/newsfirstlive-kannada/media/media_files/2025/11/20/robbary-2025-11-20-07-34-06.jpg)
ಹೈಟೆಕ್​​ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಬೃಹತ್ ದರೋಡೆ ನಡೆದಿದೆ. ಎಟಿಎಂ ವಾಹನವನ್ನು ಅಡ್ಡಗಟ್ಟಿ ಕೋಟಿ ಕೋಟಿ ಹಣವನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ. ಸಿಎಂಎಸ್ ಕಂಪನಿಗೆ ಸೇರಿದ ವಾಹನ ಜೆ.ಪಿ ನಗರದ ಹೆಚ್​ಡಿಎಫ್​​ಸಿ ಬ್ಯಾಂಕ್​​ನಿಂದ ಎಟಿಎಂಗಳಿಗೆ ಹಣ ತುಂಬಲು ತೆಗೆದುಕೊಂಡು ಹೋಗ್ತಿದ್ದಾಗ ದರೋಡೆಕೋರರು ಇನ್ನೋವಾ ಕಾರಲ್ಲಿ ಹಿಂಬಾಲಿಸಿ ಬಂದು ಕೃತ್ಯವೆಸಗಿದ್ರು. ಸದ್ಯ ಪೊಲೀಸರು, ಬೆಂಗಳೂರನ್ನೇ ಬೆಚ್ಚಿ ಬೀಳಿಸಿರುವ ಈ ದರೋಡೆಕೋರರ ಬೆಂಬಿದ್ದಿದ್ದಾರೆ.
ಇದನ್ನೂ ಓದಿ:ಶಕ್ತಿ ಯೋಜನೆಯಿಂದ ಮಾಲಿನ್ಯ ನಿಯಂತ್ರಣ; ಸಿಎಂ ಮುಂದೆ ನರೇಂದ್ರಸ್ವಾಮಿ ಅಭಿಪ್ರಾಯ
/filters:format(webp)/newsfirstlive-kannada/media/media_files/2025/11/20/robbary-1-2025-11-20-07-39-11.jpg)
CMS ಏಜೆನ್ಸಿಯ ಸೌತ್ ಇಂಡಿಯಾ ಹೆಡ್​ಗೆ ಖುದ್ದು ಕಮಿಷನರ್ ವಿಚಾರಣೆ
ಇನ್ನೋವಾ ಕಾರಿನಲ್ಲಿದ್ದ ದರೋಡೆಕೋರರು ಕೇಂದ್ರ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದು ಈ ಬೃಹತ್ ಕೈಚಳಕ ಪ್ರದರ್ಶಿಸಿದ್ದಾರೆ. ಹಣದ ದಾಖಲೆ ಪರಿಶೀಲನೆ ಮಾಡಬೇಕು ಅಂತ ಹಣದ ಸಮೇತ ಸಿಎಂಎಸ್ ವಾಹನದ ಸಿಬ್ಬಂದಿಯನ್ನ ಕಾರಲ್ಲಿ ಕರ್ಕೊಂಡು ಹೋದ ದರೋಡೆಕೋರರು, ಬೆಂಗಳೂರಿನ ಡೈರಿ ಸರ್ಕಲ್ ಬಳಿ ಸಿಬ್ಬಂದಿಯನ್ನ ಕೆಳಗಿಳಿಸಿ ಹಣದ ಸಮೇತ ಎಸ್ಕೇಪ್ ಆಗಿದ್ದಾರೆ. ಮೇಲ್ಸೇತುವೆ ಮೇಲೆ ಕಾರು ನಿಲ್ಲಿಸಿ ಎಸ್ಕೇಪ್​ ಆಗಿದ್ದಾರೆ. ಸದ್ಯ ಪೊಲೀಸರು CMS ಏಜೆನ್ಸಿಯ ದಕ್ಷಿಣ ಭಾರತದ ಮುಖ್ಯಸ್ಥ ಜಿಟಿ ನಾಯಕ್​ಗೆ ವಿಚಾರಣೆ ಮಾಡಿದ್ದಾರೆ. ಖುದ್ದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​ರೇ ವಿಚಾರಣೆ ನಡೆಸಿದ್ದಾರೆ. ಸಿದ್ದಾಪುರ ಠಾಣೆಗೆ ನಿವೃತ್ತ ಐಪಿಎಸ್ ಅಧಿಕಾರಿಯೂ ಆಗಿರುವ ಜಿಟಿ ನಾಯಕ್​ನನ್ನ ಕರೆಸಿದ ಆಯುಕ್ತರು ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ:ಕೇರಳದ ಶಬರಿಮಲೆಯಲ್ಲಿ ಹರಿದು ಬಂದ ಭಕ್ತಸಾಗರ: ಸರಿಯಾದ ವ್ಯವಸ್ಥೆ ಮಾಡಲು ಹೈಕೋರ್ಟ್ ಸೂಚನೆ
/filters:format(webp)/newsfirstlive-kannada/media/media_files/2025/11/20/robbary-2-2025-11-20-07-39-43.jpg)
ಮಹಜರು ಪ್ರಕ್ರಿಯೆ ಬಳಿಕ ಸಿಎಂಎಸ್ ವಾಹನ ಟೋಯಿಂಗ್…
ಇನ್ನು ಮಹಜರು ಪ್ರಕ್ರಿಯೆ ಮುಗಿದ ಬಳಿಕ ಸಿಎಂಎಸ್ ವಾಹನವನ್ನ ಸಿಬ್ಬಂದಿ ಟೋಯಿಂಗ್ ಮಾಡಿದ್ದಾರೆ. ಸಿಲ್ಕ್ ಬೋರ್ಡ್ ಪ್ಲೈ ಓವರ್​ನಿಂದ ವಾಹನವನ್ನು ಟೋಯಿಂಗ್ ಮಾಡಿಕೊಂಡು ಬಂದು ಸಿದ್ದಾಪುರ ಠಾಣೆಯ ಬಳಿ ತಂದಿದ್ದಾರೆ.
ಇದನ್ನೂ ಓದಿ:ಈ ಐದು ಆಟಗಾರರಿಗೆ ಭಾರೀ ಡಿಮ್ಯಾಂಡ್​.. RCB ಟಾರ್ಗೆಟ್​ ಯಾರು?
ಇನ್ನು ಸಿದ್ದಾಪುರ ಠಾಣೆಯಲ್ಲಿ ಮಹಾ ದರೋಡೆಯ FIR ದಾಖಲಾಗಿದೆ. ಘಟನೆ ನಡೆದ ಬಗ್ಗೆ ಸಿಎಂಎಸ್ ಕಂಪನಿಯ HBR ಲೇಔಟ್ ಬ್ರ್ಯಾಂಚ್ ಮ್ಯಾನೇಜರ್ ವಿನೋದ್ ಚಂದ್ರಾರ್ ಅಲಿಯಾಸ್ ಚಂದ್ರಶೇಖರಯ್ಯ ದೂರು ನೀಡಿದ್ದಾರೆ. ಆರೇಳು ಜನರು ಚಾಲಕನಿಗೆ ಪಿಸ್ತೂಲ್ ತೋರಿಸಿ 7 ಕೋಟಿ ದರೋಡೆ ಮಾಡಿದ್ದಾಗಿ ವಿವರಿಸಿದ್ದಾರೆ.
ಎಫ್​ಐಆರ್​ನಲ್ಲಿ ಇರೋದೇನು?
