/newsfirstlive-kannada/media/post_attachments/wp-content/uploads/2025/07/RAVINDRA-JADEJA-3.jpg)
ಐಪಿಎಲ್​ ರಿಟೈನ್ಶನ್ (IPL retetion)​ ಅನೌನ್ಸ್​ಮೆಂಟ್​ಗೂ ​ಮುನ್ನ ಬಹು ದಿನದಿಂದ ಸುದ್ದಿಯಲ್ಲಿದ್ದ ಟ್ರೇಡಿಂಗ್​ ಅಧಿಕೃತವಾಗಿದೆ. ರಾಜಸ್ಥಾನ್​ ರಾಯಲ್ಸ್​ ( Rajasthan Royals) ತಂಡದಿಂದ ಸಂಜು ಸ್ಯಾಮ್ಸನ್​, ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ವರ್ಗಾವಣೆಗೊಂಡಿದ್ದಾರೆ.
ಸಂಜುಗೆ ಬದಲಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಸ್ಯಾಮ್​ ಕರನ್ ಹಾಗೂ ರವೀಂದ್ರ ಜಡೇಜಾನ (Ravindra Jadeja) ಬಿಟ್ಟು ಕೊಟ್ಟಿದೆ. ಎರಡೂ ಫ್ರಾಂಚೈಸಿಗಳು ಸೋಷಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ಅಧಿಕೃತ ಮಾಹಿತಿ ನೀಡಿವೆ. 14 ಕೋಟಿಗೆ ರವೀಂದ್ರ ಜಡೇಜಾ, 2.4 ಕೋಟಿಗೆ ಸ್ಯಾಮ್​ ಕರನ್​ ಟ್ರೇಡ್​ ಆಗಿದ್ದು. ಸಂಜು ಸ್ಯಾಮ್ಸನ್​ 18 ಕೋಟಿ ಹಣಕ್ಕೆ ವರ್ಗಾವಣೆಗೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/11/09/jadeja_sanju_samson_ipl_2026_csk-2025-11-09-14-22-29.jpg)
ಕಳೆದ ಸೀಸನ್​ ಐಪಿಎಲ್ ಅಂತ್ಯದ ಬೆನ್ನಲ್ಲೇ ಸಂಜು ಸ್ಯಾಮ್ಸನ್ (Sanju Samson)​ ರಾಜಸ್ಥಾನ್ ರಾಯಲ್ಸ್​ ತಂಡವನ್ನ ತೊರೆಯಲು ನಿರ್ಧರಿಸಿದ್ರು. ಹಲವು ಫ್ರಾಂಚೈಸಿಗಳು ಸಂಜುನ ಟ್ರೇಡ್​ ಮಾಡಲು ಪ್ರಯತ್ನ ನಡೆಸಿದ್ವು. ಅಂತಿಮವಾಗಿ ಚೆನ್ನೈ ಸೂಪರ್​ ಕಿಂಗ್ಸ್​ ಡೀಲ್ ಕುದುರಿಸಿಕೊಂಡಿದೆ. ಅಚ್ಚರಿಯ ನಿರ್ಧಾರ ತಳೆದು ಸಂಜು ಸ್ಯಾಮ್ಸನ್​ಗೆ ಬದಲಿಯಾಗಿ 13 ವರ್ಷ ಚೆನ್ನೈ ಪರ ಆಡಿದ್ದ ಆಲ್​​ರೌಂಡರ್​ ರವೀಂದ್ರ ಜಡೇಜಾನ ಬಿಟ್ಟುಕೊಟ್ಟಿದೆ. ಜಡೇಜಾ ಜೊತೆಗೆ ಹೆಚ್ಚುವರಿಯಾಗಿ ಇಂಗ್ಲೆಂಡ್​ನ ಆಲ್​ರೌಂಡರ್​ ಸ್ಯಾಮ್​​ ಕರನ್​ನ ಕೂಡ ರಾಜಸ್ಥಾನಕ್ಕೆ ಬಿಟ್ಟು ಕೊಟ್ಟಿದೆ.
ಇದನ್ನೂ ಓದಿ: 6 ಕೋಟಿ ವೀರನಿಗೂ ಸ್ಥಾನ ಇಲ್ಲ.. RCB ರಿಲೀಸ್ ಲಿಸ್ಟ್​ನಲ್ಲಿರೋ ಯಾರು, ಯಾರು?
ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟ ರವೀಂದ್ರ ಜಡೇಜಾನ ಸ್ಪೆಷಲ್​ ವಿಡಿಯೋವನ್ನ ಹಂಚಿಕೊಂಡು ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿ ಸ್ವಾಗತಿಸಿದೆ. ಪಿಂಕ್ ಜೆರ್ಸಿ ತೊಟ್ಟು ಫೋಟೋಶೂಟ್​ನಲ್ಲಿ ರವೀಂದ್ರ ಜಡೇಜಾ ಮಿಂಚಿದ್ದಾರೆ. ಫೋಟೋಶೂಟ್​ನಲ್ಲಿ ಜಡೇಜಾ ಬ್ಯಾಟ್​ನ ಕತ್ತಿಯಂತೆ ಝಳಪಿಸಿ ತನ್ನ ಐಕಾನಿಕ್​ ಸ್ಟೈಲ್​ನ ರಿಕ್ರಿಯೇಟ್​ ಮಾಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಕೂಡ ಜಡೇಜಾಗೆ ಧನ್ಯವಾದ ಹೇಳಿ ಸ್ಪೆಷಲ್​ ವಿಡಿಯೋವನ್ನ ಪೋಸ್ಟ್​ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us