/newsfirstlive-kannada/media/media_files/2025/11/15/prashant-kishor-2025-11-15-09-52-56.jpg)
ಪ್ರಶಾಂತ್ ಕಿಶೋರ್.. ಚುನಾವಣಾ ಚಾಣಕ್ಯ.. ಅದೆಷ್ಟೋ ಪಕ್ಷಗಳು ದೇಶದಲ್ಲಿ ನೆಲೆಯೂರಲು ಕಾರಣೀಭೂತವಾಗಿರೋ ವ್ಯಕ್ತಿ. 2014ರಲ್ಲಿ ಮೋದಿ ದೇಶದ ಚುಕ್ಕಾಣಿ ಹಿಡಿಯಲು ಕಾರಣವಾಗಿದ್ದ ಶಕ್ತಿ. ಆದ್ರೆ, ಚುನಾವಣಾ ರಾಜಕೀಯ ಅಂತ ನೇರವಾಗಿ ಇಳಿದ್ರೆ ಎಂಥಹ ಚಾಣಕ್ಯನೂ ಮತದಾರನ ಮುಂದೆ ಮಂಡಿಯೂರಲೇಬೇಕು ಅನ್ನೋದು ಸಾಬೀತಾಗಿದೆ. ಬಿಹಾರ ಎಲೆಕ್ಷನ್‌ನಲ್ಲಿ ಪ್ರತಾಂತ್ ಕಿಶೋರ್ ಪಕ್ಷ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಚುನಾವಣಾ ಚಾಣಕ್ಯ.. ಇಡೀ ದೇಶದಲ್ಲಿ ಈ ಬಿರುದನ್ನ ಪಡೆದಿರೋ ಏಕೈಕ ವ್ಯಕ್ತಿ ಅಂದ್ರೆ ಪ್ರಶಾಂತ್ ಕಿಶೋರ್. ರಾಜಕೀಯ ಪಕ್ಷಗಳ ಗೆಲುವಿನ ಶಕ್ತಿಯಾಗಿ ದಶಕಗಳಿಂದ ಹೆಸರಾಗಿರೋ ಪ್ರಭಾವಿ. ಆದ್ರೆ, ಚುನಾವಣಾ ಚಾಣಕ್ಯನಿಗೆ ಬಿಹಾರ ಮತದಾರ ತಿರುಮಂತ್ರ ಬೋಧಿಸಿದ್ದಾನೆ. ಪ್ರತಾಶ್ ಕಿಶೋರ್‌ರ ಜೆಎಸ್‌ಪಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ: ಬಿಹಾರದಲ್ಲಿ ಮತ್ತೊಂದು ಯುವಶಕ್ತಿಯ ಉದಯ.. ಭವಿಷ್ಯದ ನಾಯಕನಾಗಿ ಚಿಗುರೊಡೆದ ಚಿರಾಗ್..!
ಪ್ರಶಾಂತ್ ಕಿಶೋರ್ ಮ್ಯಾಜಿಕ್ ನೋ ವರ್ಕ್!
ಬಿಹಾರದಲ್ಲಿ ಹುಟ್ಟಿ ಬೆಳೆದ್ರೂ ಇಡೀ ದೇಶಕ್ಕೆ ರಾಜಕೀಯ ಕಲಿಸಿಕೊಟ್ಟವರು ಪ್ರಶಾಂತ್ ಕಿಶೋರ್. ಕಾಂಗ್ರೆಸ್, ಎಎಪಿ, ಜೆಡಿಯು, ವೈಎಸ್‌ಆರ್‌ಸಿಪಿ, ಡಿಎಂಕೆ. ಅಷ್ಟೇ ಯಾಕೆ 2014ರಲ್ಲಿ ಮೋದಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾದವರು. ಬಿಹಾರದಲ್ಲಿ ಮೂರು ವರ್ಷಗಳಿಂದ ನಿರಂತರವಾಗಿ ಪ್ರಶಾಂತ್ ಕಿಶೋರ್ ರಾಜಕೀಯವಾಗಿ ಕೆಲಸ ಮಾಡಿದ್ರೂ ಅವರ ತಂತ್ರ ರಣತಂತ್ರಗಳೆಲ್ಲಾ ಬುಡಮೇಲಾಗಿದೆ. ಜನಸುರಾಜ್ ಪಕ್ಷ ಕಟ್ಟಿ 2025ರಲ್ಲಿ ಬಿಹಾರ ವಿಧಾನಸಭಾ ಅಖಾಡಕ್ಕೆ ಇಳಿದಿದ್ದ ಪ್ರಶಾಂತ್ ಕಿಶೋರ್ ಶೂನ್ಯ ಸಾಧನೆ ಮಾಡಿದ್ದಾರೆ.
