ಕ್ಯಾಪ್ಟನ್​ ರಘು ಅವರಿಂದ ರಕ್ಷಿತಾ ನೇರ ಆಯ್ಕೆ.. 10 ಸ್ಪರ್ಧಿಗಳು ಮನೆಗೆ ಹೋಗಲು ನಾಮಿನೇಟ್..!

​ಮುಂದಿನ ವಾರ ಬಿಗ್​ಬಾಸ್ ಮನೆಯಿಂದ ಹೊರ ಕಳುಹಿಸಲು ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಉಳಿದಿರುವ 14 ಸದಸ್ಯರಲ್ಲಿ ಮನೆಯಿಂದ ಹೊರ ಹೋಗಲು 10 ಮಂದಿ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ಸೇರಿ ನಾಲ್ವರು ಮಾತ್ರ ಸೇಫ್ ಆಗಿದ್ದಾರೆ.

author-image
Ganesh Kerekuli
Rakshita Shetty (4)
Advertisment

​ಮುಂದಿನ ವಾರ ಬಿಗ್​ಬಾಸ್ ಮನೆಯಿಂದ ಹೊರ ಕಳುಹಿಸಲು ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಉಳಿದಿರುವ 14 ಸದಸ್ಯರಲ್ಲಿ ಮನೆಯಿಂದ ಹೊರ ಹೋಗಲು 10 ಮಂದಿ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ಸೇರಿ ನಾಲ್ವರು ಮಾತ್ರ ಸೇಫ್ ಆಗಿದ್ದಾರೆ. 

ಗಿಲ್ಲಿ ನಟ, ಕ್ಯಾಪ್ಟನ್ ರಘು, ಕಾವ್ಯ ಹಾಗೂ ಧನುಷ್​ ಸೇಫ್ ಆಗಿದ್ದಾರೆ. ಉಳಿದಂತೆ ಅಶ್ವಿನಿ ಗೌಡ, ಜಾಹ್ನವಿ, ಅಭಿಷೇಕ್, ಧ್ರುವಂತ್, ಮಾಳು, ರಾಶಿಕಾ ಶೆಟ್ಟಿ, ಸೂರಜ್ ಸಿಂಗ್, ಸ್ಪಂದನಾ, ರಿಷಾ ಗೌಡ, ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದಾರೆ. 

ಅಶ್ವಿನಿ, ಜಾಹ್ನವಿ

ಜಾಹ್ನವಿ ಮತ್ತು ಅಶ್ವಿನಿ ಗೌಡ ಮನೆಯ ಮೂಲ ನಿಯಮಗಳನ್ನು ಪದೇ ಪದೇ ಉಲ್ಲಂಘನೆ ಮಾಡ್ತಿದ್ದರು. ಬಿಗ್​ಬಾಸ್ ಎಷ್ಟೇ ಎಚ್ಚರಿಕೆ ನೀಡಿದ್ದರೂ, ತಪ್ಪನ್ನು ತಿದ್ದುಕೊಳ್ಳದ ಹಿನ್ನೆಲೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾಹ್ನವಿಯನ್ನು ಬಿಗ್​ಬಾಸ್​ ಅವರೇ ನೇರವಾಗಿ ನಾಮಿನೇಟ್ ಆಗಿದ್ದಾರೆ. 

ಇನ್ನು, ರಕ್ಷಿತಾ ಶೆಟ್ಟಿಯನ್ನು ಕ್ಯಾಪ್ಟನ್ ರಘು ಅವರು ನಾಮಿನೇಟ್ ಮಾಡಿದ್ದಾರೆ. ಉಳಿದವರೆಲ್ಲ, ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದು, ಯಾರು ಮನೆಯಿಂದ ಆಚೆ ಹೋಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. 

ಇದನ್ನೂ ಓದಿ:ಕಣ್ಣೀರು ಇಡುತ್ತ ಮನೆಗೆ ಹೋಗಲು ಡೋರ್ ತಟ್ಟಿದ ಅಶ್ವಿನಿ ಗೌಡ..! ಮುಂದೇನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Bigg boss
Advertisment