Advertisment

‘ಒಂದು ಸೀರೆಗಾಗಿ..’ ಮದುವೆ ದಿನವೇ ವಧುವಿನ ಜೀವ ತೆಗೆದ ವರ..!

ಮದುವೆ ಅನ್ನೋ ಬಂಧ.. ಏಳೇಳು ಜನುಮದಲೂ ತೀರದಂತಹ ಸಂಬಂಧ. ಮನಸನ್ನು ಅರಿತು ಒಂದಾಗಿ ಬೆರೆಯುವ ಅನುಬಂಧ. ಆದ್ರೆ, ಗುಜರಾತ್‌ನಲ್ಲಿ ನಡೆದಿರೋ ಮದುವೆಯ ಸಂಬಂಧವೊಂದು ಏಳು ಜನ್ಮ ಇರಲಿ.. ಏಳು ಹೆಜ್ಜೆ ತುಳಿಯುವ ಮುನ್ನವೇ ಮಸಣ ಸೇರಿದೆ.

author-image
Ganesh Kerekuli
Gujarath marriage story
Advertisment
  • ಸಜನ್ ಮತ್ತು ಸೋನಿ ಇಬ್ಬರ ನಿಶ್ಚಿತಾರ್ಥ ನೆರವೇರಿತ್ತು
  • ಸೀರೆಯನ್ನ ಕೊಳ್ಳುವಾಗ ಸೋನಿ-ಸಜನ್ ಮಧ್ಯೆ ಗಲಾಟೆ
  • ಮನೆಗೆ ಹಿಂದುರಿಗಿದಾಗ ಮನೆಯಲ್ಲಿ ರಾಡ್‌ನಿಂದ ಹಲ್ಲೆ

ಮದುವೆ ಅನ್ನೋದು ಪವಿತ್ರ ಬಂಧ.. ಗಂಡು-ಹೆಣ್ಣು ತನು-ಮನದಿಂದ ಬೆರೆತು ಭವಿಷ್ಯ ರೂಪಿಸಿಕೊಳ್ಳುವ ಅನುಬಂಧ. ಈಗಿನ ಕಾಲದಲ್ಲಿ ಮದುವೆಗೂ ಮುನ್ನವೇ ಮನಸ್ಸುಗಳು ಒಡೆದು ಹೋಗ್ತಿವೆ. ಸಂಬಂಧಗಳು ಮುರಿದುಬಿದ್ರೂ ಪರವಾಗಿಲ್ಲ, ಮತ್ತೊಬ್ಬರನ್ನ ಕೊಲ್ಲುವ ಹಂತಕ್ಕೆ ಹೋಗ್ಬಾರ್ದು. ಗುಜರಾತ್‌ನಲ್ಲಿ ಕೇವಲ ಸೀರೆ ವಿಚಾರಕ್ಕೆ ಮದುವೆ ದಿನವೇ ವಧುವನ್ನ ಕೊಂ* ವರ ಹಂತಕನಾಗಿದ್ದಾನೆ.

Advertisment

ಮದುವೆ ಅನ್ನೋ ಬಂಧ.. ಏಳೇಳು ಜನುಮದಲೂ ತೀರದಂತಹ ಸಂಬಂಧ. ಮನಸನ್ನು ಅರಿತು ಒಂದಾಗಿ ಬೆರೆಯುವ ಅನುಬಂಧ. ಆದ್ರೆ, ಗುಜರಾತ್‌ನಲ್ಲಿ ನಡೆದಿರೋ ಮದುವೆಯ ಸಂಬಂಧವೊಂದು ಏಳು ಜನ್ಮ ಇರಲಿ.. ಏಳು ಹೆಜ್ಜೆ ತುಳಿಯುವ ಮುನ್ನವೇ ಮಸಣ ಸೇರಿದೆ. 

ಇದನ್ನೂ ಓದಿ: ಗಂಭೀರ್ ಕೋಚ್ ಆದ್ಮೇಲೆ ಇದೆಲ್ಲ.. ತವರಿನಲ್ಲಿ ಟೀಂ ಇಂಡಿಯಾಗೆ ಏನಾಗ್ತಿದೆ..?

