/newsfirstlive-kannada/media/media_files/2025/11/15/narendra-modi-2-2025-11-15-08-53-54.jpg)
Photograph: (BCCI)
ಭಾರತದ ಕ್ರಿಕೆಟ್​ ಕಾಶಿ ಈಡನ್​​ ಗಾರ್ಡನ್ಸ್​ನಲ್ಲಿ ಸೌತ್​ ಆಫ್ರಿಕಾದ ಲೆಕ್ಕಾಚಾರ ತಲೆಕೆಳಗಾಯ್ತು. ಬೂಮ್ರಾ ಬಿರುಗಾಳಿಗೆ ಸೌತ್​ ಆಫ್ರಿಕಾ ಬ್ಯಾಟಿಂಗ್​ ಲೈನ್​ ಅಪ್​ ತಬ್ಬಿಬ್ಬಾಯ್ತು. ಕೊಲ್ಕತ್ತಾ ಟೆಸ್ಟ್​ನ ಮೊದಲ ದಿನ ಶುಭ್​ಮನ್​ ಸೈನ್ಯ ಹರಿಣಗಳ ಮೇಲೆ ಸವಾರಿ ಮಾಡಿತು. ಹೇಗಿತ್ತು ಇಂಡೋ-ಆಫ್ರಿಕಾ ಮೊದಲ ಟೆಸ್ಟ್​ನ ಮೊದಲ ದಿನದಾಟ ಅನ್ನೋ ವಿವರ ಇಲ್ಲಿದೆ.
ಕೊಲ್ಕತ್ತಾದ ಈಡನ್ಸ್​ ಗಾರ್ಡನ್ಸ್​​ನಲ್ಲಿ ಜಸ್​​​ಪ್ರಿತ್​ ಬೂಮ್ರಾ ಬೆಂಕಿ-ಬಿರುಗಾಳಿಯಂತಹ ದಾಳಿ ಸಂಘಟಿಸಿದ್ರು. ಬೂಮ್ರಾ ಬೊಂಬಾಟ್​​ ಬೌಲಿಂಗ್​ ಸೌತ್​​ ಆಫ್ರಿಕಾ ವಿಲವಿಲ ಒದ್ದಾಡಿ ಬಿಡ್ತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಸೌತ್​ ಆಫ್ರಿಕಾ ನಾಯಕನ ಆತ್ಮವಿಶ್ವಾಸ ಮೊದಲ ದಿನವೇ ಠುಸ್​ ಪಟಾಕಿಯಾಯ್ತು.
ಸೌತ್​ ಆಫ್ರಿಕಾಗೆ ಗುಡ್​ ಸ್ಟಾರ್ಟ್​ ನೀಡಿದ ಓಪನರ್ಸ್​
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗಿಳಿದ ಸೌತ್​ ಆಫ್ರಿಕಾ ತಂಡಕ್ಕೆ ಗುಡ್​ ಸ್ಟಾರ್ಟ್​​ ಸಿಗ್ತು. ಟೀಮ್​ ಇಂಡಿಯಾ ದಾಳಿಯನ್ನ ದಿಟ್ಟವಾಗಿ ಎದುರಿಸಿದ ರಿಯಾನ್​ ರಿಕಲ್ಟನ್​, ಏಡೆನ್​ ಮರ್ಕರಮ್​​ ವೇಗವಾಗಿ ರನ್​ ಕಲೆ ಹಾಕಿದ್ರು. ಅರ್ಧಶತಕದ ಜೊತೆಯಾಟವಾಡಿ ಸಾಲಿಡ್​ ಸ್ಟಾರ್ಟ್​ ನೀಡಿದ್ರು.
ಇದನ್ನೂ ಓದಿ: ಈ 4 ಸ್ಟಾರ್​​ಗಳನ್ನ RCB ಉಳಿಸಿಕೊಳ್ಳೋದು ಪಕ್ಕಾ! ರಿಲೀಸ್ ಆಗಲಿರುವ ಆಟಗಾರರು ಯಾರು?
