/newsfirstlive-kannada/media/media_files/2025/11/17/rishab-panth-2025-11-17-10-08-12.jpg)
ಕೊಲ್ಕತ್ತಾ ಟೆಸ್ಟ್ ಪಂದ್ಯ ಎರಡೂವರೆ ದಿನಕ್ಕೆ ಮುಕ್ತಯಾವಾಗಿದೆ. ಸುಲಭವಾಗಿ ಗೆಲ್ಲೋ ಪಂದ್ಯವನ್ನ ಕೈಚೆಲ್ಲಿಕೊಂಡ ಟೀಮ್ ಇಂಡಿಯಾ, ತವರು ಅಭಿಮಾನಿಗಳ ಮುಂದೆ ತಲೆತಗ್ಗಿಸಬೇಕಾಯ್ತು. 124 ರನ್ ಚೇಸ್ ಮಾಡಲು ಹೊರಟ ಶುಭ್ಮನ್ ಗಿಲ್ ಪಡೆ, ಎಡವಿದೆಲ್ಲಿ..? ತಂಡದ ಸೋಲಿಗೆ ಪ್ರಮುಖ ಕಾರಣ ಏನು?
ಉತ್ತಮ ಆರಂಭವಿಲ್ಲದೇ ಪರದಾಟ
ಎರಡನೇ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾಕ್ಕೆ ಒಳ್ಳೆ ಸ್ಟಾರ್ಟ್ ಸಿಕ್ಕಿದ್ರೆ ಪಂದ್ಯದ ಫಲಿತಾಂಶವೇ ಬೇರೆ ಆಗ್ತಿತ್ತು. ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್.ರಾಹುಲ್ ಇಷ್ಟು ಈಸಿಯಾಗಿ ವಿಕೆಟ್ ಒಪ್ಪಿಸ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಮೊದಲ 13 ಎಸೆತಗಳಲ್ಲೇ ಇಬ್ಬರೂ ಔಟ್ ಆಗಿ ಪೆವಿಲಿಯನ್ ಸೇರಿಕೊಂಡ್ರು.
ಬೇಜವಾಬ್ದಾರಿ ಬ್ಯಾಟಿಂಗ್
ಅದ್ಭುತ ಫಾರ್ಮ್​ನಲ್ಲಿದ್ದ ಧೃವ್ ಜುರೆಲ್, ಸ್ವಲ್ಪ ತಾಳ್ಮೆ- ಸ್ವಲ್ಪ ಜವಾಬ್ದಾರಿಯಿಂದ ಬ್ಯಾಟಿಂಗ್ ನಡೆಸಿದ್ರೆ ಪಂದ್ಯವನ್ನ ಸುಲಭವಾಗಿ ಗೆಲ್ಲಿಸಬಹುದಿತ್ತು. ಜುರೆಲ್ ಎಡವಟ್ಟು ಮಾಡಿಕೊಂಡು, ವಿಕೆಟ್ ಕೈಚೆಲ್ಲಿದ್ರು. ಪಂತ್ ತನ್ನ ಮೈಂಡ್​ ಗೇರ್ ಅನ್ನ ಶಿಫ್ಟ್ ಮಾಡಿಕೊಳ್ಳಬೇಕಿತ್ತು. ಪಂತ್ ಎಂದಿನಂತೆ ತನ್ನದೇ ಸ್ಟೈಲ್​ನಲ್ಲಿ ಬ್ಯಾಟಿಂಗ್ ಮಾಡಲು ಹೋಗಿ, ಕೈಸುಟ್ಟುಕೊಂಡ್ರು.
