/newsfirstlive-kannada/media/media_files/2025/08/26/rcb_team-1-2025-08-26-10-46-49.jpg)
ಐಪಿಎಲ್ ಸಿಸನ್-19 ಪ್ಲೇಯರ್ಸ್​ ರಿಟೆನ್ಶನ್ ಅನೌನ್ಸ್​ಮೆಂಟ್​ಗೆ ಕೌಂಟ್​ಡೌನ್ ಶುರುವಾಗಿದೆ. ಇಂದು ಸಂಜೆಯೊಳಗೆ ರಿಟೈನ್ಶನ್​ ಲಿಸ್ಟ್​ ಅನೌನ್ಸ್​ ಮಾಡಬೇಕಿದ್ದು, ಹಾಲಿ ಚಾಂಪಿಯನ್ಸ್​ ಆರ್​​ಸಿಬಿ ತಂಡದ ಫೈನಲ್​ ಲಿಸ್ಟ್​ ಕೂಡ ರೆಡಿಯಾಗಿದೆ. ಆರ್​​ಸಿಬಿಯಿಂದ ಯಾರು ರಿಲೀಸ್​? ಯಾರು ರಿಟೈನ್​​?
ಕ್ರಿಕೆಟ್​ ಲೋಕದ ಚಿತ್ತ ರಿಚೆಸ್ಟ್​ ಕ್ರಿಕೆಟ್​ ಲೀಗ್​ ಐಪಿಎಲ್​ನತ್ತ ನೆಟ್ಟಿದೆ. ಕಲರ್​ಫುಲ್​ ಲೀಗ್​ನ ರಿಟೈನ್ಶನ್​ ಅನೌನ್ಸ್​ಮೆಂಟ್​ಗೆ ಕೆಲವೇ ಗಂಟೆಗಳು ಬಾಕಿ. ಎಲ್ಲಾ 10 ಫ್ರಾಂಚೈಸಿಗಳು, ಬಲಿಷ್ಠ ತಂಡ ಕಟ್ಟಲು ತೆರೆ ಹಿಂದೆ ಭರ್ಜರಿ ಕಸರತ್ತು ನಡೆಸ್ತಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಆಟಗಾರರ ರಿಲೀಸ್ ಲಿಸ್ಟ್ ಫೈನಲ್​ ಮಾಡಿಕೊಂಡಿದೆ. ಮಿನಿ ಆಕ್ಷನ್​ಗೆ ಪರ್ಸ್​ನಲ್ಲಿ ಒಳ್ಳೆ ಅಮೌಂಟ್​​ನೊಂದಿಗೆ ಹೋಗಲು ಹೆಚ್ಚು ನಿಗಾ ಇಟ್ಟಿದೆ.
ಇದನ್ನೂ ಓದಿ: ಬಿಹಾರ ಚುನಾವಣಾ ಫಲಿತಾಂಶದ ಎಫೆಕ್ಟ್.. ಸಿದ್ದರಾಮಯ್ಯರ ಕುರ್ಚಿ ಭದ್ರ..! ಹೆಂಗೆ..?
/filters:format(webp)/newsfirstlive-kannada/media/media_files/2025/08/26/rcb_kohli-2025-08-26-10-46-18.jpg)
ಉಳಿದೆಲ್ಲಾ ಫ್ರಾಂಚೈಸಿಗಳುಗೆ ಹೋಲಿಸಿದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆಟಗಾರರ ರಿಟೆನ್ಶನ್ ಮತ್ತು ರಿಲೀಸ್​​​​​​​ ವಿಚಾರದಲ್ಲಿ ಜಾಣ್ಮೆಯ ಹೆಜ್ಜೆ ಇಟ್ಟಿದೆ. ಚಾಂಪಿಯನ್​ ತಂಡದಲ್ಲಿ ಹೆಚ್ಚು ಬದಲಾವಣೆ ಮಾಡದಿರಲು ಆರ್​​ಸಿಬಿ ಮ್ಯಾನೇಜ್​ಮೆಂಟ್​ ಮುಂದಾಗಿದೆ. ತಂಡದ ಸ್ಟ್ರೆಂಥ್, ವೀಕ್ನೆಸ್ ಗಮನಹರಿಸಿರುವ ಫ್ರಾಂಚೈಸಿ, ತಂಡಕ್ಕೆ ಫಿಟ್ ಆಗುವಂತಹ ಆಟಗಾರರನ್ನ ಉಳಿಸಿಕೊಳ್ಳಲು ತೀರ್ಮಾನಿಸಿದೆ. ಕೋರ್​ ಟೀಮ್​ನ ಡಿಸ್ಟರ್ಬ್​ ಮಾಡದೇ ಪ್ರಮುಖ ಆಟಗಾರರನ್ನ ಉಳಿಸಿಕೊಂಡು ಕೆಲವೇ ಕೆಲವರಿಗೆ ಕೊಕ್​ ಕೊಡಲು ನಿರ್ಧರಿಸಿದೆ.
