Advertisment

ಧೋನಿ ಅಭಿಮಾನಿಗಳಿಗೆ ಗುಡ್​ನ್ಯೂಸ್​.. IPL ಹೊತ್ತಲ್ಲಿ ಓದಲೇಬೇಕಾದ ಸುದ್ದಿ..!

ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಆಡ್ತಾರಾ ಆಡಲ್ವಾ ಅನ್ನೋ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನ ಕಾಡ್ತಿತ್ತು. ಆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಧೋನಿ 2026ರ ಐಪಿಎಲ್ ಆಡ್ತಾರೆ. ಅದಕ್ಕಾಗಿ ಧೋನಿ, ಸಮರಾಭ್ಯಾಸ ಶುರು ಮಾಡಿದ್ದಾರೆ.

author-image
Ganesh Kerekuli
MS Dhoni

ಎಂ.ಎಸ್​.ಧೋನಿ

Advertisment
  • 3.5 ತಿಂಗಳಿಂದ ಧೋನಿ ಸಮರಾಭ್ಯಾಸ ಶುರು..!
  • ಪ್ರತಿದಿನ 10 ಕಿಲೋ ಮೀಟರ್ ಪ್ರಯಾಣ..!
  • ಜಾರ್ಖಂಡ್ ಸ್ಟೇಡಿಯಮ್​ನಲ್ಲಿ ಅಭ್ಯಾಸ..!

ವಯಸ್ಸು 44. ಆದ್ರೆ ಅದೇ ಜೋಷ್.. ಅದೇ ಖದರ್..! ಅದೇ ಪವರ್..! ಡೆತ್ ಓವರ್​ಗಳಲ್ಲಿ ಬೌಲರ್​ಗಳಿಗೆ ಯಮ ಸ್ವರೂಪಿಯಾಗಿರೋ ಧೋನಿ, ಐಪಿಎಲ್​ನಲ್ಲಿ ತನ್ನ ತಾಖತ್ತು ತೋರಿಸಲು ಮತ್ತೆ ಬರ್ತಿದ್ದಾರೆ. ಈ ಬಾರಿ ಐಪಿಎಲ್​ನಲ್ಲಿ ಧೋನಿಯ ಹೊಸ ಅವತಾರ ನೋಡಬಹುದು. ಹಳೇ ಧೋನಿಯಾದ್ರೂ ಹೊಸ ಖದರ್​ನೊಂದಿಗೆ ಮಾಹಿ, ಅಭಿಮಾನಿಗಳ ಮುಂದೆ ಬರಲಿದ್ದಾರೆ. 

Advertisment

ಧೋನಿ ಭರ್ಜರಿ ಪ್ರಾಕ್ಟಿಸ್

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​​​​​​​​​​​-19ಕ್ಕೆ ಧೋನಿ, ಈಗಾಗಲೇ ತಯಾರಿ ನಡೆಸಿಕೊಳ್ತಿದ್ದಾರೆ. AGE, FITNESS, SURGERY ಎಲ್ಲವನ್ನೂ ದಾಟಿ, ಹೊಸ ಸೀಸನ್​​ಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಧೋನಿ ಭರ್ಜರಿ ಪ್ರಾಕ್ಟೀಸ್​​ ಕೂಡ ನಡೆಸ್ತಿದ್ದಾರೆ. ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಮೇಲೆ, ಹೆಚ್ಚು ಗಮನ ಹರಿಸುತ್ತಿದ್ದಾರೆ. AGE IS JUST A NUMBER ಅನ್ನೋದನ್ನ ಪ್ರೂವ್ ಮಾಡಲು ಹೊರಟಿದ್ದಾರೆ.  

ಇದನ್ನೂ ಓದಿ: ಈ 3 ಪಂದ್ಯಗಳು ಟೀಂ ಇಂಡಿಯಾ ಅಭಿಮಾನಿಗಳಿಗೆ ತುಂಬಾನೇ ನೋವು ಕೊಟ್ಟಿದೆ..

