/newsfirstlive-kannada/media/media_files/2025/10/27/cm-siddu-and-dks-watching-chair-2025-10-27-17-29-23.jpg)
ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಅಕ್ಷರಶಃ ಮತ ಕ್ರಾಂತಿ ಮಾಡಿದೆ. ಅಭೂತಪೂರ್ವ ಗೆಲುವಿಗೆ ನಾನಾ ಕಾರಣಗಳ ಬಗ್ಗೆ ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ ಕಾಂಗ್ರೆಸ್ ಮೈತ್ರಿಯ ಸೋಲು ರಾಜ್ಯ ರಾಜಕಾರಣದ ಮೇಲೂ ಹಲವು ಪರಿಣಾಮ ಬೀರಲಿವೆ. ಕಳಪೆ ಪ್ರದರ್ಶನದಿಂದ ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದ್ದು ಕರ್ನಾಟಕದ ನಾಯಕತ್ವ ವಿಚಾರಕ್ಕೆ ಕೈ ಹಾಕುವುದು ಕಷ್ಟ ಅಂತಾನೇ ಹೇಳಲಾಗ್ತಿದೆ. ಸಿಎಂ ಕುರ್ಚಿ ಭದ್ರವಾಗಿದೆ.
ಬಿಹಾರದಲ್ಲಿ ನಿಮೋ ಮೋಡಿಗೆ ಕಾಂಗ್ರೆಸ್-ಆರ್‌ಜೆಡಿ ಮೈತ್ರಿ ಕೂಟ ಹೇಳ ಹೆಸರಿಲ್ಲದಂತೆ ಕೊಚ್ಚಿ ಹೋಗಿದೆ. ಆರ್‌ಜೆಡಿ ಜೊತೆ ಸೇರಿ ಅಧಿಕಾರಕ್ಕೇರುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ಗೆ ಮತ್ತೊಮ್ಮೆ ಮುಖಭಂಗವಾಗಿದೆ. ಅಧಿಕಾರಕ್ಕೇರುವುದು ಬಿಡಿ ಪ್ರತಿಪಕ್ಷ ಸ್ಥಾನವೂ ಕಷ್ಟ ಕಷ್ಟ.. ಇಂಟ್ರೆಸ್ಟಿಂಗ್ ಏನಂದ್ರೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್​ಗೆ ಇದು ಮುಖಭಂಗವಾಗಿದ್ರೂ ರಾಜ್ಯದಲ್ಲಿ ಸಿಎಂ ಕುರ್ಚಿಯಂತೂ ಮತ್ತಷ್ಟು ಭದ್ರ ಭದ್ರ.
ಇದನ್ನೂ ಓದಿ: ಖಾತೆ ತೆರೆಯುವಲ್ಲೇ ವಿಫಲ.. ಚುನಾವಣಾ ಚಾಣಕ್ಯನಿಗೆ ಸಿಕ್ತಾ ಬಿಗ್​ ಮೆಸೇಜ್..?
ನವೆಂಬರ್ ಕ್ರಾಂತಿ ಗೀತೆ ಹಾಡುವಾಗಲೇ ಬಿಹಾರ ಚುನಾವಣೆ ಫಲಿತಾಂಶ ಏನೇ ಬಂದ್ರೂ ರಾಜ್ಯ ರಾಜಕೀಯದ ಮೇಲೆ ಅದರ ಪರಿಣಾಮ ಗ್ಯಾರಂಟಿ ಅನ್ನೋದು ಗ್ಯಾರಂಟಿಯಾಗಿತ್ತು. ಸಂಪುಟ ವಿಸ್ತರಣೆ, ಕುರ್ಚಿ ಬದಲಾವಣೆ.. ಹೀಗೆ ಎಲ್ಲದಕ್ಕೂ ಬಿಹಾರ ಚುನಾವಣೆ ನಂತರ ಅಂತಿದ್ದ ಕಾಂಗ್ರೆಸ್ ಹೈಕಮಾಂಡ್​ಗೆ ಈಗ ಅಗ್ನಿಪರೀಕ್ಷೆ.
