/newsfirstlive-kannada/media/media_files/2025/11/16/gill-2025-11-16-13-25-43.jpg)
ಕೊಲ್ಕತ್ತಾ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲುಂಡ ಟೀಮ್​ ಇಂಡಿಯಾ, ಇದೀಗ ವೈಟ್​ವಾಷ್​ ಮುಖಭಂಗದಿಂದ ಪಾರಾಗೋ ಸಂಕಷ್ಟಕ್ಕೆ ಸಿಲುಕಿದೆ. ಗುವಾಹಟಿಯಲ್ಲಿ ನಡೆಯೋ 2ನೇ ಟೆಸ್ಟ್​ ಪಂದ್ಯಕ್ಕೆ ಈಗಾಗಲೇ ಕೊಲ್ಕತ್ತಾದಲ್ಲೇ ಸಿದ್ಧತೆ ಆರಂಭವಾಗಿದೆ. ಸೋಲುಂಡ ಈಡನ್​ ಗಾರ್ಡನ್​ ಮೈದಾನದಲ್ಲೇ ಟೀಮ್​ ಇಂಡಿಯಾ ಆಟಗಾರರು ಅಭ್ಯಾಸ ನಡೆಸ್ತಿದ್ದಾರೆ. ಅಭ್ಯಾಸದ ವೇಳೆಯೇ ಟೀಮ್​ ಇಂಡಿಯಾಗೆ ಆಘಾತ ಎದುರಾಗಿದೆ.
2ನೇ ಟೆಸ್ಟ್​​ನಿಂದ ಶುಭ್​ಮನ್ ಗಿಲ್​ ಡೌಟ್
ಟೀಮ್​ ಇಂಡಿಯಾ ನಾಯಕ ಶುಭ್​ಮನ್​ ಗಿಲ್​ ಲೇಟೆಸ್ಟ್​ ಮೆಡಿಕಲ್​ ರಿಪೋರ್ಟ್​ ಸದ್ಯ ಟೀಮ್​ ಮ್ಯಾನೇಜ್​ಮೆಂಟ್​ ಟೆನ್ಶನ್​ ಹೆಚ್ಚಿಸಿದೆ. ಕೊಲ್ಕತ್ತಾ ಟೆಸ್ಟ್​ ಪಂದ್ಯದ 2ನೇ ದಿನದಾಟದಲ್ಲಿ ಇಂಜುರಿಗೆ ತುತ್ತಾದ ಶುಭ್​ಮನ್​ ಗಿಲ್​ ಆಸ್ಪತ್ರೆ ಸೇರಿದ್ರು. ಕತ್ತಿನ ಬಳಿ ಸ್ನಾಯು ಸೆಳೆತಕ್ಕೆ ಒಳಗಾಗಿ ವುಡ್​ಲ್ಯಾಂಡ್​ ಆಸ್ಪತ್ರೆಯಲ್ಲಿ ಅಡ್ಮಿಟ್​ ಆಗಿದ್ದ ಗಿಲ್​ ಡಿಸ್ಚಾರ್ಜ್​ ಆಗಿ ಟೀಮ್​ ಹೊಟೆಲ್​ಗೆ ಮರಳಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ಇದನ್ನೂ ಓದಿ: ಗಂಭೀರ್​ ಕೋಚಿಂಗ್​​ನಲ್ಲಿ ಸೋಲು, ಸೋಲು.. ಇದಕ್ಕೆ 5 ಯಡವಟ್ಟುಗಳೇ ಕಾರಣ..!
ಇಂಜುರಿಗೆ ತುತ್ತಾಗಿದ್ದಾರೆ ಗಿಲ್​..!