DHONI_CSK_AUCTION

ಎಂ.ಎಸ್.ಧೋನಿ ಶಿಸ್ತಿನ ಸಿಪಾಯಿ. ಯಾಕಂದ್ರೆ ಐಪಿಎಲ್​​ ಬಂತೆಂದ್ರೆ ಧೋನಿ ಸುಮ್ನೆ ಬ್ಯಾಟ್ ಹಿಡಿದು ಬರೋದಿಲ್ಲ.  ಟೂರ್ನಿಗಾಗಿ ಧೋನಿ ತಿಂಗಳುಗಟ್ಟಲೇ ಪ್ರಿಪರೇಷನ್ಸ್ ನಡೆಸಿಕೊಳ್ತಾರೆ. 2026ರ ಐಪಿಎಲ್​ಗೆ ಧೋನಿ ಕಳೆದ ಮೂರುವರೆ ತಿಂಗಳಿಂದ ಕಠಿಣ ಅಭ್ಯಾಸ ನಡೆಸ್ತಿದ್ದಾರೆ. ಬಿರು ಬಿಸಿಲನ್ನ ಲೆಕ್ಕಿಸದ ಧೋನಿ, ಮೈದಾನದಲ್ಲಿ ಬೆವರು ಸುರಿಸ್ತಿದ್ದಾರೆ. 

Advertisment

ಪ್ರತಿದಿನ 10 ಕಿಲೋ ಮೀಟರ್ ಪ್ರಯಾಣ..!

ಎಂ.ಎಸ್.ಧೋನಿ ತವರಿನಲ್ಲಿರುವ ಜಾರ್ಖಂಡ್​ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಕಳೆದ 3 ತಿಂಗಳಿಂದ ಪ್ರಾಕ್ಟೀಸ್ ಮಾಡ್ತಿದ್ದಾರೆ. ಧೋನಿ ಮನೆ ಮತ್ತು ಸ್ಟೇಡಿಯಮ್​​ಗೆ 10 ಕಿಲೋ ಮೀಟರ್ ಇದೆ. ಆದ್ರೆ ಅದ್ಯಾವುದನ್ನ ಲೆಕ್ಕಿಸದ ಧೋನಿ ತಪ್ಪದೇ ಸ್ಟೇಡಿಯಮ್​ಗೆ ಬಂದು ಅಭ್ಯಾಸ ಮಾಡ್ತಾರೆ.

ಧೋನಿ ಪ್ರತಿದಿನ ಮಧ್ಯಾಹ 1.30ಕ್ಕೆ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್​​ಗೆ ಬರ್ತಾರೆ. ಮೊದಲಿಗೆ 1 ಗಂಟೆ ಜಿಮ್​ನಲ್ಲಿ ಟ್ರೈನಿಂಗ್ ನಡೆಸೋ ಮಾಹಿ, ನಂತರ 2 ಗಂಟೆಗಳ ಕಾಲ ನೆಟ್ಸ್​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡ್ತಾರೆ. ನಂತರ 30 ನಿಮಿಷಗಳ ಕಾಲ ಸ್ವಿಮ್ಮಿಂಗ್ ಪೂಲ್​ಗೆ ಇಳಿಯೋ ಎಂಎಸ್​ಡಿ, 6 ಗಂಟೆಗೆ ಮನೆಯತ್ತ ಪ್ರಯಾಣ ಬೆಳೆಸ್ತಾರೆ. 

ಇದನ್ನೂ ಓದಿ: ಗಂಭೀರ್​ ಕೋಚಿಂಗ್​​ನಲ್ಲಿ ಸೋಲು, ಸೋಲು.. ಇದಕ್ಕೆ 5 ಯಡವಟ್ಟುಗಳೇ ಕಾರಣ..!

