/newsfirstlive-kannada/media/media_files/2025/11/15/ipl-retention-2025-11-15-10-08-17.jpg)
ಐಪಿಎಲ್ ಪ್ಲೇಯರ್ಸ್​ ರಿಲೀಸ್ ಮತ್ತು ರಿಟೆನ್ಶನ್​​ಗೆ ಇವತ್ತೇ ಕೊನೆಯ ದಿನ. ಇಂದು ಸಂಜೆ 5 ಗಂಟೆಗೆ ಯಾವ ತಂಡ ಯಾವೆಲ್ಲಾ ಆಟಗಾರರನ್ನ ರಿಲೀಸ್ ಮಾಡಿದೆ? ಯಾವೆಲ್ಲಾ ಆಟಗಾರರನ್ನ ರಿಟೇನ್ ಮಾಡಿದೆ? ಹಾಗೆ ಟ್ರೇಡ್ ಮೂಲಕ ಯಾವೆಲ್ಲಾ ಆಟಗಾರರನ್ನ ತಂಡಕ್ಕೆ ಕರೆತಂದಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ. ಹರಾಜಿನಲ್ಲಿ ಬಿಗ್ ಮನಿ ಪಡೆದ ಆಟಗಾರರ ಕಥೆ ಏನು ಅನ್ನೋದು ದೊಡ್ಡ ಪ್ರಶ್ನೆ.
ಇದನ್ನೂ ಓದಿ: 24 ಕೋಟಿ ಬೆಲೆಯ ಸ್ಟಾರ್​ಗೆ ತಂಡದ ಡೋರ್ ಕ್ಲೋಸ್.. ಇವತ್ತು ಹಣೆಬರ ಪ್ರಕಟ..!
ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಹಣ ಪಡೆದ ಆಟಗಾರರ ಎದೆಯಲ್ಲಿ ಢವಢವ ಶುರುವಾಗಿದೆ. ಇಂದೇ ಆಟಗಾರರ ರಿಟೆನ್ಶನ್​​ಗೆ ಕೊನೆಯ ದಿನವಾಗಿದ್ದು, ಯಾರನ್ನ ತಂಡದಲ್ಲಿ ಉಳಿಸಿಕೊಳ್ತಾರೆ? ಯಾರನ್ನೆಲ್ಲಾ ತಂಡದಿಂದ ರಿಲೀಸ್ ಮಾಡ್ತಾರೆ ಅನ್ನೋ ಟೆನ್ಶನ್, ಕೋಟಿ ವೀರರಿಗೆ ಕಾಡ್ತಿದೆ. ಕಳೆದ ಸೀಸನ್​​ ಹರಾಜಿನಲ್ಲಿ ಅನಿರೀಕ್ಷಿತವಾಗಿ ನಿರೀಕ್ಷೆಗೂ ಮೀರಿದ ಹಣ ಪಡೆದ ಆಟಗಾರರು ಈ ಬಾರಿ ತಂಡದ ಎಕ್ಸಿಟ್​ ಡೋರ್​ನಲ್ಲಿ ನಿಂತಿದ್ದಾರೆ.
ಅಯ್ಯರ್ 23.75 ಕೋಟಿ
ಕೊಲ್ಕತ್ತಾ ನೈಟ್​ರೈಡರ್ಸ್ ತಂಡದ ಆಲ್​ರೌಂಡರ್ ವೆಂಕಟೇಶ್ ಅಯ್ಯರ್, 2025ರ ಹರಾಜಿನಲ್ಲಿ 23.75 ಕೋಟಿ ರೂಪಾಯಿಗೆ, ಶಾರುಖ್​ ಖಾನ್ ಮಾಲಿಕತ್ವದ ತಂಡಕ್ಕೆ ಸೇರ್ಪಡೆಯಾದ್ರು. ಐಪಿಎಲ್ ಸೀಸನ್-18ರಲ್ಲಿ 11 ಪಂದ್ಯಗಳನ್ನ ಆಡಿದ್ದ ಮಧ್ಯಪ್ರದೇಶದ ಆಲ್​ರೌಂಡರ್, ಗಳಿಸಿದ್ದು ಕೇವಲ 142 ರನ್ ಮಾತ್ರ. ಹಾಗಾಗಿ ಈ ದುಬಾರಿ ಆಟಗಾರನಿಗೆ ಕೊಕ್ ಕೊಡಲು, ಕೆಕೆಆರ್ ರೆಡಿಯಾಗಿದೆ.
