/newsfirstlive-kannada/media/post_attachments/wp-content/uploads/2024/11/KL-Rahul_Gambhir_1.jpg)
ಭಾರತ ಟೆಸ್ಟ್ ತಂಡದ ಸ್ಥಿತಿ, ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕಣ್ಣೀರು ತರಿಸುವಂತಾಗಿದೆ. ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾ ರೆಡ್​ಬಾಲ್ ಕ್ರಿಕೆಟ್​​ನಲ್ಲಿ ಗೆಲುವಿಗಿಂತ ಹೆಚ್ಚು ಸೋಲನ್ನೇ ಅನುಭವಿಸುತ್ತಿದೆ. ಅದ್ರಲ್ಲೂ ಗೌತಮ್ ಗಂಭೀರ್ ಕೋಚ್ ಆದ್ಮೇಲಂತೂ ಟೆಸ್ಟ್ ತಂಡಕ್ಕೆ ದುರಾದೃಷ್ಟವೇ ಅಂಟಿಕೊಂಡಂತಿದೆ. ಕೊಹ್ಲಿ-ರೋಹಿತ್ ನಾಯಕತ್ವದಲ್ಲಿ ಸರಿಯಿದ್ದ ಟೆಸ್ಟ್ ತಂಡಕ್ಕೆ ಈಗ ಏನಾಯ್ತು?
ಕೊಹ್ಲಿ ನಾಯಕತ್ವ 8 ವರ್ಷ, ತವರಿನಲ್ಲಿ 2 ಸೋಲು
ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕನಾಗಿದ್ದಾಗ ಟೀಮ್ ಇಂಡಿಯಾ ಖದರೇ ಬೇರೆ. ತವರಿನಲ್ಲಿ ಅಷ್ಟೇ ಅಲ್ಲ, ವಿದೇಶಗಳಲ್ಲೂ ಟೀಮ್ ಇಂಡಿಯಾ ಟೆಸ್ಟ್ ಪಂದ್ಯಗಳನ್ನ ಗೆಲ್ತಿತ್ತು. 2015 ರಿಂದ 2022ರವರೆಗೂ ಭಾರತ ಟೆಸ್ಟ್ ತಂಡದ ನಾಯಕನಾಗಿದ್ದ ಕೊಹ್ಲಿ 8 ವರ್ಷಗಳಲ್ಲಿ ಕೇವಲ ಎರಡೇ ಎರಡು ಟೆಸ್ಟ್ ಪಂದ್ಯಗಳನ್ನ ಮಾತ್ರ ತವರಿನಲ್ಲಿ ಸೋತಿದ್ರು. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ತವರಿನಲ್ಲಿ ಆಡಿದ್ದ 31 ಟೆಸ್ಟ್ ಪಂದ್ಯಗಳಲ್ಲಿ, 24 ಟೆಸ್ಟ್ ಪಂದ್ಯಗಳನ್ನ ಗೆದ್ದಿತ್ತು. ಅದೇ ಕೊಹ್ಲಿ ನಾಯಕತ್ವ ತ್ಯಜಿಸಿದ ಮೇಲೆ ಟೀಮ್ ಇಂಡಿಯಾ, 19 ಪಂದ್ಯಗಳಲ್ಲಿ 12 ಪಂದ್ಯಗಳನ್ನ ತವರಿನಲ್ಲಿ ಸೋತಿದೆ.
ಗಂಭೀರ್ ಅವಧಿ 1 ವರ್ಷ 4 ಟೆಸ್ಟ್ ಸೋಲು
ಜುಲೈ 9, 2024ರಂದು ಗೌತಮ್ ಗಂಭೀರ್, ಟೀಮ್ ಇಂಡಿಯಾ ಕೋಚ್ ಹುದ್ದೆ ಅಲಂಕರಿಸಿದ್ರು. ಗಂಭೀರ್ ಅವಧಿಯಲ್ಲಿ ಭಾರತ ರೆಡ್​ಬಾಲ್ ಕ್ರಿಕೆಟ್​ನಲ್ಲಿ ಸೋಲಿನ ರುಚಿ ಕಂಡಿದ್ದೇ ಹೆಚ್ಚು. ಕಳೆದೊಂದು ವರ್ಷದಲ್ಲಿ ಟೀಮ್ ಇಂಡಿಯಾ ತವರಿನಲ್ಲಿ 4 ಟೆಸ್ಟ್ ಪಂದ್ಯಗಳನ್ನ ಸೋತಿದೆ. ಈ ಸೋಲಿನ ಸಂಖ್ಯೆ, ನಿಜಕ್ಕೂ ಅರಗಿಸಿಕೊಳ್ಳೋದಕ್ಕೆ ಆಗೋದಿಲ್ಲ.
ಇದನ್ನೂ ಓದಿ:ಟೆಸ್ಟ್​ ಪಂದ್ಯದ ಮಧ್ಯೆ ತಂಡಕ್ಕೆ ಆಘಾತ.. ಕ್ಯಾಪ್ಟನ್ ಗಿಲ್ ಆಸ್ಪತ್ರೆಗೆ ದಾಖಲು
/filters:format(webp)/newsfirstlive-kannada/media/media_files/2025/11/16/team-india-3-2025-11-16-14-52-35.jpg)
100+ ರನ್ ಚೇಸ್​​​​​​, 16 ಟೆಸ್ಟ್, 8 ಸೋಲು
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಟೀಮ್ ಇಂಡಿಯಾ, 100+ ರನ್ ಚೇಸ್ ಮಾಡೋದ್ರಲ್ಲಿ ಎಡವಿದೆ. 16 ಟೆಸ್ಟ್ ಪಂದ್ಯಗಳ ಪೈಕಿ ಭಾರತ, 5ರಲ್ಲಿ ಮಾತ್ರ ಗೆಲುವು ಸಾಧಿಸಿದ್ರೆ 8 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 3 ಪಂದ್ಯಗಳನ್ನ ಡ್ರಾ ಮಾಡಿಕೊಂಡಿದೆ. ಅಂದ್ರೆ 100+ ರನ್ ಚೇಸ್​ ಮಾಡೋದ್ರಲ್ಲಿ 50 ಪರ್ಸಂಟ್ ಪಂದ್ಯಗಳನ್ನ ಟೀಮ್ ಇಂಡಿಯಾ ಕೈಚೆಲ್ಲಿಕೊಂಡಿದೆ.
