/newsfirstlive-kannada/media/media_files/2025/11/08/sugarcane_farmers_protest_bagalkote-2025-11-08-07-35-19.jpg)
ಬೆಂಗಳೂರು: ರಾಜ್ಯದಲ್ಲಿ ಸಿಹಿ ಕಬ್ಬಿನ ಬೆಲೆಗಾಗಿ ಹೊತ್ತಿದ್ದ ಕಿಚ್ಚು ಇನ್ನೂ ಆರಿಲ್ಲ. ಈಗಾಗಲೇ ಸರ್ಕಾರ 3 ಸಾವಿರದ 300 ರೂ. ಘೋಷಣೆ ಮಾಡಿದೆ. ಇದನ್ನ ಕೆಲ ರೈತರು ಒಪ್ಪಿದ್ರೆ, ಇನ್ನೂ ಕೆಲ ಅನ್ನದಾತರು ನಮಗೆ 3 ಸಾವಿರದ 500 ರೂ. ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ವಿಜಯಪುರ, ಕಲಬುರ್ಗಿ ನಂತರ ಬಾಗಲಕೋಟೆ, ಬೀದರ್​ನಲ್ಲಿ ರೈತರ ಹೋರಾಟ ಮುಂದುವರೆದಿದ್ದು, ಪ್ರತಿಭಟನೆ ಮಾಡಿದ್ದಾರೆ.
ಕಬ್ಬಿಗೆ ₹3,500 ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ
ಬೆಳಗಾವಿಯ ಗುರ್ಲಪುರದ ಬಳಿಕ ಬಾಗಲಕೋಟೆಯಲ್ಲಿ ಶುರುವಾದ ರೈತಾಕ್ರೋಶ ಮೂರು ದಿನಗಳಾದ್ರೂ ತಣ್ಣಗಾಗಿಲ್ಲ. ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನೂರಾರು ರೈತರು ಇವತ್ತು ಮುಧೋಳ ಅಖಾಡಕ್ಕಿಳಿದಿದ್ದರು. ಕಸಬಾ ಜಂಬಗಿ ಕ್ರಾಸ್​ನಲ್ಲಿ ಹೆದ್ದಾರಿ ತಡೆದು, ರಸ್ತೆ ಮೇಲೆ ಮುಳ್ಳು ಕಂಠಿ ಹಾಕಿ ಪ್ರತಿಭಟನೆ ನಡೆಸಿದ್ರು.
ಅಷ್ಟೇ ಅಲ್ಲ, ರಸ್ತೆ ಮಧ್ಯೆಯೇ ಅಡುಗೆ ಮಾಡಿ ರೈತರು ಧರಣಿ ಕುಳಿತಿದ್ರು. ಸರ್ಕಾರ ಸ್ಪಂದಿಸುವವರೆಗೂ ನಾವು ಹೋರಾಟ ನಿಲ್ಲಿಸಲ್ಲ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು. ಅಲ್ಲದೇ, ಪ್ರತಿಭಟನೆ ಮಾಡ್ತಿದ್ದ ಕಬ್ಬು ಬೆಳೆಗಾರರಿಗೆ ಕಸಬಾ ರೈತರು ಕೂಡ ಸಾಥ್ ನೀಡಿದ್ರು. ಹೆದ್ದಾರಿ ತಡೆದಿದ್ದ ಪರಿಣಾಮ ಅನೇಕ ವಾಹನ ಸವಾರರಿಗೆ ಕಿರಿಕಿರಿ ಉಂಟಾಯ್ತು. ಸ್ಥಳಕ್ಕೆ ಪೊಲೀಸ್ ವಾಹನ ಬಂದ್ರೂ ಪಟ್ಟು ಬಿಡದ ಪ್ರತಿಭಟನೆ ಮುಂದುವೆರೆಸಿದ್ರು.
ಬೀದರ್​ನಲ್ಲೂ ಕಬ್ಬು ಬೆಳೆಗಾರರ ಪ್ರತಿಭಟನೆ ತಾರಕಕ್ಕೇರಿತ್ತು. ಕೈಯಲ್ಲಿ ಕಬ್ಬು ಹಿಡಿದು ಬಂದಿದ್ದ ರೈತರು ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ರು. ಕೈಯಲ್ಲಿ ಸಿದ್ದರಾಮಯ್ಯ ಹಾಗೂ ಶಿವಾನಂದ್ ಪಾಟೀಲ್​ ಅವ್ರ ಶ್ರದ್ಧಾಂಜಲಿ ಬ್ಯಾನರ್ ಹಿಡಿದು ಆಕ್ರೋಶ ಹೊರಹಾಕಿದ್ರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬ್ಯಾನರ್​ ಇಳಿಸುವಂತೆ ಸೂಚನೆ ಕೊಟ್ರು. ಇಷ್ಟಾದ್ರೂ ರೈತರ ಆಕ್ರೋಶ ತಣ್ಣಗಾಗಲಿಲ್ಲ.
ಇದನ್ನೂ ಓದಿ: ಡೆಲ್ಲಿ ಕಾರ್​ ಬ್ಲಾಸ್ಟ್ ಹಿಂದಿರೋದು ಯಾರು? ಇವ್ರು ವೈದ್ಯರೋ ಸಮಾಜಘಾತುಕರೋ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us