/newsfirstlive-kannada/media/media_files/2025/11/17/davanagere-cheating-case-1-2025-11-17-09-54-24.jpg)
ದಾವಣಗೆರೆಯ ಜಗಳೂರಿನ ಜನ ಕೂಡ ಇವ್ರ ಈ ಬೆಡಗು ಬಿನ್ನಾಣ ಎಲ್ಲಾ ನೋಡಿನೇ ಫುಲ್ ಫ್ಲಾಟ್ ಆಗಿ ಹೋಗಿದ್ರು. ಅವರು ಹಣ ಡಬಲ್ ಮಾಡಿ ಕೊಡ್ತೀವಿ ಅಂತ ಹೇಳಿದ್ರೆ ಜೀ ಹಜೂರ್ ಅಂತ ತಮ್ಮ ಕಷ್ಟಾರ್ಜಿತವನ್ನೆಲ್ಲಾ ತಂದು ಇವ್ರ ಕೈಗೆ ಸುರಿದು, ತಾವು ಕನಸು ಕಾಣ್ತಾ ಈಗ ಕಂಗಾಲಾಗಿ ಹೋಗಿದ್ದಾರೆ.
ಶಾರ್ಟ್​​ ಟೈಮ್​ನಲ್ಲೇ ಶ್ರೀಮಂತರಾಗಿಬಿಡಬೇಕು ಅನ್ನೋರನ್ನೇ ಟಾರ್ಗೆಟ್ ಮಾಡಿ ಇವ್ರು ಭರ್ಜರಿಯಲ್ಲಿ ಲೂಟಿ ಮಾಡಿದ್ದಾರೆ. ಬಂಗಾರ ಮೈಮೇಲೆ ಹಾಕಿಕೊಂಡು ಯಾರೋ ದೊಡ್ಡ ಉದ್ಯಮಿ ಅಂತ ಪೋಸ್ ಕೊಡ್ತಿರೋ ಈತನ ಹೆಸರು ಬೋಗು ಶ್ರೀರಾಮುಲು. ಅತನ ಪಕ್ಕದಲ್ಲೇ ಇರೋದು ಆತನ ಅರ್ಧಾಂಗಿ, ಸಪ್ತ ಪದಿ ತುಳಿದು ಏಡೇಡು ಜನ್ಮಲಕೂ ನಿನೇ ನನ್ನ ಗಂಡ ಅಂತ ಬಂದಿರೋ ಪುಷ್ಪ. ಇವ್ರು ಆಂಧ್ರಪ್ರದೇಶದ ಅನಂತಪುರ ಮೂಲದವರು. ಆದ್ರೆ ತಿರುಪತಿ ತಿಮ್ಮಪ್ಪನ ಮೂರ್ನಾಮ ತಿಕ್ಕಿದ್ದು ಮಾತ್ರ ದಾವಣಗೆರೆಯ ಜಗಳೂರಿನಲ್ಲಿ. ನಾವು ರಿಯಲ್ ಎಸ್ಟೇಟ್ ಉದ್ಯಮವನ್ನ ಮಾಡ್ತಿದ್ದೇವೆ. ಹಣ ಡಬಲ್ ಮಾಡಿ ಕೊಡ್ತೀವಿ, ನಂಬಿಸಿ ಯಾಮಾರಿಸಿದ್ದಾರೆ.
ಇದನ್ನೂ ಓದಿ: ಗಂಭೀರ್ ಕೋಚ್ ಆದ್ಮೇಲೆ ಇದೆಲ್ಲ.. ತವರಿನಲ್ಲಿ ಟೀಂ ಇಂಡಿಯಾಗೆ ಏನಾಗ್ತಿದೆ..?
ಶ್ರೀರಾಮುಲು ಮತ್ತು ಆತನ ಹೆಂಡತಿ ಪುಷ್ಪಾ ಹೇಳಿದ ಮಾತುಗಳನ್ನ ಕೇಳಿ, ಅದನ್ನ ನಂಬಿ ತಾವು ಕೂಡಿಟ್ಟ ಹಣ, ಆಭರಣಗಳು ಒತ್ತೆ ಇಟ್ಟು ಬಂದ ಹಣ, ಜೊತೆಗೆ ಇದ್ದ ಚೂರುಪಾರು ಜಮೀನುಗಳನ್ನ ಮಾರಿ ಬಂದ ಹಣ ಅಂತ ಒಬ್ಬೊಬ್ಬರು 2, 3, 4 ಲಕ್ಷ ರೂಪಾಯಿ ಅಂತ ಹೂಡಿಕೆ ಮಾಡಿದ್ದಾರೆ. ಮೊದಲಿಗೆ ಜನರನ್ನ ನಂಬಿಸೋಕೆ, ಎಲ್ಲಾ ಲೆಕ್ಕಾಚಾರ ಸರಿಯಾಗಿದೆ ಅಂತ ತೋರಿಸೋಕೆ ಶ್ರೀರಾಮುಲು ಮತ್ತವನ ಸಹಧರ್ಮಿಣಿ ಡಬಲ್ ಹಣವನ್ನ ಕೊಟ್ಟಿದ್ದೂ ಇದೆ. ಇದನ್ನ ನಂಬಿ ಇನ್ನಷ್ಟು ಜನ ಹಳ್ಳಕ್ಕೆ ಬಿದ್ಮೇಲೆ, ತಮ್ಮ ಅಸಲಿ ಆಟವನ್ನ ತೋರಿಸಿರೋದು.
