/newsfirstlive-kannada/media/media_files/2025/11/16/team-india-3-2025-11-16-14-52-35.jpg)
ಗೌತಮ್ ಗಂಭೀರ್ ಟೀಮ್ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಎಲ್ಲವೂ ಗೊಂದಲಮಯವಾಗಿಬಿಟ್ಟಿದೆ. ವೈಟ್​ಬಾಲ್ ಕ್ರಿಕೆಟ್​ನಲ್ಲಿ ಅತ್ಯುತಮ ದಾಖಲೆ ಹೊಂದಿರುವ ಕೋಚ್ ಗಂಭೀರ್, ಟೆಸ್ಟ್ ಕ್ರಿಕೆಟ್​ನಲ್ಲಿ ಮಾತ್ರ ಫುಲ್ ಡಲ್ ಆಗಿದ್ದಾರೆ. ಅದ್ರಲ್ಲೂ ಗಂಭೀರ್ ಟೀಮ್ ಇಂಡಿಯಾ ಕೋಚ್ ಹುದ್ದೆಗೇರಿದ ಮೇಲೆ ಅನಾವಶ್ಯಕ ದಾಖಲೆ ನಿರ್ಮಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
/filters:format(webp)/newsfirstlive-kannada/media/media_files/2025/11/18/gambhir-1-2025-11-18-12-37-25.jpg)
ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್​ನಲ್ಲಿ, ಸಾಧಾರಣ ತಂಡದಂತೆ ಪರ್ಫಾಮ್ ಮಾಡ್ತಿದೆ. ಸುಲಭವಾಗಿ ಗೆಲ್ಲೋ ಪಂದ್ಯಗಳನ್ನ ಕೈಚೆಲ್ತಿದೆ. ಕೊಹ್ಲಿ-ಶರ್ಮಾ ಇದ್ದಾಗ ಟೀಮ್ ಇಂಡಿಯಾ ಪಂದ್ಯ ಗೆಲ್ಲಲು ಕೊನೆಯವರೆಗೂ ಹೋರಾಟ ನಡೆಸ್ತಿತ್ತು. ರೋ-ಕೊ ನಿವೃತ್ತಿಯ ನಂತರ ಟೀಮ್ ಇಂಡಿಯಾ ಜೋಶ್ ಕಳೆದುಕೊಂಡಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಮೂರು ಟೆಸ್ಟ್ ಪಂದ್ಯಗಳು.
124 ರನ್​ ಚೇಸ್ ಮಾಡಲು ವಿಫಲ
ಮೊನ್ನೆಯಷ್ಟೇ ಕೊಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು. 124 ರನ್ ಚೇಸ್ ಮಾಡಲು ವಿಫಲವಾದ ಭಾರತ, ತವರು ಅಭಿಮಾನಿಗಳ ಮುಂದೆ ತೀವ್ರ ಮುಖಭಂಗ ಅನುಭವಿಸಿತು.
193 ರನ್​​​ ಟಾರ್ಗೆಟ್ ಫೇಲ್
ಇದೇ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಅಲ್ಲೂ ಸಾಧಾರಣ ರನ್ ಚೇಸ್​​​ ಮಾಡುವಲ್ಲಿ ಎಡವಿತ್ತು. ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ಇಂಗ್ಲೆಂಡ್ ನೀಡಿದ್ದ 193 ರನ್​ಗಳ ಗುರಿಯನ್ನ ಬೆನ್ನಟ್ಟಲಾಗದ ಟೀಮ್ ಇಂಡಿಯಾ, 22 ರನ್​ಗಳಿಂದ ಸೋತಿತು. ಟೀಮ್ ಇಂಡಿಯಾಕ್ಕೆ ಐತಿಹಾಸಿಕ ದಾಖಲೆ ಮಿಸ್ ಆಯ್ತು.
ಇದನ್ನೂ ಓದಿ: IPL ನಾಯಕತ್ವ ಕಷ್ಟದ ಬಗ್ಗೆ ಸ್ಫೋಟಕ ಹೇಳಿಕೆ.. ಮಾಲೀಕರ ಬಗ್ಗೆಯೂ ಬಹಿರಂಗ ಮಾತು..!
/filters:format(webp)/newsfirstlive-kannada/media/media_files/2025/11/16/team-india-3-2025-11-16-14-52-35.jpg)
147 ರನ್​​​​​ ಗುರಿ ಅಸಾಧ್ಯ
ಕಳೆದ ವರ್ಷ ನ್ಯೂಜಿಲೆಂಡ್, ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಸರಣಿಯನ್ನ ವೈಟ್​ವಾಶ್ ಸಾಧನೆ ಮಾಡಿತ್ತು. ವಾಂಖೆಡೆ ಟೆಸ್ಟ್ ಪಂದ್ಯವನ್ನ ಗೆಲ್ಲಲು ಟೀಮ್ ಇಂಡಿಯಾಕ್ಕೆ, ಒಳ್ಳೆ ಚಾನ್ಸ್ ಇತ್ತು. ಆದ್ರೆ ಕಿವೀಸ್ ದಾಳಿಗೆ ಧೂಳಿಪಟವಾದ ಟೀಮ್ ಇಂಡಿಯಾ, 25 ರನ್​ಗಳಿಂದ ಮುಖಭಂಗ ಅನುಭವಿಸಿತ್ತು.
ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದಲ್ಲಿ ಏನ್ ಆಗ್ತಿದೆ ಅಂತ ಯಾರಿಗೂ ಕ್ಲಾರಿಟಿ ಇಲ್ಲ. ನಿಜ ಹೇಳಬೇಕು ಅಂದ್ರೆ, ಹೆಡ್ ಕೋಚ್ ಗಂಭೀರ್​ಗೂ ಪಕ್ಕಾ ಕ್ಲಾರಿಟಿ ಇಲ್ಲ. ಆಟಗಾರರ ಆಯ್ಕೆಯಲ್ಲಿ, ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ, ಮ್ಯಾಚ್ ಸ್ಟ್ರಾಟಜಿಯಲ್ಲಿ ಎಲ್ಲದರಲ್ಲೂ ಗೊಂದಲ, ಗೊಂದಲ. ಗಂಭೀರ್ ಮೊದಲು ಗೊಂದಲಗಳಿಂದ ಹೊರಬರಬೇಕಿದೆ. ಇಲ್ದಿದ್ರೆ ಮುಂದೆ ಕಠಿಣ ದಿನಗಳನ್ನ ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: ಗಂಭೀರ್​ ಕೋಚಿಂಗ್​​ನಲ್ಲಿ ಸೋಲು, ಸೋಲು.. ಇದಕ್ಕೆ 5 ಯಡವಟ್ಟುಗಳೇ ಕಾರಣ..!
/filters:format(webp)/newsfirstlive-kannada/media/media_files/2025/11/16/team-india-3-2025-11-16-14-52-35.jpg)
ಹೋರಾಟ ಮಾಡಿ ಪಂದ್ಯ ಸೋತ್ರೆ ಬೇಜಾರಾಗೋದಿಲ್ಲ. ಬೇಜವಾಬ್ದಾರಿತನದಿಂದ ಪಂದ್ಯವನ್ನ ಸೋತ್ರೆ ಎಂತಹವರಿಗೂ ಕೋಪ ಬರೋದು ಸಹಜ. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಕೋಪ ತರಿಸಿರೋದು ಇದೇ ವಿಚಾರನೇ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us