/newsfirstlive-kannada/media/media_files/2025/09/05/rahul-gandhi-and-siddu-2025-09-05-18-47-25.jpg)
ರಾಜ್ಯದ ಹಲವು ಕಾಂಗ್ರೆಸ್​​ ಶಾಸಕರು ಸಚಿವ ಸ್ಥಾನ ಪಡೆಯಲು ಶತಾಯಗತಾಯವಾಗಿ ಪ್ರಯತ್ನ ನಡೆಸಿ ದೆಹಲಿ ದಂಡೆ ಯಾತ್ರೆ ನಡೆಸಿದ್ರು, ಆಗ ಹೈಕಮಾಂಡ್​​​ ನಾಯಕರು ಬಿಹಾರ ಎಲೆಕ್ಷನ್ ಬಳಿಕವೇ ಈ ಬಗ್ಗೆ ಚರ್ಚೆ ಎಂದು ಸುಮ್ಮನಾಗಿಸಿದ್ದರು. ಇದೀಗ ಫಲಿತಾಂಶ ಬಂದಿದ್ದು, ಮತ್ತೆ ರಾಜ್ಯ ನಾಯಕರು ಸಚಿವ ಸ್ಥಾನಕ್ಕಾಗಿ ಲಾಬಿ ಶುರು ಮಾಡಿದ್ದು, ನಿನ್ನೆ ಸಿಎಂ ದೆಹಲಿಗೆ ತೆರಳಿ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಈ ಹಿನ್ನೆಲೆ ಇಂದು ದೆಹಲಿಯಲ್ಲಿ ಚಟುವಟಿಕೆಗಳು ಗರಿಗೆದರಲಿವೆ.
ಹೊಸ ಮುಖಗಳಿಗೆ ಅದೃಷ್ಟ!
ಬಿಹಾರ ಎಲೆಕ್ಷನ್​​​​ನಲ್ಲಿ ಬೀಸಿದ ಬಿಜೆಪಿಯ ಬಿರುಗಾಳಿಯಿಂದ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕುರ್ಚಿ ಮತ್ತಷ್ಟು ಗಟ್ಟಿಯಾಗಿದೆ. ನಿನ್ನೆ ಸಿದ್ದರಾಮಯ್ಯ ಸರಿಯಾದ ಸಮಯಕ್ಕೆ ಡೆಲ್ಲಿ ಅಂಗಳ ಪ್ರವೇಶಿಸಿ ದಾಳ ಉರುಳಿಸಿದ್ದಾರೆ. ಸಂಪುಟ ಪುನಾರಚನೆಗೆ ಗ್ರೀನ್​ ಸಿಗ್ನಲ್​​ ಪಡೆದು ಬೆಂಗಳೂರಿಗೆ ಮರಳಿದ್ದಾರೆ.. ಇಂದು ಬೆಳಗ್ಗೆ ಮತ್ತೆ ಡೆಲ್ಲಿ ಫ್ಲೈಟ್​​ ಹತ್ತಲು ಸಜ್ಜಾದ ಸಿಎಂ, ಮತ್ಯಾವ ಬಾಣ ಹೂಡ್ತಾರೆ ಅನ್ನೋ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: 2028 ರಲ್ಲಿ ಕಾಂಗ್ರೆಸ್ ಯಾಱರು ಸಿಎಂ ರೇಸ್ ನಲ್ಲಿರುತ್ತಾರೆ? 2028 ರಲ್ಲಿ ಡಿಕೆಶಿ ಸಿಎಂ ಗಾದಿಗೇರುವುದು ಸುಲಭವೇ?
