Advertisment

ಕೋಲ್ಕತ್ತ ಟೆಸ್ಟ್​ನಲ್ಲಿ ಜೈಸ್ವಾಲ್​​ಗೆ ವಿಲನ್ ಆಗಿ ಕಾಡಿದ್ದು ಯಾರು ಗೊತ್ತಾ..?

ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್, ಫುಲ್ ಡಲ್ ಆಗಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಶತಕಗಳಿಸಿದ್ದ ಜೈಸ್ವಾಲ್, ರಾಜಸ್ಥಾನ್ ವಿರುದ್ಧ ರಣಜಿ ಟ್ರೋಫಿಯಲ್ಲೂ ಘರ್ಜಿಸಿದ್ರು.

author-image
Ganesh Kerekuli
Yashasvi_Jaiswal_Bat
Advertisment

ಟೆಸ್ಟ್ ಕ್ರಿಕೆಟ್​ನಲ್ಲಿ ಜೈತ್ರಯಾತ್ರೆ ಮುಂದುವರೆಸುತ್ತಿರುವ 24 ವರ್ಷದ ಯಶಸ್ವಿ ಜೈಸ್ವಾಲ್, ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನೇ ಪುಡಿ ಪುಡಿ ಮಾಡಿದ್ದಾರೆ. ದೇಶ-ವಿದೇಶಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ಜೈಸ್ವಾಲ್, ತವರಿನಲ್ಲಿ ರನ್​ಗಳಿಸೋಕೆ ಪರದಾಡ್ತಿದ್ದಾರೆ. ಅದ್ರಲ್ಲೂ ಎಡಗೈ ವೇಗಿಗಳ ವಿರುದ್ಧ ಜೈಸ್ವಾಲ್ ಪರದಾಡ್ತಿರೋದು ಟೀಮ್ ಮ್ಯಾನೇಜ್ಮೆಂಟ್​​ಗೆ ದೊಡ್ಡ ಟೆನ್ಶನ್ ಆಗಿದೆ.

Advertisment

ಇದನ್ನೂ ಓದಿ:IPL ನಾಯಕತ್ವ ಕಷ್ಟದ ಬಗ್ಗೆ ಸ್ಫೋಟಕ ಹೇಳಿಕೆ.. ಮಾಲೀಕರ ಬಗ್ಗೆಯೂ ಬಹಿರಂಗ ಮಾತು..! 

ಕೊಲ್ಕತ್ತಾ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಜೈಸ್ವಾಲ್, ಎಡಗೈ ವೇಗಿ ಮಾರ್ಕೊ ಯಾನ್ಸನ್ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ರು. ಎರಡನೇ ಇನ್ನಿಂಗ್ಸ್​ನಲ್ಲೂ ಜೈಸ್ವಾಲ್, ಯಾನ್ಸನ್ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ ಕೈಗೆ ಕ್ಯಾಚ್ ನೀಡಿ, ಔಟಾದ್ರು. ಯಾನ್ಸನ್ ಎಸೆದ ಒಂದೊಂದು ಎಸೆತವವೂ, ಜೈಸ್ವಾಲ್​ಗೆ ಬೆಂಕಿ ಚೆಂಡಿನಂತಿತ್ತು.

ಎಡಗೈ ವೇಗಿಗಳೇ ಜೈಸ್ವಾಲ್​ಗೆ ರಿಯಲ್ ವಿಲನ್ಸ್..!

ಯಂಗ್ ಯಶಸ್ವಿ ಜೈಸ್ವಾಲ್​​ ಟೆಸ್ಟ್ ಕ್ರಿಕೆಟ್​ನಲ್ಲಿ ಎಲ್ಲಾ ಬೌಲರ್​ಗಳ ವಿರುದ್ಧ ರನ್​ಗಳಿಸಿದ್ದಾರೆ. ಆದ್ರೆ ಮುಂಬೈನ ಈ ಎಡಗೈ ಬ್ಯಾಟರ್, ಲೆಫ್ಟ್ ಆರ್ಮ್ ಪೇಸರ್ಸ್ ವಿರುದ್ಧ ವಿಲ ವಿಲ ಅಂತ ಒದ್ದಾಡಿದ್ದಾರೆ. ಅದ್ರಲ್ಲೂ ಆಫ್ರಿಕನ್ ಲೆಫ್ಟ್ ಆರ್ಮ್ ಪೇಸರ್ಸ್, ಜೈಸ್ವಾಲ್​ರನ್ನ ಕಟ್ಟಿಹಾಕಿದ್ದಾರೆ. ಆಫ್ರಿಕಾದ ನಂಡ್ರೆ ಬರ್ಗರ್ 3 ಬಾರಿ ಜೈಸ್ವಾಲ್​ರನ್ನ ಡಿಸ್​ಮಿಸ್ ಮಾಡಿದ್ರೆ, ಮಾರ್ಕೊ ಯಾನ್ಸನ್ 2 ಬಾರಿ ಔಟ್ ಮಾಡಿದ್ದಾರೆ.

