/newsfirstlive-kannada/media/media_files/2025/11/19/ashwini-gowda-4-2025-11-19-08-18-29.jpg)
ನಿನ್ನೆಯ ಎಪಿಸೋಡ್​ನಲ್ಲಿ ಗಿಲ್ಲಿ ಜೊತೆ ಕಾಲ್ಕೆದರಿ ಜಗಳ ಮಾಡಿದ್ದ ಅಶ್ವಿನಿ ಗೌಡ ಇವತ್ತು, ಮನೆಯ ಕ್ಯಾಪ್ಟನ್ ರಘು ಜೊತೆ ಕಿತ್ತಾಡಿಕೊಂಡಿದ್ದಾರೆ. ರಘು ಮತ್ತು ಅಶ್ವಿನಿ ಗೌಡ ನಡುವಿನ ಲಡಾಯಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವೀಕ್ಷಕರ ಕುತೂಹಲವನ್ನು ಹೆಚ್ಚಿಸುವಂತೆ ಮಾಡಿದೆ.
ಆಗಿದ್ದೇನು..?
ಗಾರ್ಡನ್ ಏರಿಯಾದಲ್ಲಿರುವ ಬಿನ್ ಚೇರ್​ ಮೇಲೆ ಅಶ್ವಿನಿ ಗೌಡ ಕೂತಿರುತ್ತಾರೆ. ಕ್ಯಾಪ್ಟನ್ ಆಗಿ ಕೆಲಸ ಮಾಡಿಸುವ ಜವಾಬ್ದಾರಿ ರಘು ತಲೆಮೇಲೆ ಇರುತ್ತದೆ. ಹೀಗಾಗಿ ಅಶ್ವಿನಿಯನ್ನು ಹುಡುಕುತ್ತ ರಘು ಬರುತ್ತಾರೆ. ಕೂತಿರೋದನ್ನು ಗಮನಿಸಿದ ರಘು ಗೌಡ ಕೆಲಸ ಮಾಡುವಂತೆ ಕೋರಿಕೊಳ್ತಾರೆ..
ಇನ್ನಷ್ಟು ಬಿಗ್​ಬಾಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ರಘು: ಎಲ್ಲಪ್ಪ.. ಅಶ್ವಿನಿ ಅವರು.. ಸ್ವಲ್ಪ ಕ್ಲೀನ್ ಮಾಡೋಕೆ ಹೇಳಿ..
- ಅಶ್ವಿನಿ ಗೌಡ: 10 ನಿಮಿಷ ನನಗೆ ರೆಸ್ಟ್ ಬೇಕು. ಬ್ಯಾಕ್​ಪೇನ್ ಆಗ್ತಿದೆ. ಮಾಡ್ತೀನಿ.
- ರಘು: 10 ನಿಮಿಷದಲ್ಲಿ ಬ್ಯಾಕ್​ಪೇನ್ ಹೋಗುತ್ತಾ? ನೆಟ್ಟುಗೆ ಕೆಲಸಗಳನ್ನ ಮಾಡೋದಕ್ಕೆ ಆಗಲ್ಲ. ಮಾತಾಡೋದು ಮಾತ್ರ..
- ಅಶ್ವಿನಿ ಗೌಡ: ಮಾಡೋದಿಲ್ಲ, ಹೋಗ್ರಿ..
- ರಘು: ಮಾಡ್ಕೋಬೇಡ.. ಹೋಗು
- ಅಶ್ವಿನಿ ಗೌಡ: ಹೋಗು, ಗೀಗು ಅಂತೆಲ್ಲ ಮಾತನ್ನಾಡುವ ಅಧಿಕಾರ ನಿನಗೆ ಇಲ್ಲ.
- ರಘು: ಏ.. ಕೈ ತೋರಿಸಿ ಮಾತನ್ನಾಡಬೇಡ. ಕೈ ಇಳ್ಸು
- ಅಶ್ವಿನಿ ಗೌಡ: ನೀನ್ಯಾರು, ಮಾತನ್ನಾಡೋದಕ್ಕೆ
- ರಘು: ನೀನ್ಯಾಕೆ ಕೈ ತೋರಿಸ್ತಿದ್ಯಾ? ಎಷ್ಟು ಅಂತಾ ಮರ್ಯಾದೆ ಕೊಡ್ತಾ ಇರಲಿ.
- ಅಶ್ವಿನಿ ಗೌಡ: ಯಾವನೋ ನೀನು?
- ರಘು ಗೌಡ: ಹೋಗೆ
- ಅಶ್ವಿನಿ ಗೌಡ: ಕಳ್ಸಿ ನನ್ನನ್ನ ಬಿಗ್​ಬಾಸ್.. ಈಗಲೇ.. ಎನ್ನುತ್ತ ಡೋರ್ ತಟ್ಟಿದ್ದಾರೆ. ಅದಕ್ಕೆ ಬಿಗ್​ಬಾಸ್ ರಿಯಾಕ್ಷನ್ ಏನು ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:‘ಬದುಕ್ತಾ ಇರೋದೇ ಮರ್ಯಾದೆಗೋಸ್ಕರ..’ ಅಶ್ವಿನಿ ಕಣ್ಣಲ್ಲಿ ನೀರು ತರಿಸಿದ ಗಿಲ್ಲಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us