಗೆ ಬ್ಯಾಕ್​ ಅಪ್ ವಿಕೆಟ್ ಕೀಪರ್ ಆಗಿದ್ರು. ಆದ್ರೀಗ ಪಂತ್, ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಸೌತ್ ಆಫ್ರಿಕಾ ‘ಎ’ ವಿರುದ್ಧ ಅನ್​ಅಫಿಶಿಯಲ್ ಟೆಸ್ಟ್ ಸರಣಿಯನ್ನೂ ಆಡಿದ್ದಾರೆ. ಸೌತ್ ಆಫ್ರಿಕಾ ಏಕದಿನ ಸರಣಿಗೆ, ಪಂತ್ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಆಗಿರೋದ್ರಿಂದ, ಧೃವ್ ಜುರೆಲ್​ಗೆ ತಂಡದಲ್ಲಿ ಸ್ಥಾನ ಅನುಮಾನ.
ಯಾವುದಕ್ಕೆ ಹೆಚ್ಚು ಮಣೆ?
ತವರಿನಲ್ಲೇ ಏಕದಿನ ಸರಣಿ ನಡೆಯುತ್ತಿರೋದ್ರಿಂದ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹೆವಿ ಸ್ಪಿನ್​ ಮೊರೆ ಹೋಗೋ ಸಾಧ್ಯತೆ ಹೆಚ್ಚಿದೆ. ಈಗಾಗಲೇ ತಂಡದಲ್ಲಿ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಇದ್ದಾರೆ. ಇವರ ಜೊತೆಗೆ ವರುಣ್ ಚಕ್ರವರ್ತಿಯನ್ನೂ ಆಯ್ಕೆಗೆ ಪರಿಗಣಿಸೋ ಸಾಧ್ಯತೆ ಇದೆ. ಫೈನಲ್ ಟೀಮ್​ನಲ್ಲಿ ಯಾರಿಗೆ ಸ್ಥಾನ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ.. ಕಳ್ಳರು ಪ್ಲಾನ್ ಮಾಡಿದ್ದು ಹೇಗೆ..?
ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ಇಬ್ಬರೂ, ಇಂಜುರಿಯಿಂದ ತಂಡದಿಂದ ಹೊರಗುಳಿದಿದ್ದಾರೆ. ಇವರಿಬ್ಬರ ಅಲಭ್ಯತೆಯಲ್ಲಿ ಯಾರು ತಂಡದ ನಾಯಕ ಆಗ್ತಾರೆ..? ಯಾರು ತಂಡದ ಉಪನಾಯಕ ಆಗ್ತಾರೆ ಅನ್ನೋದು, ತೀವ್ರ ಕುತೂಹಲ ಕೆರಳಿಸಿದೆ. ರಿಷಭ್ ಪಂತ್ ಮತ್ತು ಕೆ.ಎಲ್.ರಾಹುಲ್ ಇಬ್ಬರ ನಡುವೆ ನಾಯಕ ಪಟ್ಟಕ್ಕಾಗಿ ಬಿಗ್ ಫೈಟ್ ನಡೆಯಲಿದೆ.
ತವರಿನಲ್ಲಿ ನಡೆಯಲಿರುವ ಏಕದಿನ ಸರಣಿ, ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಟೆ. ಇದಷ್ಟೇ ಅಲ್ಲ. 2027ರ ಏಕದಿನ ವಿಶ್ವಕಪ್​ಗೂ ಮುನ್ನ, ಇದು ಅತ್ಯಂತ ಇಂಪಾರ್ಟೆಂಟ್ ಸೀರಿಸ್​ ಆಗಲಿದೆ.
ಇದನ್ನೂ ಓದಿ: ಅಶ್ವಿನಿ ಗೌಡ ಸ್ವಾಭಿಮಾನಕ್ಕೆ ದಕ್ಕೆ.. ಬಿಗ್​ಬಾಸ್​ ಮನೆಯಲ್ಲಿ ಉಪವಾಸ ಸತ್ಯಾಗ್ರಹ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us