/newsfirstlive-kannada/media/media_files/2025/11/16/team-india-3-2025-11-16-14-52-35.jpg)
India vs South Africa: ಕೋಲ್ಕತ್ತದ ಈಡನ್ ಗಾರ್ಡನ್​​ ನಡೆಯುತ್ತಿದ್ದ ಟೆಸ್ಟ್​ ಪಂದ್ಯವು ಕೇವಲ ಮೂರೇ ದಿನಕ್ಕೆ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ ಮುಖಭಂಗ ಅನುಭವಿಸಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ, 30 ರನ್​ಗಳ ಅಂತರದಿಂದ ಮೊದಲ ಪಂದ್ಯ ಗೆದ್ದುಕೊಂಡಿದೆ. ಮೂರು ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಇಂದು ಬೆಳಗ್ಗೆ ಎರಡನೇ ಇನ್ನಿಂಗ್ಸ್ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ ಕೇವಲ 153 ರನ್​​ಗಳಿಗೆ ಸರ್ವಪತನ ಕಂಡಿತು. ಮೊದಲ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ, 159 ರನ್​ಗಳಿಸಿ ಆಲ್​​ಔಟ್ ಆಗಿತ್ತು. ಈ ಗುರಿಯನ್ನು ಬೆನ್ನು ಹತ್ತಿ ಹೊರಟಿದ್ದ ಟೀಂ ಇಂಡಿಯಾಗೂ ಎದುರಾಳಿ ತಂಡ ಶಾಕ್ ನೀಡಿತು. ಕೇವಲ 189 ರನ್​ಗಳಿಗೆ ಟೀಂ ಇಂಡಿಯಾ ಸರ್ವಪತನಗೊಂಡಿತ್ತು.
ಇದನ್ನೂ ಓದಿ: ಅರವಿಂದ್ ರೆಡ್ಡಿ ಆರೋಪಕ್ಕೆ ಬಿಗ್​ಬಾಸ್​ ಬ್ಯೂಟಿ ಖಡಕ್ ರಿಯಾಕ್ಷನ್..!
/filters:format(webp)/newsfirstlive-kannada/media/media_files/2025/11/16/gill-2025-11-16-13-25-43.jpg)
30 ರನ್​ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಬಂದಿದ್ದ ದಕ್ಷಿಣ ಆಫ್ರಿಕಾಗೆ ಭಾರತೀಯ ಬೌಲರ್ಸ್​ ಆಘಾತ ನೀಡಿದರು. ಕೇವಲ 153 ರನ್​ಗಳಿಗೆ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿದರು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ, ಕುಲ್ದೀಪ್ ಹಾಗೂ ಸಿರಾಜ್ ತಲಾ ಎರಡು ವಿಕೆಟ್ ಪಡೆದರು. ಬೂಮ್ರಾ, ಅಕ್ಸರ್ ಒಂದು ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು.
ಭಾರತದ ಗೆಲುವಿಗೆ ಬೇಕಿತ್ತು 124 ರನ್​​
ಆ ಮೂಲಕ ಟೀಂ ಇಂಡಿಯಾ ಗೆಲುವಿಗೆ 124 ರನ್​ಗಳ ಗುರಿಯನ್ನ ದಕ್ಷಿಣ ಆಫ್ರಿಕಾ ನೀಡಿತ್ತು. ಆದರೆ ಟೀಂ ಇಂಡಿಯಾ ಆಟಗಾರರು ಬಂದಷ್ಟೇ ಬೇಗ ಪೆವಿಲಿಯನ್ ಪರೇಡ್ ನಡೆಸಿದರು. ಜೈಸ್ವಾಲ್, ಬುಮ್ರಾ, ಸಿರಾಜ್ ಖಾತೆ ತೆರೆಯದೇ ಮರಳಿದರು. ಕೆಎಲ್ ರಾಹುಲ್, ಕುಲ್ದೀಪ್ ಯಾದವ್ 1 ರನ್​​ಗಳಿಸಿ ಸುಸ್ತಾದರೆ, ಉಪನಾಯಕ ರಿಷಬ್ ಪಂತ್ ಎರಡು ರನ್​​ಗಳಿಸಿ ಔಟ್ ಆದರು. ಧ್ರುವ್ ಜುರೇಲ್ 12 ರನ್​ ಗಳಿಸಿದರು. ವಾಷಿಂಗ್ಟನ್ ಸುಂದರ್ 31 ರನ್​ಗಳಿಸಿ ಭರವಸೆ ಮೂಡಿಸಿದರೂ, ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಇನ್ನು ರವೀಂದ್ರ ಜಡೇಜಾ 18, ಅಕ್ಸರ್ ಪಟೇಲ್ 26 ರನ್​ಗಳಿಸಿದರು. ಆ ಮೂಲಕ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 93 ರನ್​ಗಳಿಸಿ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಪಂದ್ಯ ಗೆದ್ದು ಸಂಭ್ರಮಿಸಿತು.
ಇದನ್ನೂ ಓದಿ: IPL ರಿಟೆನ್ಶನ್.. ಯಾವ ತಂಡ ಯಾವ್ಯಾವ ಆಟಗಾರರ ಕೈಬಿಟ್ಟಿದೆ..? ಕಂಪ್ಲೀಟ್ ಲಿಸ್ಟ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us