/newsfirstlive-kannada/media/media_files/2025/09/21/modi-7-2025-09-21-17-14-40.jpg)
ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ಪಡೆಯೋ ಆಸೆ ಇದ್ದೇ ಇರುತ್ತೆ. ಅದರಲ್ಲೂ ಸೈನ್ಸ್​​, ಕಾಮರ್ಸ್​​, ಆರ್ಟ್ಸ್ ಯಾವುದೇ ವಿಷಯ ಓದಿರಲಿ. ಎಲ್ಲರಿಗೂ ಸರ್ಕಾರಿ ಕೆಲಸ ಬೇಕೇ ಬೇಕು. ಅಷ್ಟರಮಟ್ಟಿಗೆ ಜನ ಸರ್ಕಾರಿ ಕೆಲಸದ ಹಿಂದೆ ಬಿದ್ದಿದ್ದಾರೆ.
ಹಗಲು ರಾತ್ರಿ ನಿದ್ದೆಗೆಟ್ಟು ಓದುತ್ತಾರೆ. ಆರೋಗ್ಯ ಕೆಟ್ರೂ ಪರ್ವಾಗಿಲ್ಲ ಸರ್ಕಾರಿ ಕೆಲಸ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಉದ್ಯೋಗದಲ್ಲಿ ಸಿಗೋ ಭದ್ರತೆ. ಭಾರತೀಯರಲ್ಲಿ ಸರ್ಕಾರಿ ಕೆಲಸದ ಮೇಲೆ ವ್ಯಾಮೋಹಕ್ಕೆ ಕಾರಣ ಒಂದಿದೆ. ಜಾಬ್ ಸೆಕ್ಯೂರಿಟಿ ಒಂದು ದೊಡ್ಡ ಅಂಶವಾದರೆ, ಉದ್ಯೋಗದಿಂದ ಸಿಗುವ ಇತರೆ ಸೌಲಭ್ಯಗಳು ಜನರನ್ನು ಆಕರ್ಷಿಸುತ್ತವೆ. ಹೀಗೆ ಸರ್ಕಾರಿ ಉದ್ಯೋಗಕ್ಕಾಗಿ ಎದುರು ನೋಡುತ್ತಿದ್ದವರಿಗೆ ಪ್ರಧಾನಿ ನರೇಂದ್ರ ಮೋದಿಯವ್ರು ಗುಡ್​ನ್ಯೂಸ್​ ಕೊಟ್ಟಿದ್ದಾರೆ.
ಪ್ರಧಾನಿ ಮೋದಿ ಕೊಟ್ಟ ಗುಡ್​ನ್ಯೂಸ್​ ಏನು?
ತಮ್ಮ ಮಹತ್ವಾಕಾಂಕ್ಷಿ ಉದ್ಯೋಗ ಸೃಷ್ಟಿ ಆಂದೋಲನದ ಭಾಗವಾಗಿ ನರೇಂದ್ರ ಮೋದಿ ಅವರು ಸುಮಾರು 51,000ಕ್ಕೂ ಹೆಚ್ಚು ಜನರಿಗೆ ಕೇಂದ್ರ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ವಿತರಿಸಿದರು. ಇತ್ತೀಚೆಗೆ ನಡೆದ 17ನೇ ರೋಜಗಾರ್ ಮೇಳದಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಮೋದಿ, ಈ ಸಂಖ್ಯೆಯಿಂದಾಗಿ ಒಟ್ಟು ಉದ್ಯೋಗಾವಕಾಶದ ಸಂಖ್ಯೆ 11 ಲಕ್ಷಕ್ಕೆ ತಲುಪಿದೆ ಎಂದರು. ಮುಂದಿನ ದಿನಗಳಲ್ಲೂ ಲಕ್ಷಾಂತರ ಮಂದಿಗೆ ನೇಮಕಾತಿ ಪತ್ರ ನೀಡಲಾಗುವುದು ಎಂದರು.
ಭಾರತ ಭರವಸೆಯೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುತ್ತಿದೆ. ವಿದೇಶಿ ನೀತಿಗಳನ್ನು ಸಹ ಭಾರತೀಯ ಯುವಕರ ಅಭಿರುಚಿಗೆ ಅನುಗುಣವಾಗಿ ರೂಪಿಸಲಾಗುತ್ತಿದೆ. ಇಂದಿನ ಜಾಗತಿಕ ಒಪ್ಪಂದಗಳು ಯುವಕರ ತರಬೇತಿ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶ ಹೊಂದಿವೆ ಎಂದರು.
ಕಳೆದ ಜುಲೈನಲ್ಲಿ ನಡೆದ 16ನೇ ಉದ್ಯೋಗ ಮೇಳದಲ್ಲೂ 51,000 ಜನರಿಗೆ ನೇಮಕಾತಿ ಪತ್ರವನ್ನು ನೀಡಿದ್ದೆವು. ಮುಂದೆ ಕೂಡ ಅರ್ಹರನ್ನು ಗುರುತಿಸಿ ಕೇಂದ್ರ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ನೀಡಲಿದ್ದೇವೆ ಎಂದರು ಮೋದಿ.
ಇದನ್ನೂ ಓದಿ: ಫರಿದಾಬಾದ್ ಡಾಕ್ಟರ್ ಟೆರ* ಮಾಡ್ಯೂಲ್ ಬೆಳಕಿಗೆ ಬರಲು ಕಾರಣ ಇದೇ ಅಧಿಕಾರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us