Advertisment

ರಾಜ್ಯ ಕಾಂಗ್ರೆಸ್​ನಲ್ಲಿ ಕ್ರಾಂತಿ ಬಿರುಗಾಳಿ.. ಸಚಿವ ಸಂಪುಟ ಪುನಾರಚನೆ ಯಾವಾಗ?

ಸಂಪುಟ ಪುನಾರಚನೆ ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ನಿರ್ಧರಿಸುತ್ತೆ ಎಂದ ಕುಣಿಗಲ್ ಶಾಸಕ ಡಾ.ರಂಗನಾಥ್ ಈ ಬಗ್ಗೆ ನಾನು ಉತ್ತರ ಕೊಡಲ್ಲ ಎಂದಿದ್ದಾರೆ. ಇನ್ನು ಸಚಿವ ಜಮೀರ್ ಹೇಳಿಕೆಗೂ ರಿಯಾಕ್ಷನ್ ಮಾಡಲ್ಲ ಎಂದಿದ್ದಾರೆ.

author-image
Ganesh Nachikethu
Updated On
ಪವರ್ ಶೇರಿಂಗ್ ಫೈಟ್​​ನಲ್ಲಿ ಭಾರೀ ಟ್ವಿಸ್ಟ್.. 2 ದಿನ ಸೈಲೆಂಟ್ ಆಗಿದ್ದ ಡಿಕೆಶಿ ದಿಢೀರ್ ದೆಹಲಿಗೆ ದೌಡು..!
Advertisment

ಬೆಂಗಳೂರು: ನವೆಂಬರ್ ಕ್ರಾಂತಿ ಚರ್ಚೆ ನಡುವೆ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸಕ್ಕೆ ಮುಹೂರ್ತ ನಿಗದಿಯಾಗಿದೆ.. ನವೆಂಬರ್ 15ರಂದು ಸಿಎಂ ಸಿದ್ದು ದಿಲ್ಲಿಯಾತ್ರೆ ಕೈಗೊಳ್ಳಲಿದ್ದಾರೆ. ಒಂದೇ ದಿನದ ಟೂರ್ ನಿಗದಿಯಾಗಿದ್ದು ಕಪಿಲ್ ಸಿಬಲ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೇ ಹೊತ್ತಲ್ಲಿ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಸುವ ವಿಚಾರ ಮುನ್ನಲೆಗೆ ಬಂದಿದೆ.

Advertisment

ನವೆಂಬರ್ 15ರಂದು ಸಿಎಂ ಸಿದ್ದರಾಮಯ್ಯ ದಿಲ್ಲಿಯಾತ್ರೆ!

ಸದ್ಯದಲ್ಲೇ ಸಂಪುಟದ ಪುನಾರಚನೆಯ ಕದನ ಕುತೂಹಲಕ್ಕೆ ಕ್ಲಾರಿಟಿ ಸಿಗುವ ಕಾಲ ಸನ್ನಿಹಿತವಾದಂತೆ ಭಾಸವಾಗ್ತಿದೆ. ಇಂಥದ್ದೊಂದು ಸಿಹಿಗಾಳಿ ಕಾಂಗ್ರೆಸ್ ವಲಯದಲ್ಲಿ ಬೀಸುವ ಲಕ್ಷಣ ಗೋಚರಿಸ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಹಾರ ಎಲೆಕ್ಷನ್ ಮುಗಿದ ಕೂಡಲೇ ಸಂಪುಟ ಪುನಾರಚನೆ ಅಂತ ಖುದ್ದು ಸಿದ್ದರಾಮಯ್ಯನವರೇ ಸುಳಿವು ನೀಡಿದ್ದರು. ಇದೀಗ ಬಿಹಾರ ಎಲೆಕ್ಷನ್​ ಕೂಡ ಮುಗಿದಿದ್ದು ಸಿಎಂ ಸಿದ್ದರಾಮಯ್ಯ ವೀಕೆಂಡ್​​ನಲ್ಲಿ ದೆಹಲಿ ಟೂರ್ ಕೈಗೊಂಡಿದ್ದಾರೆ. ಮೊದಲು 3 ದಿನ ಪ್ರವಾಸ ಅಂತ ಹೇಳಲಾಗಿತ್ತು. ಆದ್ರೀಗ ಪ್ರವಾಸ ಒಂದೇ ದಿನಕ್ಕೆ ಸೀಮಿತ ಆಗಿದೆ. ನವೆಂಬರ್ 15ರಂದು ಬೆಳಗ್ಗೆ ದೆಹಲಿಗೆ ಹೊರಡಲಿರುವ ಸಿಎಂ ಸಿದ್ದು, ಅಲ್ಲಿ, ಕಪಿಲ್ ಸಿಬಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅವತ್ತೇ ತಡರಾತ್ರಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.. ಆದ್ರೆ, ಸಿಎಂ ದೆಹಲಿಗೆ ಹೊರಟಿದ್ದೇ ತಡ ಸಂಪುಟ ಪುನಾರಚನೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ಸದ್ದಿಲ್ಲದೇ ದಿಲ್ಲಿಗೆ ಹೋಗಿ ಬಂದ ಸಾಹುಕಾರ್!