ರೆಡ್​ ಆರ್ಮಿಯಿಂದ ಲಿವಿಂಗ್​ಸ್ಟೋನ್ ರಿಲೀಸ್​
ಆರ್​​ಸಿಬಿ ತಂಡದ ರಿಲೀಸ್​ ಲಿಸ್ಟ್​ನಲ್ಲಿ ಟಾಪ್​ನಲ್ಲಿರೋದು ಲಿಯಾಮ್​ ಲಿವಿಂಗ್​ಸ್ಟೋನ್. ಇಂಗ್ಲೆಂಡ್​​ ತಂಡದ ಸೂಪರ್​ಸ್ಟಾರ್ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್, ಕಳೆದ ಐಪಿಎಲ್ ಸೀಸನ್​​ನಲ್ಲಿ, ಅಟ್ಟರ್ ಫ್ಲಾಪ್ ಪರ್ಫಾಮೆನ್ಸ್ ನೀಡಿದ್ರು. 10 ಪಂದ್ಯಗಳಲ್ಲಿ ಕೇವಲ 112 ರನ್​​ ಮತ್ತು 2 ವಿಕೆಟ್ ಕಬಳಿಸಿದ್ದ ಲಿವಿಂಗ್​ಸ್ಟೋನ್, ಫ್ರಾಂಚೈಸಿ ಮಾಲೀಕರಿಗೆ ಭಾರೀ ನಿರಾಸೆ ಮೂಡಿಸಿದ್ದಾರೆ. ಹಾಗಾಗಿ 8.75 ಕೋಟಿ ವೀರ ಲಿವಿಂಗ್​​ ​ಸ್ಟೋನ್​ನ ರಿಲೀಸ್​ ಮಾಡಲು ಫ್ರಾಂಚೈಸಿ ಮುಂದಾಗಿದೆ.
6 ಕೋಟಿ ವೀರನಿಗೂ ಆರ್​​ಸಿಬಿಯಲ್ಲಿಲ್ಲ ಸ್ಥಾನ
ಯುವ ಆಲ್​ರೌಂಡರ್ ರಸಿಖ್ ದಾರ್, ಐಪಿಎಲ್ ಸೀಸನ್-18ರಲ್ಲಿ ಹೆಚ್ಚೇನು ಪಂದ್ಯಗಳನ್ನ ಆಡಿಲ್ಲ. ಜೋಷ್​ ಹೇಜಲ್​ವುಡ್​ ಅಲಭ್ಯತೆಯಲ್ಲಿ 2 ಪಂದ್ಯಗಳಲ್ಲಿ ಆಡಿದ ರಸಿಖ್, ಕೇವಲ 2 ವಿಕೆಟ್ ಮಾತ್ರ ಪಡೆದಿದ್ದಾರೆ. ಸೀಸನ್​ ಉದ್ದಕ್ಕೂ ಹೆಚ್ಚು ಬೆಂಚ್​ ಕಾದಿರುವ ರಸಿಖ್​ಗೆ, ಬೆಂಗಳೂರು ತಂಡ 6 ಕೋಟಿ ರೂಪಾಯಿ ನೀಡಿತ್ತು. ದುಬಾರಿ ಅಮೌಂಟ್​ ನೀಡಿ ಖರೀದಿಸಿದ ಆಟಗಾರನಿಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಜಾಗವೇ ಇಲ್ಲ. ಹೀಗಾಗಿ ಆರ್​ಸಿಬಿ ರಸಿಖ್​​ನ ಬಿಟ್ಟು ಮುಂದೆ ಹೋಗುವ ಚಿಂತನೆ ನಡೆಸ್ತಿದೆ.
ಇದನ್ನೂ ಓದಿ:24 ಕೋಟಿ ಬೆಲೆಯ ಸ್ಟಾರ್​ಗೆ ತಂಡದ ಡೋರ್ ಕ್ಲೋಸ್.. ಇವತ್ತು ಹಣೆಬರ ಪ್ರಕಟ..!
