/newsfirstlive-kannada/media/media_files/2025/11/14/bihar-election-result-2025-11-14-08-06-35.jpg)
Bihar Election Result LIVE : ಚುನಾವಣಾ ಆಯೋಗವು ಬಿಹಾರದ 18ನೇ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಮೊದಲ ಮತ್ತು ಎರಡನೇ ಹಂತದ ಮತದಾನವನ್ನು ನಡೆಸಿತು. 243 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ನಡೆಯುತ್ತಿದೆ. ಬಿಹಾರ ರಾಜ್ಯದಾದ್ಯಂತ 38 ಜಿಲ್ಲೆಗಳ 46 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಸರ್ಕಾರ ರಚನೆಗೆ 122 ಮ್ಯಾಜಿಕ್ ನಂಬರ್ ಆಗಿದೆ. ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ನಿಖರ ಮಾಹಿತಿ ಇಲ್ಲಿದೆ.
- Nov 14, 2025 10:38 IST
ವಿರೋಧ ಪಕ್ಷಗಳ ಅಸಂಬದ್ದತೆಗೆ ಸೋಲು, ಬಿಹಾರದ ಅಭಿವೃದ್ದಿಗೆ ಗೆಲುವು ಎಂದ ಜೆಡಿಯು!
ಬಿಹಾರ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಜೆಡಿಯು ಪಕ್ಷದ ಪಾಳಯದಲ್ಲಿ ಸಂತಸ, ಖುಷಿ ಮನೆ ಮಾಡಿದೆ. ಜೆಡಿಯು ನೇತೃತ್ವದ ಎನ್‌ಡಿಎಗೆ ಭರ್ಜರಿ ಗೆಲುವು ಸಿಗೋದು ಪಕ್ಕಾ ಆಗಿದೆ. ಇದರಿಂದಾಗಿ ವಿರೋಧ ಪಕ್ಷಗಳ ಅಸಂಬದ್ದತೆಗೆ ಸೋಲು ಆಗಿದೆ. ಬಿಹಾರದ ಅಭಿವೃದ್ದಿಗೆ ಗೆಲುವು ಸಿಗುತ್ತಿದೆ ಎಂದು ಜೆಡಿಯು ಟ್ವೀಟ್ ಮಾಡಿದೆ. ಈ ಮೂಲಕ ವಿರೋಧ ಪಕ್ಷಗಳಿಗೆ ಜೆಡಿಯು ಭರ್ಜರಿಯಾಗಿ ಟಾಂಗ್ ನೀಡಿದೆ.
आज विपक्ष की बकवास हार रही है… बिहार का विकास जीत रहा है।
— Janata Dal (United) (@Jduonline) November 14, 2025
आज कोई एक नहीं, पूरा बिहार जीत रहा है।#Election2025#Biharpic.twitter.com/CGphNGE7jf - Nov 14, 2025 10:34 IST
ಕಾಂಗ್ರೆಸ್ ನಿಂದಾಗಿ ಮಹಾಘಟಬಂಧನ್ ಗೆ ಸೋಲು! 61 ಕ್ಷೇತ್ರದಲ್ಲಿ ಸ್ಪರ್ಧಿಸಿ 14 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ!