/filters:format(webp)/newsfirstlive-kannada/media/media_files/2025/11/14/india-and-south-africa-first-test-match02-2025-11-14-18-51-12.jpg)
ಸಾಲಿಡ್ ಓಪನಿಂಗ್​ ಪಡೆದ ಸೌತ್​ ಆಫ್ರಿಕಾಗೆ 11ನೇ ಓವರ್​ನಲ್ಲಿ ಬೂಮ್ರಾ ಮೊದಲ ಶಾಕ್​ ನೀಡಿದ್ರು. ಬೂಮ್ರಾ ದಾಳಿಗೆ ರಿಯಾನ್​ ರಿಕಲ್ಟನ್​ ಕ್ಲೀನ್​ಬೋಲ್ಡ್​ ಆಗಿ ನಿರ್ಗಮಿಸಿದ್ರು. 13ನೇ ಓವರ್​ನಲ್ಲಿ ಮತ್ತೊರ್ವ ಓಪನರ್​ಗೆ ಪೆವಿಲಿಯನ್​ ದಾರಿ ತೋರಿಸಿದ್ರು. ಪಂತ್​ ಸ್ಟನ್ನಿಂಗ್​ ಕ್ಯಾಚ್​ಗೆ 31 ರನ್​ಗಳಿಸಿದ್ದ ಮರ್ಕರಮ್​ ಬಲಿಯಾದ್ರು.
ಚೈನಾಮನ್​ ಸ್ಪಿನ್ನರ್​ ಕುಲ್​​ದೀಪ್​ ಯಾದವ್​ ಕೈ ಚಳಕಕ್ಕೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೌತ್​ ಆಫ್ರಿಕಾ ನಾಯಕ ಟೆಂಬಾ ಬವುಮಾ ತಬ್ಬಿಬ್ಬಾದ್ರು. ಜಸ್ಟ್​ 3 ರನ್​ಗಳಿಸಿ ಬವುಮಾ ಔಟ್​ ಆದ್ರು. 51 ಎಸೆತ ಎದುರಿಸಿ 24 ರನ್​ಗಳಿಸಿ ನಿಧಾನವಾಗಿ ಇನ್ನಿಂಗ್ಸ್​ ಕಟ್ಟೋ ಯತ್ನದಲ್ಲಿದ್ದ ವಿಯಾನ್​ ಮಲ್ಡರ್​​ ಕೂಡ ಕುಲ್​​ದೀಪ್ ಸ್ಪಿನ್​ ಮ್ಯಾಜಿಕ್​ಗೆ ಶರಣಾದ್ರು.
ಇದನ್ನೂ ಓದಿ:ಸಚಿನ್ ಪುತ್ರನಿಗೆ ಗೇಟ್​ಪಾಸ್​​ ಕೊಟ್ಟ ಮುಂಬೈ ಇಂಡಿಯನ್ಸ್..!
/filters:format(webp)/newsfirstlive-kannada/media/media_files/2025/11/14/india-and-south-africa-first-test-match-2025-11-14-18-46-49.jpg)
24 ರನ್​ಗಳಿಸಿ ಭರವಸೆ ಮೂಡಿಸಿದ್ದ ಟೋನಿ ಡಿ ಝಾರ್ಜಿ ಬೂಮ್ರಾಗೆ 3ನೇ ಬಲಿಯಾದ್ರು. ಲಂಚ್​ ಬ್ರೇಕ್​ನ ಬಳಿಕ ವೇಗಿ ಮೊಹಮ್ಮದ್​ ಸಿರಾಜ್​ ಶೈನ್​ ಆದ್ರು. ಕೈಲ್​ ವೆರೆಯನ್​, ಮಾರ್ಕೋ ಯಾನ್ಸೆನ್​ಗೆ ಒಂದೇ ಓವರ್​ನಲ್ಲಿ ಪೆವಿಲಿಯನ್​ ದಾರಿಯನ್ನ ತೋರಿಸಿದ್ರು.
