/newsfirstlive-kannada/media/media_files/2025/11/16/arvind-reddy-1-2025-11-16-14-21-48.jpg)
ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಟಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ವಿಚಾರಣೆಯಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಿವೆ.
ಮದುವೆವರೆಗೂ ಬಂದಿದ್ದ ಸಂಬಂಧ ಒಂದೇ ಒಂದು ಫ್ಲೈಟ್ ಟಿಕೆಟ್​ನಿಂದ ಹಾಳಾಯ್ತು ಎಂದು ಆರೋಪಿ ಅರವಿಂದ್ ರೆಡ್ಡಿ ಹೇಳಿದ್ದಾರೆ. ನಟಿ ವಿದೇಶಕ್ಕೆ ಹೋಗಿದ್ದ ಫ್ಲೈಟ್ ಟಿಕೆಟ್ ಪತ್ತೆಯಾಗಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ನಟಿ ಅವಾಯ್ಡ್​ ಮಾಡೋಕೆ ಶುರು ಮಾಡಿದಳು. ಇದಕ್ಕಾಗಿಯೇ ನಟಿಯನ್ನ ಕಾಡಿದೆ ಎಂದು ಅರವಿಂದ್ ರೆಡ್ಡಿ ಹೇಳಿದ್ದಾರೆ. ಪರಿಣಾಮ, ನಟಿಯು ಎಫ್‌ಐಆರ್ ದಾಖಲಿಸಿದ ನಂತರ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ರು. ಇದೀಗ ಅರವಿಂದ್​ಗೆ ಜಾಮೀನು ಮಂಜೂರಾಗಿದ್ದು, ತನಿಖೆ ಮುಂದುವರೆದಿದೆ.
ನನ್ನ ತಪ್ಪಿದ್ರೆ ನನಗೆ ಶಿಕ್ಷೆ ಆಗತ್ತೆ. ಅವರ ತಪ್ಪಿದ್ರೆ ಅವರಿಗೆ ಶಿಕ್ಷೆ ಆಗತ್ತೆ. ಮರೆತಿರೋ ಕಥೆ ಬಗ್ಗೆ ನಾನು ಯೋಚನೆ ಮಾಡಲ್ಲ. ಸಾಬೀತು ಮಾಡಲಿಕ್ಕೆ ಏನೇನು ದಾಖಲಾತಿ ಬೇಕೋ ಅದನ್ನ ನಾನು ಪ್ರೊಡ್ಯೂಸ್ ಮಾಡ್ತೀನಿ
ಅರವಿಂದ್ ರೆಡ್ಡಿ, ನಿರ್ಮಾಪಕ
ಅರವಿಂದ್ ರೆಡ್ಡಿ ಆರೋಪದ ಬೆನ್ನಲ್ಲೇ ಸಂತ್ರಸ್ತ ನಟಿ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ನಟಿ, ನಾನು ಮಾಡಬೇಕಾದ್ದನ್ನ ಮಾಡಿದ್ದೇನೆ. ಸತ್ಯಕ್ಕೆ ಧೃಢವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಎಲ್ಲರೂ ನನ್ನನ್ನು ನಂಬಲೇಬೇಕು ಅನ್ನೋ ನಿರೀಕ್ಷೆ ನನಗಿಲ್ಲ. ಕೆಲವರಿಂದ ದುಃಖ ಕೊಡೋ ರೀತಿ, ಅರ್ಥವಿಲ್ಲದಂತೆ ಮಾತು ಕೇಳಿಬರ್ತಿದೆ. ಸೋಶಿಯಲ್ ಮೀಡಿಯಾದ ದ್ವೇಷ ಎಲ್ಲರೂ ತಾಳಲು ಸಾಧ್ಯವಿಲ್ಲ ಅಂತ ನಟಿ ಪೋಸ್ಟ್​ ಮೂಲಕ ರಿಯಾಕ್ಟ್​ ಮಾಡಿದ್ದಾರೆ.
ಇದನ್ನೂ ಓದಿ: ಆ ನಟಿಗಾಗಿ 3 ಕೋಟಿ ಖರ್ಚು ಮಾಡಿದ್ದೇನೆ -ಬಂಧಿತ ಅರವಿಂದ್ ರೆಡ್ಡಿ ಹೇಳಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us