ಬಿಹಾರದಲ್ಲಿ ಮಹಾಘಟಬಂಧನ್ 2020 ರಲ್ಲಿ ಮಾಡಿದ್ದ ತಪ್ಪುಗಳನ್ನೇ ಈ ಭಾರಿಯೂ ಮಾಡಿದೆ. 2020 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 70 ಕ್ಷೇತ್ರಗಳನ್ನು ನೀಡಲಾಗಿತ್ತು. ಆದರೇ, ಕಾಂಗ್ರೆಸ್ ಗೆದ್ದಿದ್ದು ಬರೀ 19 ಕ್ಷೇತ್ರ ಮಾತ್ರ. ಇನ್ನೂ ಈ ಭಾರಿಯೂ ಕಾಂಗ್ರೆಸ್ ನಾಯಕರು ಬಿಗಿ ಪಟ್ಟು ಹಿಡಿದು 61 ಕ್ಷೇತ್ರಗಳನ್ನು ಆರ್‌ಜೆಡಿಯಿಂದ ಪಡೆದು ಸ್ಪರ್ಧಿಸಿದ್ದರು. ಆದರೇ, ಕಾಂಗ್ರೆಸ್ ಈ ಭಾರಿ ಮತ್ತೆ ತನ್ನ ತೀರಾ ಕಳಪೆ ಸಾಧನೆ, ಪ್ರದರ್ಶನವನ್ನೇ ಮುಂದುವರಿಸಿದೆ. ಈ ಭಾರಿ ಕಾಂಗ್ರೆಸ್ ಪಕ್ಷ 14 ಕ್ಷೇತ್ರಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಿದೆ.
ಈ ಭಾರಿ ಆರ್‌ಜೆಡಿ ಪಕ್ಷ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಇವುಗಳ ಪೈಕಿ ಈಗ ಆರ್‌ಜೆಡಿ 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದರೇ, ಮೈತ್ರಿಕೂಟದಲ್ಲಿ ಎರಡನೇ ಅತಿ ಹೆಚ್ಚು ಸೀಟು ಪಡೆದ ಕಾಂಗ್ರೆಸ್ ಪಕ್ಷದ ಸಾಧನೆಯೇ ತೀರಾ ಕಳಪೆಯಾಗಿದೆ. ಇದರಿಂದಾಗಿ ಮಹಾಘಟಬಂಧನ್ 100ರ ಗಡಿಗೂ ಬರಲು ಸಾಧ್ಯವಾಗಿಲ್ಲ.
ಇನ್ನೂ ಈ ಭಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ಪಕ್ಷಗಳೆರಡೂ ತಲಾ 101 ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದವು. ಜೆಡಿಯು 75 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೇ, ಬಿಜೆಪಿ 73 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.
ಇನ್ನೂ 2020ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೇ, ಈ ಭಾರಿ ಜೆಡಿಯುಗೂ ಭರ್ಜರಿ ಲಾಭವಾಗಿದೆ. ಸಿಎಂ ನೀತೀಶ್ ಕುಮಾರ್ ಅವರ ಆರೋಗ್ಯ ಸರಿ ಇಲ್ಲ, ನೀತೀಶ್ ಕುಮಾರ್ ಮತ್ತೆ ಸಿಎಂ ಆಗಲ್ಲ ಎಂದು ಆರ್‌ಜೆಡಿ ಪ್ರಚಾರ ನಡೆಸಿದರೂ, ಕೂಡ ಜನರು ಜೆಡಿಯು ಪಕ್ಷವನ್ನು ಕೈ ಬಿಟ್ಟಿಲ್ಲ. ಜೆಡಿಯು ಪಕ್ಷವು ಈಗ ವಿಧಾನಸಭೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಯು 43 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೇ, ಈ ಭಾರಿ 75 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಕಳೆದ ಭಾರಿಗಿಂತ ಈ ಭಾರಿ ದೊಡ್ಡ ಲಾಭ ಜೆಡಿಯು ಗೆ ಆಗುತ್ತಿದೆ. - Nov 14, 2025 10:33 IST
ಭರ್ಜರಿ ಜಯಭೇರಿಯತ್ತ NDA ಮೈತ್ರಿಕೂಟ
/fit-in/580x348/filters:format(webp)/newsfirstlive-kannada/media/media_files/2025/11/14/bihar_assembly_result_2025-2025-11-14-10-32-16.png)
- Nov 14, 2025 10:14 IST
ಬಿಹಾರದಲ್ಲಿ ಮತ್ತೆ ನೀತೀಶ್ ಬರ್ತಿದ್ದಾರೆ ಎಂದು ಜೆಡಿಯು ಟ್ವೀಟ್
ಬಿಹಾರದಲ್ಲಿ ಮತ ಎಣಿಕೆ ಆರಂಭವಾದ ಬಳಿಕ ಪ್ರಾರಂಭಿಕ ಹಂತದಲ್ಲಿ ಎನ್‌ಡಿಎಗೆ ಭರ್ಜರಿ ಮುನ್ನಡೆ ಸಿಕ್ಕಿದೆ. ಮೊದಲ ಒಂದು ಗಂಟೆಯಲ್ಲೇ ಎನ್‌ಡಿಎ ಬಹುಮತದ ಮ್ಯಾಜಿಕ್ ನಂಬರ್ ಆದ 122 ಕ್ಷೇತ್ರಗಳಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಜೆಡಿಯು ಪಾಳಯದಲ್ಲಿ ಉತ್ಸಾಹ ಗರಿಗೆದರಲು ಕಾರಣವಾಗಿದೆ.