ಮಯಾಂಕ್ ಯಾದವ್ 11 ಕೋಟಿ
ಡೆಲ್ಲಿಯ ಸ್ಪೀಡ್​ಸ್ಟಾರ್ ಮಯಾಂಕ್ ಯಾದವ್, 11 ಕೋಟಿ ರೂಪಾಯಿಗೆ ಲಕ್ನೋ ಸೂಪರ್​ಜೈಂಟ್ಸ್ ತಂಡದ ಪಾಲಾಗಿದ್ರು. ಲಕ್ನೋ ಪರ ಕೇವಲ 2 ಪಂದ್ಯಗಳನ್ನ ಆಡಿದ್ದ ಮಯಾಂಕ್, ನಂತರ ಗಾಯಗೊಂಡು ಟೂರ್ನಿಯಿಂದಲೇ ಹೊರನಡೆದಿದ್ರು. ಪದೇ ಪದೇ ಇಂಜುರಿ ಆಗ್ತಿರೋ ಮಯಾಂಕ್​ರನ್ನ, ಎಲ್​ಎಸ್​ಜಿ ತಂಡ ರಿಲೀಸ್ ಮಾಡಲು ಮನಸು ಮಾಡ್ತಿದೆ.
ಶಿಮ್ರಾನ್ ಹೆಟ್ಮೆಯರ್ 11 ಕೋಟಿ
11 ಕೋಟಿ ಒಡೆಯ ಶಿಮ್ರಾನ್ ಹೆಟ್ಮೆಯರ್​ರನ್ನ ರಾಜಸ್ಥಾನ್ ರಾಯಲ್ಸ್​ ತಂಡ ರಿಟೇನ್ ಮಾಡೋದು ಬಹುತೇಕ ಅನುಮಾನ. ಹೆಟ್ಮೆಯರ್ ಈ ಬಾರಿ ಹರಾಜಿಗೆ ಹೋಗೋ ಎಲ್ಲಾ ಸಾಧ್ಯತೆಗಳಿವೆ. ಕಳೆದ ಐಪಿಎಲ್​​ನಲ್ಲಿ ಹೆಟ್ಮಾಯರ್ 14 ಪಂದ್ಯಗಳಿಂದ 239 ರನ್​ಗಳಿಸಿದ್ರು. ಆದ್ರೆ ಕೆಲ ಪಂದ್ಯಗಳಲ್ಲಿ ಮ್ಯಾಚ್ ಫಿನಿಷ್ ರೋಲ್​​​​​​​​​​​ನಲ್ಲಿ ಹೆಟ್ಮೆಯರ್ ವಿಫಲರಾಗಿದ್ರು. ಹಾಗಾಗಿ ಆರ್​ಆರ್​, ಹೆಟ್ಮೆಯರ್ ಬದಲಿಗೆ ಹೊಸ ಆಟಗಾರನ ಹುಡುಕಾಟಕ್ಕಿಳಿದಿದೆ.
ಇದನ್ನೂ ಓದಿ: ಬೂಮ್ ಬೂಮ್ ಬುಮ್ರಾ ದಾಳಿಗೆ ದಕ್ಷಿಣ ಆಫ್ರಿಕಾ ವಿಲವಿಲ.. ಆಸರೆಯಾದ KL ರಾಹುಲ್, ಸುಂದರ್..!
