Advertisment

ಬಿಹಾರದಲ್ಲಿ ವುಮೆನ್​​ ಪವರ್​ಗೇಮ್​! ಮಹಿಳಾ ಮತದಾರರೇ ನಿರ್ಣಾಯಕ.. ಯಾಕೆ ಗೊತ್ತಾ?

ಚುನಾವಣಾ ಆಯೋಗವು ಬಿಹಾರದ 18ನೇ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಮೊದಲ ಮತ್ತು ಎರಡನೇ ಹಂತದ ಮತದಾನವನ್ನು ನಡೆಸಿತು. 243 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ನಡೆಯುತ್ತಿದೆ.

author-image
Ganesh Kerekuli
bihar election result (1)
Advertisment

ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಬಿಹಾರದಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಅನ್ನೋದು ತಿಳಿಯಲಿದೆ.  

Advertisment

ವುಮೆನ್​​ ಪವರ್​ಗೇಮ್​!

ಸರ್ಕಾರ ರಚನೆಗೆ ಮಹಿಳಾ ಮತದಾರರ ನಿರ್ಣಾಯಕವಾಗಿದೆ. ಬಿಹಾರದಲ್ಲಿ 7.43 ಕೋಟಿ ಮತದಾರರಲ್ಲಿ 3.5 ಕೋಟಿ ಮಹಿಳೆಯರಿದ್ದಾರೆ. ಈ ಬಾರಿ 2.52 ಕೋಟಿ ಮಹಿಳೆಯರು, 2.47 ಕೋಟಿ ಪುರುಷರು ಮತ ಚಲಾವಣೆ ಆಗಿದೆ. 2010ರಿಂದ ಇಲ್ಲಿ ಮಹಿಳೆಯರ ಮತದಾನವು ನಿರಂತರವಾಗಿ ಪುರುಷರಿಗಿಂತ ಹೆಚ್ಚಾಗಿದೆ. 

ಇದನ್ನೂ ಓದಿ:Bihar Election Result LIVE.. 10ನೇ ಬಾರಿಗೆ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವ ನಿತೀಶ್ ಕುಮಾರ್..!

ಹೀಗಾಗಿ ಎರಡೂ ಮೈತ್ರಿಕೂಟಗಳು ಮಹಿಳಾ ಕಲ್ಯಾಣ ಭರವಸೆಗಳನ್ನು ನೀಡಿವೆ. ಹಣ ವರ್ಗಾವಣೆ, ಶಿಕ್ಷಣಕ್ಕೆ ಸಹಾಯಧನ, ಮದ್ಯ ನಿಷೇಧಕ್ಕೆ ಒಲವು ತೋರಿವೆ. RJD ಜಂಗಲ್​ರಾಜ್ ನೆನಪಿಸಿ ಅಸುರಕ್ಷಿತ ಅಂತ NDA ಪ್ರಚಾರ ಮಾಡಿರೋದನ್ನು ಸ್ಮರಿಸಬಹುದು. 

Advertisment

ಬಿಹಾರದಲ್ಲಿ ಸ್ತ್ರೀಶಕ್ತಿ

  • ಈ ಬಾರಿ ಮಹಿಳಾ ಮತದಾರರು ಯಾರಿಗೆ ಜೈ ಅಂತಾರೆ ಅನ್ನೋ ಚರ್ಚೆ
  • ನಿರ್ಲಕ್ಷ್ಯಕ್ಕೆ ಒಳಪಟ್ಟ ಒಂದು ವರ್ಗವನ್ನ ಮತಬ್ಯಾಂಕ್​ ಆಗಿಸಿದ್ದೇ ನಿತೀಶ್​
  • ಜಾತಿ ತಟಸ್ಥ ಮಹಿಳಾ ಮತಬ್ಯಾಂಕ್​​ ಸೃಷ್ಟಿಸಿದ್ದೆ ಸಿಎಂ ನಿತೀಶ್​​ಕುಮಾರ್​​
  • 2005ರಿಂದ ಇಲ್ಲಿವರೆಗೆ ಮಹಿಳೆಯರಿಗಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ
  • ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ
  • ವಿದ್ಯಾರ್ಥಿನಿಯರಿಗೆ ಬೈಸಿಕಲ್ ಮತ್ತು ಸಮವಸ್ತ್ರಗಳ ಯೋಜನೆ ಜಾರಿ
  • ಬಿಹಾರ ಸರ್ಕಾರಿ ಉದ್ಯೋಗಗಳಲ್ಲಿ ಶೇ.35ರಷ್ಟು ಮಹಿಳಾ ಮೀಸಲಾತಿ
  • ಈ ಬಾರಿ ಸಿಎಂ ಮಹಿಳಾ ರೋಜ್‌ಗಾರ್ ಯೋಜನೆ ಗೇಮ್​​ಚೇಂಜರ್​​ 
  • ಮಹಿಳಾ ರೋಜ್‌ಗಾರ್ ಅಡಿಯಲ್ಲಿ ₹10,000 ನೀಡಿದ್ದ ನಿತೀಶ್​​ ಸರ್ಕಾರ
  • ಮಹಿಳಾ ಪರ ಕ್ರಮಗಳಿಂದ ಎನ್​​ಡಿಎಗೆ ಅನುಕೂಲಕರ ಅನ್ನೋ ಚರ್ಚೆ
  • ತೇಜಸ್ವಿ ಯಾದವ್​​​ ಭರವಸೆಗಳು ಸಹ ಮಹಿಳೆಯರಲ್ಲಿಯೂ ಜನಪ್ರಿಯತೆ 

ಇದನ್ನೂ ಓದಿ: Bihar Election Result LIVE.. 10ನೇ ಬಾರಿಗೆ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವ ನಿತೀಶ್ ಕುಮಾರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bihar election Bihar Election Result Nitish Kumar prashant kishor tej pratap yadav
Advertisment
Advertisment
Advertisment