ಜೆಡಿಯು ಪಕ್ಷವು, ಬಿಹಾರದಲ್ಲಿ ಮತ್ತೆ ನೀತೀಶ್ ಕುಮಾರ್ ಜೀ ಸರ್ಕಾರ ಬರುತ್ತಿದೆ ಎಂದು ಟ್ವೀಟ್ ಮಾಡಿದೆ.
ಇನ್ನೂ ಮತ್ತೊಂದು ಟ್ವೀಟ್ ನಲ್ಲಿ ಬಿಹಾರದಲ್ಲಿ ಇಂದು ವಿರೋಧ ಪಕ್ಷಗಳು ಸೋಲುತ್ತಿವೆ. ಬಿಹಾರದ ಅಭಿವೃದ್ದಿಗೆ ಗೆಲುವಾಗುತ್ತಿದೆ. ಇಂದು ಯಾವುದೇ ಒಬ್ಬ ವ್ಯಕ್ತಿಯಲ್ಲ, ಇದು ಇಡೀ ಬಿಹಾರದ ಗೆಲುವು ಎಂದು ಜೆಡಿಯು ಟ್ವೀಟ್ ಮಾಡಿದೆ. ಜೆಡಿಯು ಪಕ್ಷ ಗೆಲುವು ಅನ್ನು ಸಂಭ್ರಮಿಸುತ್ತಿದೆ.बिहार है तैयार, फिर से आ रही है नीतीश जी की सरकार।#Bihar#NitishKumar#JDU#JanataDalUnited#25Se30FirSeNitishpic.twitter.com/tL7xLeZnqM
— Janata Dal (United) (@Jduonline) November 14, 2025 - Nov 14, 2025 09:59 IST
ಬಿಹಾರದಲ್ಲಿ ಮತ್ತೆ ಸ್ಟ್ರಾಂಗ್ ಆದ ಜೆಡಿಯು, ಬಿಜೆಪಿ!
ಬಿಹಾರದಲ್ಲಿ 2020 ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೇ, 2025ರ ವಿಧಾನಸಭಾ ಚುನಾವಣೆಯಲ್ಲಿ ಇದುವರೆಗೂ 167 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಕಳೆದ ಭಾರಿಗಿಂತ ಈ ಭಾರಿ ಹೆಚ್ಟಿನ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲುವ ಸುಳಿವು ಸಿಗುತ್ತಿದೆ.