Advertisment

Dhoni car creaze (1)

ಜೆಎಸ್​ಸಿಎ ಸ್ಟೇಡಿಯಮ್​​ನ ಸೆಂಟರ್​​​​​ ಪಿಚ್​ನಲ್ಲಿ ಧೋನಿ, ಹೆಚ್ಚು ಬ್ಯಾಟಿಂಗ್ ಪ್ರಾಕ್ಟೀಸ್ ಮಾಡ್ತಾರೆ. ಅದ್ರಲ್ಲೂ ಧೋನಿ ಪವರ್​ ಹಿಟ್ಟಿಂಗೇ ಹೆಚ್ಚು ಒತ್ತು ಕೊಡ್ತಿದ್ದಾರೆ. ಕಳೆದ ಐಪಿಎಲ್​ನಲ್ಲಿ ಧೋನಿ ಹೆಚ್ಚು ಬಾಲ್​ಗಳನ್ನ ಫೇಸ್ ಮಾಡಲು ಅವಕಾಶ ಸಿಗಲಿಲ್ಲ. ಹಾಗಾಗಿ ಧೋನಿ ಈಗ ಬಿಗ್ ಹಿಟ್ಟಿಂಗ್ ಮೇಲೆ ಹೆಚ್ಚು ಫೋಕಸ್ ಮಾಡ್ತಿದ್ದಾರೆ. ಬ್ಯಾಟಿಂಗ್ ರಿದಮ್ ಕಂಡುಕೊಳ್ಳೋದೇ, ಮಾಹಿಯ ಮೊದಲ ಆದ್ಯತೆ.

ಸ್ಟ್ರಿಟ್ ಡಯಟ್..! 

ಫಿಸಿಕಲ್ ಟ್ರೈನಿಂಗ್ ಜೊತೆ ಧೋನಿ ಡಯಟ್​ಗೂ ತುಂಬಾನೇ ಇಂಪಾರ್ಟೆನ್ಸ್ ಕೊಡ್ತಿದ್ದಾರೆ. ಐಪಿಎಲ್ ಇಲ್ಲದ ಟೈಮ್​ನಲ್ಲಿ ಧೋನಿ, ದೈಹಿಕವಾಗಿ ವಿಭಿನ್ನವಾಗಿ ಕಾಣ್ತಾರೆ. ಆದ್ರೆ ಐಪಿಎಲ್​ಗೂ ಮುನ್ನ ಧೋನಿ ಬದಲಾಗಿ ಬಿಡ್ತಾರೆ. ಮ್ಯಾಚ್ ಫಿಟ್ನೆಸ್​​ಗೆ ಬೇಕಾದದ್ದನ್ನ ಮಾಡಿ ಫುಲ್ ಫಿಟ್ ಆರ್ತಾರೆ. ಅದ್ರಲ್ಲೂ ಸ್ಟ್ರಿಟ್ ಫುಡ್ ಡಯಟ್ ಮಾಡೋ ಮಾಹಿ, ಯುವ ಕ್ರಿಕೆಟಿಗರಿಗಿಂತಲೂ ಫುಲ್ ಫಿಟ್ ಆಗಿ ಕಾಣ್ತಾರೆ.

ಒಟ್ನಲ್ಲಿ..! MY WAY IS MAHI WAY ಅನ್ನೋದಕ್ಕೆ, ಧೋನಿಯ ಈ ಕಟ್ಟುನಿಟ್ಟಿನ ಅಭ್ಯಾಸಗಳೇ ಉದಾಹರಣೆ. ಧೋನಿ ಫುಲ್ ಫಿಟ್ ಆಗಲಿ.. ಒಳ್ಳೆ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲಿ.. ಐಪಿಎಲ್ ಸೀಸನ್-19ರಲ್ಲಿ ಅಭಿಮಾನಿಗಳನ್ನ ಫುಲ್ ಎಂಟರ್​ಟೈನ್ ಮಾಡಲಿ ಅನ್ನೋದೇ, ಎಲ್ಲಾ ಕ್ರಿಕೆಟ್​​​​​​​ ಪ್ರಿಯರ ಆಶಯವಾಗಿದೆ.

Advertisment

ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS Dhoni IPL IPL 2026 auction
Advertisment
Advertisment
Advertisment