/newsfirstlive-kannada/media/media_files/2025/08/04/kl-rahul-delhi-capitals-1-2025-08-04-09-57-41.jpg)
ಕೆಎಲ್ ರಾಹುಲ್
ಐಪಿಎಲ್ ಸಿಸನ್-19 ಪ್ಲೇಯರ್ಸ್​ ರಿಟೆನ್ಶನ್​​​​ ಡೆಡ್​​ಲೈನ್​ಗೆ ಕೌಂಟ್​ಡೌನ್ ಶುರುವಾಗಿದೆ. 10 ಫ್ರಾಂಚೈಸಿಗಳು ಬಲಿಷ್ಟ ತಂಡ ಕಟ್ಟಲು ತೆರೆ ಹಿಂದೆ ಕಸರತ್ತು ನಡೆಸ್ತಿವೆ. ಹಾಲಿ ಚಾಂಪಿಯನ್ RCB ಸಹ ರಿಲೀಸ್ ಆಟಗಾರರ ಲಿಸ್ಟ್ ರೆಡಿ ಮಾಡಿಕೊಂಡಿದ್ದು, ವರ್ಷಾಂತ್ಯದಲ್ಲಿ ನಡೆಯಲಿರುವ ಆಟಗಾರರ ಹರಾಜಿಗಾಗಿ ಕಾಯ್ತಿದೆ.
ಇನ್ನು, ಆಟಗಾರರ ರಿಲೀಸ್​ಗೆ ನಾಳೆಯೇ ಕೊನೆಯ ದಿನ. ಹೀಗಾಗಿ ಯಾರನ್ನೆಲ್ಲ ಉಳಿಸಿಕೊಂಡು, ಯಾವೆಲ್ಲ ಸ್ಟಾರ್​ಗಳನ್ನು ಫ್ರಾಂಚೈಸಿಗಳು ಕೈಬಿಡುತ್ತವೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಕೆಲವು ಮಾಹಿತಿಗಳ ಪ್ರಕಾರ ಟಿಟೆನ್ಶನ್ ಲಿಸ್ಟ್ ಹೀಗಿದೆ.
- ಚೆನ್ನೈ ಸೂಪರ್ ಕಿಂಗ್: ಎಂಎಸ್​ ಧೋನಿ, ಋತುರಾಜ್ ಗಾಯಕ್ವಾಡ್, ಮಥಿಷಾ ಪತಿರಣ ಅವರನ್ನು ತಂಡದಲ್ಲಿ ಉಳಿಸಿಕೊಳ್ಳೋದು ಪಕ್ಕಾ ಆಗಿದೆ. ಡಿವೋನ್ ಕಾನ್ವೆ, ರವೀಂದ್ರ ಜಡೇಜಾ, ಸ್ಯಾಮ್ ಕರಣ್ ಅವರನ್ನು ಸಿಎಸ್​ಕೆ ರಿಲೀಸ್ ಮಾಡಲಿದೆ ಎಂದು ಹೇಳಲಾಗಿದೆ.
- ಡೆಲ್ಲಿ ಕ್ಯಾಪಿಟಲ್ಸ್: ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಕೆಎಲ್ ರಾಹುಲ್ ಫ್ರಾಂಚೈಸಿ ಉಳಿಸಿಕೊಳ್ಳಲಿದೆ. ಮಿಚೆಲ್ ಸ್ಟಾರ್ಕ್​, ಫಾಫ್ ಡು ಪ್ಲೆಸಿಸ್, ಟಿಎನ್ ನಟರಾಜನ್ ಅವರನ್ನು ಕೈಬಿಡಲು ನಿರ್ಧರಿಸಲಾಗಿದೆ.
ಗುಜರಾತ್ ಟೈಟನ್ಸ್: ಗಿಲ್, ಬಟ್ಲರ್, ರಶಿದ್ ಖಾನ್ ಹಾಗೂ ಸಾಯಿ ಸುದರ್ಶನ್ ಟೆನ್ಶನ್ ಪಕ್ಕಾ ಆಗಿದೆ. ಜಿಟಿ ಯಾವೆಲ್ಲ ಆಟಗಾರರಿಗೆ ಗೇಟ್​​ಪಾಸ್ ನೀಡಲಿದೆ ಅನ್ನೋದು ಗುಟ್ಟಾಗಿಯೇ ಉಳಿದಿದೆ. - ಕೋಲ್ಕತ್ತ ನೈಟ್ ರೈಡರ್ಸ್​: ಸುನಿಲ್ ನರೈನ್, ಅಂಡ್ರೆ ರಸೇಲ್, ರಿಂಕು ಸಿಂಗ್, ರಘುವಂಶಿಯನ್ನು ತಂಡದಲ್ಲಿಯೇ ಉಳಿಸಿಕೊಂಡು. ವೆಂಕಟೇಶ್ ಅಯ್ಯರ್, ಡಿಕಾಕ್, ಮೋಯಿನ್ ಅಲ್ಲಿಯನ್ನ ಕೈಬಿಡುವ ನಿರ್ಧಾರದಲ್ಲಿದೆ.
- ಲಕ್ನೋ ಸೂಪರ್ ಜೈಂಟ್ಸ್​: ರಿಷಬ್ ಪಂತ್, ಪೂರನ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಮಯಾಂಕ್ ಯಾದವ್, ಆಕಾಶ್ ದೀಪ್ ಅವರಿಗೆ ಗೇಟ್​ಪಾಸ್ ಸಾಧ್ಯತೆ ಇದೆ.
- ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್​ಪ್ರಿತ್ ಬುಮ್ರಾ, ತಿಲಕ್ ವರ್ಮಾರನ್ನು ಮುಂಬೈ ಉಳಿಸಿಕೊಳ್ಳಲಿದೆ. ಯಾರನ್ನ ಕೈಬಿಡಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
- ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್, ಅರ್ಷ್​ದೀಪ್ ಸಿಂಗ್, ಉಳಿದುಕೊಳ್ಳೋದು ಪಕ್ಕ. ಮ್ಯಾಕ್ಸ್​ವೆಲ್, ಕೈಲ್ ಜೆಮಿಸನ್ ಅವರಿಗೆ ಗೇಟ್​ಪಾಸ್ ಸಿಗಲಿದೆ ಎನ್ನಲಾಗುತ್ತಿದೆ.
- ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಜೋಫ್ರಾ ಅರ್ಚರ್​ ತಂಡದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಸಂಜು ಸ್ಯಾಮ್ಸನ್, ವನಿಂದು ಹಸರಂಗ ಹಾಗೂ ಮಹೀಶ್ ತೀಕ್ಷ್ಣಗೆ ಗೇಟ್​​ಪಾಸ್ ಸಿಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಹೇಜಲ್​ವುಡ್​​ ತಂಡದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಲಿಯಾಮ್ ಲಿವಿಂಗ್​ಸ್ಟೋನ್, ಮಯಾಂಕ್ ಅಗರ್ವಾಲ್, ಲುಂಗಿ ಎನ್​ಗಿಡಿ, ರಸಿಕ್​ಗೆ ಗೇಟ್​ಪಾಸ್ ಪಕ್ಕಾ. - ಸನ್ ರೈಸರ್ಸ್​ ಹೈದ್ರಾಬಾದ್​: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ಸಿಚ್ ಕ್ಲಾಸೆನ್, ಪ್ಯಾಟ್ ಕಮ್ಮಿನ್ಸ್​ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ. ಶಮಿ ಹಾಗೂ ಹರ್ಷಲ್ ಪಟೇಲ್​​ಗೆ ಗೇಟ್​ಪಾಸ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us