ಅತ್ತ ಸಿಎಂ ಸಿದ್ದರಾಮಯ್ಯಗೂ ಮೊದಲೇ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿ ಪ್ರವಾಸ ಕೈಗೊಂಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದಾರೆ. ನಾಯಕತ್ವ ಬದಲಾವಣೆ ಗೊಂದಲ, ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಸದ್ದಿಲ್ಲದೆ ದೆಹಲಿ ಪ್ರವಾಸ ಮಾಡಿರುವುದು ಕಾಂಗ್ರೆಸ್​ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ಆಗಿದೆ. ಆದ್ರೆ, ದೆಹಲಿ ಭೇಟಿಯಲ್ಲಿ ಅಂಥದ್ದೇನೂ ವಿಶೇಷತೆ ಏನಿಲ್ಲ ಎನ್ನುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ಸಂಪುಟ ಪುನಾರಚನೆ ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ನಿರ್ಧರಿಸುತ್ತೆ ಎಂದ ಕುಣಿಗಲ್ ಶಾಸಕ ಡಾ.ರಂಗನಾಥ್ ಈ ಬಗ್ಗೆ ನಾನು ಉತ್ತರ ಕೊಡಲ್ಲ ಎಂದಿದ್ದಾರೆ. ಇನ್ನು ಸಚಿವ ಜಮೀರ್ ಹೇಳಿಕೆಗೂ ರಿಯಾಕ್ಷನ್ ಮಾಡಲ್ಲ ಎಂದಿದ್ದಾರೆ.

Advertisment

ಒಟ್ಟಾರೆ ಸಂಪುಟ ವಿಸ್ತರಣೆ ಚೆಂಡು ಈಗ ಹೈಕಮಾಂಡ್ ಪಿಚ್​​​ನಲ್ಲಿದೆ. ಸಂಪುಟ ವಿಸ್ತರಣೆಗೆ ಹೈಕಮಾಂಡ್‌ ಸಮ್ಮತಿಸಿದ್ರೆ ಸಿದ್ದರಾಮಯ್ಯ ಸ್ಥಾನ ಗಟ್ಟಿಯಾಗಲಿದೆ. ಈ ಮಧ್ಯೆ ಡಿಕೆಶಿ ಮತ್ಯಾವ ದಾಳ ಉರುಳಿಸ್ತಾರೋ ಗೊತ್ತಿಲ್ಲ. ಆದ್ರೆ ಬಿಹಾರ ಎಲೆಕ್ಷನ್ ಬಳಿಕ ಎಂದಿದ್ದು ಮುಗಿದೋಗಿದೆ. ಕ್ಲೈಮ್ಯಾಕ್ಸ್ ಏನಾಗುತ್ತೆ ಅನ್ನೋದೇ ಸದ್ಯದ ಕುತೂಹಲ.

ಇದನ್ನೂ ಓದಿ: ಡೆಲ್ಲಿ ಕಾರ್​ ಬ್ಲಾಸ್ಟ್​​ ಕೇಸ್.. ಮೃತರ ಸಂಖ್ಯೆ 13ಕ್ಕೆ ಏರಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar
Advertisment
Advertisment
Advertisment