ಕಳೆದ ಭಾರಿ ಜೆಡಿಯು 43 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಬಿಜೆಪಿ ಪಕ್ಷ 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಇನ್ನೂ ವಿಪಕ್ಷ ಆರ್‌ಜೆಡಿ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಆದರೇ, 2025ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 75 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 73 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಭಾರಿ ನೀತೀಶ್ ಕುಮಾರ್ ಅವರ ಜೆಡಿಯು ಪಕ್ಷವೇ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಕಾಣುತ್ತಿದೆ. - Nov 14, 2025 09:46 IST
ಪ್ರಶಾಂತ್ ಕಿಶೋರ್ ರ ಸುರಾಜ್ ಪಾರ್ಟಿಗೆ ಮೂರು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ
ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ನಾಯಕತ್ವದ ಜನ ಸುರಾಜ್ ಪಾರ್ಟಿ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಕೇವಲ 3 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಬಿಹಾರದಲ್ಲಿ ಯಾವುದೇ ಇಂಪ್ಯಾಕ್ಟ್ ಉಂಟು ಮಾಡುವಲ್ಲಿ ವಿಫಲವಾಗಿದೆ. ಪ್ರಶಾಂತ್ ಕಿಶೋರ್ ಕೂಡ ಖುದ್ದಾಗಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದರೇ, ಪ್ರಶಾಂತ್ ಕಿಶೋರ್ ಪಕ್ಷವು ವಿರೋಧ ಪಕ್ಷಗಳ ಮತಗಳನ್ನು ತನ್ನತ್ತ ಸೆಳೆದುಕೊಂಡು ಮಹಾಘಟಬಂಧನ್ ಗೆ ಹೊಡೆತ ನೀಡಿರುವ ಸಾಧ್ಯತೆ ಇದೆ. ಇದರಿಂದ ಜೆಡಿಯು, ಬಿಜೆಪಿಗೆ ಅನುಕೂಲವಾಗಿರಲೂಬಹುದು. ಚುನಾವಣಾ ರಣತಂತ್ರ ನಿಪುಣರಾಗಿ ಪ್ರಶಾಂತ್ ಕಿಶೋರ್ ಸಕ್ಸಸ್ ಆಗಿದ್ದಾರೆ. ಆದರೇ, ರಾಜಕಾರಣಿಯಾಗಿ ಮೊದಲ ಯತ್ನದಲ್ಲಿ ಸೋಲು ಅನುಭವಿಸಿದ್ದಾರೆ.
- Nov 14, 2025 09:41 IST
ಮೊಕಾಮಾ ಕ್ಷೇತ್ರದಲ್ಲಿ ಜೈಲಿನಲ್ಲಿರುವ ಜೆಡಿಯು ಪಕ್ಷದ ಅನಂತ್ ಸಿಂಗ್ ಗೆ ಮುನ್ನಡೆ
ಬಿಹಾರದ ಪಾಟ್ನಾದ ಮೊಕಾಮಾ ಕ್ಷೇತ್ರದಲ್ಲಿ ಜೆಡಿಯು ಪಕ್ಷದ ಅನಂತ್ ಸಿಂಗ್ ಮುನ್ನಡೆ ಸಾಧಿಸಿದ್ದಾರೆ. ಬಾಹುಬಲಿ ನಾಯಕ ಎಂದೇ ಹೆಸರಾಗಿರುವ ಅನಂತ್ ಸಿಂಗ್ ಮುನ್ನಡೆ ಸಾಧಿಸಿದ್ದು, ಎದುರಾಳಿ ಆರ್‌ಜೆಡಿ ಪಕ್ಷದ ವೀಣಾ ದೇವಿ ಹಿನ್ನಡೆ ಅನುಭವಿಸಿದ್ದಾರೆ. ಮೊದಲ ಸುತ್ತಿನಲ್ಲಿ 2,700 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಸುರಜಾಭಾನ್ ಸಿಂಗ್ ಪತ್ನಿ ವೀಣಾ ದೇವಿ, ಅನಂತ್ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ.
