/newsfirstlive-kannada/media/media_files/2025/11/13/delhi-case-2-2025-11-13-20-00-20.jpg)
ರಕ್ತದಾಹಿಗಳ ದುಷ್ಟ ಕೃತ್ಯಕ್ಕೆ ಅಮಾಯಕರ ಬಲಿಯಾಗಿದೆ. ಕೆಂಪುಕೋಟೆ ಬಳಿ ಹರಿದ ನೆತ್ತರಿನ ಹರಿವು ಮತ್ತಷ್ಟು ಹೆಚ್ಚಾಗಿದೆ. ದೆಹಲಿ ಕಾರು ಬ್ಲಾಸ್ಟ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸ್ಫೋಟದ ತೀವ್ರತೆಗೆ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ. ಡಾ.ಉಮರ್ ಎಂಬ ಕಟುಕ ಎಲ್ಲೆಲ್ಲಿ ಓಡಾಟ ನಡೆಸಿದ್ದ.. ಅವನ ಪ್ಲಾನ್ ಏನಾಗಿತ್ತು ಅನ್ನೋದಕ್ಕೂ ಸಿಸಿಟಿವಿ ದೃಶ್ಯಗಳು ಸಾಕ್ಷ್ಯ ಒದಗಿಸಿವೆ.
ದೆಹಲಿ ಕಾರು ಸ್ಫೋಟ.. ಮೃತರ ಸಂಖ್ಯೆ 13ಕ್ಕೆ ಏರಿಕೆ!
ದೆಹಲಿ ಕಾರು ಸ್ಫೋಟ ಪ್ರಕರಣದಲ್ಲಿ ಸಾವು-ನೋವಿನ ಸಂಖ್ಯೆ ಹೆಚ್ಚಳವಾಗಿದೆ. ಘೋರ ಕೃತ್ಯದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಗಾಯಾಳು ಉಸಿರು ಚೆಲ್ಲಿದ್ದಾನೆ. ಕೆಂಪುಕೋಟೆಯ ಲಾಲ್ ಕಿಲಾ ಚೌಕ್ ಬಳಿ ಸಂಭವಿಸಿದ್ದ ಸ್ಫೋಟದಲ್ಲಿ 35 ವರ್ಷದ ಬಿಲಾಲ್ ಹಸನ್ ಎಂಬ ವ್ಯಕ್ತಿಯ ಶ್ವಾಸಕೋಶಕ್ಕೆ ಡ್ಯಾಮೇಜ್ ಆಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಈತನನ್ನ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಬಿಲಾಲ್ ಹಸನ್ ಸಾವನ್ನಪ್ಪಿದ್ದಾನೆ. ಈ ಮೂಲಕ ಕಾರು ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇನ್ನೂ ಮೂವರು ಗಾಯಾಳುಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಫೋಟದಲ್ಲಿ ಉಮರ್ ಸಾವನ್ನಪ್ಪಿರೋದು ದೃಢ
ಹುಂಡೈ i20 ಕಾರನ್ನ ಚಲಾಯಿಸಿಕೊಂಡು ಬಂದಿದ್ದ ಉಮರ್ ಕೂಡಾ ಸ್ಫೋಟದಲ್ಲಿ ಸತ್ತಿದ್ದಾನೆ ಅನ್ನೋದು ದೃಢಪಟ್ಟಿದೆ. ಕಾರಿನಲ್ಲಿ ಪತ್ತೆಯಾಗಿದ್ದ ಮೃತದೇಹದ ಡಿಎನ್‌ಎಯನ್ನ ಆತನ ಕುಟುಂಬದ ಜೊತೆ ಮ್ಯಾಚ್ ಮಾಡಲಾಗಿದೆ. ಈ ವೇಳೆ ಉಮರ್ ಮತ್ತು ಆತನ ಕುಟುಂಬ ಸದಸ್ಯರ ಡಿಎನ್‌ಎ ಜೊತೆ ಹೊಂದಾಣಿಕೆಯಾಗಿದೆ. ಹೀಗಾಗಿ ಸ್ಫೋಟ ನಡೆಸಿದ್ದು ಉಮರ್ ನಬಿಯೇ ಅನ್ನೋದು ಕನ್ಫರ್ಮ್ ಆಗಿದೆ.
ಸ್ಫೋಟದ ತೀವ್ರತೆಗೆ 500 ಮೀ. ದೂರ ಬಿದ್ದಿದ್ದ ಕೈ?