ಬೋಗು ಶ್ರೀರಾಮುಲು ದೊಡ್ಡ ಮೋಸಗಾರ. ಇದರ ಹಿಂದೆ ದೊಡ್ಡ ಜಾಲ ಇದೆ. ದೊಡ್ಡ ಬಳ್ಳಾಪುರದಲ್ಲಿ ಓರ್ವ ಮಹಿಳೆಗೆ ಮೂರು ಕೋಟಿ ಪಂಗನಾಮ ಹಾಕಿದ್ದಾನಂತೆ. ಬೆಂಗಳೂರಲ್ಲಿ ಒಬ್ಬರಿಗೆ ಎರಡು ಕೋಟಿ. ದಾವಣಗೆರೆಯ ಜಗಳೂರಿನಲ್ಲಿ ರೇಣುಕಮ್ಮ ಎಂಬ ಮಹಿಳೆ ಎರಡು ಎಕರೆ ಜಮೀನು ಮಾರಿ ಕೊಟ್ಟಿದ್ದಾಳೆ. ತಿರುಮಲೇಶ್ ಎಂಬತಾ ಒಂದೂವರರೆ ಲಕ್ಷ ಹಣ ನೀಡಿ ಮೋಸ ಹೋಗಿದ್ದಾರೆ.
ಸ್ಥಳೀಯರು
ಒಬ್ಬಿಬ್ಬರಿಗೆ ದುಡ್ಡು ಸಿಗ್ತಿದ್ದಂತೆ ಜಗಳೂರಿನ ಏಳೆಂಟು ಜನರು 15, 20 ಲಕ್ಷ ರೂಪಾಯಿಯಂತೆ ಒಟ್ಟು 1 ಕೋಟಿ ರೂಪಾಯಿ ಹಣವನ್ನ ಇವ್ರ ಕೈಗೆ ತಂದು ಇಟ್ಟಿದ್ದಾರೆ. ಒಂದ್ ತಿಂಗಳಲ್ಲಿ ಡಬಲ್ ಆಗುತ್ತೆ ಅಂತ ಹೋಗಿ ಕೇಳಿದ್ರೆ ಆಗ ದಂಪತಿ ಸಾಕುಗಳನ್ನ ಹೇಳೋಕೆ ಶುರು ಮಾಡಿದ್ರು. ಅನುಮಾನ ಬಂದು ದಬಾಯಿಸೋದಕ್ಕೆ ಶುರು ಮಾಡಿದಾಗ, ಐಟಿ ರೇಡ್ ಕಥೆಯನ್ನ ಕಟ್ಟಿದ್ದಾರೆ. ಇವ್ರ ಸಹವಾಸ ಸಾಕಪ್ಪ ಸಾಕು ಅಂತ ಈಗ ಇವ್ರಿಂದ ವಂಚನೆಗೊಳಗಾದ ತಿರುಮಲೇಶ್ ಅನ್ನೋರು ಜಗಳೂರು ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ:‘ಒಂದು ಸೀರೆಗಾಗಿ..’ ಮದುವೆ ದಿನವೇ ವಧುವಿನ ಜೀವ ತೆಗೆದ ವರ..!
ಜಗಳೂರಲ್ಲಿ ಕಂಪ್ಲೆಂಟ್ ಆಗ್ತಿದ್ದಂತೆ ವಕೀಲ ಶ್ರೀನಿವಾಸ್​ಗೆ ನೆಲಮಂಗಲ, ಚಿಕ್ಕಮಗಳೂರು, ಕೋಲಾರ ಸೇರಿ ಹಲವು ಕಡೆಗಳಿಂದ ನಮಗೂ ಟೋಪಿ ಹಾಕಿದ್ದಾರೆ ಅನ್ನೋ ಕರೆಗಳು ಬಂದಿದೆ. ಅದೆಲ್ಲಿವರೆಗೂ ಮೋಸ ಹೋಗೋ ಜನ ಇರ್ತಾರೋ, ಅಲ್ಲಿವರೆಗೂ ಈ ರೀತಿ ಬೋಗು ಶ್ರೀರಾಮುಲು, ಪುಷ್ಪಾರಂತಹ ಮೋಸ ಮಾಡೋ ಬೋಗಸ್ ಕ್ಯಾಂಡಿಡೇಟ್​ಗಳು ಕೂಡ ಇರ್ತಾರೆ. ಹಣ ಬೇಕು ನಿಜ, ಅದನ್ನ ಕಷ್ಟ ಪಟ್ಟು ಸಂಪಾದನೆ ಮಾಡಿದ್ರೆನೇ ಉಳಿಯೋದು ಇವತ್ತಿನ ದಿನಗಳಲ್ಲಿ ಕಷ್ಟ ಆಗೋಗಿದೆ. ಅಂಥದ್ರಲ್ಲಿ ಸಿಂಪಲ್ ಆಗಿ ಹೇಳ್ತೀನಿ ಕೇಳಿ ಅಂತ ಯಾರಾದ್ರೂ ನಿಮ್ಮ ಎದುರು ಬಂದ್ರೆ, ಅವ್ರನ್ನ ನಂಬಿ ಯಾಮಾರೋ ಮೊದಲು ಒಂದ್ ಸಲ ಯೋಚನೆ ಮಾಡಿದ್ರೆ, ನೀವೂ ಇಂತಹ ಖೆಡ್ಡಾಗೆ ಬೀಳೋದು ತಪ್ಪುತ್ತೆ.
ಇದನ್ನೂ ಓದಿ: ಆ ಒಂದು ಆಟಗಾರನ ವಿಚಾರದಲ್ಲಿ RCB ದೊಡ್ಡ ತಪ್ಪು.. ‘ಶೇಮ್, ಶೇಮ್’ ಎಂದು ಫ್ಯಾನ್ಸ್ ಆಕ್ರೋಶ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us