ಸ್ಪಿನ್ ಟ್ರ್ಯಾಕ್ ಬೇಕು..ಸ್ಪಿನ್ ಟ್ರ್ಯಾಕ್ ಬೇಕು ಅಂತ ಪಿಚ್ ಕ್ಯೂರೇಟರ್ ತಲೆತಿಂದಿದ್ದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಕೊನೆಗೆ ತಾನೇ ತೋಡಿದ ಹಳ್ಳಕ್ಕೆ ಬಿತ್ತು. ಆಫ್ರಿಕಾದ ಸೈಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್ ಸ್ಪಿನ್​​ಗೆ, ಗಿಲ್ ಪಡೆ ಕ್ರಿಕೆಟ್ ಕಾಶಿಯಲ್ಲಿ ಸ್ಟನ್ ಆಯ್ತು.
ಇದನ್ನೂ ಓದಿ: ಆ ಒಂದು ಆಟಗಾರನ ವಿಚಾರದಲ್ಲಿ RCB ದೊಡ್ಡ ತಪ್ಪು.. ‘ಶೇಮ್, ಶೇಮ್’ ಎಂದು ಫ್ಯಾನ್ಸ್ ಆಕ್ರೋಶ
/filters:format(webp)/newsfirstlive-kannada/media/media_files/2025/11/16/team-india-2-2025-11-16-08-57-09.jpg)
ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಟೀಮ್ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತದೆ ಎಂದು ಯಾರೂ ಸಹ ಕನಸಿನಲ್ಲೂ ಊಹಿಸಿರಲಿಲ್ಲ. ಕೋಚ್ ಗಂಭೀರ್ ಹೇಳಿದಂತೆ, ತಂಡದ ಬ್ಯಾಟರ್ಸ್​ ಒತ್ತಡಕ್ಕೆ ಸಿಲುಕಿ ಸೋಲು ಅನುಭವಿಸಿದ್ರು. ನಾಯಕ ಗಿಲ್​ ಇಂಜುರಿ ಆಗದೇ ಇದ್ದಿದ್ರೆ ತಂಡದ ಗೆಲ್ಲುತ್ತಿತ್ತೋ ಏನೋ..? ಕಂಡಿತ ಟೀಮ್ ಇಂಡಿಯಾಕ್ಕೆ ಗಿಲ್ ಅಲಭ್ಯತೆಯಂತೂ ಕಾಡಿತ್ತು.
ಎರಡನೇ ಇನ್ನಿಂಗ್ಸ್​ನಲ್ಲಿ ಆಫ್ರಿಕಾ ನಾಯಕ ಟೆಂಬಾ ಬವುಮಾ, ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ್ರು. 183 ನಿಮಿಷ ಕ್ರೀಸ್​​ನಲ್ಲಿ ಬ್ಯಾಟಿಂಗ್ ನಡೆಸಿದ್ದ ಬವುಮಾ, 136 ಎಸೆತಗಳನ್ನ ಎದುರಿಸಿ 55 ರನ್​ಗಳಿಸಿದ್ರು. ಜೊತೆಗೆ ಕೆಳ ಕ್ರಮಾಂಕದಲ್ಲಿ ಕಾರ್ಬಿನ್ ಬಾಷ್​ರ 25 ರನ್​​ ಅಮೂಲ್ಯ ಕಾಣಿಕೆ, ತಂಡದ ಗೆಲುವಿಗೆ ಕಾರಣವಾಯ್ತು. ​
ಪಂದ್ಯದಲ್ಲಿ ಸೋಲು-ಗೆಲುವು ಸಾಮಾನ್ಯ. ಆದ್ರೆ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ಈ ಮಟ್ಟಕ್ಕೆ ಸೋಲು ಅನುಭವಿಸುತ್ತದೆ ಅಂತ, ಯಾವೊಬ್ಬ ಅಭಿಮಾನಿ ಕೂಡ ಊಹಿಸಿಕೊಂಡಿರಲಿಲ್ಲ.
ಇದನ್ನೂ ಓದಿ: ಮನಿ ಡಬ್ಲಿಂಗ್ ಮೋಸ, ಕೋಟಿ ಕೋಟಿ ವಂಚನೆ.. ಅಮಾಯಕರಿಗೆ ನಂಬಿಸಿ ಕಿಲಾಡಿ ದಂಪತಿ ವಂಚನೆ ಆರೋಪ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us