Advertisment

‘ಬದುಕ್ತಾ ಇರೋದೇ ಮರ್ಯಾದೆಗೋಸ್ಕರ..’ ಅಶ್ವಿನಿ ಕಣ್ಣಲ್ಲಿ ನೀರು ತರಿಸಿದ ಗಿಲ್ಲಿ..!

ಬಿಗ್​ಬಾಸ್​​ನ ಇವತ್ತಿನ ಎಪಿಸೋಡ್​​ನಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ಮಧ್ಯೆ ಘನಘೋರ ಮಾತಿನ ಯುದ್ಧ ನಡೆದಿದ್ದು, ಕೊನೆಯಲ್ಲಿ ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ. ಇಬ್ಬರ ಮಧ್ಯೆ ಆಗಿದ್ದೇನು?

author-image
Ganesh Kerekuli
Ashwini Gowda (3)
Advertisment

ಬಿಗ್​ಬಾಸ್​​ನ ಇವತ್ತಿನ ಎಪಿಸೋಡ್​​ನಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ಮಧ್ಯೆ ಘನಘೋರ ಮಾತಿನ ಯುದ್ಧ ನಡೆದಿದ್ದು, ಕೊನೆಯಲ್ಲಿ ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ. 

Advertisment

ಇಂದು ರಾತ್ರಿ ಬಿಗ್​​ಬಾಸ್ ಮನೆಯಲ್ಲಿ ಏನು ಆಗಿದೆ ಅನ್ನೋದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಗಿಲ್ಲಿ ಮತ್ತು ಅಶ್ವಿನಿ ಗೌಡ ಮಧ್ಯೆ ಗಲಾಟೆ ಆಗಿರೋದಂತೂ ಸತ್ಯ. ಕಲರ್ಸ್ ಕನ್ನಡ ಬೆಳಗ್ಗೆ ಪ್ರೊಮೋ ಶೇರ್ ಮಾಡಿದೆ. ಅದರಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಗೌಡ ಗೇಮ್​ನ ಉಸ್ತುವಾರಿ ನೀಡಲಾಗಿದೆ.

ಇದನ್ನೂ ಓದಿ: ಉಗ್ರಂ ಮಂಜು ಅವರ ಭಾವಿ ಪತ್ನಿಯನ್ನ ಭೇಟಿಯಾದ ಗೌತಮಿ ಜಾಧವ್.. ಫೋಟೋ ಶೇರ್​ ಮಾಡಿ ಹೇಳಿದ್ದೇನು? 

ಈ ವೇಳೆ ಸ್ಪರ್ಧಿಗಳ ನಡುವೆ ಗೇಮ್ ಆಡಿಸುವ ವಿಚಾರಕ್ಕೆ ಗಲಾಟೆ ಆಗಿದೆ. ಒಬ್ಬರಿಗೊಬ್ಬರು ಕರೆಕ್ಟ್ ಆಗಿ ಉಸ್ತುವಾರಿ ಮಾಡುವಂತೆ ಕಿರುಚಾಡಿದ್ದಾರೆ. ಆಗ ಗಿಲ್ಲಿ, ನೀನು ಕರೆಕ್ಟ್ ಆಗಿ ಮಾಡು ಎಂದಿದ್ದಾರೆ. ಅಷ್ಟಕ್ಕೆ ರೊಚ್ಚಿಗೇಳುವ ಅಶ್ವಿನಿ, ನೀನ್ಯಾರು ಅಂತಾ ಹೇಳೋಕೆ ನೀನ್ಯಾವನೋ ಎಂದು ಕೂಗಾಡಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿನ ಯುದ್ಧ ಜೋರಾಗಿ ನಡೆದಿದೆ. ಮಾತಿನ ಮಧ್ಯೆ ನೀನ್ಯಾವನೋ, ಯೋಗ್ಯತೆ ಎಂಬ ಪದಗಳೆಲ್ಲ ತೂರಿಕೊಂಡು ಬಂದಿವೆ. 

Advertisment

ಇದೇ ಗಲಾಟೆಯಲ್ಲಿ ಅಶ್ವಿನಿಗೆ ಗಿಲ್ಲಿ ನೋವು ತರುವ ರೀತಿಯಲ್ಲಿ ಮಾತನ್ನಾಡಿದಂತೆ ಕಾಣ್ತಿದೆ. ಗಲಾಟೆ ಮುಗಿದ ಬಳಿಕ ಧ್ರುವಂತ್, ಜಾಹ್ನವಿ ಹಾಗೂ ಧನುಷ್ ಜೊತೆ ಅಶ್ವಿನಿ ನೋವು ಹಂಚಿಕೊಂಡಿದ್ದಾರೆ. ಒಬ್ಬ ಕಾಮಿಡಿ ನಟ ಅಂದಮಾತ್ರಕ್ಕೆ ಏನು ಮಾತಾಡಿದರೂ ಓಕೆನಾ? ಒಬ್ಬರನ್ನ ತೇಜೋವಧೆ ಮಾಡೋದು ಎಷ್ಟು ಸರಿ? ಅದೆಲ್ಲ ಮಾತನ್ನಾಡೋಕೆ ಆತ ಯಾರು? ಎಂದು ಬೇಸರ ಹೊರ ಹಾಕಿದ್ದಾರೆ.

ಗಿಲ್ಲಿ ಹೇಳಿದ್ದೇನು..? 

ಗಾರ್ಡನ್ ಏರಿಯಾದಲ್ಲಿ ಅಶ್ವಿನಿ, ಜಾಹ್ನವಿ ಹಾಗೂ ಧ್ರುವಂತ್ ಮತ್ತು ರಾಶಿಕಾ ಒಂದು ಕಡೆ ಕೂತ್ಕೊಂಡು ಗಲಾಟೆ ವಿಚಾರವನ್ನು ಚರ್ಚೆ ಮಾಡ್ತಿರುತ್ತಾರೆ. ಅವರಿಗೆ ಕೇಳುವ ರೀತಿಯಲ್ಲಿ ಜೋರಾಗಿ.. ಎಲ್ಲರೂ ವೃದ್ಧಾಪ್ಯದವರೇ ಸೇರಿ ಹೋಗ್ತಾರೆ ಎಂದು ಕಷ್ಟಪಟ್ಟು ಕಳುಹಿಸುತ್ತ ಇದ್ದಾರೆ ಎಂದಿದ್ದಾರೆ. ವೃದ್ಧರು ಅಂತಾ ಹೇಳಿರೋದು ಅಶ್ವಿನಿಗೆ ಹರ್ಟ್ ಆದಂತೆ ಕಾಣ್ತಿದೆ. 

ಇನ್ನಷ್ಟು ಬಿಗ್​ಬಾಸ್ ಸುದ್ದಿಗಳಿಗಾಗಿ ಇಲ್ಲಿಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Bigg Boss Kannada 12 Ashwini Gowda Bigg Boss Gilli Nata Bigg boss Ashwini Gowda
Advertisment
Advertisment
Advertisment