/newsfirstlive-kannada/media/media_files/2025/11/13/delhi-case-1-2025-11-13-16-44-13.jpg)
ವೈಟ್ ಕಾಲರ್ ಟೆರರ್ ಮಾಡ್ಯೂಲ್.. ಉನ್ನತ ಸ್ಥಾನದಲ್ಲಿ ಇದ್ದುಕೊಂಡು ದೇಶದ ನೆಮ್ಮದಿ ಕೆಡಿಸುವ ಕೃತ್ಯದಲ್ಲಿ ತೊಡಗುತ್ತಾರೆ ಅಂದ್ರೆ ಸಹಿಸಲು ಅಸಾಧ್ಯ. ಇದೀಗ ಡೆಲ್ಲಿಯಲ್ಲಿ ನಡೆದಿರೋ ಬ್ಲಾಸ್ಟ್‌ನಲ್ಲಿ ಬಂಧನ ಆಗಿರೋರೆಲ್ಲಾ ವೈದ್ಯರೇ. ಸಮಾಜದ ಸ್ವಾಸ್ಥ್ಯಕ್ಕೆ ತಲೆ ಬಳಸಬೇಕಿದ್ದ ಇವರು ಸ್ಫೋಟಿಸುವ ಸಂಚಲ್ಲಿ ಇನ್ವಾಲ್ ಆಗಿಬಿಟ್ಟರು. ಅದರಲ್ಲೂ ಇವರೆಲ್ಲರಿಗೂ ಕಾರಸ್ಥಾನವಾಗಿದ್ದು ಒಂದು ವಿಶ್ವವಿದ್ಯಾಲಯ ಅನ್ನೋದೇ ಆಘಾತಕಾರಿ.
ವೈದ್ಯೋ ನಾರಾಯಣೋ ಹರಿ ಅಂತಾರೆ. ಆದ್ರೆ, ಉಗ್ರ ಮನಸ್ಥಿತಿ ಇದ್ರೆ ಅವನು ವೈದ್ಯ ಅಲ್ಲ.. ಮನುಷ್ಯಜನ್ಮದಲ್ಲಿ ಹುಟ್ಟೋದಕ್ಕೂ ನಾಲಾಯಕ್. ಈಗ ಡೆಲ್ಲಿಯಲ್ಲಿ ನಡೆದಿರೋ ಭೀಕರ ದುರಂತದ ಹಿಂದೆ ಬಿಳಿ ಕೋಟ್ ಧರಿಸಿರೋ ಡಾಕ್ಟರ್‌ಗಳ ಕೈವಾಡ ಇರೋದು ಜಗಜ್ಜಾಹೀರಾಗಿದೆ.
ದೆಹಲಿ ಕಾರ್ ಬ್ಲಾಸ್ಟ್.. 6 ಮಂದಿ ವೈದ್ಯರ ಬಂಧನ!
ಅಕ್ಷರಸ್ಥರ ತಪ್ಪು ನಡೆ ಸಮಾಜಕ್ಕೆ ಮಾರಕ.. ಇದಕ್ಕೆ ಡೆಲ್ಲಿಯಲ್ಲಿ ನಡೆದಿರೋ ಸ್ಫೋಟ ಪ್ರಕರಣ ಸಾಕ್ಷಿಯಾಗಿದೆ. ವೈಟ್‌ಕಾಲರ್ ಟೆರರ್ ಮಾಡ್ಯೂಲ್‌ಗಳೇ ಅಮಾಯಕರ ಜೀವವನ್ನ ಬಲಿಪಡೆದಿರೋ ಸಂಶಯ ಮೂಡಿದೆ. ಡಾ. ಉಮರ್ ಓಡಿಸುತ್ತಿದ್ದ ಐ-20 ಕಾರು ಬ್ಲಾಸ್ಟ್ ಹಿಂದೆ ವೈದ್ಯ ವೃತ್ತಿ ಮಾಡ್ತಿದ್ದವರ ಹೆಸರೇ ಕೇಳಿಬಂದಿದೆ. ಈ ಎಲ್ಲಾ ವೈದ್ಯರಿಗೂ ಅಲ್ ಪಲಾಹ್ ವಿಶ್ವವಿದ್ಯಾಲಯದ ಜೊತೆಗಿದ್ದ ನಂಟು ತೆರೆದುಕೊಂಡಿದೆ.
ವಿವಿ ಜೊತೆ ವೈದ್ಯರ ನಂಟು!
