/newsfirstlive-kannada/media/media_files/2025/11/19/venkatesh-iyer-pathirana-russel-2025-11-19-13-50-47.jpg)
ಐಪಿಎಲ್​ ರಿಟೈನ್​-ರಿಲೀಸ್​ ವ್ಯವಹಾರ ಮುಗಿದಿದ್ದಾಯ್ತು. ಇದೀಗ ಐಪಿಎಲ್​ ಫ್ರಾಂಚೈಸಿಗಳ ವಲಯದಲ್ಲಿ ಮಿನಿ ಆಕ್ಷನ್​ಗೆ ಸಿದ್ಧತೆ ಶುರುವಾಗಿದೆ. ತಂಡದ ವೀಕ್​​ನೆಸ್​ ಮೇಲೆ ವರ್ಕೌಟ್​​ ಮಾಡ್ತಿರೋ ಫ್ರಾಂಚೈಸಿಗಳು ಡಿಸೆಂಬರ್​ 16ರಂದು ನಡೆಯೋ ಆಕ್ಷನ್​ನಲ್ಲಿ ಆಟಗಾರರ ಬೇಟೆ ಪ್ಲಾನ್​ ಮಾಡ್ತಿವೆ. ರಿಟೈನ್ಶನ್​ ಅವಕಾಶದಲ್ಲಿ ರಿಲೀಸ್​ ಆಗಿರೋ ಸ್ಟಾರ್​ ಆಟಗಾರರಿಗೆ ಫುಲ್ ಡಿಮ್ಯಾಂಡ್​ ಕ್ರಿಯೇಟ್​ ಆಗಿದೆ.
ಮತಿಶಾ ಪತಿರಣ ಖರೀದಿಗೆ ಸೈಲೆಂಟ್​ ಸ್ಕೆಚ್​
ಮಿನಿ ಆಕ್ಷನ್​ನ ಸೆಂಟರ್​ ಆಫ್​ ಅಟ್ರಾಕ್ಷನ್​​ ಶ್ರೀಲಂಕಾದ ಮತಿಶಾ ಪತಿರಣಾ. ಅಚ್ಚರಿಯ ನಿರ್ಧಾರ ತೆಗೆದುಕೊಂಡಿರೋ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಯುವ ವೇಗಿಯನ್ನ ರಿಲೀಸ್​ ಮಾಡಿದೆ. ಡಿಟ್ಟೋ ಮಲಿಂಗರಂತೆ ಬೌಲಿಂಗ್​ ಮಾಡೋ ಪತಿರಾಣ ಮೇಲೆ ಹಲವು ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್​​ ರೈಸರ್ಸ್​ ಪತಿರಣ ಖರೀದಿಗೆ ಆಸಕ್ತಿಯನ್ನ ತೋರಿಸಿವೆ. ಅತ್ತ ಚೆನ್ನೈ ಸೂಪರ್​ ಕಿಂಗ್ಸ್​ ಕಡಿಮೆ ಮೊತ್ತಕ್ಕೆ ಪತಿರಣನ ಬೈ ಬ್ಯಾಕ್ ಮಾಡಲು ಸೈಲೆಂಟ್​ ಸ್ಕೆಚ್​ ಹಾಕಿ ಕೂತಿದೆ.
ಇದನ್ನೂ ಓದಿ: ಗಿಲ್ ಆರೋಗ್ಯ ಈಗ ಹೇಗಿದೆ? ಎರಡನೇ ಟೆಸ್ಟ್ ಆಡ್ತಾರಾ? ಆಡಲ್ವಾ?
ಕ್ಯಾಮರೂನ್​ ಗ್ರೀನ್​ಗೆ ಫುಲ್​ ಡಿಮ್ಯಾಂಡ್​
ಕಳೆದ ಐಪಿಎಲ್​ನಿಂದ ಹೊರಗುಳಿದಿದ್ದ ಆಲ್​ರೌಂಡರ್​ ಕ್ಯಾಮರೂನ್ ಗ್ರೀನ್​ ಈ ಬಾರಿ ಮತ್ತೆ ಆಕ್ಷನ್​ ಅಖಾಡಕ್ಕೆ ಬರಲು ಸಜ್ಜಾಗಿದ್ದಾರೆ. ಗ್ರೀನ್​ ಹರಾಜಿಗೆ ರಿಜಿಸ್ಟರ್​ ಮಾಡಿಕೊಳ್ಳೋಕೆ ಮುನ್ನ ಕೆಲ ಫ್ರಾಂಚೈಸಿಗಳ ಟಾರ್ಗೆಟೆಡ್​ ಪ್ಲೇಯರ್​ ಲಿಸ್ಟ್​​ನಲ್ಲಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ಈ ಗ್ರೀನ್​ ಖರೀದಿಸೋ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಕೊಲ್ಕತ್ತಾ ಹಾಗೂ ಹೈದ್ರಾಬಾದ್​ ಫ್ರಾಂಚೈಸಿ ಕೂಡ ಗ್ರೀನ್​ಗೆ ಗಾಳ ಹಾಕೋ ಯೋಚನೆಯಲ್ಲಿವೆ.
ಚೆನ್ನೈ ಪಾಲಾಗ್ತಾರಾ ಆಲ್​​ರೌಂಡರ್​ ರಸೆಲ್​?
