Advertisment

ಇವತ್ತು ಬಿಹಾರ ಚುನಾವಣಾ ಫಲಿತಾಂಶ.. ಯಾರಿಗೆ ಗೆಲುವಿನ ಹಾರ..?

ಚುನಾವಣಾ ಆಯೋಗವು ಬಿಹಾರದ 18ನೇ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಮೊದಲ ಮತ್ತು ಎರಡನೇ ಹಂತದ ಮತದಾನವನ್ನು ನಡೆಸಿತು. ಎಲ್ಲಾ 243 ಸ್ಥಾನಗಳ ಮತ ಎಣಿಕೆಯು ಇಂದು ನಡೆಯಲಿದೆ

author-image
Ganesh Kerekuli
Bihar elections
Advertisment
  • ಬಿಹಾರದಲ್ಲಿ ಅಭ್ಯರ್ಥಿಗಳ ಭವಿಷ್ಯ ಇವತ್ತು ನಿರ್ಧಾರ
  • ಯುವ ನಾಯಕನ ಕೊರಳಿಗೆ ಬೀಳುತ್ತಾ ಬಿ‘ಹಾರ’
  • ನಿತೀಶ್ ಕುಮಾರ್​​ಗೆ ಸಿಗುತ್ತಾ ಮತ್ತೊಮ್ಮೆ ಅಧಿಕಾರ?

Bihar Election Result:  ಚುನಾವಣಾ ಆಯೋಗವು ಬಿಹಾರದ 18ನೇ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಮೊದಲ ಮತ್ತು ಎರಡನೇ ಹಂತದ ಮತದಾನವನ್ನು ನಡೆಸಿತು. ಎಲ್ಲಾ 243 ಸ್ಥಾನಗಳ ಮತ ಎಣಿಕೆಯು ಇಂದು ನಡೆಯಲಿದೆ. ಬಿಹಾರ ರಾಜ್ಯದಾದ್ಯಂತ 38 ಜಿಲ್ಲೆಗಳ 46 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

Advertisment

ಸ್ಪರ್ಧಾ ಕಣದಲ್ಲಿ ಸ್ಟಾರ್​ ಕ್ಯಾಂಡಿಡೇಟ್​..? 

ತೇಜಸ್ವಿ ಯಾದವ್, ತೇಜ್​ಪ್ರತಾಪ್ ಯಾದವ್, ವಿಜಯ್ ಕುಮಾರ್ ಸಿನ್ಹಾ, ಲಖಿಸರಾಯ್, ಸಾಮ್ರಾಟ್ ಚೌಧರಿ, ಅನಂತ್ ಸಿಂಗ್, ಮೈಥಿಲಿ ಠಾಕೂರ್ ಸೇರಿದಂತೆ ಹಲವು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. 

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್​ನಲ್ಲಿ ಕ್ರಾಂತಿ ಬಿರುಗಾಳಿ.. ಸಚಿವ ಸಂಪುಟ ಪುನಾರಚನೆ ಯಾವಾಗ?

ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಮತದಾನ ಆಗಿದೆ. 67.13 ರಷ್ಟು ಮತದಾನವಾಗಿದೆ. ರಾಜ್ಯದ 243 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 2616 ಅಭ್ಯರ್ಥಿಗಳು  ಅದೃಷ್ಟದ ಪರೀಕ್ಷೆಗೆ ಇಳಿದಿದ್ದರು. ಇನ್ನು, ಚುನಾವಣೋತ್ತರ ಸಮೀಕ್ಷೆಗಳು ಎನ್​ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. 243 ಕ್ಷೇತ್ರದ ವಿಧಾನಸಭೆಗೆ ಸರ್ಕಾರ ರಚನೆಗೆ 122 ಮ್ಯಾಜಿಕ್ ನಂಬರ್ ಆಗಿದೆ. 

Advertisment

ಸಿಂಹಾಸನದ ದಾಖಲೆ

ಬಿಹಾರದ ಕೆಲವು ಕ್ಷೇತ್ರಗಳಲ್ಲಿ ಅಚ್ಚರಿ ಫಲಿತಾಂಶದ ಸಾಧ್ಯತೆ ಇದೆ. ನಿತೀಶ್​ಕುಮಾರ್ ಸತತ 10ನೇ ಬಾರಿ ಸಿಎಂ ಆಗುವ ನಿರೀಕ್ಷೆಯಲ್ಲಿದ್ದಾರೆ.  2000ರಿಂದ ಇಲ್ಲಿವರೆಗೆ 9 ಬಾರಿ ನಿತೀಶ್​​​ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, 10ನೇ ಬಾರಿಗೆ ಸಿಎಂ ಆಗುವ ನಿರೀಕ್ಷೆಯಲ್ಲಿದ್ದಾರೆ. ಇತ್ತ ಮಹಾಘಟ್ಬಂಧನ್​ ಅಧಿಕಾರಕ್ಕೆ ಬಂದ್ರೆ ತೇಜಸ್ವಿ ಮುಖ್ಯಮಂತ್ರಿ ಆಗಲಿದ್ದಾರೆ. 

ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡಿಗೆ ಭಾರೀ ಮುಖಭಂಗ, ತಮಿಳುನಾಡು ಅರ್ಜಿ ತಿರಸ್ಕೃತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bihar election Bihar Election Result
Advertisment
Advertisment
Advertisment