ಬೆಂಗಳೂರಿನ ಜೆಪಿ ನಗರದ ಐಟಿಐ ಲೇಔಟ್​ನ ಸಾರಕ್ಕಿ ಮುಖ್ಯರಸ್ತೆಯ ಎಂಜಿ ಟವರ್‌ನಲ್ಲಿರೋ HDFC ಬ್ಯಾಂಕ್‌ನಿಂದ ನಗದು ಹಣ ಡ್ರಾ ಮಾಡಲಾಗುತ್ತೆ. ಬೆಂಗಳೂರಿನ HDFC ಬ್ಯಾಂಕ್ ATMಗಳಿಗೆ ಹಣ ಡೆಪಾಸಿಟ್ ಕೆಲಸ ಇರುತ್ತದೆ. ನಿನ್ನೆ ಬೆಳಗ್ಗೆ 9.30ಕ್ಕೆ ಕಸ್ಟೋಡಿಯನ್ ಅಫ್ತಾಬ್, ಚಾಲಕ ಬಿನೋದ್, ಗನ್‌ಮ್ಯಾನ್ ರಾಜಣ್ಣ ಹಾಗೂ ತಮ್ಮಯ್ಯ CMS ವಾಹನದಲ್ಲಿದ್ರು. ಮಧ್ಯಾಹ್ನ 12.24ಕ್ಕೆ ಜೆಪಿ ನಗರದ HDFC ಬ್ಯಾಂಕ್‌ನಿಂದ 7 ಕೋಟಿ 11 ಲಕ್ಷ ಡ್ರಾ ಮಾಡಿ ಹಣವನ್ನ ಟ್ರಂಕ್‌ನಲ್ಲಿ ತುಂಬಿಕೊಂಡು ತೆರಳ್ತಿದ್ದಾಗ ಏಕಾಏಕಿ ದರೋಡೆಯಾಗಿದೆ. ಈ ಬಗ್ಗೆ ಚಾಲಕ ಬಿನೋದ್ ಫ್ಲೀಟ್ ಮ್ಯಾನೇಜರ್ ಫಾರೂಕ್‌ಗೆ ಕರೆ ಮಾಡಿದ್ರು. ಅಶೋಕ ಪಿಲ್ಲರ್ ಮಾರ್ಗವಾಗಿ ಸಿದ್ದಾಪುರ ಗೇಟ್ ಬಳಿ ಇನ್ನೋವಾ ಕಾರ್ ಮೂಲಕ ದರೋಡೆಕೋರರು ಅಡ್ಡಗಟ್ಟಿದ್ದಾರೆ. 6-7 ಜನರು, ನಾವು ಆರ್‌ಬಿಐನವ್ರು, ಕೆಳಗಿಳೀರಿ ಅಂತ ಹೇಳಿ ಅಫ್ತಾಬ್, ರಾಜಣ್ಣ, ತಮ್ಮಯ್ಯರನ್ನ ತಮ್ಮ ಇನ್ನೋವಾ ಕಾರ್‌ನಲ್ಲಿ ಕೂರಿಸಿದ್ರು. ಬಿನೋದ್‌ಗೆ ಹಣ ತುಂಬಿರೋ ಗಾಡಿಯೊಂದಿಗೆ ಹಿಂಬಾಲಿಸಲು ತಿಳಿಸಿದ್ರು. ಇನ್ನೋವಾದಲ್ಲಿ ಕರೆದೊಯ್ದ ಮೂವರನ್ನ ಎಲ್ಲಿ ಇಳಿಸಿದ್ದಾರೆಂದು ಗೊತ್ತಿಲ್ಲ. ಆದ್ರೆ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ಪಿಸ್ತೂಲ್ ತೋರಿಸಿ ಭಯಪಡಿಸಿದ್ದಾರೆ.