ಕಳೆದ ಸೀಸನ್​ನಲ್ಲಿ ಹೀನಾಯ ಪರ್ಫಾಮೆನ್ಸ್​ ನೀಡಿದ್ದ ಸಿಎಸ್​ಕೆ, 43.40 ಕೋಟಿ ಹಣದೊಂದಿಗೆ ಹರಾಜಿನ ಕಣಕ್ಕಿಳಿಯಲು ಸಜ್ಜಾಗಿದೆ. ಪರ್ಸ್​ನಲ್ಲಿ ಹೆಚ್ಚು ಹಣ ಇರೋದ್ರಿಂದ ಪ್ರಮುಖ ಆಟಗಾರರ ಖರೀದಿಗೆ ಒಲವು ಹೊಂದಿದೆ. ಬಿಗ್​ ಹಿಟ್ಟರ್​, ಕ್ವಾಲಿಟಿ ಆಲ್​​ರೌಂಡರ್​ ಆ್ಯಂಡ್ರೆ ರಸೆಲ್​ ಮೇಲೆ ಚೆನ್ನೈ ಸೂಪರ್​ ಕಿಂಗ್ಸ್​ ಹೆಚ್ಚು ಆಸಕ್ತಿ ಹೊಂದಿದೆ. ಉಳಿದ ಕೆಲ ಫ್ರಾಂಚೈಸಿಗಳ ಕಣ್ಣು ಕೂಡ ರಸೆಲ್​ ಮೇಲಿದೆ. ಹೀಗಾಗಿ ಆಕ್ಷನ್​ ಟೇಬಲ್​ನಲ್ಲಿ ರಸೆಲ್ ಖರೀದಿಗೆ ಬಿಗ್​ ಫೈಟ್​ ನಡೆಯಲಿದೆ.
ಇದನ್ನೂ ಓದಿ:ಗಂಭೀರ್, ಅಗರ್ಕರ್ ಇನ್ನೆಷ್ಟು ದಿನ ‘ನಿಮ್ಮ ಆಟ’..? ರಾಜಕೀಯದಿಂದ ನರಳಿದ ತಂಡ..!
ಸ್ಪೆಷಲಿಸ್ಟ್​ ಸ್ಪಿನ್ನರ್ ಖರೀದಿ​ RCBಯ ಟಾರ್ಗೆಟ್​​
ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬ್ಯಾಟಿಂಗ್​ ವಿಭಾಗದಲ್ಲಿ ಸಖತ್​ ಸ್ಟ್ರಾಂಗ್ ಇದೆ. ವೇಗಿಗಳ ಪಡೆ ಕೂಡ ಬಲಿಷ್ಠವಾಗಿದೆ. ಆದ್ರೆ, ಸ್ಪಿನ್​ ವಿಭಾಗ ಹೇಳಿಕೊಳ್ಳುವಂತಿಲ್ಲ. ಮಿನಿ ಹರಾಜಿನಲ್ಲಿ ವೀಕ್​ನೆಸ್​ ಮೇಲೆ ವರ್ಕೌಟ್​ ಮಾಡೋಕೆ ಹೊರಟಿರೋ ರೆಡ್​ಆರ್ಮಿ ಕಣ್ಣು ಇದೀಗ ಸ್ಪೆಷಲಿಸ್ಟ್​ ಸ್ಪಿನ್ನರ್​ ಮೇಲೆ ಬಿದ್ದಿದೆ. ಲಕ್ನೋ ತಂಡ ರಿಲೀಸ್​ ಮಾಡಿರೋ ರವಿ ಬಿಷ್ನೋಯ್​ನ ತಂಡಕ್ಕೆ ಕರೆ ತರಲು ಪ್ಲ್ಯಾನಿಂಗ್​ ನಡೀತಿದೆ.
ಆಲ್​​​ರೌಂಡರ್​​ ಅಯ್ಯರ್​​ಗಾಗಿ ಫೈಟ್​
ಕೆಕೆಆರ್​ ತಂಡ ರಿಲೀಸ್​ ಮಾಡಿರೋ ಆಲ್​​ರೌಂಡರ್ ವೆಂಕಟೇಶ್​ ಅಯ್ಯರ್​ ಖರೀದಿಗೆ ಆಕ್ಷನ್ ಟೇಬಲ್​ನಲ್ಲಿ ಬಿಗ್​ಫೈಟ್​ ನಡೆಯೋದ್ರಲ್ಲಿ ಅನುಮಾನ ಬೇಡ. ರಿಲೀಸ್​ ಮಾಡಿರೋ ಕೆಕೆಆರ್​ ಫ್ರಾಂಚೈಸಿಯೇ ಕಡಿಮೆ ಮೊತ್ತಕ್ಕೆ ಮತ್ತೆ ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಚೆನ್ನೈ, ಲಕ್ನೋ, ಡೆಲ್ಲಿ ಹಾಗೂ ಹೈದ್ರಾಬಾದ್​ ತಂಡಗಳು ವೆಂಕಿ ಖರೀದಿಗೆ ಆಸಕ್ತಿ ಹೊಂದಿವೆ.
ಕ್ವಿಂಟನ್​ ಡಿ ಕಾಕ್, ಗ್ಲೇನ್​ ಮ್ಯಾಕ್ಸ್​ವೆಲ್​ ಹಾಗೂ ಲಿಯಾಮ್​ ಲಿವಿಂಗ್​​ಸ್ಟೋನ್ ಹರಾಜಿನ ಕಣದಲ್ಲಿರೋ ಫ್ರಾಂಚೈಸಿಗಳ ಹಾಟ್​ ಫೇವರಿಟ್​ ಅನಿಸಿದ್ದಾರೆ. ರಿಲೀಸ್​ ಆಗಿರೋ ಆಟಗಾರರ ಪೈಕಿ ಹರಾಜಿನ ಕಣದಲ್ಲಿ ಯಾರಿಗೆ ಅದೃಷ್ಟ ಖುಲಾಯಿಸುತ್ತೆ? ಕಾದು ನೋಡೋಣ.
ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us