ಸೋಲಿಗೆ ಯಾರು ಹೊಣೆ?
ಕೊಲ್ಕತ್ತಾ ಟೆಸ್ಟ್ ಪಂದ್ಯದ ಸೋಲಿಗೆ ಕಾರಣವಂತೂ ಗೊತ್ತಾಯ್ತು. ಆದ್ರೆ ಮುಖಭಂಗಕ್ಕೆ ಯಾರು ಹೊಣೆ ಅನ್ನೋದು ಗೊತ್ತಾಗಬೇಕಾಗಿದೆ. ಸ್ಪಿನ್ ಟ್ರ್ಯಾಕ್​​ ಕೇಳಿದ ಟೀಮ್ ಮ್ಯಾನೇಜ್ಮೆಂಟಾ, ಸ್ಟ್ರಾಟಜಿ ತಪ್ಪಿದ ಕೋಚಾ, ತಂಡವನ್ನ ಆಯ್ಕೆ ಮಾಡಿದ್ದ ಸೆಲೆಕ್ಟರ್ಸಾ? ಅಥವಾ ಬೇಜವಾಬ್ದಾರಿತನ ಮೆರೆದ ಆಟಗಾರರ? ಇವರಲ್ಲಿ ಯಾರನ್ನ ಬ್ಲೇಮ್ ಮಾಡಬೇಕು ಅನ್ನೋದನ್ನ ಬಿಗ್​ಬಾಸ್​ಗಳೇ ತೀರ್ಮಾನಿಸಬೇಕು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಮುಖಭಂಗ.. ಹೀನಾಯ ಸೋಲು
/filters:format(webp)/newsfirstlive-kannada/media/media_files/2025/11/16/team-india-2-2025-11-16-08-57-09.jpg)
ಈಡನ್​​​ ಗಾರ್ಡನ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ 20 ವಿಕೆಟ್​ಗಳ ಪೈಕಿ ಬರೋಬ್ಬರಿ 12 ವಿಕೆಟ್​ಗಳನ್ನ ಸ್ಪಿನ್ನರ್ಸ್​​ಗೆ ಒಪ್ಪಿಸಿತ್ತು. ಅಂದ್ರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರೋದು, ಇಂಡಿಯನ್ ಬ್ಯಾಟರ್ಸ್​ ಸ್ಪಿನ್ ಬಲಿಗೆ ಬಿದ್ದಿರೋದು. ಸ್ಪಿನ್ ವಿರುದ್ಧ ಬೆಸ್ಟ್ ಬ್ಯಾಟಿಂಗ್ ನಡೆಸುತ್ತಿದ್ದ ಟೀಮ್ ಇಂಡಿಯಾ, ಈಗ ಸ್ಪಿನ್ನರ್ಸ್ ವಿರುದ್ಧವೇ ಪರದಾಡುವಂತಾಗಿದೆ. ದೇಸಿ ಕ್ರಿಕೆಟ್​ನಲ್ಲಿ ಸ್ಪಿನ್ ಕಡಗಣನೆ, ಗ್ರಿನ್ ಪಿಚ್ಚಸ್​​ಗೆ ಹೆಚ್ಚು ಮಣೆ ಹಾಕಿದ ಬಿಸಿಸಿಐ ಮತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಕೊನೆಗೆ ತಾವೇ ತೋಡಿದ ಹಳ್ಳಕ್ಕೆ ಬೀಳಬೇಕಾಯ್ತು.
ಟೀಮ್ ಇಂಡಿಯಾ ತನ್ನ ಹಳೇ ಪದ್ಧತಿಯನ್ನ ಮರೆತು ಭಾರೀ ಬೆಲೆ ಕಟ್ಟಬೇಕಾಯ್ತು. ಅಂದು ಸ್ಪಿನ್ ನಮ್ಮ ಸ್ಟ್ರೆಂಥ್ ಆಗಿತ್ತು. ಆದ್ರೀಗ ಇಂದು ಅದೇ ಸ್ಪಿನ್ ವೀಕ್ನೆಸ್ ಆಗಿದೆ. ಮುಂದಿನ ದಿನಗಳಲ್ಲಿ ವೀಕ್ನೆಸ್ ಅನ್ನ ಮತ್ತೆ ಸ್ಟ್ರೆಂಥ್ ಆಗಿ ಮಾಡಿಕೊಂಡ್ರೆ ಗೆಲುವು ದೂರವೇನಲ್ಲ.
ಇದನ್ನೂ ಓದಿ: ನಂಬಿಕಸ್ಥ ಜಡೇಜಾ, MS ಧೋನಿಗೆ ಬೇಡವಾಗಿದ್ದೇಕೆ..? ತಲಾ ವಿರುದ್ಧ ಭಾರೀ ಆಕ್ರೋಶ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us