Advertisment

ಟೀಂ ಇಂಡಿಯಾ ಗೆಲುವಿಗೆ ಕೆಲವೇ ಕೆಲವು ರನ್ಸ್ ಅಗತ್ಯ.. ಆರಂಭದಲ್ಲೇ ಬಿಗ್ ಶಾಕ್..!

India vs South Africa: ಕೋಲ್ಕತ್ತದ ಈಡನ್ ಗಾರ್ಡನ್​​ ನಡೆಯುತ್ತಿರುವ ಟೆಸ್ಟ್​ ಪಂದ್ಯವು ರೋಚಕಘಟ್ಟ ತಲುಪಿದೆ. ಇಂದು ಬೆಳಗ್ಗೆ ಎರಡನೇ ಇನ್ನಿಂಗ್ಸ್ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ ಸರ್ವಪತನ ಕಂಡಿದೆ.

author-image
Ganesh Kerekuli
Siraj

Photograph: (BCCI)

Advertisment

India vs South Africa: ಕೋಲ್ಕತ್ತದ ಈಡನ್ ಗಾರ್ಡನ್​​ ನಡೆಯುತ್ತಿರುವ ಟೆಸ್ಟ್​ ಪಂದ್ಯವು ರೋಚಕಘಟ್ಟ ತಲುಪಿದೆ. ಇಂದು ಬೆಳಗ್ಗೆ ಎರಡನೇ ಇನ್ನಿಂಗ್ಸ್ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ ಸರ್ವಪತನ ಕಂಡಿದೆ. ಕೇವಲ 153 ರನ್​ಗಳಿಗೆ ಆಲೌಟ್ ಆಗಿದ್ದು, ಟೀಂ ಇಂಡಿಯಾ ಗೆಲುವಿನ ಗುರಿಯೊಂದಿಗೆ ಬ್ಯಾಟಿಂಗ್​ಗೆ ಬಂದಿದೆ. 

Advertisment

ಮೊದಲ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ, 159 ರನ್​ಗಳಿಸಿ ಆಲ್​​ಔಟ್ ಆಗಿತ್ತು. ಈ ಗುರಿಯನ್ನು ಬೆನ್ನು ಹತ್ತಿ ಹೊರಟಿದ್ದ ಟೀಂ ಇಂಡಿಯಾಗೂ ಎದುರಾಳಿ ತಂಡ ಶಾಕ್ ನೀಡಿತು. ಕೇವಲ 189 ರನ್​ಗಳಿಗೆ ಟೀಂ ಇಂಡಿಯಾ ಸರ್ವಪತನಗೊಂಡಿತ್ತು. 

ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಕೋಲ್ಕತ್ತ ಟೆಸ್ಟ್.. 2ನೇ ದಿನದಾಟದಲ್ಲಿ ಉರುಳಿದ್ದು 16 ವಿಕೆಟ್ಸ್..!

30 ರನ್​ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಬಂದಿದ್ದ ದಕ್ಷಿಣ ಆಫ್ರಿಕಾಗೆ ಭಾರತೀಯ ಬೌಲರ್ಸ್​ ಆಘಾತ ನೀಡಿದರು. ಕೇವಲ 153 ರನ್​ಗಳಿಗೆ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿದರು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ, ಕುಲ್ದೀಪ್ ಹಾಗೂ ಸಿರಾಜ್ ತಲಾ ಎರಡು ವಿಕೆಟ್ ಪಡೆದರು. ಬೂಮ್ರಾ, ಅಕ್ಸರ್ ಒಂದು ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. 

Advertisment

ಭಾರತದ ಗೆಲುವಿಗೆ 124 ರನ್​​

ಆ ಮೂಲಕ ಟೀಂ ಇಂಡಿಯಾ ಗೆಲುವಿಗೆ 124 ರನ್​ಗಳ ಗುರಿಯನ್ನ ದಕ್ಷಿಣ ಆಫ್ರಿಕಾ ನೀಡಿದೆ. ಗೆಲುವಿನ ಹುಮ್ಮಸ್ಸಿನಲ್ಲಿ ಕಣಕ್ಕೆ ಇಳಿದಿದ್ದು, ಭಾರತ ತಂಡಕ್ಕೆ ದೊಡ್ಡ ಆಘಾತ ಆಗಿದೆ. ಈಗಾಗಲೇ ಎರಡು ವಿಕೆಟ್ ಉರುಳಿದ್ದು, ಆರಂಭಿಕ ಆಟಗಾರರ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಅವರ ವಿಕೆಟ್​ ಕಳೆದುಕೊಂಡಿದೆ. ಜೈಸ್ವಾಲ್ ಸೊನ್ನೆ ಸುತ್ತಿ ಔಟ್ ಆದರೆ, ಕೆಎಲ್ ರಾಹುಲ್ ಒಂದು ರನ್​ಗಳಿಸಿ ಔಟ್ ಆಗಿದ್ದಾರೆ. ಸದ್ಯ ವಾಷಿಂಗ್ಟನ್ ಸುಂದರ್ ಹಾಗೂ ಧ್ರುವ್ ಜುರೇಲ್  ಕ್ರೇಸ್​ನಲ್ಲಿದ್ದಾರೆ. ಸದ್ಯ 10 ರನ್​ಗಳಿಸಿರುವ ಟೀಂ ಇಂಡಿಯಾ ಗೆಲುವಿಗೆ ಕೇವಲ 114 ರನ್​ಗಳ ಅಗತ್ಯ ಇದೆ. ತಾಳ್ಮೆ ಕಳೆದುಕೊಳ್ಳದೇ ಬ್ಯಾಟಿಂಗ್ ಮಾಡಿದರೆ ಟೀಂ ಇಂಡಿಯಾಗೆ ಗೆಲುವು ಪಕ್ಕಾ.

ಇದನ್ನೂ ಓದಿ:ಇಬ್ಬರು ಕನ್ನಡಿಗರಿಗೆ ಗೇಟ್​ಪಾಸ್​ ಕೊಟ್ಟ RCB.. ರಿಲೀಸ್ ಮಾಡಿದ್ದು ಯಾರನ್ನ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ind vs SA India vs South Africa
Advertisment
Advertisment
Advertisment