ದೆಹಲಿ ಕಾರು ಸ್ಫೋಟ ಕೇಸ್‌ನಲ್ಲಿ ಇದುವರೆಗೂ 6 ಮಂದಿಯ ಬಂಧಿಸಲಾಗಿದೆ. ಬಂಧಿತರೆಲ್ಲರೂ ವೈದ್ಯರಾಗಿದ್ದು, ಅಲ್ ಫಲಾಹ್ ವಿವಿಯ ಜೊತೆ ನಂಟು ಹೊಂದಿದ್ದಾರೆ. ಡಾ. ಆದಿಲ್ ಅಹಮದ್ ರಾಥರ್, ಡಾ. ಶಹೀನ್ ಶಾಹಿದ್, ಡಾ. ಮೊಹಿಯುದ್ದೀನ್ ಸೈಯದ್, ಡಾ. ಪರ್ವೇಜ್ ಅನ್ಸಾರಿ, ಡಾ. ಮುಜಾಮಿಲ್ ಶಕೀಲ್, ಡಾ. ಸಾಜದ್ ಮಾಲ್ಲ ಅರೆಸ್ಟ್ ಆಗಿರೋ ವೈದ್ಯರು. ಇದರಲ್ಲಿ ಡಾ. ಉಮರ್ ನಬಿ ಕಾರು ಬ್ಲಾಸ್ಟ್‌ನಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಎಲ್ಲಾ ವೈದ್ಯರು ಪ್ರತಿನಿತ್ಯ ಸಂಜೆ ಮೆಡಿಕಲ್ ಕಾಲೇಜ್​​ನಲ್ಲಿ ಮೀಟಿಂಗ್ ಮಾಡ್ತಿದ್ರು ಎಂಬ ಮಾಹಿತಿ ಇದೆ. ವಿವಿ ಸನಿಹದಲ್ಲೇ ವಾಸಿಸುತ್ತಿದ್ದ ಮೌಲ್ವಿ ಇರ್ಫಾನ್ ಅಹ್ಮದ್ ಇವರೆಲ್ಲಾ ಸಂಪರ್ಕ ಹೊಂದಿದ್ರು. ಟೆಲಿಗ್ರಾಂ ಆಪ್‌ನಲ್ಲಿ ಗ್ರೂಪ್ ರಚಿಸಿ ‘ಉಗ್ರ’ ವಿಚಾರ ವಿನಿಮಯ ಮಾಡ್ತಿದ್ರು ಎಂಬ ಸಂಗತಿ ಹೊರಬಿದ್ದಿದೆ.
ಉಗ್ರ ಡಾಕ್ಟರ್‌ಗಳಿಗೆ ಅಲ್ ಫಲಾಹ್ ಯೂನಿವರ್ಸಿಟಿ ಕಾರಸ್ಥಾನವಾಗಿತ್ತಾ ಎಂಬ ಪ್ರಶ್ನೆ ಮೂಡಿದೆ. ಅಲ್ ಫಲಾಹ್ ವಿವಿಯ ಉಪಕುಲಪತಿ ಇದನ್ನ ಅಲ್ಲಗಳೆದಿದ್ದಾರೆ. ಪತ್ರಿಕಾ ಪ್ರಕಟಣೆ ಹೊರಡಿಸಿ ವಿಶ್ವವಿದ್ಯಾಲಯದ ಮೇಲೆ ಬಂದಿರೋ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಉಗ್ರರಿಗೂ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಲ್ಯಾಬೋರೆಟರಿಗಳು MBBS ವಿದ್ಯಾರ್ಥಿಗಳು ಮತ್ತು ಇತರ ಅಧಿಕೃತ ಕೋರ್ಸ್‌ಗಳ ಶೈಕ್ಷಣಿಕ ಮತ್ತು ತರಬೇತಿ ಅಗತ್ಯಗಳಿಗಾಗಿ ಮಾತ್ರ ಬಳಸಲಾಗುತ್ತಿದೆ. ಸ್ಫೋಟಕಕ್ಕೆ ಬಳಸುವ ಯಾವುದೇ ರಾಸಾಯನಿಕಗಳನ್ನ ವಿಶ್ವವಿದ್ಯಾಲಯದಲ್ಲಿ ಬಳಸಲಾಗುತ್ತಿಲ್ಲ. ಈ ರೀತಿಯ ಆರೋಪಗಳೆಲ್ಲಾ ಸುಳ್ಳು. ಈ ಸಂಬಂಧ ಯಾವುದೇ ರೀತಿಯ ತನಿಖೆ ನಡೆದ್ರೂ ವಿವಿ ಸಹಕರಿಸುತ್ತದೆ. ದೆಹಲಿಯಲ್ಲಿ ನಡೆದಿರೋ ಘಟನೆಯನ್ನ ನಾವು ಖಂಡಿಸುತ್ತೇವೆ ಎಂದಿದ್ದಾರೆ ಕುಲಪತಿ ಪ್ರೊ. ಡಾ. ಭೂಪಿಂದರ್ ಕೌರ್ ಆನಂದ್.
ವೈದ್ಯಕೀಯ ವೃತ್ತಿಯಲ್ಲಿ ಇರೋರೆ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ರೆ ದೇಶ ಉಳಿಯೋದುಂಟಾ? ಇಂಥಹ ದೇಶದ್ರೋಹಿಗಳು ಭಾರತ ಮಾತೆಯ ಮಡಿಲಲ್ಲಿ ಇನ್ನು ಅದೆಷ್ಟು ಮಂದಿ ಅಡಗಿದ್ದಾರೋ? ಅವರನ್ನೆಲ್ಲಾ ಹಿಡಿದು ಹೊಸಕಿಹಾಕಿದ್ರೆ ಮಾತ್ರ ದೇಶ ಉಳಿಯೋಕೆ ಸಾಧ್ಯ.
ಇದನ್ನೂ ಓದಿ: 51 ಸಾವಿರ ಮಂದಿಗೆ ಕೇಂದ್ರ ಸರ್ಕಾರಿ ಉದ್ಯೋಗ.. ಪ್ರಧಾನಿ ಮೋದಿಯಿಂದಲೇ ನೇಮಕಾತಿ ಪತ್ರ ವಿತರಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us