Advertisment

ಸಚಿನ್ ಪುತ್ರನಿಗೆ ಗೇಟ್​ಪಾಸ್​​ ಕೊಟ್ಟ ಮುಂಬೈ ಇಂಡಿಯನ್ಸ್..!

ಐಪಿಎಲ್​ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್​ ತಂಡದಿಂದ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. ಸಚಿನ್​ ತೆಂಡುಲ್ಕರ್​ ಪುತ್ರ ಅರ್ಜುನ್​ ತೆಂಡುಲ್ಕರ್​ನ ತಂಡದಿಂದ ಟ್ರೇಡ್​ ಮಾಡಿದೆ.

author-image
Ganesh Kerekuli
Arjun Tendulkar
Advertisment

ಐಪಿಎಲ್​ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್​ ತಂಡದಿಂದ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. ಸಚಿನ್​ ತೆಂಡುಲ್ಕರ್​ ಪುತ್ರ ಅರ್ಜುನ್​ ತೆಂಡುಲ್ಕರ್​ನ ತಂಡದಿಂದ ಟ್ರೇಡ್​ ಮಾಡಿದೆ.

Advertisment

30 ಲಕ್ಷ ಬೇಸ್​ ಪ್ರೈಸ್​ಗೆ ಲಕ್ನೋ ಸೂಪರ್​ ಜೈಂಟ್ಸ್​ಗೆ ಅರ್ಜುನ್​ ತೆಂಡುಲ್ಕರ್​ನ ಮುಂಬೈ ಟ್ರೇಡ್​ ಮಾಡಿದೆ. ಇದೇ ವೇಳೆ ​2 ಕೋಟಿ ಮೊತ್ತ ನೀಡಿ ಲಕ್ನೋದಲ್ಲಿದ್ದ ಆಲ್​ರೌಂಡರ್​ ಶಾರ್ದೂಲ್​ ಠಾಕೂರ್​​ನ ತಂಡಕ್ಕೆ ಕರೆ ತಂದಿದೆ.

ಅರ್ಜುನ್ ತೆಂಡುಲ್ಕರ್​ ಅವರು 2021ರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. 2021ರ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂಪಾಯಿ ಬೇಸ್​ಪ್ರೈಸ್​​ಗೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು.  ಆದರೆ ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ಅರ್ಜುನ್ ತೆಂಡುಲ್ಕರ್​ ಅವರು, ಆ ವರ್ಷ ತಂಡದಿಂದ ಹೊರಗುಳಿದರು. 

ಅವರ ಬದಲಿಗೆ ಸಿಮರ್​ಜೀತ್ ಸಿಂಗ್  ಅವರನು ಕರೆದುಕೊಂಡು ಬಂದಿತ್ತು. 2022ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 30 ಲಕ್ಷ ರೂಪಾಯಿಗೆ ಅವರನ್ನು ಖರೀದಿಸಿತ್ತು. ಅರ್ಜುನ್ ತೆಂಡುಲ್ಕರ್ 2023ರಲ್ಲಿ ಮೊದಲ ಬಾರಿಗೆ ಐಪಿಎಲ್ ಪಂದ್ಯವನ್ನ ಆಡಿದರು.
ಕೋಲ್ಕತ್ತ ನೈಟ್​ ರೈಡರ್ಸ್ ವಿರುದ್ಧ ಮುಂಬೈ ಪರವಾಗಿ ಕಣಕ್ಕೆ ಇಳಿದಿದ್ದರು. ಸನ್​ ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಅವರ ವಿಕೆಟ್ ಪಡೆದರು. ಆ ವೇಳೆ ಮುಂಬೈ ಇಂಡಿಯನ್ಸ್ 14 ರನ್​ಗಳ ಗೆಲುವು ಸಾಧಿಸಿತ್ತು.  2023ರಲ್ಲಿ ಮತ್ತೆ ಎರಡು ವಿಕೆಟ್ ಪಡೆದುಕೊಂಡರು. 2024ರ ಸೀಸನ್​​ನಲ್ಲೂ ಮುಂಬೈ ಇಂಡಿಯನ್ಸ್ ಅವರನ್ನು ರಿಟೈನ್ ಮಾಡಿಕೊಂಡಿತ್ತು. 

Advertisment

ಇದನ್ನೂ ಓದಿ: ನಾಳೆಯೇ ಕೊನೆ ದಿನ.. ಯಾವ ಫ್ರಾಂಚೈಸಿ ಯಾವ ಆಟಗಾರರ ಉಳಿಸಿಕೊಳ್ಳಲಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Arjun Tendulkar
Advertisment
Advertisment
Advertisment