ವಧುವಿನ ಹೆಸರು ಸೋನಿ ಹಿಮ್ಮತ್ ರಾಥೋಡ್‌. ಪ್ರೀತಿ ಕೊಂ* ಕೊ*ಗಾರ ಸಜನ್ ಬರಯ್ಯ. ಸೋನಿ ಮತ್ತು ಸಜನ್‌ ಕಳೆದ ಕೆಲ ವರ್ಷಗಳಿಂದ ಪ್ರೀತಿಯೆಂಬ ಪಾಶದಲ್ಲಿ ಸಿಲುಕಿದ್ರೂ.. ಮನೆಯವರ ವಿರೋಧದ ನಡುವೆಯೂ ಒಂದೂವರೆ ವರ್ಷದಿಂದ ಒಟ್ಟಿಗೆ ವಾಸವನ್ನೂ ಮಾಡ್ತಿದ್ರು. ಮನೆಯವರೆಲ್ಲಾ ಒಪ್ಪಿ ನಿನ್ನೆಗೆ ಮದುವೆಯನ್ನೂ ನಿಶ್ಚಯ ಮಾಡಿದ್ರು. ಮದುವೆಗೂ ಮುನ್ನ ನಡೆಯುವ ಎಲ್ಲಾ ಶಾಸ್ತ್ರಗಳೂ ನೆರವೇರಿದ್ವು.  ಮದುವೆ ನಡೆಯೋಕೆ ಇನ್ನ ಕೆಲವೇ ಗಂಟೆಗಳು ಬಾಕಿ ಇತ್ತು. ಅಷ್ಟರಲ್ಲೇ ಸೋನಿಯನ್ನ ವರ ಸಜನ್ ಕೊಂದು ಹಾಕಿದ್ದಾನೆ. ಅಷ್ಟಕ್ಕೂ ಕೊಲೆಗೆ ಕಾರಣವಾಗಿದ್ದು ಕೇವಲ ಒಂದು ಸೀರೆ..

Advertisment

ಏನಾಯ್ತು..? 

  • ಸಜನ್ ಮತ್ತು ಸೋನಿ ಇಬ್ಬರ ನಿಶ್ಚಿತಾರ್ಥ ನೆರವೇರಿತ್ತು
  • ಮೊನ್ನೆ ಇವರಿಬ್ಬರ ಮದುವೆಯನ್ನ ನಿಶ್ಚಯ ಮಾಡಲಾಗಿತ್ತು
  • ಮದುವೆಗಾಗಿ ಗುಜರಾತ್‌ನ ಭಾವ್‌ನಗರನಲ್ಲಿ ಶಾಪಿಂಗ್‌
  • ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ಗಲಾಟೆ
  • ಸೀರೆಯನ್ನ ಕೊಳ್ಳುವಾಗ ಸೋನಿ-ಸಜನ್ ಮಧ್ಯೆ ಗಲಾಟೆ
  • ಸೀರೆ ಮತ್ತು ಹಣದ ವಿಚಾರಕ್ಕೆ ಇಬ್ಬರು ಜಗಳ ಮಾಡಿದ್ರು
  • ಮನೆಗೆ ಹಿಂದುರಿಗಿದಾಗ ಮನೆಯಲ್ಲಿ ರಾಡ್‌ನಿಂದ ಹಲ್ಲೆ
  • ತಲೆಗೆ ಗಂಭೀರವಾದ ಪೆಟ್ಟು ಬಿದ್ದು ಸೋನಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ

ಇಷ್ಟಕ್ಕೆ ಸುಮ್ಮನಾಗದ ವರ ಸಜನ್‌, ತನ್ನ ನೆರೆಹೊರೆಯವರ ಜೊತೆಗೂ ಜಗಳವಾಡಿದ್ದಾನೆ.. ಮನೆಯಲ್ಲಿದ್ದ ವಸ್ತುಗಳನ್ನ ಧ್ವಂಸ ಮಾಡಿದ್ದಾನೆ. ಸದ್ಯ ವರ ಸಜನ್ ವಿರುದ್ಧ ಭಾವ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ತಂಡಗಳನ್ನ ರಚಿಸಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಮದುವೆಯ ಕನಸು ಕಂಡವಳು.. ಆತನ ಜೊತೆ ಜೀವನ ಸಾಗಿಸುವ ಕನಸು ಹೊತ್ತವಳು ಅವನಿಂದಲೇ ಮಸಣ ಸೇರಿದ್ದು ಮಾತ್ರ ವಿಪರ್ಯಾಸ.

ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ‘ಹೈ’ವೋಲ್ಟೇಜ್ ಸಭೆ.. ಹೊಸ ಮುಖಗಳಿಗೆ ಅದೃಷ್ಟ ‘ಕೈ’ ಹಿಡಿಯುತ್ತಾ?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News marriage
Advertisment
Advertisment
Advertisment