/filters:format(webp)/newsfirstlive-kannada/media/media_files/2025/09/02/rcb_win-1-2025-09-02-14-40-49.jpg)
ಎಡಗೈ ವೇಗಿ ಯಶ್ ದಯಾಳ್, ಆರ್​ಸಿಬಿಯ ಗೇಮ್ ಚೇಂಜರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಮೆಗಾ ಆಕ್ಷನ್​ಗೂ ಮುನ್ನ 3ನೇ ಆಟಗಾರನಾಗಿ ಆರ್​​ಸಿಬಿ ಯಶ್​ ದಯಾಳ್​ನ ಉಳಿಸಿಕೊಂಡಿತ್ತು. ಆದ್ರೆ ಆಫ್ ದ ಫೀಲ್ಡ್​ನಲ್ಲಿ ಯಶ್ ದಯಾಳ್ ಮೇಲೆ ಗಂಭೀರ ರೇಪ್ ಕೇಸ್ ಆರೋಪ ಇದೆ. ಇದೇ ಕಾರಣಕ್ಕೆ ಯುಪಿ ಟಿ20 ಲೀಗ್​​ನಿಂದ ಬ್ಯಾನ್​ ಮಾಡಲಾಗಿತ್ತು. ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿರೋದ್ರಿಂದ ಆರ್​​ಸಿಬಿ ತಂಡದಿಂದ ಕೈ ಬಿಡುವ ಸಾಧ್ಯತೆ ದಟ್ಟವಾಗಿದೆ. 5 ಕೋಟಿ ಪಡೆದು ಆರ್​ಸಿಬಿಗೆ ಎಂಟ್ರಿ ಕೊಟ್ಟಿದ್ದ ದಯಾಳ್, ಮುಂದಿನ ಐಪಿಎಲ್ ಸೀಸನ್​​ನಲ್ಲಿ ಆಡದೇ ಇದ್ರೂ ಆಶ್ಚರ್ಯ ಪಡಬೇಕಾಗಿಲ್ಲ.
ಶ್ರೀಲಂಕಾದ ವೇಗಿ ನುವಾನ್ ತುಷಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸದ್ಯ ಬೇಡವಾದ ಬೌಲರ್. ಕಳೆದ ಐಪಿಎಲ್ ಸೀಸನ್​ನಲ್ಲಿ 1.60 ಕೋಟಿ ರೂಪಾಯಿ ನೀಡಿದ್ರೂ ಕೂಡ ಆಡಿಸಿದ್ದು ಕೇವಲ ಒಂದೇ ಒಂದು ಪಂದ್ಯ ಮಾತ್ರ. ತಂಡದಲ್ಲಿ ಹೆಚ್ಚು ಬೌಲರ್​ಗಳಿರೋದ್ರಿಂದ, ತುಷಾರಗೆ ಚಾನ್ಸ್​ ಸಿಕ್ಕಿಲ್ಲ. ಹೀಗಾಗಿ ರಿಲೀಸ್ ಮಾಡಲು ಆರ್​ಸಿಬಿಯಲ್ಲಿ ಚರ್ಚೆ ನಡೆದಿದೆ. ನುವಾನ್​ ತುಷಾರ ಈ ಬಾರಿ ಹರಾಜಿಗೆ ಹೋಗೋದು ಬಹುತೇಕ ಖಚಿತವೂ ಆಗಿದೆ. ಕೊನೆ ಕ್ಷಣದಲ್ಲಿ ಏನಾದ್ರೂ ಬದಲಾವಣೆಯಾದರೂ ಆಗಬಹುದು.