ಅನಂತ್ ಸಿಂಗ್ ಸದ್ಯ ಜೈಲಿನಲ್ಲಿದ್ದಾರೆ. ಅನಂತ್ ಸಿಂಗ್ ಪರವಾಗಿ ಮೊಕಾಮಾ ಕ್ಷೇತ್ರದಲ್ಲಿ ಜೆಡಿಯು ನಾಯಕ ಲಾಲನ್ ಸಿಂಗ್ ಪ್ರಚಾರದ ಹೊಣೆ ಹೊತ್ತಿಕೊಂಡಿದ್ದರು. ಜನ ಸುರಾಜ್ ಪಾರ್ಟಿಯ ಬೆಂಬಲಿಗನ ಕೊಲೆ ಕೇಸ್ ನಲ್ಲಿ ಅನಂತ್ ಸಿಂಗ್ ರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಇನ್ನೂ ಮೊಕಾಮಾ ಕ್ಷೇತ್ರದಲ್ಲಿ ಜೈಲಿನ ಕಂಬಿಗಳು ತುಂಡಾಗಲಿವೆ. ನಮ್ಮ ಸಿಂಹ ಹೊರಗೆ ಬರಲಿದೆ ಎಂಬ ಪೋಸ್ಟರ್ ಗಳು ಮೊಕಾಮಾ ಕ್ಷೇತ್ರದಲ್ಲಿ ರಾರಾಜಿಸುತ್ತಿವೆ. ಈ ಮೂಲಕ ಅನಂತ್ ಸಿಂಗ್ ಈ ಚುನಾವಣೆ ಗೆದ್ದು, ಜೈಲಿನಿಂದ ಹೊರ ಬರುತ್ತಾರೆ ಎಂದು ಬೆಂಬಲಿಗರು ಅನಂತ್ ಸಿಂಗ್ ಪರವಾಗಿ ಪೋಸ್ಟರ್ ಗಳನ್ನು ಹಾಕಿದ್ದಾರೆ. - Nov 14, 2025 09:34 IST
ಎನ್‌ಡಿಎಗೆ 152 ಕ್ಷೇತ್ರಗಳಲ್ಲಿ ಮುನ್ನಡೆ
ಬಿಹಾರದಲ್ಲಿ ಈಗ ಎನ್‌ಡಿಎ ಮುನ್ನಡೆಯ ಕ್ಷೇತ್ರಗಳ ಸಂಖ್ಯೆ 152 ಕ್ಕೇರಿಕೆಯಾಗಿದೆ. ಜೆಡಿಯು 64 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೇ, ಬಿಜೆಪಿ 66 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಎಲ್‌ಜೆಪಿ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಎನ್‌ಡಿಎ ನಲ್ಲಿರುವ ಇತರೆ ಸಣ್ಣ ಪಕ್ಷಗಳು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿವೆ.
ಇನ್ನೂ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ 74 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಆರ್‌ಜೆಡಿ 45 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೇ, ಕಾಂಗ್ರೆಸ್ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. - Nov 14, 2025 09:25 IST
139 ಸೀಟುಗಳಲ್ಲಿ ಮುನ್ನಡೆ ಸಾಧಿಸುತ್ತಿರುವ ಎನ್‌ಡಿಎ
ಬೆಳಿಗ್ಗೆ 9.20
ಬಿಹಾರದಲ್ಲಿ ಬಿರುಸಿನಿಂದ ಮತ ಎಣಿಕೆ ನಡೆಯುತ್ತಿದೆ. ಕ್ಷಣಕ್ಷಣಕ್ಕೂ ಫಲಿತಾಂಶ ರೋಚಕತೆಯತ್ತ ಸಾಗುತ್ತಿದೆ. ಎನ್‌ಡಿಎ ಗೆ ಮುನ್ನಡೆ ಸಿಕ್ಕಿರುವ ಸ್ಥಾನಗಳ ಸಂಖ್ಯೆ 139 ಕ್ಕೇರಿಕೆಯಾಗಿದೆ. ಜೆಡಿಯು ಮತ್ತು ಬಿಜೆಪಿ ಪಕ್ಷಗಳು ಕ್ರಮವಾಗಿ 59 ಮತ್ತು 58 