/newsfirstlive-kannada/media/media_files/2025/11/16/arvind-reddy-2025-11-16-12-53-33.jpg)
ಚಿತ್ರರಂಗ ಅಂದ್ರೆ ತಳುಕು ಬಳುಕಿನ ಪ್ರಪಂಚ.. ಮೇಲೆಲ್ಲಾ ಕಲರ್‌ಫುಲ್ ಆಗಿ ಕಂಡ್ರೂ ಒಳಗೆ ಇರೋ ಹುಳುಕು ಆಗಾಗ ಹೊರಬರ್ತಾನೆ ಇರುತ್ತೆ. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ನಡೆದಿರೋ ಕರ್ಮಕಾಂಡ ಬೆಳಕಿಗೆ ಬಂದಿದೆ. ನಟಿಯೊಬ್ಬರಿಗೆ ನಿರ್ಮಾಪಕ ಕಿರುಕುಳ ಕೊಟ್ಟಿರೋ ಆರೋಪ ಕೇಳಿಬಂದಿದೆ. ಬಿಗ್‌ಬಾಸ್ ಬ್ಯೂಟಿಗೆ ಕಾಟ ಕೊಟ್ಟಿದ್ದ ಆರ್‌ವಿ ರೆಡ್ಡಿಯ ಬಂಧನವಾಗಿದೆ.
ಪ್ರೀತಿಯೋ? ಪ್ರೇಮವೋ? ಸ್ನೇಹವೋ? ವ್ಯವಹಾರದ ನಂಟೋ? ನಟಿ-ನಿರ್ಮಾಪಕನ ನಡುವೆ ಶುರುವಾಗಿದ್ದ ಸ್ನೇಹ ಇದೀಗ ಕಿರುಕುಳ, ಟಾರ್ಚರ್ ಚಿತ್ರಹಿಂಸೆ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸ್ಯಾಂಡಲ್​ವುಡ್ ನಟಿಗೆ ಉದ್ಯಮಿ ಕಂ ನಿರ್ಮಾಪಕ ಚಿತ್ರಹಿಂಸೆ ಕೊಟ್ಟಿರೋ ಆರೋಪ ಕೇಳಿಬಂದಿದೆ. ಬಿಗ್‌ಬಾಸ್ ಸೀಸನ್ 5ರ ಸ್ಪರ್ಧಿಗೆ ಆರ್‌ವಿ ರೆಡ್ಡಿ ಕಾಟ ಕೊಟ್ಟಿರುವ ಕರಾಳ ಹಿಸ್ಟರಿ ಬಯಲಾಗಿದೆ.
ಇದನ್ನೂ ಓದಿ:‘ವಂಶದ ಕುಡಿ, ಸುಲಭಕ್ಕೆ ಸೋಲಲ್ಲ’ ಗಿಲ್ಲಿ, ರಕ್ಷಿತಾಗೆ ಸುದೀಪ್ ಕ್ಲಾಸ್​..!
/filters:format(webp)/newsfirstlive-kannada/media/media_files/2025/11/15/aravinda-reddy-2025-11-15-15-28-10.jpg)
ನಿರ್ಮಾಪಕ ಅರೆಸ್ಟ್!
ನಿರ್ಮಾಪಕ, ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ವಿರುದ್ಧ ಚಂದನವನದ ನಟಿಗೆ ಚಿತ್ರಹಿಂಸೆ ಕೊಟ್ಟಿರುವ ಆರೋಪ ಕೇಳಿಬಂದಿದೆ. 2021ರಲ್ಲಿ ಪರಸ್ಪರ ಪರಿಚಯದಿಂದ ಬೆಳೆದ ಸ್ನೇಹ ಕೊನೆಗೆ 2022ರಲ್ಲಿ ಕಟ್ ಆಗಿತ್ತಂತೆ. ಆಮೇಲೆ 2023ರಿಂದ ಇಲ್ಲಿಯವರೆಗೂ ನಟಿಗೆ ಪ್ರೀತ್ಸೇ ಪ್ರೀತ್ಸೆ ಅಂತ ಆರ್‌ವಿ ರೆಡ್ಡಿ ಪ್ರಾಣ ತಿಂದಿದ್ದಾರೆ ಎಂಬ ಆರೋಪ ಇದೆ. ಇದೀಗ ಬಿಗ್ ಬಾಸ್ 5ರ ಸ್ಫರ್ಧಿಯೂ ಆಗಿರುವ ನಟಿ ಅರವಿಂದ್ ವೆಂಕಟೇಶ್ ರೆಡ್ಡಿ ವಿರುದ್ಧ 5 ದಿನಗಳ ಹಿಂದೆ ದೂರು ನೀಡಿದ್ರು. ಇದೀಗ ನಟಿ ನೀಡಿದ್ದ ದೂರನ್ನ ಆಧರಿಸಿ ರಾಜರಾಜೇಶ್ವರಿ​ ನಗರ ಠಾಣೆ ಪೊಲೀಸರು ನಿರ್ಮಾಪಕ ಆರ್‌ವಿ ರೆಡ್ಡಿಯನ್ನ ಬಂಧಿಸಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾ ಗೆಲುವಿಗೆ ಕೆಲವೇ ಕೆಲವು ರನ್ಸ್ ಅಗತ್ಯ.. ಆರಂಭದಲ್ಲೇ ಬಿಗ್ ಶಾಕ್..!