ಜೆಎಸ್‌ಪಿ ಶೂನ್ಯ ಸಾಧನೆ!
- ಬಿಹಾರದಲ್ಲಿ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿದ್ದ ಜೆಎಸ್‌ಪಿ
- ಆರಂಭದಲ್ಲಿ 243 ಸ್ಥಾನಗಳಲ್ಲಿ ಸ್ಪರ್ಧಿಸೋದಾಗಿ ಘೋಷಣೆ
- 240 ಕ್ಷೇತ್ರಗಳಲ್ಲಿ ಜೆಎಸ್‌ಪಿ ಅಭ್ಯರ್ಥಿಗಳು ಚುನಾವಣೆ ಸ್ಪರ್ಧೆ
- ನಾಮಪತ್ರ ಪ್ರಕ್ರಿಯೆ ಸಮಯದಲ್ಲಿ ಪಕ್ಷಾಂತರದಿಂದ ಪೆಟ್ಟು
- ನಾಮಪತ್ರ ವಾಪಸ್ ಪ್ರಕ್ರಿಯೆಯಿಂದ ಅಭ್ಯರ್ಥಿಗಳು ಇಳಿಕೆ
- ಚುನಾವಣೆಯಲ್ಲಿ ಸೊನ್ನೆ ಸುತ್ತಿದ ಜನ್ ಸುರಾಜ್ ಪಾರ್ಟಿ
- ಚುನಾವಣಾ ಚಾಣಕ್ಯ ಪ್ರಶಾಂತ್‌ರ ಲೆಕ್ಕಾಚಾರಗಳು ಉಲ್ಟಾ
ಸ್ಪರ್ಧೆಗಿಳಿಯದ ಪ್ರಶಾಂತ್.. ಜೆಎಸ್‌ಪಿಗೆ ಹಿನ್ನಡೆ
ಜನ್ ಸುರಾಜ್ ಪಕ್ಷದ ಶೂನ್ಯ ಸಾಧನೆಗೆ ಪ್ರಮುಖ ಕಾರಣ ಪ್ರಶಾಂತ್ ಕಿಶೋರ್. ಅದ್ಹೇಗೆ ಅಂದ್ರೆ ಚುನಾವಣಾ ಅಖಾಡಕ್ಕೆ ಪಕ್ಷವನ್ನ ಇಳಿಸಿದ್ದ ಪ್ರಶಾಂತ್ ಅವರು ಮಾತ್ರ ಸ್ಪರ್ಧೆಯಿಂದ ಹಿಂದೆ ಸರಿದಿದ್ರು. ನಾಯಕನೇ ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದೇ ಇದ್ರೆ ಆ ಪಕ್ಷಕ್ಕೆ ಜನ ಹೇಗೆ ಮತ ಹಾಕ್ತಾರೆ. ಹಾಗೇಯೇ ಪ್ರಶಾಂತ್ ಕಿಶೋರ್ ಪಕ್ಷದ ಅಭ್ಯರ್ಥಿಗಳನ್ನ ಬಿಹಾರ ಮತದಾರ ಮೂಸಿಯೂ ನೋಡಿಲ್ಲ ಅನ್ನೋದು ಪಕ್ಷದ ಶೂನ್ಯ ಸಾಧನೆಯಿಂದಲೇ ಗೊತ್ತಾಗುತ್ತಿದೆ.
ಇದನ್ನೂ ಓದಿ:ಬಿಹಾರ ಆಯ್ತು.. ಬಿಜೆಪಿ ಮುಂದಿನ ಟಾರ್ಗೆಟ್​ ಘೋಷಿಸಿದ ಮೋದಿ..!
ಜನ್ ಸುರಾಜ್ ಪಕ್ಷ ಅಖಾಡಕ್ಕೆ ಇಳಿದಿದ್ದು ಮಹಾಘಟಬಂಧನ್‌ಗೆ ದೊಟ್ಟ ಪೆಟ್ಟು ಕೊಟ್ಟಿದೆ ಅನ್ನೋದು ಗಮನಿಸಬೇಕಾದ ಸಂಗತಿ. ಇದ್ರ ಮಧ್ಯೆ 2025ರ ಚುನಾವಣೆ ಪ್ರಶಾಂತ್ ಕಿಶೋರ್‌ರ ಸಣ್ಣ ಪ್ರಯೋಗ ಅಂತಲೂ ವಿಶ್ಲೇಷಿಸಲಾಗ್ತಿದೆ. ಆದ್ರೂ ಚುನಾವಣಾ ಚಾಣಕ್ಯನಿಗೆ 1 ಸ್ಥಾನವೂ ಬಾರದೇ ಇರೋದು ನಿಜಕ್ಕೂ ಅಚ್ಚರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us