ದರ್ಶನ್​ಗೆ ರಾಜಾತಿಥ್ಯ.. ವರ್ಷ ಕಳೆದರೂ ಇನ್ನೂ ಚಾರ್ಜ್​ಶೀಟ್ ಸಲ್ಲಿಕೆ ಆಗಿಲ್ಲ..!

ಕೆಲವು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಚಾರ ದೊಡ್ಡಮೊಟ್ಟದಲ್ಲಿ ಚರ್ಚೆ ಆಗ್ತಿದೆ. ಅದೇ ರೀತಿ ಕಳೆದ ವರ್ಷ ನಟ ದರ್ಶನ್​ಗೆ ರಾಜಾತಿಥ್ಯ ನೀಡಿದ ಪ್ರಕರಣವೂ ಭಾರೀ ಚರ್ಚೆಗೆ ಕಾರಣವಾಗಿತ್ತು.

author-image
Ganesh Kerekuli
Darshan
Advertisment

ಬೆಂಗಳೂರು: ಕೆಲವು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಚಾರ ದೊಡ್ಡಮೊಟ್ಟದಲ್ಲಿ ಚರ್ಚೆ ಆಗ್ತಿದೆ. ಅದೇ ರೀತಿ ಕಳೆದ ವರ್ಷ ನಟ ದರ್ಶನ್​ಗೆ ರಾಜಾತಿಥ್ಯ ನೀಡಿದ ಪ್ರಕರಣವೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರಕರಣ ಬೆಳಕಿಗೆ ಬಂದು ವರ್ಷ ಕಳೆದರೂ ಇನ್ನೂ ಪೊಲೀಸರು ಚಾರ್ಜ್​​ಶೀಟ್ ಸಲ್ಲಿಕೆ ಮಾಡಿಲ್ಲ.

ದರ್ಶನ್ ರಾಜಾತಿಥ್ಯ ಸಂಬಂಧ 3 ಪ್ರಕರಣ 

2024ರ ಸೆಪ್ಟೆಂಬರ್​ನಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಮೊದಲ ಪ್ರಕರಣ ದರ್ಶನ್ ಕೈಗೆ ಸಿಗರೇಟ್ ಬಂದಿದ್ದರ ಬಗ್ಗೆ. ಎರಡನೇ ಪ್ರಕರಣದಲ್ಲಿ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡಿದ್ದರ ಬಗ್ಗೆ. ಮೂರನೇ ಪ್ರಕರಣದಲ್ಲಿ ಮಧ್ಯರಾತ್ರಿ ವಸ್ತುಗಳನ್ನ ಸಾಗಿಸಿದ್ದರ ಬಗ್ಗೆ. 

ಎರಡು ಕೇಸ್​ನಲ್ಲಿ ದರ್ಶನ್ ಸೇರಿದಂತೆ ಕೆಲ ರೌಡಿಗಳು ಆರೋಪಿ ಯಾಗಿದ್ರೆ, ಮೂರನೇ ಕೇಸ್‌ನಲ್ಲಿ ಓರ್ವ ಕೈದಿ, ಮೂವರು ಜೈಲಿನ ಅಧಿಕಾರಿ, ಸಿಬ್ಬಂದಿ ಆರೋಪಿಯಾಗಿದ್ದರು. ವರ್ಷ ಕಳೆದರೂ 3 ಪ್ರಕರಣಗಳ ಅಂತಿಮ ವರದಿ ಕೋರ್ಟ್​ಗೆ ಸಲ್ಲಿಕೆ ಆಗಿಲ್ಲ. 

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ನ ಹೃದಯ ಕದ್ದ ಈ ಚೆಲವೆ ಯಾರು?

ಮಾಹಿತಿಗಳ ಪ್ರಕಾರ, ಸರ್ಕಾರಿ ಅಭಿಯೋಜಕರ ಪರಿಶೀಲನೆಯಲ್ಲಿ ಚಾರ್ಜ್​ಶೀಟ್​ಗಳು ಇವೆ. ತನಿಖೆ ಆರಂಭಿಸಿದ 6 ತಿಂಗಳ ಬಳಿಕ ಜೈಲಾಧಿಕಾರಿಗಳ ವಿಚಾರಣೆ ತನಿಖೆಗೆ ಅನುಮತಿ ಸಿಕ್ಕಿತ್ತು.  ತನಿಖಾಧಿಕಾರಿಗಳು…ಜೈಲಿನ‌ ಅಧಿಕಾರಿ, ಸಿಬ್ಬಂದಿ ವರ್ಗ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದರು. 

ಜೈಲಿನ ಅಧಿಕಾರಿಗಳ ವಿರುದ್ದ ಪಿಸಿ ಆಕ್ಟ್ ಅಡಿಯಲ್ಲಿ ತನಿಖೆ ನಡೆಸಿದ್ದರು. ಮೂರು ಪ್ರಕರಣದಲ್ಲಿ ಅಧಿಕಾರಿಗಳ ಕೈವಾಡದ ಬಗ್ಗೆ ಸಾಕ್ಷ್ಯ ಲಭ್ಯವಾಗಿತ್ತು. ಈ ಪ್ರಕರಣಗಳ ಚಾರ್ಜ್ ಶೀಟ್ ಮಾತ್ರ ಇನ್ನೂ ಸಲ್ಲಿಕೆಯಾಗಿಲ್ಲ. ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಜೈಲಿನಲ್ಲಿ ಎಲ್ಲಾ ಖುಲ್ಲಾಂಖುಲ್ಲಾ. ದರ್ಶನ್ ಕೇಸ್ ಆದ ನಂತರ ಇದುವರೆಗೆ 30ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಮೊಬೈಲ್, ಮಾದಕ ವಸ್ತು, ಮಾರಕಾಸ್ತ್ರ ಪತ್ತೆಯಾಗಿದ್ದರ ಬಗ್ಗೆ ಕೇಸ್​ಗಳು ದಾಖಲಾಗಿವೆ. ಇನ್ನೂ 27 ಕೇಸ್​ಗಳ ಅಂತಿಮ ವರದಿ ಕೋರ್ಟ್​ಗೆ ಸಲ್ಲಿಸುವುದು ಬಾಕಿ ಇದೆ. ಸುಮಾರು 25 ಕೇಸ್​ಗಳಿಗೆ ತನಿಖೆ ಪ್ರಾರಂಭಿಸಿ 6 ತಿಂಗಳು ತುಂಬಿದೆ. 

ಇದನ್ನೂ ಓದಿ: Bihar Election Result LIVE.. ಬಿಹಾರದಲ್ಲಿ ಮತ್ತೆ ನೀತೀಶ್ ಕುಮಾರ್ ಸಿಎಂ ಆಗೋದು ಪಕ್ಕಾ ಎಂದ ಫಲಿತಾಂಶ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Darshan in jail
Advertisment