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಎಲ್‌ಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಡಿಎ ನಲ್ಲಿರುವ ಇತರೆ ಪ್ರಾದೇಶಿಕ ಪಕ್ಷಗಳು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ಗೆ 66 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಿಕ್ಕಿದೆ. ಆರ್‌ಜೆಡಿ 45 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೇ, ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಗೆ ಈ ಭಾರಿಯೂ ಕಾಂಗ್ರೆಸ್ ಹೊರೆಯಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷದ ತೀರಾ ಕಳಪೆ ಪ್ರದರ್ಶನದ ಪರಿಣಾಮ ಮಹಾಘಟಬಂಧನ್ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ. ಜೊತೆಗೆ ತೇಜ್ ಪ್ರತಾಪ್ ಯಾದವ್ ರ ಜನಶಕ್ತಿ ಜನತಾದಳ ಕೂಡ ಆರ್‌ಜೆಡಿ ಗೆ ಕೆಲವೆಡೆ ಆರ್‌ಜೆಡಿ ಮತ ಇಬ್ಬಾಗಿಸಿ ಹೊಡೆತ ನೀಡಿದೆ. - Nov 14, 2025 09:06 IST
ಮ್ಯಾಜಿಕ್ ನಂಬರ್ ದಾಟಿದ NDA
ಬಿಹಾರನಲ್ಲಿ ಸರ್ಕಾರ ರಚಿಸಲು 122 ಮ್ಯಾಜಿಕ್ ನಂಬರ್ ಆಗಿದೆ. ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದಂತೆ ಎನ್‌ಡಿಎ ಒಕ್ಕೂಟ 122ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸುವ ವಿಶ್ವಾಸದಲ್ಲಿ ಬಿಜೆಪಿ, ಜೆಡಿಯು ಪಕ್ಷಗಳಿವೆ.
- Nov 14, 2025 08:45 IST
ವುಮೆನ್ ಪವರ್ಗೇಮ್!
ಸರ್ಕಾರ ರಚನೆಗೆ ಮಹಿಳಾ ಮತದಾರರ ನಿರ್ಣಾಯಕವಾಗಿದೆ. ಬಿಹಾರದಲ್ಲಿ 7.43 ಕೋಟಿ ಮತದಾರರಲ್ಲಿ 3.5 ಕೋಟಿ ಮಹಿಳೆಯರಿದ್ದಾರೆ. ಈ ಬಾರಿ 2.52 ಕೋಟಿ ಮಹಿಳೆಯರು, 2.47 ಕೋಟಿ ಪುರುಷರು ಮತ ಚಲಾವಣೆ ಆಗಿದೆ. 2010ರಿಂದ ಇಲ್ಲಿ ಮಹಿಳೆಯರ ಮತದಾನವು ನಿರಂತರವಾಗಿ ಪುರುಷರಿಗಿಂತ ಹೆಚ್ಚಾಗಿದೆ.
ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ :ಬಿಹಾರದಲ್ಲಿ ವುಮೆನ್ ಪವರ್ಗೇಮ್! ಮಹಿಳಾ ಮತದಾರರೇ ನಿರ್ಣಾಯಕ.. ಯಾಕೆ ಗೊತ್ತಾ?
- Nov 14, 2025 08:30 IST
ದಾಖಲೆ ಬರೆದ ಮತದಾನ
ಈ ಬಾರಿ ಚುನಾವಣೆಯಲ್ಲಿ ಮತದಾರ ಹೊಸ ದಾಖಲೆ ಬರೆದಿದ್ದಾನೆ. 2 ಹಂತಗಳಲ್ಲಿ ನಡೆದ ಮತದಾನ, ಶೇ 66.91 ಚಲಾವಣೆ ಆಗಿದೆ.