ಲುಂಗಿ ಎಂಗಿಡಿಗೂ ಜಾಗವಿಲ್ಲ
ದಕ್ಷಿಣ ಆಫ್ರಿಕಾ ತಂಡದ ವೇಗಿ ಲುಂಗಿ ಎಂಗಿಡಿಯನ್ನೂ ಕೂಡ ಆರ್​ಸಿಬಿ ಫ್ರಾಂಚೈಸಿ ರಿಲೀಸ್ ಮಾಡೋಕೆ ಮುಂದಾಗಿದೆ. ಕಳೆದ ವರ್ಷ ಎಂಗಿಡಿ ಆಡಿದ್ದು ಕೇವಲ 4 ಪಂದ್ಯಗಳನ್ನ ಮಾತ್ರ. ಕೇವಲ 4 ವಿಕೆಟ್​ ಕಬಳಿಸಿದ್ದ ಎಂಗಿಡಿ ಇಂಪ್ರೆಸ್​ ಮಾಡುವಲ್ಲಿ ವಿಫಲರಾಗಿದ್ರು. ಜೋಷ್​​ ಹೇಜಲ್​ವುಡ್​, ಭುವನೇಶ್ವರ್​ ಕುಮಾರ್​ಗೆ ಸಮರ್ಥ ಬ್ಯಾಕ್​ ಅಪ್​ ವೇಗಿಯ ಹುಡುಕಾಟ ತಂಡದಲ್ಲಿ ನಡೀತಿದೆ. ಹೀಗಾಗಿ ಎಂಗಿಡಿ ರಿಲೀಸ್​ ಮಾಡಿ ಹರಾಜಿನಲ್ಲಿ ಸಮರ್ಥ ವೇಗಿ ಖರೀದಿಸೋ ಪ್ಲಾನ್​ ಆರ್​​ಸಿಬಿಯದ್ದಾಗಿದೆ.
ಇದನ್ನೂ ಓದಿ:ಬೂಮ್ ಬೂಮ್ ಬುಮ್ರಾ ದಾಳಿಗೆ ದಕ್ಷಿಣ ಆಫ್ರಿಕಾ ವಿಲವಿಲ.. ಆಸರೆಯಾದ KL ರಾಹುಲ್, ಸುಂದರ್..!
/filters:format(webp)/newsfirstlive-kannada/media/media_files/2025/11/14/rcb-1-2025-11-14-12-58-03.jpg)
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ್ಸ್​ನಲ್ಲಿ, 75 ಲಕ್ಷ ರೂಪಾಯಿ ಬ್ಯಾಲೆನ್ಸ್​ ಇದೆ. ಆದ್ರೆ ಲಿವಿಂಗ್​ಸ್ಟೋನ್, ರಸಿಖ್ ದಾರ್, ಯಶ್ ದಯಾಳ್, ತುಷಾರ ಮತ್ತು ಎಂಗಿಡಿಯನ್ನ ರಿಲೀಸ್ ಮಾಡಿದ್ರೆ, ಆರ್​ಸಿಬಿ ತನ್ನ ಬ್ಯಾಲೆನ್ಸ್ ಅನ್ನ 22.35 ಕೋಟಿ ರೂಪಾಯಿಗೆ ಏರಿಸಿಕೊಳ್ಳಲಿದೆ. ಈ ಹಣದಿಂದ ಡಿಸೆಂಬರ್​ನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಡಿಸೆಂಟ್ ಪ್ಲೇಯರ್​ಗಳನ್ನ ಖರೀದಿ ಮಾಡಬಹುದಾಗಿದೆ.
ಈ ಹಿಂದಿನ ಸೀಸನ್​ಗಳಿಗೆ ಹೋಲಿಸಿದ್ರೆ, ಈ ಬಾರಿ ಆರ್​​ಸಿಬಿ ಮ್ಯಾನೇಜ್​ಮೆಂಟ್​ ರಿಲ್ಯಾಕ್ಸ್​ಡ್​​​ ಆಗಿದೆ. ಹೀಗಾಗಿ ಕೋರ್​ ಟೀಮ್​ ಉಳಿಸಿಕೊಂಡು ಕೆಲವೇ ಆಟಗಾರರನ್ನ ರಿಲೀಸ್​ ಮುಂದಾಗಿದೆ. ಆರ್​ಸಿಬಿ ಯಾವೆಲ್ಲಾ ಪ್ಲೇಯರ್​ಗಳನ್ನ ರೀಟೇನ್ ಮಾಡಿಕೊಂಡಿದೆ, ಹಾಗೆ ಯಾವೆಲ್ಲಾ ಪ್ಲೇಯರ್​ಗಳನ್ನ ರಿಲೀಸ್ ಮಾಡಿದೆ ಅನ್ನೋದಕ್ಕೆ ಪರ್ಫೆಕ್ಟ್​ ಉತ್ತರ ಇಂದು ಸಂಜೆ ಸಿಗಲಿದೆ.
ಇದನ್ನೂ ಓದಿ: ಮೊದಲ ಟೆಸ್ಟ್ ಮೊದಲ ದಿನವೇ 159 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್ : ಜಸಪ್ರೀತ್ ಬುಮ್ರಾ 5 ವಿಕೆಟ್ ಸಾಧನೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us