/newsfirstlive-kannada/media/media_files/2025/11/16/team-india-2-2025-11-16-08-57-09.jpg)
ಸೌತ್​ ಆಫ್ರಿಕಾ ಎದುರಿನ ಕೊಲ್ಕತ್ತಾ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆಲುವಿನ ಹೊಸ್ತಿಲಲ್ಲಿ ನಿಂತಿದೆ. ಟೀಮ್​ ಇಂಡಿಯಾ ಸ್ಪಿನ್ನರ್​ಗಳ ಮ್ಯಾಜಿಕ್​ ಮುಂದೆ ಮಂಡಿಯೂರಿರೋ ಸೌತ್​ ಆಫ್ರಿಕಾ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿದೆ. 2ನೇ ದಿನದಾಟದಲ್ಲಿ ಪ್ರವಾಸಿ ಪಡೆಯನ್ನ ಇಂಡಿಯನ್​​ ಟೈಗರ್ಸ್​ ಅಕ್ಷರಶಃ ಬೇಟೆಯಾಡಿ ಬಿಟ್ರು. ಹೇಗಿತ್ತು 2ನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಪರ್ಫಾಮೆನ್ಸ್ ಅನ್ನೋ ವಿವರ ಇಲ್ಲಿದೆ.
ಭಾರತದ ಕ್ರಿಕೆಟ್​ ಕಾಶಿ ಈಡನ್​​ ಗಾರ್ಡನ್​ನಲ್ಲಿ ನಿನ್ನೆ ನಡೆದಿದ್ದು ಬೌಲರ್​ಗಳ ದರ್ಬಾರ್​. ಸ್ಪಿನ್​ ಮೆಜಿಶಿಯನ್​ಗಳು ಸ್ಪಿನ್​ ಮ್ಯಾಜಿಕ್​ ನಡೆಸಿದ್ರೆ, ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್​​ ನಡೆಸಿದ್ರು. ನಿನ್ನೆ ಒಂದೇ ದಿನ ಬರೋಬ್ಬರಿ 16 ವಿಕೆಟ್​ಗಳು ಉರುಳಿದ್ವು.
1 ವಿಕೆಟ್​​ ನಷ್ಟಕ್ಕೆ 37 ರನ್​ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಟೀಮ್​ ಇಂಡಿಯಾ ಪರ ಕೆ.ಎಲ್​ ರಾಹುಲ್​, ವಾಷಿಂಗ್ಟನ್ ಸುಂದರ್​ ತಾಳ್ಮೆಯ ಆಟವಾಡಿದ್ರು. ಮೊದಲ 1 ಗಂಟೆ ವಿಕೆಟ್​ ಬಿಟ್ಟು ಕೊಡದೇ ಸೌತ್​ ಆಫ್ರಿಕಾ ಬೌಲರ್​ಗಳನ್ನ ಸತಾಯಿಸಿದ್ರು. 2ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿದ್ರು.
/filters:format(webp)/newsfirstlive-kannada/media/media_files/2025/11/14/india-and-south-africa-first-test-match02-2025-11-14-18-51-12.jpg)
82 ಎಸೆತ ಎದುರಿಸಿದ 29 ರನ್​ಗಳಿಸಿದ್ದ ವೇಳೆ ವಾಷಿಂಗ್ಟನ್​ ಸುಂದರ್, ಸಿಮೊನ್​ ಹಾರ್ಮರ್​ ಮ್ಯಾಜಿಕಲ್​ ಎಸೆತಕ್ಕೆ ಬಲಿಯಾದ್ರು. ಎಚ್ಚರಿಕೆಯ ಆಟದ ನಡುವೆಯೂ 4 ಬೌಂಡರಿ, 1 ಸಿಕ್ಸರ್​ ಸಿಡಿಸಿದ್ದ ರಾಹುಲ್​ ಆಟ 39 ರನ್​ಗಳಿಗೆ ಅಂತ್ಯವಾಯ್ತು. ಬೌಂಡರಿ ಸಿಡಿಸಿ ಅಕೌಂಟ್​ ಓಪನ್​ ಮಾಡಿದ ಶುಭ್​ಮನ್​ ಗಿಲ್​ ಗಾಯಗೊಂಡು ರಿಟೈರ್​​ ಹರ್ಟ್​ ಆದ್ರು.
2 ಬೌಂಡರಿ, 2 ಸಿಕ್ಸರ್​ ಸಿಡಿಸಿದ ರಿಷಭ್​ ಪಂತ್​ ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ಫೇಲ್​ ಆದ್ರು. 27 ರನ್​ಗಳಿಸಿ ಪಂತ್ ಔಟಾದ್ರು. ಪಂತ್​ ಪತನದೊಂದಿಗೆ ಟೀಮ್​ ಇಂಡಿಯಾ ಕುಸಿತ ಆರಂಭವಾಯ್ತು. ದೃವ್​ ಜುರೇಲ್​ 14 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರೆ, ರವೀಂದ್ರ ಜಡೇಜಾ ಆಟ 27 ರನ್​ಗಳಿಗೆ ಅಂತ್ಯವಾಯ್ತು.