Advertisment

ದಕ್ಷಿಣ ಆಫ್ರಿಕಾ ವಿರುದ್ಧ ಯಶಸ್ವಿ 30 ರನ್​​​​​​​​​​​​​​​​ ದಾಟಿಲ್ಲ

ಆಸ್ಟ್ರೇಲಿಯಾ, ಇಂಗ್ಲೆಂಡ್​, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್​ನಂತಹ ತಂಡಗಳ ವಿರುದ್ಧ ಆರ್ಭಟಿಸಿರುವ ಯಶಸ್ವಿ ಜೈಸ್ವಾಲ್, ಅದ್ಯಾಕೋ ಸೌತ್ ಆಫ್ರಿಕಾ ವಿರುದ್ಧ ಒಂದೊಂದು ರನ್​ಗಳಿಸೋಕೂ ಒದ್ದಾಡಿದ್ದಾರೆ. ಆಫ್ರಿಕಾ ವಿರುದ್ಧ ಆಡಿರೋ 6 ಇನ್ನಿಂಗ್ಸ್​ಗಳಿಂದ ಗಳಿಸಿರೋದು ಕೇವಲ 62 ರನ್ ಮಾತ್ರ. ಜೈಸ್ವಾಲ್ ಬ್ಯಾಟಿಂಗ್ ಸರಾಸರಿ ಜಸ್ಟ್ 10.33. ಜೈಸ್ವಾಲ್ ಬೆಸ್ಟ್ ಸ್ಕೋರ್ ಏನ್ ಗೊತ್ತಾ? ಕೇವಲ 28 ರನ್.

ಕೊಲ್ಕತ್ತಾ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲಿ ಜೈಸ್ವಾಲ್ ಫ್ಲಾಪ್ ಆಗಿದ್ದೇ ತಡ. ಜೈಸ್ವಾಲ್ ಟೆಸ್ಟ್ ಬ್ಯಾಟಿಂಗ್ ಸರಾಸರಿ ಕೂಡ ಡ್ರಾಪ್ ಆಗಿದೆ. ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ಜೈಸ್ವಾಲ್ 60+ ಬ್ಯಾಟಿಂಗ್ ಸರಾಸರಿ ಹೊಂದಿದ್ರು. ಆದ್ರೀಗ ಜೈಸ್ವಾಲ್ ಬ್ಯಾಟಿಂಗ್ ಌವರೇಜ್ 57.47 ಆಗಿದೆ. ಒಂದೇ ಒಂದು ಟೆಸ್ಟ್ ಪಂದ್ಯದ ವೈಫಲ್ಯ, ಜೈಸ್ವಾಲ್ ಸರಾಸರಿಗೆ ಬಾರೀ ಪೆಟ್ಟನ್ನೇ ನೀಡಿದೆ.

ಇದನ್ನೂ ಓದಿ:ಚಂದ್ರಪ್ರಭ ಬಿಗ್​ಬಾಸ್ ಮನೆಯಿಂದ ಬಂದಿದ್ದೇಕೆ..? ಅಸಲಿ ಸತ್ಯ ಬಿಚ್ಚಿಟ್ಟ ಕಾಕ್ರೋಚ್ ಸುಧೀ 

Advertisment

ಜೈಸ್ವಾಲ್ ಬ್ಯಾಟಿಂಗ್ ಬಗ್ಗೆ ಮಾಜಿ ಕ್ರಿಕೆಟಿಗ ಚೆತೇಶ್ವರ ಪೂಜಾರ ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಬ್ಯಾಟಿಂಗ್​​​​​​​​​​​​ ಗಮನಿಸಿದ ಪೂಜಾರ, ಮುಂಬೈಕರ್ ಬ್ಯಾಟಿಂಗ್​ನಲ್ಲಿ ಟೆಕ್ನಿಕಲ್ ಸಮಸ್ಯೆ ಇದೆ ಎಂದಿದ್ದಾರೆ. ಎರಡೂ ಇನ್ನಿಂಗ್ಸ್​ಗಳಲ್ಲೂ ಜೈಸ್ವಾಲ್​​​​​​​​​​ ಟೆಕ್ನಿಕಲಿ ಎಡವಿದ್ದಾರೆ ಎಂದಿದ್ದಾರೆ. ಅದೇನೆ ಇರಲಿ.. ಯಶಸ್ವಿ ಜೈಸ್ವಾಲ್.. ಯಂಗ್, ಡೈನಾಮಿಕ್ ಌಂಡ್ ಫೈಟರ್. ಇದೀಗ ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಎಡವಿರೋ ಜೈಸ್ವಾಲ್, ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್​ನಲ್ಲಿ, ಕಮ್​ಬ್ಯಾಕ್ ಮಾಡ್ತಾರೆ ಅನ್ನೋ ಭರವಸೆಯಂತೂ ಇದೆ.  

ಕ್ರಿಕೆಟ್ ಸುದ್ದಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Yashasvi Jaiswal Indian cricket team news
Advertisment
Advertisment
Advertisment