5 ವಿಕೆಟ್​ ಕಬಳಿಸಿ ಮಿಂಚಿದ ಬೂಮ್ರಾ
ಸೌತ್​ ಆಫ್ರಿಕನ್​ ಟೈಲೆಂಡರ್ಸ್​​ ಅಲ್ಪ ಮೊತ್ತಕ್ಕೆ ಸುಸ್ತಾದ್ರು. 23 ಎಸೆತಗಳ ಎದುರಿಸಿ ಸ್ಟ್ಯಾಂಡ್​ ಕೊಡ್ತಿದ್ದ ಕಾರ್ಬಿನ್​ ಬಾಷ್​ ಅಕ್ಷರ್​​ ಪಟೇಲ್ ಸ್ಪಿನ್​ ಜಾದೂಗೆ ಮಂಡಿಯೂರಿದ್ರು. 3ನೇ ಸೆಷನ್​ ಆರಂಭದಲ್ಲೇ ಸಿಮೊನ್​ ಹಾರ್ಮೆರ್​, ಕೇಶವ್​ ಮಹಾರಾಜ್​ನ ಬೂಮ್ರಾ ಬಲಿ ಪಡೆದ್ರು. ಜೊತೆಗೆ 5 ವಿಕೆಟ್​ ಕಬಳಿಸಿದ ಸಾಧನೆಯನ್ನೂ ಮಾಡಿದ್ರು.
159ಕ್ಕೆ ಆಲೌಟ್​​.!
ದಿನದಾಟದ ಆರಂಭದಲ್ಲಿ ಸೌತ್​ ಆಫ್ರಿಕಾ ಬಿಗ್​ ಸ್ಕೋರ್​ ಕಲೆ ಹಾಕುತ್ತೆ ಅನ್ನೋದೆ ಎಲ್ಲರ ಲೆಕ್ಕಾಚಾರವಾಗಿತ್ತು. ಆದ್ರೆ, 59 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡ ಸೌತ್​ ಆಫ್ರಿಕಾ 159 ರನ್​ಗಳಿಗೆ ಆಲೌಟ್​ ಆಗಿ ಬಿಡ್ತು. ಭಾರತದ ಪರ ಬೂಮ್ರಾ 5, ಸಿರಾಜ್​, ಕುಲ್​​ದೀಪ್​ ತಲಾ 2 ಹಾಗೂ ಅಕ್ಷರ್​ ಪಟೇಲ್​ 1 ವಿಕೆಟ್​ ಕಬಳಿಸಿದ್ರು.
ಟೀಮ್​ ಇಂಡಿಯಾಗೆ ಸುಂದರ್​-ರಾಹುಲ್​ ಆಸರೆ
ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾ ಕೂಡ ಆರಂಭದಲ್ಲೇ ವಿಕೆಟ್​ ಕಳೆದುಕೊಳ್ತು. 3 ಬೌಂಡರಿ ಬಾರಿಸಿದ ಯಶಸ್ವಿ ಜೈಸ್ವಾಲ್​ ಜಸ್ಟ್​ 12 ರನ್​ಗಳಿಸಿ ನಿರ್ಗಮಿಸಿದ್ರು. ಬಳಿಕ ಕ್ರಿಸ್​ನಲ್ಲಿ ಜೊತೆಯಾಗಿರೋ ಕೆ.ಎಲ್​ ರಾಹುಲ್​, ವಾಷಿಂಗ್ಟನ್​ ಸುಂದರ್​ ಎಚ್ಚರಿಕೆಯ ಆಟದೊಂದಿಗೆ ತಂಡಕ್ಕೆ ಆಸರೆಯಾಗಿದ್ದಾರೆ.
59 ಎಸೆತ ಎದುರಿಸಿರೋ ರಾಹುಲ್​ 13, 38 ಎಸೆತ ಎದುರಿಸಿರೋ ವಾಷಿಂಗ್ಟನ್​ ಸುಂದರ್​ 6 ರನ್​ಗಳೊಂದಿಗೆ ಇಂದಿಗೆ ಕ್ರಿಸ್​ ಕಾಯ್ದುಕೊಂಡಿದ್ದಾರೆ. ಮೊದಲ ದಿನದ ಅಂತ್ಯಕ್ಕೆ 37 ರನ್​ಗಳಿಗೆ 1 ವಿಕೆಟ್​ ಕಳೆದುಕೊಂಡಿರೋ ಟೀಮ್​ ಇಂಡಿಯಾ 122 ರನ್​ಗಳ ಹಿನ್ನಡೆಯಲ್ಲಿದೆ.
ಇದನ್ನೂ ಓದಿ:ಮೊದಲ ಟೆಸ್ಟ್ ಮೊದಲ ದಿನವೇ 159 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್ : ಜಸಪ್ರೀತ್ ಬುಮ್ರಾ 5 ವಿಕೆಟ್ ಸಾಧನೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us