/newsfirstlive-kannada/media/media_files/2025/11/16/dk-suresh-2025-11-16-11-21-38.jpg)
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಬೇಕೆಂಬ ಆಸೆ ಇಲ್ಲ. ಹೈಕಮಾಂಡ್ ಏನು ಹೇಳುತ್ತೋ, ಅದನ್ನು ಕೇಳ್ತಾರೆ ಅಂತಾ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಡಿ.ಕೆ.ಸುರೇಶ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿಕೆ ಸುರೇಶ್.. ಸಂಪುಟ ಪುನಾರಚನೆಯ ವಿಚಾರ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ, ನಾಯಕತ್ವ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:2028 ರಲ್ಲಿ ಕಾಂಗ್ರೆಸ್ ಯಾಱರು ಸಿಎಂ ರೇಸ್ ನಲ್ಲಿರುತ್ತಾರೆ? 2028 ರಲ್ಲಿ ಡಿಕೆಶಿ ಸಿಎಂ ಗಾದಿಗೇರುವುದು ಸುಲಭವೇ?
/filters:format(webp)/newsfirstlive-kannada/media/media_files/2025/11/05/dk-shivakumar-2-2025-11-05-09-03-27.jpg)
ಬಿಹಾರ ಚುನಾವಣೆ ಫಲಿತಾಂಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, 10 ಸಾವಿರ ರೂಪಾಯಿ ಚುನಾವಣೆಗೆ ಮುನ್ನ ಹಾಕಿದ್ದಾರೆ, ಜನ ತೀರ್ಪು ಕೊಟ್ಟಿದ್ದಾರೆ, ಸೋಲು-ಗೆಲುವು ಇರುತ್ತದೆ. ಪಕ್ಷಕ್ಕೆ ಸೋಲು-ಗೆಲುವು ಹೊಸದಲ್ಲ ಎಂದರು.
ನನಗೆ ಬೇರೆ ಕೆಲಸ ಇದೆ, ನಾಳೆ ನಾನೂ ದೆಹಲಿಗೆ ಹೋಗಬಹುದು. ನನ್ನ ಪಾಡಿದೆ, ನಾನು ಹೋಗ್ತೇನೆ. ಎಲ್ಲವನ್ನೂ ಕಾದು ನೋಡೋಣ. ಸಿಎಂ ,ಡಿಸಿಎಂ ಕಾರ್ಯಕ್ರಮಕ್ಕೆ ಹೋಗಿದ್ದರು, ವಾಪಸ್ ಬರುತ್ತಿದ್ದಾರೆ. ಕಾದು ನೋಡೋಣ, ಏನಾಗುತ್ತೆ ಎಂದು.
ಹೈಕಮಾಂಡ್ ತೀರ್ಮಾನವೇ ಅಂತಿಮ, ಹೈಕಮಾಂಡ್ ಏನು ಮಾಡುತ್ತೆ ನೋಡೋಣ. ಸಂಪುಟ ಪುನಾರಚನೆ ಸಿಎಂ ಸರ್ವಾಧಿಕಾರ, ಶಿವಕುಮಾರ್ ಅವರ ಸಲಹೆ ಕೇಳಿದ್ರೆ ಕೊಡ್ತಾರೆ. ಸಿಎಂ ಇದ್ದಾರೆ ನೋಡ್ಕೋತಾರೆ. ಹೈಕಮಾಂಡ್ ಹೇಳಿದನ್ನ ಶಿವಕುಮಾರ್ ಕೇಳ್ತಾರೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us