/newsfirstlive-kannada/media/media_files/2025/11/14/rcb-1-2025-11-14-12-58-03.jpg)
ಐಪಿಎಲ್ ಸಿಸನ್-19 ಪ್ಲೇಯರ್ಸ್​ ರಿಟೆನ್ಶನ್​​​​ ಡೆಡ್​​ಲೈನ್​ಗೆ ಕೌಂಟ್​ಡೌನ್ ಶುರುವಾಗಿದೆ. 10 ಫ್ರಾಂಚೈಸಿಗಳು ಬಲಿಷ್ಟ ತಂಡ ಕಟ್ಟಲು ತೆರೆ ಹಿಂದೆ ಕಸರತ್ತು ನಡೆಸ್ತಿವೆ. ಹಾಲಿ ಚಾಂಪಿಯನ್ RCB ಸಹ ರಿಲೀಸ್ ಆಟಗಾರರ ಲಿಸ್ಟ್ ರೆಡಿ ಮಾಡಿಕೊಂಡಿದ್ದು ವರ್ಷಾಂತ್ಯದಲ್ಲಿ ನಡೆಯಲಿರುವ ಆಟಗಾರರ ಹರಾಜಿಗಾಗಿ ಕಾಯ್ತಿದೆ.

ಇದನ್ನೂ ಓದಿ: ದರ್ಶನ್​ಗೆ ರಾಜಾತಿಥ್ಯ.. ವರ್ಷ ಕಳೆದರೂ ಇನ್ನೂ ಚಾರ್ಜ್​ಶೀಟ್ ಸಲ್ಲಿಕೆ ಆಗಿಲ್ಲ..!
ಮಾಹಿತಿಗಳ ಪ್ರಕಾರ, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಜೋಶ್ ಹೇಜಲ್​ವುಡ್, ಜಿತೇಶ್ ಶರ್ಮಾ ಅವರನ್ನು ಆರ್​ಸಿಬಿ ತಂಡದಲ್ಲಿಯೇ ಉಳಿಸಿಕೊಳ್ಳುವುದು ಪಕ್ಕಾ ಆಗಿದೆ. ಇನ್ನು ಯಾರನ್ನೆಲ್ಲ ರಿಲೀಸ್ ಮಾಡುತ್ತೆ ಅಂತಾ ನೋಡೋದಾದ್ರೆ ಪ್ರಮುಖವಾಗಿ ಲಿಯಾಮ್ ಲಿವಿಂಗ್​ಸ್ಟೋನ್, ಮಯಾಂಕ್ ಅಗರ್ವಾಲ್, ಲುಂಗಿ ಎನ್​ಗಿಡಿಯನ್ನು ಕೈಬಿಡಲಿದೆ ಎನ್ನಲಾಗಿದೆ.
ಜೊತೆಗೆ ರಸಿಕ್ ದಾರ್, ಯಶ್ ದಯಾಳ್, ನುವಾನ್ ತುಷಾರ ಅವರನ್ನೂ ಉಳಿಸಿಕೊಳ್ಳೋದು ಡೌಟ್​. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ್ಸ್​ನಲ್ಲಿ 75 ಲಕ್ಷ ರೂಪಾಯಿ ಬ್ಯಾಲೆನ್ಸ್​ ಇದೆ. ಆದ್ರೆ ಲಿವಿಂಗ್​ಸ್ಟೋನ್, ರಸಿಖ್ ದಾರ್, ಯಶ್ ದಯಾಳ್, ತುಷಾರ ಮತ್ತು ಎಂಗಿಡಿಯನ್ನ ರಿಲೀಸ್ ಮಾಡಿದ್ರೆ ಆರ್​ಸಿಬಿ ತನ್ನ ಬ್ಯಾಲೆನ್ಸ್ ಅನ್ನ 22.35 ಕೋಟಿ ರೂಪಾಯಿಗೆ ಏರಿಸಿಕೊಳ್ಳಲಿದೆ. ಈ ಹಣದಿಂದ ಡಿಸೆಂಬರ್​ನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಡಿಸೆಂಟ್ ಪ್ಲೇಯರ್​ಗಳನ್ನ ಖರೀದಿ ಮಾಡಬಹುದಾಗಿದೆ.
ಇದನ್ನೂ ಓದಿ:Bihar Election Result LIVE.. ಬಿಹಾರದಲ್ಲಿ ಮತ್ತೆ ನೀತೀಶ್ ಕುಮಾರ್ ಸಿಎಂ ಆಗೋದು ಪಕ್ಕಾ ಎಂದ ಫಲಿತಾಂಶ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us