ಶುಭ್​ಮನ್​ ಗಿಲ್​ ಇಂಜುರಿಯನ್ನ ಆರಂಭದಲ್ಲಿ ಸಾಮಾನ್ಯ ಇಂಜುರಿ ಎಂದೇ ಟ್ರೀಟ್​ ಮಾಡಲಾಗಿತ್ತು. ಆದರೀಗ ವೈದ್ಯರು ಇಂದು ಗಂಭೀರ ಇಂಜುರಿ ಎಂದು ತಿಳಿಸಿದ್ದಾರೆ. 2-3 ದಿನ ಮೇಲ್ವಿಚಾರಣೆಯಲ್ಲಿ ಇರಬೇಕು ಎಂದಿರೋ ಡಾಕ್ಟರ್ಸ್​ ವಿಶ್ರಾಂತಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಟೀಮ್​ ಜೊತೆಗೆ ಶುಭ್​ಮನ್​ ಗಿಲ್​ ಗುವಾಹಟಿಗೆ ಪ್ರಯಾಣ ಬೆಳೆಸೋದು ಅನುಮಾನವಾಗಿದೆ. ಶನಿವಾರದಿಂದ ಆರಂಭವಾಗೋ 2ನೇ ಟೆಸ್ಟ್​ನಲ್ಲಿ ಆಡೋದು ಅನುಮಾನವಾಗಿದೆ.
ಪಂತ್​ಗೆ​ ನಾಯಕತ್ವ?
ಗಿಲ್ ಅಲಭ್ಯರಾದ್ರೆ ಸೌತ್​ ಆಫ್ರಿಕಾ ಎದುರಿನ 2ನೇ ಟೆಸ್ಟ್​ ಪಂದ್ಯದಲ್ಲಿ ರಿಷಭ್​ ಪಂತ್​ ತಂಡವನ್ನ ಮುನ್ನಡೆಸೋದು ಕನ್​ಫರ್ಮ್​. ವೈಟ್​ವಾಷ್​​ ಮುಖಭಂಗದಿಂದ ತಪ್ಪಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಂತ್​ ಸಮರ್ಥವಾಗಿ ಲೀಡ್​ ಮಾಡ್ತಾರಾ ಅನ್ನೋ ಪ್ರಶ್ನೆಯಿದೆ. ಯಾಕಂದ್ರೆ, ಕಳೆದ ವಾರ ಸೌತ್​ ಆಫ್ರಿಕಾ-ಎ ಎದುರು ಪಂತ್​ ನಾಯಕತ್ವದಡಿ ಇಂಡಿಯಾ-ಎ 417 ರನ್​ ಡಿಫೆಂಡ್​ ಮಾಡಿಕೊಳ್ಳುವಲ್ಲಿ ಎಡವಿತ್ತು. ಮೊನ್ನೆ ಕೊಲ್ಕತ್ತಾದಲ್ಲಿ 124 ರನ್​ ಚೇಸ್​ ಮಾಡುವಲ್ಲಿ ಟೀಮ್​ ಇಂಡಿಯಾ ಫೇಲ್​ ಆಗಿತ್ತು. ಹೀಗಾಗಿ ಗುವಾಹಟಿ ಟೆಸ್ಟ್​ ಪಂತ್​ ನಾಯಕತ್ವಕ್ಕೂ ಟೆಸ್ಟ್​ ಆಗಿದೆ.
ಯಾರಿಗೆ ಚಾನ್ಸ್​..?
ಪಂತ್​ ನಾಯಕತ್ವದ ಜವಾಬ್ಧಾರಿಯನ್ನ ವಹಿಸಿಕೊಳ್ಳೋ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಗಿಲ್​ ಅಲಭ್ಯತೆಯಲ್ಲಿ ಯಾರಿಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ನೀಡಬೇಕು ಅನ್ನೋದು ಗೊಂದಲ ಸೃಷ್ಟಿಸಿದೆ. ಸಾಯಿ ಸುದರ್ಶನ್​, ದೇವದತ್ತ್​ ಪಡಿಕ್ಕಲ್​ ಸದ್ಯಕ್ಕಿರೋ ಆಪ್ಷನ್​. ಈಡನ್​​ ಗಾರ್ಡನ್ಸ್​ನಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲೇ ಟೀಮ್​ ಇಂಡಿಯಾ 6 ಮಂದಿ ಲೆಫ್ಟ್​ ಹ್ಯಾಂಡ್​ ಬ್ಯಾಟರ್ಸ್​ನ ಕಣಕ್ಕಿಳಿಸಿತ್ತು. ಹೀಗಾಗಿ ಮತ್ತೊರ್ವ ಲೆಫ್ಟ್​ ಹ್ಯಾಂಡ್​ ಬ್ಯಾಟರ್​ಗೆ ಮಣೆ ಹಾಕೋದು ಅನುಮಾನವೇ.
ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್​ನ್ಯೂಸ್​.. IPL ಹೊತ್ತಲ್ಲಿ ಓದಲೇಬೇಕಾದ ಸುದ್ದಿ..!
ಮೊದಲ ಟೆಸ್ಟ್​ ಆರಂಭಕ್ಕೂ ಮುನ್ನ ಇಂಟರೆಸ್ಟಿಂಗ್ ಕಾಲ್ ತೆಗೆದುಕೊಂಡಿದ್ದ ಗೌತಮ್​ ಗಂಭೀರ್​ ಅಂಡ್ ಟೀಮ್ ಆಲ್​​ರೌಂಡರ್​ ನಿತೀಶ್​ ರೆಡ್ಡಿಯನ್ನ ಟೆಸ್ಟ್​ ತಂಡದಿಂದ ರಿಲೀಸ್​ ಮಾಡಿತ್ತು. ಇದೀಗ 2ನೇ ಟೆಸ್ಟ್​ಗೂ ಮುನ್ನ ಮತ್ತೆ ರೆಡ್ಡಿಗೆ ಬುಲಾವ್​ ನೀಡಿದೆ. ಇಂಡಿಯಾ ಎ ಪರ ಆಡ್ತಿದ್ದ ನಿತೀಶ್​ ರೆಡ್ಡಿ, ಟೀಮ್ ಇಂಡಿಯಾಗೆ ವಾಪಾಸ್ಸಾಗಿದ್ದಾರೆ. ಗಿಲ್​ ಬದಲಾಗಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ನಿತೀಶ್​ ರೆಡ್ಡಿಗೆ ಸ್ಥಾನ ಸಿಗೋ ಸಾಧ್ಯತೆಯೇ ದಟ್ಟವಾಗಿದೆ.
2 ಟೆಸ್ಟ್​ ಪಂದ್ಯದ ಜೊತೆಗೆ ಅದಾದ ಬಳಿಕ ನಡೆಯೋ ಏಕದಿನ ಸರಣಿಯ ಟೀಮ್​ ಸೆಲೆಕ್ಷನ್ ಕೂಡ ಶುಭ್​ಮನ್​ ಗಿಲ್​ ಇಂಜುರಿಯಿಂದಾಗಿ ಹೋಲ್ಡ್ ಆಗಿದೆ. ಶುಭ್​ಮನ್​ ಗಿಲ್ ಜೊತೆಗೆ ಉಪನಾಯಕ ಶ್ರೇಯಸ್​ ಅಯ್ಯರ್ ಕೂಡ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ತಂಡವನ್ನ ಲೀಡ್​ ಮಾಡೋದ್ಯಾರು ಅನ್ನೋದು ಸದ್ಯ ಗೊಂದಲ ಮೂಡಿಸಿದೆ. ಗಿಲ್​ ಹಾಗೂ ಶ್ರೇಯಸ್​ ಇಬ್ಬರೂ ಹೊರ ಬಿದ್ರೆ, ರಾಹುಲ್​ಗೆ ನಾಯಕತ್ವ ವಹಿಸೋ ಸಾಧ್ಯತೆಯಿದೆ. ಒಟ್ಟಿನಲ್ಲಿ, ಡು ಆರ್​​ ಡೈ ಪಂದ್ಯಕ್ಕೂ ಮುನ್ನ ಶುಭ್​ಮನ್​ ಗಿಲ್ ಇಂಜುರಿ ಟೀಮ್​ ಮ್ಯಾನೇಜ್​ಮೆಂಟ್ ಹಾಗೂ ಸೆಲೆಕ್ಷನ್​ ಕಮಿಟಿಗೆ ಹೊಸ ತಲೆನೋವು ತಂದಿರೋದಂತೂ ಸುಳ್ಳಲ್ಲ.
ಇದನ್ನೂ ಓದಿ: ಕ್ಯಾಪ್ಟನ್​ ರಘು ಅವರಿಂದ ರಕ್ಷಿತಾ ನೇರ ಆಯ್ಕೆ.. 10 ಸ್ಪರ್ಧಿಗಳು ಮನೆಗೆ ಹೋಗಲು ನಾಮಿನೇಟ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us