ಇದನ್ನೂ ಓದಿ: ಜಡೇಜಾರ ನಿಷ್ಠೆಗೆ ಗೌರವ ಕೊಡದ CSK, ಎಷ್ಟು ಕೋಟಿಗೆ ರಾಜಸ್ಥಾನಕ್ಕೆ ಮಾರಿದೆ ಗೊತ್ತಾ..?
ಕುಲ್​​ದೀಪ್​ ಯಾದವ್​, ಮೊಹಮ್ಮದ್​ ಸಿರಾಜ್​ ತಲಾ 1 ರನ್​ಗಳಿಸಿ ಆಟ ಮುಗಿಸಿದ್ರೆ, ಅಕ್ಷರ್​ ಪಟೇಲ್​ 14 ರನ್​ಗಳಿಸಿ ಔಟಾದ್ರು. ಇದ್ರೊಂದಿಗೆ ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 189 ರನ್​ಗಳಿಸಿತು. 30 ರನ್​ಗಳ ಅಲ್ಪ ಲೀಡ್​ ಪಡೆದುಕೊಳ್ತು.
2ನೇ ಇನ್ನಿಂಗ್ಸ್​ ಬ್ಯಾಟಿಂಗ್​ ಆರಂಭಿಸಿದ ಸೌತ್​ ಆಫ್ರಿಕಾ ತಂಡಕ್ಕೆ ಇಂಡಿಯನ್​​ ಸ್ಪಿನ್ನರ್​ಗಳು ಶಾಕ್​ ನೀಡಿದ್ರು. 7ನೇ ಓವರ್​​ನಲ್ಲೇ ಕುಲ್​​ದೀಪ್​ ಯಾದವ್​ ಆರಂಭಿಕ ರಿಯಾನ್​ ರಿಕಲ್ಟನ್​ ವಿಕೆಟ್​ ಬೇಟೆಯಾಡಿದ್ರು. ಕುಲ್​​ದೀಪ್​ ಬಳಿಕ ರವೀಂದ್ರ ಜಡೇಜಾ ಜಾದೂಗೆ ಸೌತ್​ ಆಫ್ರಿಕಾ ಸ್ಟನ್​ ಆಯ್ತು. ಏಡೆನ್​ ಮರ್ಕರಮ್​, ವಿಯಾನ್​ ಮುಲ್ಡರ್​, ಟೋನಿ ಡಿ ಝೋರ್ಜಿ, ಟ್ರಿಸ್ಟನ್​ ಸ್ಟಬ್ಸ್​​.. ಬ್ಯಾಕ್​ ಟು ಬ್ಯಾಕ್​ ನಾಲ್ವರ ವಿಕೆಟ್​ ಉರುಳಿಸಿದ ಜಡೇಜಾ ಸೌತ್​ ಆಫ್ರಿಕಾಗೆ ಮೇಲಿಂದ ಮೇಲೆ ಶಾಕ್​ ನೀಡಿದ್ರು.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್ ಹೊರ ದಬ್ಬುತ್ತಿರುವ ಆಟಗಾರರು ಯಾಱರು?
/filters:format(webp)/newsfirstlive-kannada/media/media_files/2025/10/10/team-india-2025-10-10-07-15-09.jpg)
ಕೈಲ್​ ವೆರೆಯನ್, ಮಾರ್ಕೋ ಯಾನ್ಸೆನ್​ ಕೂಡ ಸ್ಪಿನ್ ಮ್ಯಾಜಿಕ್​ಗೆ ಮಂಡಿಯೂರಿದ್ರು. ವೆರೆಯನ್​ ಅಕ್ಷರ್​ ಬೌಲಿಂಗ್​ನಲ್ಲಿ ಕ್ಲೀನ್​ಬೋಲ್ಡ್​​ ಆದ್ರೆ, ಕುಲ್​​​ದೀಪ್​​ ಯಾದವ್​​, ರಾಹುಲ್​ ಕ್ಯಾಚ್​ ನೀಡಿ ನಿರ್ಗಮಿಸಿದ್ರು.
ಒಂದೆಡೆ ಪೆವಿಲಿಯನ್​ ಪರೇಡ್​​​ ನಡೀತಾ ಇದ್ರೆ, ನಾಯಕ ಟೆಂಬಾ ಬವುಮಾ ಕ್ರಿಸ್​ ಕಚ್ಚಿ ನಿಂತಿದ್ದಾರೆ. ರಕ್ಷಣಾತ್ಮಕ ಆಟದ ಮೊರೆ ಹೋಗಿರುವ ಬವುಮಾ 78 ಎಸೆತಗಳನ್ನ ಎದುರಿಸಿ 29 ರನ್​ಗಳಿಸಿದ್ದಾರೆ. 2ನೇ ದಿನದ ಅಂತ್ಯಕ್ಕೆ ಸೌತ್​ ಆಫ್ರಿಕಾ 7 ವಿಕೆಟ್​ ನಷ್ಟಕ್ಕೆ 93 ರನ್​ಗಳಿಸಿದ್ದು, 63 ರನ್​ಗಳ ಮುನ್ನಡೆಯನ್ನ ಸಾಧಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us