/newsfirstlive-kannada/media/media_files/2025/11/18/kl-rahul-2025-11-18-09-25-47.jpg)
ಐಪಿಎಲ್‌ನಲ್ಲಿ ನಾಯಕತ್ವ ವಹಿಸಿಕೊಳ್ಳೋದು ಎಷ್ಟು ಕಷ್ಟ ಅಂತಾ ಕೆ.ಎಲ್.ರಾಹುಲ್ ಮೊದಲ ಬಾರಿಗೆ ಬಹಿರಂಗವಾಗಿ ಮಾತನ್ನಾಡಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ರಾಹುಲ್​ ಮುನ್ನಡೆಸಿದ್ದರು. ಇದೀಗ ಅವರು ಕೆಲ ಸಿಕ್ರೇಟ್ಸ್ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: India vs South Africa; ಕೊಲ್ಕತ್ತಾ ಟೆಸ್ಟ್ ಸೋಲಿಗೆ ಕಾರಣ ಇಲ್ಲಿದೆ..!
ಐಪಿಎಲ್‌ನಲ್ಲಿ ನಾಯಕತ್ವವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕತ್ವ ವಹಿಸುವುದಕ್ಕಿಂತ ಹೆಚ್ಚು ಸವಾಲಿನದ್ದಾಗಿದೆ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮವೊಂದರ ಪ್ರಶ್ನೆಗೆ ರಾಹುಲ್ ಉತ್ತರ ಹೀಗಿತ್ತು.
ಐಪಿಎಲ್‌ನಲ್ಲಿ ನಾಯಕನ ಜವಾಬ್ದಾರಿ ಏನು?
ಐಪಿಎಲ್ ನಾಯಕತ್ವ ಎಂದರೆ ಮೈದಾನದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಮಾತ್ರವಲ್ಲ. ತಂಡದ ನಿರ್ವಹಣೆ, ಡೇಟಾ ವಿಶ್ಲೇಷಣೆ, ನೆಟ್ ಸೆಷನ್‌ಗಳು, ಪಂದ್ಯದ ಪೂರ್ವ ಮತ್ತು ನಂತರದ ಲೆಕ್ಕವಿಲ್ಲದಷ್ಟು ಸಭೆಗಳು, ಪ್ಲಾನ್ ಮತ್ತು ತಂಡದ ಮಾಲೀಕರಿಗೆ ವರದಿ ಒಪ್ಪಿಸಬೇಕು. ಈ ಜವಾಬ್ದಾರಿಗಳು ವೈಯಕ್ತಿಕ ಪ್ರದರ್ಶನದ ಮೇಲೆ ಪೆಟ್ಟು ಬೀಳುತ್ತವೆ.
ಐಪಿಎಲ್‌ನಲ್ಲಿ ನಾಯಕತ್ವದ ಮಾನಸಿಕ ಒತ್ತಡ ಎಷ್ಟು ತೀವ್ರವಾಗಿದೆಯೆಂದರೆ.. ಐಪಿಎಲ್ ಅಂತ್ಯದ ವೇಳೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಇಡೀ ಋತುವಿನಲ್ಲಿ ಇದ್ದಕ್ಕಿಂತ ಹೆಚ್ಚು ದಣಿದಿರುತ್ತಾರೆ ಅನ್ನೋದನ್ನ ರಾಹುಲ್ ಒಪ್ಪಿಕೊಂಡಿದ್ದಾರೆ.
ತಂಡದ ಮಾಲೀಕರ ‘ತಿಳಿವಳಿಕೆ ಇಲ್ಲದ ಪ್ರಶ್ನೆಗಳು'..!
ಐಪಿಎಲ್ ತಂಡದ ಮಾಲೀಕರು ಕೇಳಿದ ಕೆಲವು ಪ್ರಶ್ನೆಗಳು ನಾಯಕ ಮತ್ತು ತರಬೇತುದಾರರ ಮೇಲೆ ಇನ್ನಷ್ಟು ಒತ್ತಡ ಹೇರುತ್ತವೆ. ಕೆಲವೊಮ್ಮೆ ಕ್ರಿಕೆಟ್ ಬಗ್ಗೆ ಆಳವಾದ ತಿಳುವಳಿಕೆ ಇಲ್ಲದ ತಂಡದ ಮಾಲೀಕರು ಅರ್ಥವಿಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆ.
‘ಆ ಆಟಗಾರ ಆಡುವ ಹನ್ನೊಂದರಲ್ಲೊಬ್ಬನ ಹೆಸರೇನು?’
‘ವಿರೋಧಿ ತಂಡವು 200 ರನ್ ಗಳಿಸಿದ್ದು ಹೇಗೆ..? ಮತ್ತು ನಾವು 120 ರನ್ ಗಳಿಸಲು ಏಕೆ ಸಾಧ್ಯವಾಗಲಿಲ್ಲ?’
‘ಅವರ ಬೌಲರ್‌ಗಳು ನಮಗಿಂತ ಉತ್ತಮವಾಗಿ ಸ್ಪಿನ್ ಮಾಡಲು ಏಕೆ ಸಾಧ್ಯವಾಯಿತು?’
ರಾಹುಲ್ ಪ್ರಕಾರ, ಇಂತಹ ಪ್ರಶ್ನೆಗಳು ನಾಯಕತ್ವದ ದೊಡ್ಡ ಸವಾಲುಗಳಲ್ಲಿ ಒಂದಾಗಿದ್ದು, ಅವುಗಳನ್ನು ನಿಭಾಯಿಸುವುದು ಇನ್ನಷ್ಟು ಕಷ್ಟಕರವಾಗುತ್ತದೆ.
ಕೆ.ಎಲ್.ರಾಹುಲ್ 2022 ರಿಂದ 2024 ರವರೆಗೆ ಸತತ ಮೂರು ಋತುಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿದ್ದರು. 2025 ರಲ್ಲಿ ಈ ಜವಾಬ್ದಾರಿ ತ್ಯಜಿಸಿದರು. ಈಗ ಡೆಲ್ಲಿ ಕ್ಯಾಪಿಟಲ್ಸ್ ಪರ ನಿಯಮಿತವಾಗಿ ಆಡುತ್ತಿದ್ದಾರೆ. ನಾಯಕತ್ವದಿಂದ ಹಿಂದೆ ಸರಿದ ನಂತರ ತಮ್ಮ ಆಟದ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿದೆ. ಮಾನಸಿಕವಾಗಿ ಹೆಚ್ಚು ಹಗುರವಾಗಿದ್ದಾರೆ ಎಂದು ಅವರೇ ಹೇಳಿದ್ದಾರೆ.
ಇದನ್ನೂ ಓದಿ:KSCA ಚುನಾವಣೆ ಮುಂದೂಡಿಕೆ, ವೆಂಕಟೇಶ್​ ಪ್ರಸಾದ್​ ಆಕ್ರೋಶ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us