ಕಾಂಗ್ರೆಸ್​ ಹೈವೋಲ್ಟೇಜ್ ಸಭೆ
- ಇಂದು ದೆಹಲಿಯಲ್ಲಿ ಕಾಂಗ್ರೆಸ್​​ ಹೈಕಮಾಂಡ್​​​ ಹೈವೋಲ್ಟೇಜ್ ಸಭೆ
- ಎಐಸಿಸಿ ಅಧ್ಯಕ್ಷ, ಸಿಎಂ, ವೇಣುಗೋಪಾಲ್, ಸುರ್ಜೇವಾಲಾ ಭಾಗಿ
- ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ನಡೆಸಲಿರುವ ಸಿದ್ದರಾಮಯ್ಯ
- ಇಂದೇ ಸಚಿವ ಸಂಪುಟ ಸೇರುವ ಶಾಸಕರ ಪಟ್ಟಿ ರೆಡಿ ಮಾಡಲಿರೋ ಸಿಎಂ
- ಜಾತಿ ಸಮೀಕರಣ, ಜಿಲ್ಲಾ ಪ್ರಾಧಾನ್ಯತೆ ಎಲ್ಲವನ್ನ ಸಿದ್ಧತೆ ಮಾಡಿಕೊಂಡ ಸಿಎಂ
- 15ಕ್ಕೂ ಹೆಚ್ಚು ಸಚಿವರಿಗೆ ಕೊಕ್ ನೀಡಿ ಹೊಸಬರಿಗೆ ಚಾನ್ಸ್​ ನೀಡಲು ಪ್ಲಾನ್
- ಈಗಾಗಲೇ ಕಾಂಗ್ರೆಸ್​​ ಹೈಕಮಾಂಡ್ ಕೈ ಸೇರಿರುವ ಎಲ್ಲಾ ಸಚಿವರು ವರದಿ
- ದೆಹಲಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಸಭೆಯಲ್ಲಿ ಮಹತ್ವದ ಚರ್ಚೆ
ದೆಹಲಿ ಪ್ರಯಾಣದ ವೇಳೆಯೇ ಸಿಎಂ ಸಿದ್ದರಾಮಯ್ಯ ಇಂದು ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದಾರೆ.. ಕಬ್ಬು ಸೇರಿದಂತೆ ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯದಲ್ಲಿನ ಕಬ್ಬು ಬೆಳೆಗಾರರ ಸಮಸ್ಯೆಗಳು, ಬೆಂಬಲ ಬೆಲೆ ಕುರಿತು ಪ್ರಧಾನಿ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ರಾಜ್ಯದ ನೀರಾವರಿ ಯೋಜನೆಗಳು, ಜಿಎಸ್‌ಟಿ ಪರಿಹಾರ, ಮಳೆ ಹಾನಿ ಪರಿಹಾರ ನೀಡುವಂತೆ ಮೋದಿಗೆ ಮನವಿ ಮಾಡಲಿದ್ದಾರೆ.
‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನಲ್ಲ. ಸದ್ಯ ಮಲ್ಲಿಕಾರ್ಜುನ್ ಖರ್ಗೆ ಭೇಟಿಯಾಗಲು ಹೋಗುತ್ತಿದ್ದೇನೆ. ಡಿಸೆಂಬರ್‌ವೊಳಗೆ ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪೂಜೆ ಮಾಡಬೇಕು. ಅದಕ್ಕೆ ನಾನು ದಿನಾಂಕ ಫಿಕ್ಸ್ ಮಾಡಬೇಕು ಎಂದಿದ್ದಾರೆ. ಇದೆಲ್ಲ ಕೆಲಸವೂ ನಾನೇ ಮಾಡಬೇಕು. ಹೀಗಿರುವಾಗ ನಾನೇಕೆ ರಾಜೀನಾಮೆ ಕೊಡಲಿ?' ಎಂದು ದೆಹಲಿಯಲ್ಲಿ ಡಿ.ಕೆ. ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:DK ಶಿವಕುಮಾರ್​ಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಆಸೆ ಇಲ್ಲ -ಡಿಕೆ ಸುರೇಶ್ ಮಹತ್ವದ ಹೇಳಿಕೆ
ಒಟ್ಟಾರೆ, ನವೆಂಬರ್​​​ ಕ್ರಾಂತಿ ಠುಸ್ಸಾದಂತಿದೆ. ಸದ್ಯ ರಾಜ್ಯದಲ್ಲಿ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸಂಪುಟಕ್ಕೆ ಸೇರ್ಪಡೆ ಯಾರಾಗ್ತಾರೆ? ಯಾರು ಔಟ್ ಆಗ್ತಾರೆ ಅಂತ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us