ಸಿದ್ದರಾಮಯ್ಯ ಸಿಎಂ ಕುರ್ಚಿ ಸೇಫ್​​
- ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಮಾತ್ರ ಕೈ ಅಧಿಕಾರ
- ಕಾಂಗ್ರೆಸ್ ಕೈಯಲ್ಲಿರೋ ಬೆಳರಣಿಕೆ ರಾಜ್ಯದಲ್ಲಿ ಕರ್ನಾಟಕವೇ ಅತೀ ದೊಡ್ಡ ರಾಜ್ಯ
- ಕರ್ನಾಟಕದಲ್ಲಿ 135ಕ್ಕೂ ಹೆಚ್ಚು ಶಾಸಕರ ಬಲದೊಂದಿಗೆ ಸ್ಟ್ರಾಂಗ್ ಆಗಿರುವ ‘ಕೈ’
- ಹಿಂದುಳಿದ ಅಷ್ಟೇ ಅಲ್ಲ ದಲಿತ, ಅಲ್ಪಸಂಖ್ಯಾತ ಮತಗಳನ್ನ ಸೆಳೆಯುವ ಪ್ರಭಾವಿ
- ರಾಜ್ಯದ ಬಹುತೇಕ ಕ್ಷೇತ್ರಗಳಲ್ಲೂ ಪ್ರಭಾವ ಬೀರಬಲ್ಲ ನಾಯಕ ಸಿದ್ದರಾಮಯ್ಯ
- ಬಿಜೆಪಿ, ಜೆಡಿಎಸ್​ಗೆ ಪರಿಣಾಮಕಾರಿಯಾಗಿ ಸವಾಲು ಒಡ್ಡುವ ನಾಯಕ ಸಿದ್ದು
- ಹಾಗಾಗಿ ಸದ್ಯಕ್ಕೆ ಸಿದ್ದರಾಮಯ್ಯ ವಿಚಾರವಾಗಿ ಹೈಕಮಾಂಡ್ ಕೈಹಾಕುವುದು ಕಷ್ಟ
- ಒಂದು ವೇಳೆ ಬಿಹಾರ ಗೆದ್ದಿದ್ದರೆ ಮುಲಾಜಿಲ್ಲದೆ ತೀರ್ಮಾನಿಸುತ್ತಿದ್ದ ಹೈಕಮಾಂಡ್
- ನಾಯಕತ್ವದ ವಿಚಾರವಾಗಿ ಸ್ಪಷ್ಟ ನಿರ್ಧಾರ ಮಾಡುತ್ತಿದ್ದ ಕಾಂಗ್ರೆಸ್​ ಹೈಕಮಾಂಡ್
- ನಾಯಕತ್ವವನ್ನು ಬದಲಿಸಿದರೆ ಸರ್ಕಾರವನ್ನೇ ಕಳೆದುಕೊಳ್ಳಬಹುದಾದ ಆತಂಕ
- ಸಿದ್ದರಾಮಯ್ಯರನ್ನ ಇಳಿಸಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಉಳಿಕೆ ಕಷ್ಟ
ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಬಿಹಾರ ಫಲಿತಾಂಶದ ಪರಿಣಾಮದ ಚರ್ಚೆ ಗರಿಗೆದರಿದೆ. ಕೈ ಮನೆಯಲ್ಲಿನ ಕ್ರಾಂತಿ ಬೆಳವಣಿಗೆಗೆ ಬಿಹಾರ ಫಲಿತಾಂಶವನ್ನ ತಳಕು ಹಾಕಲಾಗುತ್ತಿದೆ. ಸಂಪುಟ ವಿಸ್ತರಣೆಯತ್ತ ಸಿಎಂ ಮನಸ್ಸು ಮಾಡಿದ್ರೆ ಸೋಲಿನ ಹೊಡೆತದಲ್ಲಿರುವ ಹೈಕಮಾಂಡ್​ ಇದಕ್ಕೆ ಮುಂದಾಗೋದು ಸದ್ಯಕ್ಕೆ ಅನುಮಾನ. ಸಿಎಂ ಸಿದ್ದರಾಮಯ್ಯ ಕುರ್ಚಿ ಭದ್ರ ಅಂತ ಹೇಳ್ತಿದ್ರೂ ಬಿಹಾರ ಫಲಿತಾಂಶ ರಾಜ್ಯದ ಮೇಲೆ ನೇರ ಪರಿಣಾಮ ಬೀರಲ್ಲ ಅಂತಾನೂ ಹೇಳಲಾಗ್ತಿದೆ.
ಇದನ್ನೂ ಓದಿ:ಬಿಹಾರದಲ್ಲಿ ಮತ್ತೊಂದು ಯುವಶಕ್ತಿಯ ಉದಯ.. ಭವಿಷ್ಯದ ನಾಯಕನಾಗಿ ಚಿಗುರೊಡೆದ ಚಿರಾಗ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us