ದಾಖಲೆ ಬರೆದ ಮತದಾನ
- 2020ರ ವಿಧಾನಸಭಾ ಚುನಾವಣೆಗಿಂತ ಶೇ.12 ರಷ್ಟು ಹೆಚ್ಚಳ
- 2020ರಲ್ಲಿ ಶೇ 59.7ರಷ್ಟಿದ್ದ ಚಲಾವಣೆ, ಶೇ.12 ರಷ್ಟು ಏರಿಕೆ
- ಬಿಹಾರದಲ್ಲಿ ಒಟ್ಟು 7.5 ಕೋಟಿ ಜನ ತಮ್ಮ ಹಕ್ಕು ಚಲಾವಣೆ
- ಮೊದಲ ಹಂತದಲ್ಲಿ ಶೇ.69.04ರಷ್ಟು ಮಹಿಳಾ ಮತದಾನ
- ಕೇವಲ ಶೇ.61.56ರಷ್ಟು ಪುರುಷರು ಮತ ಚಲಾಯಿಸಿದ್ದಾರೆ
- 2ನೇ ಹಂತದಲ್ಲಿ ಶೇ.74.03ಕ್ಕೇರಿದ ಮಹಿಳೆಯರ ಮತದಾನ
- 2ನೇ ಹಂತದಲ್ಲಿ ಶೇ. 64.1ಕ್ಕೆ ಪುರುಷರ ಮತದಾನ ಕುಸಿತ
- ಒಟ್ಟು ಪುರುಷರು ಶೇ.62.8 ಮತ್ತು ಮಹಿಳೆಯರು ಶೇ.71.6
- ಶೇ. 9 ರಷ್ಟು ಭಾರಿ ವ್ಯತ್ಯಾಸ ಕಾಣಿಸಿದ ಲಿಂಗ ಅನುಪಾತ
- Nov 14, 2025 08:27 IST
122 ಮ್ಯಾಜಿಕ್ ನಂಬರ್
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲೂ ಮತ ಎಣಿಕೆಕಾರ್ಯ ಆರಂಭವಾಗಿದೆ. 38 ಜಿಲ್ಲೆಗಳಲ್ಲಿ ಏಕಾಕಾಲಕ್ಕೆ ಮತದಾನ ಶುರುವಾಗಿದ್ದು, 14 ಸಾವಿರ ಸಿಬ್ಬಂದಿ, 70ಕ್ಕೂ ಹೆಚ್ಚು ವೀಕ್ಷಕರ ನಿಯೋಜನೆ ಮಾಡಲಾಗಿದೆ. ಸಿಸಿಟಿವಿ ಕಣ್ಗಾವಲು ಜೊತೆ 3 ಹಂತದ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇನ್ನು, ರಾಜ್ಯದ ಹಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. AAP, JSP ಸ್ಪರ್ಧೆ, ಫೋಟೋ ಫಿನಿಶ್ ರಿಸಲ್ಟ್ ನಿರೀಕ್ಷೆ ಹೊಂದಿವೆ. 243 ಸಂಖ್ಯೆ ಬಲಾಬಲ ಹೊಂದಿರುವ ಬಿಹಾರ ವಿಧಾನಸಭೆಗೆ ಸರ್ಕಾರ ರಚನೆ ಮಾಡಲು 122 ಮ್ಯಾಜಿಕ್ ನಂಬರ್.
- Nov 14, 2025 08:22 IST
ಯಾರಿಗೆ ಮಣೆ..?
ಬಿಹಾರ ಚುನಾವಣೆಗೆ ಇವತ್ತು ಕ್ಲೈಮ್ಯಾಕ್ಸ್ ಸಿಗಲಿದೆ. ಎಲೆಕ್ಷನ್ ಫಲಿತಾಂಶಕ್ಕಾಗಿ ದೇಶವೇ ಕಾತರದಿಂದ ಕಾಯುತ್ತಿದ್ದು, ಮತದಾರ ಯಾರಿಗೆ ಮಣೆ ಹಾಕಿದ್ದಾನೆ ಎಂದು ತಿಳಿಯಲಿದೆ. ಈಗಾಗಲೇ ಕೌಂಟಿಂಗ್ಗೆ ಶುರುವಾಗಿದ್ದು, ಎಕ್ಸೈಟ್ಮೆಂಟ್ ಹೆಜ್ಜಾಗಿದೆ.