ನಟಿಯ ಲೊಕೇಶನ್ ಟ್ರೇಸ್ ಮಾಡೋದು.. ಫೋಟೋ ಮಾರ್ಫ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋದಷ್ಟೇ ಅಲ್ಲ. ನಟಿಯ ಬಗ್ಗೆ ಇಲ್ಲಸಲ್ಲದ ಆರೋಪವನ್ನೂ ಆರ್‌ವಿ ರೆಡ್ಡಿ ಮಾಡಿದ್ನಂತೆ. ನಟಿ ವಾಸವಿರುವ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ಮಾಡ್ತಿದ್ದಾಳೆ ಅಂತ ಈ ನಿರ್ಮಾಪಕ ಗುಲ್ಲೆಬ್ಬಿಸಿಸಿರುವ ಆರೋಪ ಕೇಳಿಬಂದಿದೆ.
ನನ್ನ ಮೇಲಿನ ಆರೋಪ ಸುಳ್ಳು ಎಂದ ನಿರ್ಮಾಪಕ!
ಅಂದ್ಹಾಗೆ ಎಬಿಆರ್ ಗ್ರೂಪ್ ಹೆಸರಲ್ಲಿ ಅರವಿಂದ ವೆಂಕಟೇಶ ರೆಡ್ಡಿ ರಿಯಲ್ ಎಸ್ಟೇಟ್ ಉದ್ಯಮ ನಡೆಸ್ತಿದ್ದಾರೆ. ಅಲ್ಲದೇ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ನಾಯಕನಾಗಿದ್ದಾರೆ. ಕೆಲವು ಸಿನಿಮಾಗಳನ್ನೂ ಪ್ರೊಡ್ಯೂಸ್ ಮಾಡಿದ್ದಾರೆ. ಇದಷ್ಟೇ ಅಲ್ಲ. ನಟ, ನಟಿಯರಿಗೇ ದುಬೈ, ಶ್ರೀಲಂಕಾ ಸೇರಿದಂತೆ ಹಲವು ಕಡೆಗಳಲ್ಲಿ ಟೂರ್ನಮೆಂಟ್ ಕೂಡ ಆಯೋಜಿಸಿದ್ದರಂತೆ. ಈಗ ಬಂಧನಕ್ಕೊಳಗಾಗಿರೋ ಆರ್‌ವಿ ರೆಡ್ಡಿ ತಾನೇ ನಟಿಗೆ 3 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ ಅಂತ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ. ನಾನು ಯಾವುದೇ ರೀತಿಯಲ್ಲಿ ಕಿರುಕುಳ ಕೊಟ್ಟಿಲ್ಲ. ನನ್ನ ಮೇಲೆ ಸುಳ್ಳು ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ.
ನನ್ನ ತಪ್ಪಿದ್ರೆ ನನಗೆ ಶಿಕ್ಷೆ ಆಗತ್ತೆ. ಅವರ ತಪ್ಪಿದ್ರೆ ಅವರಿಗೆ ಶಿಕ್ಷೆ ಆಗತ್ತೆ. ಮರೆತಿರೋ ಕಥೆ ಬಗ್ಗೆ ನಾನು ಯೋಚನೆ ಮಾಡಲ್ಲ. ಸಾಬೀತು ಮಾಡಲಿಕ್ಕೆ ಏನೇನು ದಾಖಲಾತಿ ಬೇಕೋ ಅದನ್ನ ನಾನು ಪ್ರೊಡ್ಯೂಸ್ ಮಾಡ್ತೀನಿ
ಅರವಿಂದ್ ರೆಡ್ಡಿ, ನಿರ್ಮಾಪಕ
ಆರ್‌ವಿ ರೆಡ್ಡಿಯ ಕಿರುಕುಳದ ಆಟದಲ್ಲಿ ಮತ್ತೊಬ್ಬ ನಟಿಯೂ ಸಾಥ್ ಕೊಟ್ಟಿರುವ ಆರೋಪ ಕೇಳಿಬಂದಿದೆ. ಇದೀಗ ಆರೋಪಿ ಅರವಿಂದ್ ವೆಂಕಟೇಶ್ ರೆಡ್ಡಿಯನ್ನ ಕಸ್ಟಡಿಯಲ್ಲಿಟ್ಟು ಪೊಲೀಸರು ಬೆಂಡೆತ್ತುತ್ತಿದ್ದಾರೆ. ಕೂಲಂಕುಷ ತನಿಖೆ ನಡೆದ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ.
ಇದನ್ನೂ ಓದಿ: IPL ರಿಟೆನ್ಶನ್.. ಯಾವ ತಂಡ ಯಾವ್ಯಾವ ಆಟಗಾರರ ಕೈಬಿಟ್ಟಿದೆ..? ಕಂಪ್ಲೀಟ್ ಲಿಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us