/newsfirstlive-kannada/media/media_files/2025/11/18/venkatesh-prasad-1-2025-11-18-07-53-47.jpg)
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳ ಚುನಾವಣೆ ಮುಂದೂಡಿಕೆಯಾಗಿದೆ. ಚುನಾವಣೆಗೆ ಸ್ಪರ್ಧೆ ಮಾಡಲು ಅಭ್ಯರ್ಥಿಗಳ ಅರ್ಹತೆ ಬಗ್ಗೆ ಗೊಂದಲ ಇರೋದ್ರಿಂದ ಚುನಾವಣಾ ಅಧಿಕಾರಿ ಮುಂದೂಡಿಕೆ ಮಾಡಿದ್ದಾರೆ.
ಅಭ್ಯರ್ಥಿಗಳ ಅರ್ಹತೆ ಬಗ್ಗೆ ಸ್ಪಷ್ಟತೆ ಬಯಸಿ ಕೆಲವರು ಕೋರ್ಟ್​ ಮೆಟ್ಟಿಲೇರಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಸಿಕೊಂಡು ಬನ್ನಿ ಎಂದು ಚುನಾವಣಾ ಅಧಿಕಾರಿ ತಿಳಿದಿದ್ದು, ಡಿಸೆಂಬರ್ 30ರವರೆಗೆ ಕಾಲಾವಕಾಶ ನೀಡಿದ್ದಾರೆ. ನವೆಂಬರ್ 30ಕ್ಕೆ ಚುನಾವಣೆ ನಿಗಧಿಯಾಗಿತ್ತು.
ವೆಂಕಟೇಶ್​ ಪ್ರಸಾದ್​ ಆಕ್ರೋಶ
ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ ಚುನಾವಣೆ ಮುಂದೂಡಿಕೆ ಮಾಡಿದ್ದಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಹಾಗೂ ಅವರ ತಂಡ ಆಕ್ರೋಶ ವ್ಯಕ್ತಪಡಿಸಿದೆ. ನಮ್ಮ ತಂಡಕ್ಕೆ ಸಿಕ್ಕಿರುವ ಬೆಂಬಲ ಹಾಗೂ ಮಾಡ್ತಿರುವ ಪ್ರಚಾರವನ್ನ ನೋಡಿ ಭಯಬಿದ್ದು ಚುನಾವಣೆ ಮುಂದೂಡಿಕೆ ಮಾಡಿದ್ದಾರೆ ಎಂದು ವೆಂಕಟೇಶ್​ ಪ್ರಸಾದ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೂಡಿಕೆ ಮಾಡಿರೋದಕ್ಕೆ ಕಾರಣ ಏನು ಅನ್ನೋದು ಗೊತ್ತಿಲ್ಲ. ಇದನ್ನೆಲ್ಲಾ ಮಾಡಿಸ್ತಿರೋದು ಯಾರೆಂದು ಗೊತ್ತಿದೆ ಅಂತಾ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ:ಕೆಎಸ್‌ಸಿಎ ಅಧ್ಯಕ್ಷ, ಪದಾಧಿಕಾರಿಗಳ ಸ್ಥಾನದ ಚುನಾವಣೆ ಮುಂದೂಡಿಕೆ : ಇದ್ದಕ್ಕಿದ್ದಂತೆ ಚುನಾವಣೆ ಮುಂದೂಡಿದ್ದು ಏಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us