ರೆಡ್‌ಪೋರ್ಟ್ ಬಳಿ ಸಂಭವಿಸಿರೋ ಸ್ಫೋಟದ ತೀವ್ರತೆ ಹೇಗಿತ್ತು ಅನ್ನೋದಕ್ಕೆ ಮತ್ತೊಂದು ಸಿಸಿಟಿವಿ ದೃಶ್ಯ ಸಾಕ್ಷಿಯಾಗಿದೆ. ಇಡೀ ದೆಹಲಿಯನ್ನೇ ಸುತ್ತಾಕಿ ಬಂದಿದ್ದ ಡಾ. ಉಮರ್ ಕೆಂಪುಕೋಟೆ ಸಮೀಪದ ಸಿಗ್ನಲ್ ಬಳಿ ಸ್ಲೋ ಮೂವಿಂಗ್ ಟ್ರಾಫಿಕ್ ಮಧ್ಯೆ ಕಾರನ್ನ ನಿಲ್ಲಿಸಿದ್ದ. ಹೀಗೆ ನಿಲ್ಲಿಸಿದ್ದ ಕಾರು 6 ಗಂಟೆ 50 ನಿಮಿಷಕ್ಕೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹೇಗಿತ್ತು ಅಂದ್ರೆ ಬ್ಲಾಸ್ಟ್‌ನಲ್ಲಿ ವ್ಯಕ್ತಿಯೊಬ್ಬರ ಕೈ ತುಂಡಾಗಿ ಸುಮಾರು 500 ಮೀಟರ್​ ದೂರದಲ್ಲಿ ಬಿದ್ದಿತ್ತು. ಸ್ಫೋಟಗೊಂಡ ಸ್ಥಳದಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಶೌಚಾಲಯದ ಬಾಗಿಲ ಬಳಿ ಮೃತ ವ್ಯಕ್ತಿಯ ಮುಂಗೈ ಪತ್ತೆಯಾಗಿದೆ.
i20 ಕಾರು ಚಾಲನೆ.. ಬ್ಯಾಗ್‌ನಲ್ಲಿತ್ತು ಸ್ಫೋಟಕ!
ಡಾ.ಉಮರ್ ಎಂಬ ನರರಕ್ಕಸ ಅದೇನ್ ಪ್ಲಾನ್ ಮಾಡಿದ್ನೋ ಏನೋ? ನವೆಂಬರ್ 10ರಂದು ಹರಿಯಾಣದ ಫರಿದಾಬಾದ್‌ನಿಂದ i20 ಕಾರು ಹತ್ತಿ ಹೊರಟಿದ್ದ. ಹೀಗೆ ಫರಿದಾಬಾದ್‌ನಿಂದ ಬಂದ ಕಾರು ದೆಹಲಿಯನ್ನ ಪ್ರವೇಶ ಮಾಡಿರೋದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಬದರ್ಪುರ್ ಗಡಿ ಟೋಲ್‌ನ ಸಿಸಿಟಿವಿಯಲ್ಲಿ ಕಾರಿನ ದೃಶ್ಯದಲ್ಲಿ ಸೆರೆಯಾಗಿದೆ. ಈ ದೃಶ್ಯದಲ್ಲಿ ಕಾರಿನ ಹಿಂದಿನ ಸೀಟ್‌ನಲ್ಲಿ ಬ್ಯಾಗ್‌ವೊಂದು ಕಾಣಿಸುತ್ತಿದೆ. ಇದೇ ಬ್ಯಾಗ್‌ನಲ್ಲಿ ಉಮರ್ ಸ್ಫೋಟಕಗಳನ್ನ ತುಂಬಿಸಿಟ್ಟುಕೊಂಡು ಬಂದು ಕೆಂಪುಕೋಟೆ ಬಳಿ ಸ್ಫೋಟಿಸಿದ್ನಾ ಅನ್ನೋ ಸಂಶಯ ಮೂಡಿದೆ.
ಪ್ರತಿಯೊಂದು ದೃಶ್ಯಗಳು.. ಡಾ. ಉಮರ್‌ನ ಚಲನವಲನ ಗಮನಿಸಿದ್ರೆ ಕಾರಿನಲ್ಲಿದ್ದ ಸ್ಫೋಟಕ ಆಕಸ್ಮಿಕವಾಗಿ ಬ್ಲಾಸ್ಟ್ ಆಗಿಲ್ಲ ಅನ್ನೋ ಪ್ರಶ್ನೆ ಮೂಡದೇ ಇರಲ್ಲ. ಯಾಕಂದ್ರೆ ನವೆಂಬರ್ 10ರಂದು ಬೆಳಗ್ಗೆ 10 ಗಂಟೆಗೆ ಮನೆ ಬಿಟ್ಟಿದ್ದ ಉಮರ್ ಸ್ಫೋಟಕವನ್ನ ಎಲ್ಲಿ ಬೇಕಿದ್ರೂ ಅಡಗಿಸಿ ಇಡಬಹುದಿತ್ತು. ಆದ್ರೆ, ಕಾರಿನಲ್ಲೇ ಇಟ್ಕೊಂಡು ಸಂಜೆವರೆಗೂ ಸುತ್ತಾಡಿದ್ದ ಅಂದ್ರೆ ಅವನ ಪ್ಲಾನ್ ಸ್ಫೋಟಿಸೋದೆ ಆಗಿತ್ತು ಅನ್ನೋದು ಗೊತ್ತಾಗುತ್ತಿದೆ. ಕೆಂಪುಕೋಟೆಯೇ ಉಮರ್ ಎಂಬ ಸೈತಾನನ ಟಾರ್ಗೆಟ್ ಆಗಿತ್ತಾ? ಅನ್ನೋದು ತನಿಖೆಯ ಬಳಿಕ ಗೊತ್ತಾಗಬೇಕಿದೆ.
ಇದನ್ನೂ ಓದಿ: ಕಬ್ಬಿಗೆ 3500 ರೂ. ಬೆಂಬಲ ಬೆಲೆ ಕೊಡಲೇಬೇಕು.. ಸರ್ಕಾರದ ವಿರುದ್ಧ ಪಟ್ಟು ಬಿಡದೆ ರೈತರ ಹೋರಾಟ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us