ಇದನ್ನೂ ಓದಿ: ನನ್ನನ್ನು ಅನರ್ಹ ಮಾಡಲು ಷಡ್ಯಂತ್ರ : KSCA ಚುನಾವಣೆ ಬಗ್ಗೆ ವಿನಯ್ ಮೃತ್ಯುಂಜಯ ಸ್ಪೋಟಕ ಹೇಳಿಕೆ
/filters:format(webp)/newsfirstlive-kannada/media/media_files/2025/11/20/robbary-4-2025-11-20-07-40-11.jpg)
ಗಾಡಿಯಲ್ಲಿದ್ದ 7 ಕೋಟಿ 11 ಲಕ್ಷ ಹಣವನ್ನ ದರೋಡೆ ಮಾಡಿ ಪರಾರಿಯಾಗಿದ್ದಾರೆ ಅಂತ ದರೋಡೆಯ ಮಾಹಿತಿಯನ್ನ ಬಿನೋದ್ ಫಾರೂಕ್‌ಗೆ ನಿಡಿದ್ದ. ಕೂಡಲೇ ಸಿಎಂಎಸ್ ವಾಹನದ ಜಿಪಿಆರ್‌ಎಸ್ ಚೆಕ್ ಮಾಡಿದ್ದ ಮ್ಯಾನೇಜರ್‌ಗೆ ವಾಹನ ಹೊಸೂರು ಡೈರಿ ಸರ್ಕಲ್ ಬಳಿಯಿರೋದು ಖಚಿತವಾಗಿತ್ತು. ಬಳಿಕ ಸೆಕ್ಯೂರಿಟಿ ಮ್ಯಾನೇಜರ್‌ನಿಂದ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾರೆ. ಆದ್ರೆ CMS ವಾಹನದ ಸಿಸಿಟಿವಿ ಡಿವಿಆರ್‌ನ್ನ ಖದೀಮರು ಕೊಂಡೊಯ್ದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ದರೋಡೆ ಸಂಬಂಧ ಅಧಿಕಾರಿಗಳ ಜೊತೆ ವಿಧಾನಸೌಧದ ಗೃಹ ಸಚಿವರ ಕಚೇರಿಯಲ್ಲಿ ಗೃಹ ಸಚಿವರು ಸಭೆ ನಡೆಸಿ ದರೋಡೆಕೋರರನ್ನ ಬಂಧಿಸುವಂತೆ ಖಡಕ್​​​ ಎಚ್ಚರಿಕೆ ಕೊಟ್ಟಿದ್ದಾರೆ. ಅಧಿಕಾರಿಗಳ ವಿರುದ್ಧ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದು ಪ್ರಕರಣವನ್ನ ಭೇದಿಸಿ 24 ಗಂಟೆಯಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಒಟ್ಟಾರೆ ಬೆಂಗಳೂರಿನಲ್ಲಿ ನಡೆದ 7 ಕೋಟಿ ಹಣದ ಮಹಾದರೋಡೆ ರಾಜ್ಯ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಬೆಂಗಳೂರಿನಿಂದ ಹೊರಹೋಗುವ ಎಲ್ಲ ಮಾರ್ಗಗಳಲ್ಲೂ ನಾಕಾ ಬಂಧಿ ಹಾಕಿ, ದರೋಡೆಕೋರರ ಬೇಟೆಗೆ ಇಳಿದಿದ್ದಾರೆ. ಪೊಲೀಸರು ಈಗಾಗಲೇ 150ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದು, ಆಂಧ್ರ, ತಮಿಳುನಾಡು ಸಂಪರ್ಕಿಸುವ ರಸ್ತೆಗಳಲ್ಲಿ ಹದ್ದಿನ ಕಣ್ಣಿಟ್ಟು ಚೆಕ್​ಮಾಡ್ತಿದ್ದಾರೆ. ಮತ್ತೊಂದೆಡೆ ಹಣ ಸಾಗಿಸುತ್ತಿದ್ದ ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಮೇಲೆಯೇ ಪೊಲೀಸರಿಗೆ ಅನುಮಾನ ಮೂಡಿದ್ದು ಎಲ್ಲಾ ಆಯಾಮದಲ್ಲೂ ತನಿಖೆ ಮಾಡ್ತಿದ್ದಾರೆ.
ಇದನ್ನೂ ಓದಿ: ‘ಕರ್ಣ’ ವೀಕ್ಷಕರಿಗೆ ಎರಡು ಸರ್ಪ್ರೈಸಿಂಗ್ ನ್ಯೂಸ್​..! Don't Miss
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us