T.ನಟರಾಜನ್ 10.75 ಕೋಟಿ
ಎಡಗೈ ವೇಗಿ ಟಿ.ನಟರಾಜನ್​​​​​ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇದ್ದೂ ಇಲ್ಲದಂತಿದ್ದರು. 10.75 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇಲ್ ಆಗಿದ್ದ ನಟ್ಟು, ಫಿಟ್ನೆಸ್ ಪ್ರಾಬ್ಲಂನಿಂದ ಕೇವಲ ಎರಡೇ ಎರಡು ಪಂದ್ಯಗಳನ್ನ ಮಾತ್ರ ಆಡಿದ್ರು. ಆದ್ರೆ ಆಡಿರೋ ಆ ಎರಡು ಪಂದ್ಯಗಳಲ್ಲಿ ನಟರಾಜನ್, ಒಂದೇ ಒಂದು ವಿಕೆಟ್ ಪಡೆದಿಲ್ಲ. ಸದ್ಯ ನಟರಾಜನ್ ಫುಲ್ ಫಿಟ್ ಆಗಿದ್ದಾರೆ. ಒಂದು ವೇಳೆ ಡೆಲ್ಲಿ ನಟ್ಟುರನ್ನ ರಿಲೀಸ್​​ ಮಾಡಿದ್ರೆ, ಆಕ್ಷನ್​ನಲ್ಲಿ ಹೊಸ ಫ್ರಾಂಚೈಸಿ ಸೇರೋ ವಿಶ್ವಾಸದಲ್ಲಿದ್ದಾರೆ.
ಕಗಿಸೋ ರಬಾಡ 10.75 ಕೋಟಿ
ದಕ್ಷಿಣ ಆಫ್ರಿಕಾದ ಸ್ಟಾರ್ ಪೇಸರ್ ಕಗಿಸೋ ಕಬಾಡಾಗೆ, ಕಳೆದ ಐಪಿಎಲ್ ಸೀಸನ್ ಅನ್​​ಲಕ್ಕಿಯಾಗಿತ್ತು. 10.75 ಕೋಟಿ ರೂಪಾಯಿಗೆ ಗುಜರಾತ್ ಟೈಟನ್ಸ್ ತಂಡ ಸೇಪರ್ಡೆಯಾಗಿದ್ದ ರಬಾಡ, 4 ಪಂದ್ಯಗಳನ್ನ ಆಡಿ ಕೇವಲ 2 ವಿಕೆಟ್ ಪಡೆದಿದ್ರು. ನಂತರ ಗಾಯಗೊಂಡಿದ್ದ ರಬಾಡ, ತವರಿಗೆ ವಾಪಸಾಗಿದ್ರು. ರಬಾಡಾಗೆ ಫಿಟ್ನೆಸ್ ಇಶ್ಯೂಸ್ ಇರೋದ್ರಿಂದ ಗುಜರಾತ್ ಈ ಸ್ಟಾರ್ ಬೌಲರ್​ರನ್ನ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.
ಚಹರ್, ಮ್ಯಾಕ್ಸ್​​ವೆಲ್​​​​​​​​ಗೂ ಕೊಕ್?
ಮುಂಬೈ ಇಂಡಿಯನ್ಸ್​ನ ದೀಪಕ್ ಚಹರ್, ಪಂಜಾಬ್ ಕಿಂಗ್ಸ್​ನ ಗ್ಲೇನ್​ ಮ್ಯಾಕ್ಸ್​ವೆಲ್ ಸಹ, ರಿಟೇನ್ ಆಗೋದು ಅನುಮಾನ. ಈ ಸ್ಟಾರ್ ಪ್ಲೇಯರ್ಸ್​, ಡಿಸೆಂಬರ್​ನಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಎಂಟ್ರಿ ಕೊಡಲಿದ್ದಾರೆ. ಒಟ್ಟಿನಲ್ಲಿ 2025ರ ಆಟಗಾರರ ಹರಾಜಿನಲ್ಲಿ ಫ್ರಾಂಚೈಸಿ ಮಾಲೀಕರು ಕೋಟಿ ಕೋಟಿ ಹಣ ವ್ಯರ್ಥ ಖರ್ಚು ಮಾಡಿದರು. ಈ ಬಾರಿ ಮಾಲೀಕರು ಲೆಕ್ಕಾಚಾರ ಹಾಕಿ ಆಟಗಾರರ ರಿಟೆನ್ಶನ್ ಮತ್ತು ರಿಲೀಸ್​​ಗೆ ಮುಂದಾಗಲಿದ್ದಾರೆ.
ಇದನ್ನೂ ಓದಿ:ಮೊದಲ ಟೆಸ್ಟ್ ಮೊದಲ ದಿನವೇ 159 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್ : ಜಸಪ್ರೀತ್ ಬುಮ್ರಾ 5 ವಿಕೆಟ್ ಸಾಧನೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us