ರಾಜಕಾರಣದಲ್ಲಿ ಎದ್ದಿರುವ ಪ್ರಶ್ನೆಗಳು..?
- ಬಿಹಾರದಲ್ಲಿ ನವೆಂಬರ್ ಕ್ರಾಂತಿ ಗಾಳಿ ಬೀಸುತ್ತಾ?
- ವಿರೋಧಿಗಳ ಚಕ್ರವ್ಯೂಹ ಭೇದಿಸುತ್ತಾ ನಿತೀಶ್ ‘ಬಾಣ’?
- ಎನ್‌ಡಿಎಗೆ ಕತ್ತಲಕೂಪಕ್ಕೆ ತಳ್ಳಿ ಬೆಳಗುತ್ತಾ ಲಾಟೀನ್?
- ನಿತೀಶ್ಗೆ ಗೆಲುವಿನ ಹೂವಿನ ಹಾಸಿಗೆ ಹಾಸುತ್ತಾ ಬಿಜೆಪಿ?
- ತೇಜಸ್ವಿಗೆ ವರ ಆಗುತ್ತಾ ಶಾಪವಾಗುತ್ತಾ ‘ಹಸ್ತ’ಲಾಘವ?
- Nov 14, 2025 08:17 IST
ಪ್ರಮುಖ ಅಭ್ಯರ್ಥಿಗಳು
ಅಭ್ಯರ್ಥಿ
ಪಕ್ಷ
ಕ್ಷೇತ್ರ
ತೇಜಸ್ವಿ ಯಾದವ್ ಆರ್‌ಜೆಡಿ ರಾಘೋಪುರ ತೇಜ್ ಪ್ರತಾಪ್ ಯಾದವ್ ಆರ್‌ಜೆಡಿ ಮಹುಮಾ ವಿಜಯ್ ಕುಮಾರ್ ಸಿಜ್ಹಾ ಬಿಜೆಪಿ ಲಿಖಿಸರಾಯ್ ಸಾಮ್ರಾಟ್ ಚೌಧರಿ ಬಿಜೆಪಿ ತಾರಾಪುರ ಅನಂತ್ ಸಿಂಗ್ ಜೆಡಿಯು ಮೊಕಾಮಾ ಮೈಥಿಲಿ ಠಾಕೂರ್ ಬಿಜೆಪಿ ಅಲಿನಗರ - Nov 14, 2025 08:11 IST
ಮತ ಎಣಿಕೆ ಮೇಲೆ ಎಲ್ಲರ ಚಿತ್ತ
ಬಿಹಾರ ವಿಧಾನಸಭಾ ಚುನಾವಣೆಯ ಎರಡೂ ಹಂತಗಳಲ್ಲಿ ಭಾರೀ ಮತದಾನ ನಡೆದ ನಂತರ, ಎಲ್ಲರ ಕಣ್ಣುಗಳು ಇಂದಿನ ಮತ ಎಣಿಕೆಯ ಮೇಲೆ ನೆಟ್ಟಿವೆ. ಎನ್‌ಡಿಎ, ಮಹಾ ಮೈತ್ರಿಕೂಟ ಮತ್ತು ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ (jan suraaj party) ಎಲ್ಲವೂ ಸರ್ಕಾರ ರಚನೆಗಾಗಿ ಪೈಪೋಟಿ ನಡೆಸುತ್ತಿವೆ.
ಇದನ್ನೂ ಓದಿ: ಇವತ್ತು ಬಿಹಾರ ಚುನಾವಣಾ ಫಲಿತಾಂಶ.. ಯಾರಿಗೆ ಗೆಲುವಿನ ಹಾರ..?
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us